ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಜನವರಿ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ . ಅರ್ಧ ಅಷ್ಟಮ ಶನಿ ಇದೆ. ಪಂಚಮದಲ್ಲಿ ರಾಹು , ಷಷ್ಟದಲ್ಲಿ ಗುರು . ಇಲ್ಲಿ ಯಾರು ಯಾವ ಕೆಲಸ ಮಾಡಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ .ಯಾವ ಪಾತ್ರದಲ್ಲಿ ಕೆಲಸ ಮಾಡುತ್ತಿದ್ದರು ಅವರು ಬೇರೆ ಕೆಲಸ ಮಾಡಲು ಹೊರಟಿರುತ್ತಾರೆ .ಈ ತರಹದ ವಾತಾವರಣ ಇರುವಾಗ ಗ್ರಹಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದೆ ಇರುವಾಗ ,
ಯಾವ ರಾಶಿಯಲ್ಲಿದ್ದಾಗ ನಿಮಗೆ ಪ್ರಯೋಜನಗಳು ಸಿಗುವುದೋ , ಆ ರಾಶಿಯಲ್ಲಿ ಅವುಗಳು ಇರುವುದಿಲ್ಲ . ಇರಬಾರದ ಸ್ಥಳಗಳಲ್ಲಿ ಆ ಗ್ರಹಗಳು ಇರುತ್ತವೆ .ಪರಿಪೂರ್ಣತೆ ಅನ್ನುವುದು ಇರುವುದಿಲ್ಲ . ನಿಮ್ಮ ಹಿಡಿತಕ್ಕೆ ತೆಗೆದುಕೊಂಡು ನಿಭಾಯಿಸಲು ಸಾಧ್ಯವಾಗುವುದಿಲ್ಲ . ಸ್ವಲ್ಪ ಪ್ರಗತಿ ಕುಂಠಿತವಾಗುವ ಸಾಧ್ಯತೆ ಇರುತ್ತದೆ .ಇದು ಮುಂದೆ ಎರಡು ವರ್ಷಗಳಲ್ಲಿ ಆಗುವ ಘಟನೆಗಳು ಆಗಿರುತ್ತದೆ . ಮುಂದಿನ ಮಟ್ಟದಲ್ಲಿ ತುಂಬಾ ಬದಲಾವಣೆಗಳು ಆಗುವುದಿಲ್ಲ .
ಆದರೆ ಸಾಕಷ್ಟು ಒಳ್ಳೆಯ ಸಂಗತಿಗಳು ಇದೆ . ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಧಾನ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ . ಯಾವುದೇ ಕ್ಷೇತ್ರಗಳಲ್ಲಿ ಇದ್ದರೂ ಸ್ವಲ್ಪ ತೊಡಕುಗಳನ್ನು ಉಂಟುಮಾಡುತ್ತದೆ . ಮಕರ ಸಂಕ್ರಾಂತಿಯ ನಂತರ ಬಹಳಷ್ಟು ಶುಭವಾದ ಘಟನೆಗಳು ಬೆಳವಣಿಗೆಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ . ಜನವರಿ 14 ವರೆಗೆ ಸ್ವಲ್ಪ ಕಷ್ಟಗಳು ಕಂಡುಬಂದರು , 15ರ ನಂತರ ಆಗುವ ಘಟನೆಗಳು ನಿಮಗೆ ಬಹಳಷ್ಟು ಪೂರಕವಾಗುತ್ತವೆ . ಜನವರಿ ಮಾಸವನ್ನು ಒಳ್ಳೆಯದಾಗಿ ಪ್ರಾರಂಭ ಮಾಡುವುದಕ್ಕೆ ಕಾರಣವಾಗುತ್ತದೆ .
ವೃಶ್ಚಿಕ ರಾಶಿಯವರ ಗಮನ ಈ ತಿಂಗಳಲ್ಲಿ ಹಣದ ಬಗ್ಗೆ ಇರುತ್ತದೆ .ಇವರ ಗಮನಗಳು ಹಣದ ಸುತ್ತ ತಿರುಗುತ್ತಿರುತ್ತವೆ .ಸಾಕಷ್ಟು ಒತ್ತಡಗಳನ್ನು ಕೂಡ ತಂದುಕೊಳ್ಳಬಹುದು . ಖರ್ಚಿನ ಬಗ್ಗೆ , ಉಳಿತಾಯದ ಬಗ್ಗೆ , ಹೂಡಿಕೆಯ ಬಗ್ಗೆ ಹೀಗೆ ಹಲವಾರು ರೀತಿಯ ಚಿಂತನೆಗಳು ಇರುತ್ತದೆ. ಲಾಭದ ಬಗ್ಗೆ ನಿಮ್ಮ ಗಮನ ಹೆಚ್ಚಾಗಿರುತ್ತದೆ . ಇಷ್ಟು ವಿಷಯಗಳು ಹಣದ ಸುತ್ತಲೂ ಸುತ್ತುತ್ತಿರುತ್ತದೆ ಜನವರಿ ತಿಂಗಳಲ್ಲಿ .
