ಸಿಂಹಗಳ ಈ ಕಥೆ ಕೇಳಿ! 

ನಾವು ಈ ಲೇಖನದಲ್ಲಿ ಸಿಂಹ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ತಿಂಗಳು ಸಿಂಹ ರಾಶಿಯ ಮಟ್ಟಿಗೆ ವರದಾನ ಆಗಬಹುದು. ಸಿಂಹ ರಾಶಿಯ ಜನರಿಗೆ ಬಹಳಷ್ಟು ಯಶಸ್ಸನ್ನು ತಂದು ಕೊಡುತ್ತದೆ . ನಿಮ್ಮ ಖುಷಿ, ನೆಮ್ಮದಿ , ಬಾಳ ಸಂಗಾತಿಯ ವಿಚಾರದಲ್ಲಿ , ಬಹಳ ಮಹತ್ವ ಈ ತಿಂಗಳಲ್ಲಿ ಬರುತ್ತದೆ.

ಹಣಕಾಸಿನ ವಿಚಾರದಲ್ಲಿ ದ್ವಿತೀಯ ಭಾವದಲ್ಲಿ ಕೇತು ಇರುವುದರಿಂದ, ಒಂದಷ್ಟು ಏರುಪೇರುಗಳ ಆಗುವ ಸಾಧ್ಯತೆ ಇರುತ್ತದೆ . ಹಾಗೆಯೇ ರಾಹು ಇರುವುದರಿಂದ ಆರೋಗ್ಯದಲ್ಲಿ ಚಿಕ್ಕ ಪುಟ್ಟ ತೊಂದರೆಗಳು, ಇವುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ . ನಿಮ್ಮ ರಾಶಿಯಾಧಿಪತಿ ಷಷ್ಟ ಭಾವದಲ್ಲಿ ಇರುವಂತದ್ದು. ಮತ್ತು ಕುಜ ಗ್ರಹ ಕೂಡ ಷಷ್ಟ ಭಾವದಲ್ಲಿ ಇರುತ್ತದೆ. ವಿಶೇಷವಾಗಿ ನಿರೀಕ್ಷೆ ಮಾಡುವುದು ಈ ಕುಜ ಮತ್ತು ರವಿ ಎರಡೂ ಸೇರಿ ಇವೆರೆಡೂ ಗ್ರಹಗಳು ಡೆಡ್ಲಿ ಸಂಯೋಜನೆ ಆಗಿರುತ್ತದೆ.

ನಿಮ್ಮ ಶತ್ರುಗಳಿಗೆ ಬುದ್ಧಿ ಕಲಿಸುವುದರಲ್ಲಿ ನಿಮ್ಮ ಕೈ ಮೇಲಾಗುತ್ತದೆ. ನಿಮ್ಮ ಎದುರು ಅವರು ತಲೆ ಎತ್ತದ ರೀತಿ ನೀವು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಾ. ಯಾವುದೇ ಶತ್ರುತ್ವ ಇದ್ದರೂ , ಅದನ್ನು ತುಂಬಾ ಬೆಳೆಸುತ್ತಾ , ಹೋಗಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ . ನ್ಯಾಯಕ್ಕಾಗಿ ಅಷ್ಟೇ ನಾವು ಹೋರಾಡಬೇಕು. ಪ್ರತಿ ಸ್ಪರ್ಧಿಗಳ ಎದುರು ಜಯ ನಿಮ್ಮದು ಆಗುತ್ತದೆ. ಅವರ ಸೋಲು ಈ ಒಂದು ತಿಂಗಳಲ್ಲಿ ಸತ ಸಿದ್ಧ . ಈ ವಿಚಾರಗಳು ಮೇಲ್ನೋಟಕ್ಕೆ ಸೂಕ್ಷ್ಮವಾಗಿ ಕಾಣಿಸುತ್ತವೆ .

