ನಾವು ಈ ಲೇಖನದಲ್ಲಿ ಕರಿಬೇವನ್ನು ಕೀಳಾಗಿ ನೋಡಬೇಡಿ ಪ್ರತಿದಿನ ತಿನ್ನಿ ಮ್ಯಾಜಿಕ್ ನೀವೇ ನೋಡಿ ಎಂದು ತಿಳಿಸಲಾಗಿದೆ. ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚ ಎಂದೇ ಹೇಳಬಹುದು . ಒಗ್ಗರಣೆ ಇಂದ ಹಿಡಿದು ಅನೇಕ ನಾನಾ ಆಹಾರಗಳನ್ನು ತಯಾರಿಸಲು ಕರಿಬೇವನ್ನು ಬಳಸುತ್ತೇವೆ. ಆಂಟಿ ಆಕ್ಸಿಡೆಂಟ್ ಗಳು , ವಿಟಮಿನ್ ಎ , ವಿಟಮಿನ್ ಬಿ , ವಿಟಮಿನ್ ಸಿ , ಕ್ಯಾಲ್ಸಿಯಂ , ರಂಜಕ , ಕಬ್ಬಿಣದಂತಹ ಖನಿಜಗಳು ಕರಿಬೇವಿನ ಎಲೆಗಳಲ್ಲಿವೆ .
ನೀವು ಪ್ರತಿದಿನ ಅಡುಗೆ ಮನೆಯಲ್ಲಿ ಬಳಸುವ ಕೆಲವು ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿ ಇದೆ . ಇದಕ್ಕೆ ಒಂದು ಉದಾಹರಣೆ ಎಂದರೆ ಕರಿಬೇವು . ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ . ಮತ್ತು ಅದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೆ ಪಡೆದು ಕೊಳ್ಳುತ್ತಿದ್ದೇವೆ .
ಬಿಪಿ ಮತ್ತು ಸಕ್ಕರೆ ಕಾಯಿಲೆ ಅಣ್ಣ ತಮ್ಮ ಇದ್ದಂತೆ .ಮನೆಯಲ್ಲಿ ಒಬ್ಬರಿಗೆ ಬಿಪಿ ಮತ್ತು ಇನ್ನೊಬ್ಬರಿಗೆ ಶುಗರ್ ