ಇಂದಿನ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುಣ ಲಕ್ಷಣಗಳನ್ನು ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯ ಮತ್ತು ಕೆಲಸಗಳಲ್ಲಿ ಪರ್ಫೆಕ್ಟ್ ಅನ್ನು ಬಯಸುತ್ತಾರೆ. ಇವರು ಯಾರ ಹತ್ತಿರ ಸ್ನೇಹ ಬೆಳೆಸಿದರೆ ತುಂಬಾ ಹಚ್ಚಿಕೊಳ್ಳುತ್ತಾರೆ. ನಿಸ್ವಾರ್ಥ ಭಾವದಿಂದ ಅವರನ್ನು ಪ್ರೀತಿಸುತ್ತಾರೆ. ಇವರ ಜೊತೆ ಪ್ರತಿಕಾರವನ್ನು ತೀರಿಸಿಕೊಳ್ಳಲು ಬಂದರೇ ವೃಶ್ಚಿಕ ರಾಶಿಯವರಿಗಿಂತ ಕೆಟ್ಟವರು ಮತ್ಯಾರು ಇಲ್ಲ. ಇವರ ಸ್ವಭಾವ ಸ್ವಲ್ಪ ಸೀಕ್ರೆಟಿವ್ ಆಗಿ ಇರುತ್ತದೆ.
ವೃಶ್ಚಿಕ ರಾಶಿ ಜಲತತ್ತ್ವವಾಗಿರುತ್ತದೆ. ಇವರ ಆರನೇ ಜ್ಞಾನೇಂದ್ರಿಯಾ ತುಂಬಾ ಚೆನ್ನಾಗಿರುತ್ತದೆ. ಇವರ ಮೈಂಡ್ ತುಂಬಾ ಶಾರ್ಪ್ ಆಗಿರುವುದರಿಂದ ಹುದುಗಿ ಹೋದ ವಿಷಯವನ್ನು ಸತ್ಯವನ್ನು ಹೊರಹಾಕುವ ಸಾಮರ್ಥ್ಯ ಇವರಲ್ಲಿದೆ. ಇವರು ಕೆಲಸವನ್ನು ಅರ್ಧದಲ್ಲಿ ಕೈಬಿಡಲು ಇಷ್ಟಪಡುವುದಿಲ್ಲ. ಪ್ರತೀ ಕೆಲಸವನ್ನು ಫರ್ಫೆಕ್ಟ್ ಆಗಿ ಮುಗಿಸಲು ಇಷ್ಟಪಡುತ್ತಾರೆ. ಸತ್ಯವನ್ನ ಹುಡುಕಿ ತೆಗೆಯುವ ಬುದ್ಧಿವಂತಿಕೆ ಇವರಲ್ಲಿದೆ. ವೃಶ್ಚಿಕ ರಾಶಿಯವರು ತಮ್ಮ ಫ್ರೆಂಡ್ ಇನ್ನೊಬ್ಬರನ್ನು ಫ್ರೆಂಡ್ ಮಾಡಿಕೊಂಡರೇ ಇಷ್ಟವಾಗುವುದಿಲ್ಲ
ಅವರು ನಮ್ಮವರೇ ಆಗಿರಬೇಕೆಂದು ಇಷ್ಟಪಡುತ್ತಾರೆ. ಇವರು ಹೇಗೆ ಲಾಯಲ್ ಆಗಿರುತ್ತಾರೋ ಅದೇ ರೀತಿ ಬೇರೆಯವರು ಇರಬೇಕೆಂದು ಬಯಸುತ್ತಾರೆ. ಹಣದ ವಿಷಯಕ್ಕೆ ಬಂದರೆ ಹಣವನ್ನು ಎಲ್ಲಿ ಯಾವಾಗ ಖರ್ಚು ಮತ್ತು ಮ್ಯಾನೇಜ್ ಮಾಡಬೇಕೆಂದು ಗೊತ್ತಿರುತ್ತದೆ. ಈ ರಾಶಿಯವರು ಯಾರನ್ನು ಬಹಳ ಬೇಗ ನಂಬುವುದಿಲ್ಲ ಒಂದು ವೇಳೆ ನಂಬಿದರೇ ಬಹಳ ಬೇಗ ಹಚ್ಚಿಕೊಳ್ಳುತ್ತಾರೆ. ಇವರಿಗೆ ಯಾರಾದರೂ ಸಹಾಯ ಮಾಡಿದರೇ ಅವರಿಗೆ ಮತ್ತಷ್ಟು ಸಹಾಯವನ್ನು ಮಾಡುತ್ತಾರೆ.