ಸೂಕ್ಷ್ಮವಾಗಿ ಜಾತಕ ನೋಡಿದಾಗ ಬೇರೆ ವಿಚಾರಗಳು ತಿಳಿಯುತ್ತವೆ . ಜ್ಯೋತಿಷ್ಯ ಕೂಡ 100 ಪರ್ಸೆಂಟ್ ನಡೆಯೋದಿಲ್ಲ . ಒಂದಷ್ಟು ಸಿದ್ಧಾಂತಗಳ ಆಧಾರದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ . ಕುಜ ಮತ್ತು ರವಿ ಗ್ರಹಗಳು ವಿಶೇಷವಾಗಿ ಕೊಡುವಂತದ್ದು ಎಂದರೆ , ಧೈರ್ಯ , ಆತ್ಮ ವಿಶ್ವಾಸ , ಮತ್ತು ಮನೋಬಲ ಜಾಸ್ತಿಯಾಗುತ್ತದೆ. ಈ ತಿಂಗಳಲ್ಲಿ ಸರ್ಕಾರಿ ಕೆಲಸಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ. ಇಲ್ಲಿ ಎಲ್ಲಾ ವಿಚಾರಗಳಲ್ಲೂ ನಿಮ್ಮ ಪ್ರಯತ್ನ ಕೂಡ ಪ್ರಮುಖವಾಗುತ್ತದೆ.

ಸರ್ಕಾರಿ ವಿಚಾರಗಳಲ್ಲಿ ಬಹಳಷ್ಟು ಅಂಶಗಳು ಇರುತ್ತವೆ. 11ನೇ ತಾರೀಖಿನ ವರೆಗೆ ರಾಶಿಯಾಧಿಪತಿ ರವಿ ಷಷ್ಟದಲ್ಲಿ ಇದ್ದು , ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಿಕೊಡುವುದು. ಪ್ರಯತ್ನ ಮಾಡುವ ವ್ಯಕ್ತಿಗಳಿಗೆ ಸ್ವಲ್ಪ ಹೆಚ್ಚಾಗಿಯೇ ಸಿಗುವ ಒಂದು ಸಂದರ್ಭ ಇದಾಗಿರುತ್ತದೆ. ಒಂದು ಸಕಾರಾತ್ಮಕ ವಾತಾವರಣ ನಿರ್ಮಾಣ ಆಗುವುದರಲ್ಲಿ ಯಾವುದೇ ಆಶ್ಚರ್ಯವೂ ಇಲ್ಲ. ರವಿಯಿಂದ ಇರುವ ಅಂಶಗಳು ಮೊದಲನೆಯದಾಗಿ ನಿಮ್ಮ ಸ್ಫೂರ್ತಿಯ ಮಟ್ಟ ತುಂಬಾ ಮೇಲೆ ಇರುತ್ತದೆ.

ತುಂಬಾ ಲವಲವಿಕೆಯಿಂದ ಕೆಲಸ ಕಾರ್ಯಗಳನ್ನು ಬಹಳಷ್ಟು ಚಾತುರ್ಯ ತನದಿಂದ ಮಾಡುವ ಸಾಧ್ಯತೆ ಇರುತ್ತದೆ. ಕುಜ ಮತ್ತು ರವಿ ಇವೆರಡೂ ಅಗ್ನಿಗೆ ಸಂಬಂಧ ಪಟ್ಟ ಗ್ರಹಗಳು . ವಾತದ ಸಮಸ್ಯೆಗಳು ಇದ್ದರೆ, ಸಪ್ತಮದಲ್ಲಿ ಶನಿ ಇರುತ್ತದೆ. ಮತ್ತು ರಾಶಿಯ ಮೇಲೆ ದೃಷ್ಟಿಯು ಇದೆ. ಇಂತಹ ತೊಂದರೆಗಳು ಇದ್ದರೆ, ನಿವಾರಣೆಯಾಗುತ್ತದೆ. ಈ ಅಗ್ನಿ ಅನ್ನುವುದು ಈ ವಾತವನ್ನು ಸುಡುತ್ತದೆ. ವಾತದ ಸಮಸ್ಯೆ , ಅಜೀರ್ಣ , ಹೊಟ್ಟೆ ನೋವು, ಮಾನಸಿಕ ಒತ್ತಡ ,ಭಯ, ಚಿಂತೆ , ದುಃಖ, ಇಂತಹ ಸಮಸ್ಯೆಗಳು ದೂರ ಆಗುವ ಸಾಧ್ಯತೆ ಇರುತ್ತದೆ. ಸೂರ್ಯೋದಯ ಆಗುವ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಇರುತ್ತದೆ.