ಇದರಿಂದ ಹೊರಗಡೆ ಬರಲು ಸಾಧ್ಯವಿಲ್ಲ .ಕೆಲವು ಸಲ ಕೆಲಸದ ಒತ್ತಡದಿಂದಾಗಿ ಸಹ ಆಗುತ್ತದೆ . ಅಂದರೆ ಯೋಚನೆಗಳಲ್ಲಿ ತುಂಬಾ ಮಗ್ನರಾಗಬೇಕಾಗುತ್ತದೆ . ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ . ಎಲ್ಲಾ ವಿಚಾರಗಳಲ್ಲಿ ನಿರ್ಲಕ್ಷ ಮಾಡಲಾಗುತ್ತದೆ .ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ ..ದುಡ್ಡಿನ ಅವಶ್ಯಕತೆ ಕೂಡ ಜಾಸ್ತಿ ಆಗುತ್ತಾ ಹೋಗುತ್ತದೆ . ಯಾವುದೇ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ . ನಿಮಗೆ ಯೋಚನೆಗಳು ಹೆಚ್ಚಾಗುತ್ತಾ ಹೋಗುತ್ತವೆ .
ನಿಮ್ಮ ಹಣಕ್ಕೆ ತಕ್ಕಂತೆ ಆ ವ್ಯಕ್ತಿ ಕೆಲಸ ಮಾಡುವುದಿಲ್ಲ . ಇಂಥ ಸಂದರ್ಭದಲ್ಲಿ ನಿಮಗೆ ಉದ್ವೇಗ ಜಾಸ್ತಿ ಆಗುತ್ತದೆ . ಇನ್ನೂ ಕೆಲವರು ಜವಾಬ್ದಾರಿಯನ್ನ ಪೂರೈಸಲು ಮಾತು ಕೊಟ್ಟಿರುತ್ತಾರೆ . ಹಣವನ್ನು ಒಂದು ಸಲ ಗಳಿಸಲು ನೀವು ತುಂಬಾ ಕಷ್ಟ ಪಡಬೇಕು . ಕೆಲಸ ಮಾಡುವಾಗ ಸಾಕಷ್ಟು ಗೊಂದಲಗಳು ಉಂಟಾಗುತ್ತದೆ . ಎಷ್ಟೇ ಸಮಯ ಕೊಟ್ಟರು ತುಂಬಾ ಹಣ ಗಳಿಸಲು ಸಾಧ್ಯವಾಗುವುದಿಲ್ಲ . ನಿಮಗೆ ತುಂಬಾ ಸ್ಪರ್ಧೆಗಳು ಎದುರಾಗಲಿದೆ. ಈ ತರಹದ ಪರಿಸ್ಥಿತಿಯನ್ನು ಎದುರಿಸುವ ಹಾಗೇ ಮಾಡುತ್ತಾನೆ ಶನಿ ಚತುರ್ಥ ಭಾಗದಲ್ಲಿ .
ರಾಹು ಕೂಡ ಸುಮ್ಮನೆ ಇರುವುದಿಲ್ಲ . ನಾವು ಮಕ್ಕಳ ಮೇಲೆ ಗಮನ ಹರಿಸಬೇಕಾಗುತ್ತದೆ. ಮಕ್ಕಳು ಹಾದಿ ತಪ್ಪುವ ಅಪಾಯ ಕೂಡ ಇರುತ್ತದೆ. ಈ ಸಮಸ್ಯೆಗಳನ್ನು ಎದುರಿಸಲು ನಿಮ್ಮ ಎಚ್ಚರಿಕೆಯಿಂದ ನೀವು ಇರಬೇಕು . ಸಂಕ್ರಾಂತಿಯ ನಂತರ ಒಂದು ಒಳ್ಳೆಯ ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗುತ್ತದೆ. ಕೇತು ಗ್ರಹ ಲಾಭದ ರಾಶಿಯಲ್ಲಿ ಇದ್ದಾನೆ ಎಂದು ಹೇಳಬಹುದು. ಕೆಲವೊಂದು ಮೂಲದಿಂದ ಹಣ ಬರುವುದಕ್ಕೆ ಶುರುವಾಗುತ್ತದೆ . ಯಾವುದೇ ರೀತಿಯ ಮೋಸ ಆಗುವುದಿಲ್ಲ .