ಆದ್ದರಿಂದ ಇವರಿಗೆ ಯಾರಾದರೂ ತೊಂದರೆಯನ್ನ ಮಾಡಿದರೇ ಅವರು ತೊಂದರೆಯನ್ನು ಹೆಚ್ಚು ಅನುಭವಿಸಬೇಕಾಗುತ್ತದೆ. ಆಗಾಗಿ ನೀವು ಪ್ರೀತಿ ಮಾಡಿದರೇ ಅವರು ಡಬ್ಬಲ್ ಪ್ರೀತಿಯನ್ನು ಕೊಡುತ್ತಾರೆ. ಕೆಲಸ, ರಿಲೇಷನ್ ಶಿಪ್, ಹವ್ಯಾಸಗಳಿಗೆ ಸಂಪೂರ್ಣವಾಗಿ ಇನ್ ವಾಲ್ ಆಗಿ ಇರಲು ಇಷ್ಟಪಡುತ್ತಾರೆ. ಇವರು ಪ್ರತಿಯೊಂದನ್ನು ಮನಸ್ಸಿನಿಂದ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಗೊತ್ತಿರುತ್ತದೆ.
ತಮಗೆ ಇಷ್ಟವಾದದ್ದನ್ನು ತುಂಬಾ ಪರಿಶ್ರಮದಿಂದ ಪಡೆಯಬೇಕೆಂಬ ನಿಲುವು ಇವರದಾಗಿರುತ್ತದೆ. ಒಂದೊಂದು ಸಲ ಇವರಿಗೆ ಒಂಟಿತನ ಕಾಡುತ್ತದೆ. ಇವರಿಗೆ ಒಂದೊಂದು ಸಲ ಒಂಟಿತನ ಕಾಡುತ್ತದೆ. ಇವರಿಗೆ ನನ್ನ ಸಪೋರ್ಟ್ ಗೆ ಯಾರು ಇಲ್ಲ ಎಂಬ ಭಾವನೆ ಇರುತ್ತದೆ. ಈ ರಾಶಿಯವರು ಪ್ರಾಮಿಸ್ ಅನ್ನು ಚೆನ್ನಾಗಿ ನಿಭಾಯಿಸುತ್ತಾರೆ. ವೃಶ್ಚಿಕ ರಾಶಿ ಚೇಳು ಆಗಿರುತ್ತದೆ. ಚೇಳಿನ ಆಗಿ ವೃಶ್ಚಿಕ ರಾಶಿಯವರ ಪ್ರೀತಿ ಎಷ್ಟು ಒಳ್ಳೆಯದೋ ಅದೇ ರೀತಿ ದ್ವೇಷವೂ ಅಷ್ಟೇ ಕೆಟ್ಟದಾಗಿರುತ್ತದೆ. ಈ ರಾಶಿಯವರು ತುಂಬಾ ಎಮೋಷನಲ್ ಮತ್ತು ಲಾಯಲ್ ಆಗಿ ಇರುತ್ತಾರೆ. ಇವರು ತುಂಬಾ ಪ್ರೀತಿ ಮಾಡುತ್ತಾರೆ
ಮತ್ತು ತಮ್ಮ ಪ್ರೀತಿ ಪಾತ್ರರಿಗೆ ಏನು ಮಾಡಲು ರೆಡಿ ಇರುತ್ತಾರೆ. ಇವರು ಗೌಪ್ಯ ಗುಣವನ್ನು ಹೊಂದಿರುವುದರಿಂದ ಜನ ಬಹಳ ಬೇಗ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಇದು ನಿಮಗೆ ಒಂದೊಂದು ಸಲ ಸಮಸ್ಯೆಯನ್ನು ತಂದುಕೊಡುತ್ತದೆ. ವೃಶ್ಚಿಕ ರಾಶಿಯ ಪಾರ್ಟ್ ನರ್ ಲಾಯಲ್ ಆಗಿದ್ದರೇ ಅವರಿಗೆ ಇವರು ಗಾಡ್ ಗಿಫ್ಟ್ ಎಂದು ಹೇಳಬಹುದು ಏಕೆಂದರೇ ಇವರಿಗೆ ಪ್ರೀತಿ ಕೊಟ್ಟರೇ ಅದಕ್ಕಿಂತ ಹೆಚ್ಚಿನ ಪ್ರೀತಿಯನ್ನು ವೃಶ್ಚಿಕ ರಾಶಿಯವರು ಕೊಡುತ್ತಾರೆ.
ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ರೆಡಿ ಇರುತ್ತಾರೆ. ಇವರು ಜೊತೆಗಿರುವವರನ್ನು ಚೆನ್ನಾಗಿ ಕೇರ್ ತೆಗೆದುಕೊಳ್ಳುತ್ತಾರೆ. ಇವರು ಅವರ ಜೊತೆ ಚೆನ್ನಾಗಿದ್ದರೇ ತುಂಬಾ ಚೆನ್ನಾಗಿರುತ್ತಾರೆ. ಇವರಿಗೆ ಸಂಶೋಧನೆಯ ಕೆಲಸ ಹೊಂದಾಣಿಕೆಯಾಗುತ್ತದೆ. ಸೈನ್ಸ್ ಸಿಸ್ಟ್, ಇಂಜಿನಿಯರಿಂಗ್ ತುಂಬಾ ಚೆನ್ನಾಗಿ ಆಗಿ ಬರುತ್ತದೆ. ಎಂಟನೇ ಮನೆ ಸರ್ಜರಿಯನ್ನು ಸೂಚಿಸುತ್ತದೆ. ಆಗಾಗಿ ಈ ಕೆಲಸವು ಆಗಿ ಬರುತ್ತದೆ. ಇನ್ಸುರೆನ್ಸ್ ಗೆ ಸಂಬಂಧ ಪಟ್ಟ ಕೆಲಸವು ಆಗಿ ಬರುತ್ತದೆ.
ಈ ರಾಶಿಯವರಿಗೆ ಹಣದ ಕೊರತೆಯಾಗುವುದಿಲ್ಲ ಅದನ್ನು ಯಾವ ರೀತಿ ಖರ್ಚು ಮಾಡಬೇಕು ಎಂಬುದು ಗೊತ್ತಿದೆ. ಆರೋಗ್ಯದ ವಿಷಯದ ಬಗ್ಗೆ ಹೇಳುವುದಾದರೇ ಪೈಲ್ಸ್ ಸಮಸ್ಯೆ ಈ ರಾಶಿಯವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಯೂರಿನರಿ ಮತ್ತು ಡೈಜೆಸ್ಟಿವ್ ಸಿಸ್ಟಂ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಈ ರಾಶಿಯ ಅಧಿಪತಿ ಮಂಗಳಗ್ರಹವಾಗಿರುತ್ತದೆ. ಚಂದ್ರ ವೃಶ್ಚಿಕ ರಾಶಿಯಲ್ಲಿ ಕಂಫರ್ಟ್ ಟಬಲ್ ಆಗಿ ಇರಲ್ಲ. ಏಕೆಂದರೆ ಚಂದ್ರ ಚಂಚಲ ಸ್ವಭಾವವನ್ನು ಸೂಚಿಸುತ್ತದೆ.