ಸೂರ್ಯನ ಬಿಸಿಲಿಗೆ ಮಂಜು ಯಾವ ರೀತಿ ಕರಗುತ್ತದೆಯೋ ಹಾಗೆಯೇ ಮಂಜಲ್ಲಿ ಧೂಳು, ಹೊಗೆ , ಸ್ವಲ್ಪ ನೀರಿನ ಅಂಶ ಸೇರಿ ವಿಷಕಾರಿ ಅಂಶ ಆಗಿರುತ್ತದೆ. ಇದನ್ನು ನಿವಾರಿಸುವ ಶಕ್ತಿ ಸೂರ್ಯನ ಬೆಳಕಿಗೆ ಇರುತ್ತದೆ. ಅದೇ ತರಹ ನಿಮ್ಮ ನಕಾರಾತ್ಮಕ ಅಂಶಗಳು ಕರಗಿ ಹೋಗುವ ಸಾಧ್ಯತೆ ಈ ತಿಂಗಳಲ್ಲಿ ಇರುತ್ತದೆ. ರವಿ ಮತ್ತು ಕುಜ ಆರನೇ ಭಾವದಲ್ಲಿ ಇದ್ದು ಎಲ್ಲವನ್ನು ನೋಡಿಕೊಳ್ಳುತ್ತಾರೆ. ನಂತರ ಇದನ್ನು ಕುಜ ಗ್ರಹ ವಹಿಸಿಕೊಳ್ಳುತ್ತದೆ. ಕುಜ ಗ್ರಹ ಕೂಡ ಇದೇ ತರದ ಪರಿವರ್ತನೆಯನ್ನು ನಿಮ್ಮ ಜೀವನದಲ್ಲಿ ತರುತ್ತದೆ .

ಬಹಳಷ್ಟು ಸಲ ನಮಗೆ ಕೆಲಸ ಮಾಡಲು ಚೈತನ್ಯ ಇರುವುದಿಲ್ಲ . ಆದರೆ ಈ ತಿಂಗಳಲ್ಲಿ ಚೈತನ್ಯ ಸಿಗುವ ಸಾಧ್ಯತೆ ಇರುತ್ತದೆ . ರವಿ ಕೂಡ ಷಷ್ಟ ಭಾವದಲ್ಲಿ ಇರುವುದರಿಂದ ಆರೋಗ್ಯದಲ್ಲಿ ಕೂಡ ಸುಧಾರಣೆಯನ್ನು ಕಾಣಬಹುದು .11ನೇ ತಾರೀಖಿಗೆ ರವಿ ನಿರ್ಘಮನವಾಗಿ ಮಕರ ರಾಶಿಗೆ ಹೋಗುತ್ತದೆ . ಸರ್ಕಾರಿ ಕೆಲಸಗಳು ಇದ್ದರೆ 11ನೇ ತಾರೀಖಿನ ಒಳಗೆ ಮುಗಿಯಬೇಕು . ಹಾಗೆಯೇ ಬುಧ ಗ್ರಹ ಕೂಡ ನಿಮಗೆ ಒಳ್ಳೆಯದನ್ನು ಮಾಡುತ್ತದೆ . ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಚೇತರಿಕೆಯನ್ನು ಕಾಣಬಹುದು .