ಬೇರೆ ಗ್ರಹಗಳು ಪ್ರತಿಕೂಲವಾಗಿ ಇದ್ದರೂ ಸಹ ಕೇತು ಗ್ರಹ ನಿಮಗೆ ಶುಭ ಮತ್ತು ಲಾಭವನ್ನು ತಂದು ಕೊಡುತ್ತಾನೆ. ಲಾಭ ಸ್ಥಾನದಲ್ಲಿ ಇದ್ದು ಎಲ್ಲೋ ಒಂದು ಕಡೆ ನಿಗೂಢವಾಗಿ ಗೋಚರಿಸುತ್ತದೆ . ಗೊತ್ತಿಲ್ಲದ ಮೂಲಗಳಿಂದ ಹಣ ಬರುವುದಕ್ಕೆ ಶುರುವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಕೂಡ ಇರುತ್ತದೆ. ಈ ತರಹದ ಒಳ್ಳೆಯ ಅವಕಾಶಗಳು ಸಿಗುವುದರಿಂದ ಮುಂದಿನ ಭವಿಷ್ಯಕ್ಕೆ ಅದು ಒಳ್ಳೆಯದಾಗುತ್ತದೆ ಎಂದು ಹೇಳಬಹುದು .
ಇದು ಕೇತು ಹನ್ನೊಂದನೇ ಮನೆಯಲ್ಲಿರುವಾಗ ಉಂಟಾಗುತ್ತದೆ ಎಂದು ಹೇಳಲಾಗಿದೆ . ಮಕರ ರಾಶಿಗೆ ರವಿ ಹೋಗುತ್ತದೆ. ತೃತೀಯಾ ಭಾವ ಆಗುತ್ತದೆ ವೃಶ್ಚಿಕ ರಾಶಿಗೆ . ವೃಶ್ಚಿಕ , ಧನು , ಮತ್ತು ಮಕರ . ಮಕರ ರಾಶಿಯಲ್ಲಿ ರವಿ ಕೊಡುವಂಥದ್ದು ವಿಕ್ರಮ ಸ್ಥಾನ . ಸಹಜವಾಗಿ ಧೈರ್ಯ ಬಹಳ ಇರುತ್ತದೆ . ಸ್ವಾಭಾವಿಕವಾಗಿ ಬರುವಂತಹ ಸಾಹಸ ಪ್ರವೃತ್ತಿಎಂದು ಹೇಳಬಹುದು . ಯಾವುದೇ ಸಾಹಸಕ್ಕೂ ಕೂಡ ಕೈ ಹಾಕಲು ಇಷ್ಟ ಪಡುತ್ತೀರಾ .ಹೊಸತನ್ನು ಮಾಡುವ ಹುರುಪು ನಿಮಗೆ ಬರುತ್ತದೆ .
ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರೆ ಮಕರ ಸಂಕ್ರಾಂತಿ ನಂತರ ಮಾಡುವುದು ಒಳ್ಳೆಯದು ಎಂದು ಹೇಳುತ್ತೇವೆ . ಆದರೆ ವೃಶ್ಚಿಕ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿರುತ್ತದೆ . ಜೀವನದಲ್ಲಿ ಗೆಲುವನ್ನು ನಿರೀಕ್ಷೆ ಮಾಡಬಹುದು . ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಪ್ರಗತಿ ಉಂಟಾಗುತ್ತದೆ . ಹಾಗೆಯೇ ಹಣದ ಹರಿವು ಕೂಡ ಹೆಚ್ಚಾಗುತ್ತದೆ . ಶತ್ರುಗಳ ನಾಶ ಕೂಡ ಆಗುತ್ತದೆ . ಮಕರ ಸಂಕ್ರಾಂತಿಯ ನಂತರ ವೃಶ್ಚಿಕ ರಾಶಿಯವರಿಗೆ ಅವರ ಜೀವನದಲ್ಲಿ ಹೆಚ್ಚಿನ ಪರಿವರ್ತನೆಗಳು ಆಗುತ್ತದೆ .