ಬೇರೆ ವಿಚಾರಗಳ ಬಗ್ಗೆ ಗಮನ ಕಡಿಮೆಯಾಗಿ ಓದಿನ ಬಗ್ಗೆ ಹೆಚ್ಚು ಗಮನ ವಹಿಸುವ ಸಾಧ್ಯತೆ ಇರುತ್ತದೆ . 19ನೇ ತಾರೀಖಿನ ವರೆಗೆ ಬುಧ ಗ್ರಹ ಒಳ್ಳೆಯ ಸ್ಥಾನದಲ್ಲಿ ಇರುತ್ತದೆ . ಇದರಿಂದಾಗಿ ಬುದ್ಧಿವಂತಿಕೆ ಚಾಕಚಕ್ಯತೆ ಎಲ್ಲವೂ ಚೆನ್ನಾಗಿರುತ್ತದೆ. ಹಾಗೆಯೇ ಹಣಕಾಸಿನ ವಿಚಾರದಲ್ಲಿ ಕೂಡ ಸುಧಾರಣೆ ಕಾಣಬಹುದು. ಎಲ್ಲವೂ ಸುಸೂತ್ರವಾಗಿ , ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಸಪ್ತಮದಲ್ಲಿ ಶನಿ ಗ್ರಹ ಇದೆ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ .

ಫೆಬ್ರವರಿ ತಿಂಗಳಲ್ಲಿ ಇದರ ಕಡೆ ಗಮನ ಹೆಚ್ಚಾಗಬೇಕಾಗುತ್ತದೆ . ರವಿ ಸಪ್ತಮ ಭಾವಕ್ಕೆ ಬಂದಾಗ , ಪ್ರಯಾಣದಲ್ಲಿ ಸುಸ್ತು ಕೆಲಸ ಕಾರ್ಯದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ . ಇವು ಕೂಡ ಆರೋಗ್ಯ ಸಮಸ್ಯೆಯಲ್ಲಿ ಏರುಪೇರುಗಳನ್ನು ಉಂಟುಮಾಡುತ್ತವೆ . ಕುಟುಂಬದಲ್ಲಿ ವೈ ಮನಸ್ಸುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ . ಮನೆಯವರ ಬಗ್ಗೆ ಕಾಳಜಿ ಕೂಡ ಮಾಡಲು ಸಾಧ್ಯವಾಗುವುದಿಲ್ಲ . ಅಂದರೆ ಕೆಲಸದ ಒತ್ತಡದಲ್ಲಿ ಯಾವುದರ ಬಗ್ಗೆ ಕಾಳಜಿ ಇರುವುದಿಲ್ಲ .

ಕೆಲಸದ ಬಗ್ಗೆ ಹೆಚ್ಚು ಗಮನ ಹೋಗುವುದರಿಂದ ಕುಟುಂಬದವರಿಗೆ ತಪ್ಪು ತಿಳುವಳಿಕೆ ಆಗುವ ಸಾಧ್ಯತೆ ಇರುತ್ತದೆ .ಇವೆಲ್ಲಾ ಸಮಸ್ಯೆಗಳಿಂದ ಗೊಂದಲಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಈ ತಿಂಗಳಲ್ಲಿ ಖರ್ಚು ವೆಚ್ಚಗಳನ್ನು ತೂಗಿಸುವುದನ್ನು ನೀವು ಕಂಡು ಕೊಳ್ಳಬೇಕಾಗುತ್ತದೆ . ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು . ಒಳ್ಳೆಯ ಗುಣಮಟ್ಟದ ಆಹಾರವನ್ನು ಸೇವಿಸಬೇಕು. ಇದರ ಬಗ್ಗೆ ಹೆಚ್ಚಾಗಿ ಗಮನ ಇರಬೇಕು . ಆರೋಗ್ಯ ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ . ನಿಮ್ಮ ಆಸೆಗಳನ್ನು ಅತಿಯಾಗಿ ಮಾಡಿಕೊಳ್ಳುವುದಕ್ಕೆ ಹೋಗಬಾರದು . ನೀನು ತುಂಬಾ ಒತ್ತಡ ಮಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡಬಾರದು . ವಿಚಾರಗಳನ್ನು ಸರಳವಾಗಿ ತೆಗೆದುಕೊಂಡು ಜೀವನ ನಡೆಸುವುದು ಉತ್ತಮ .

Leave a Comment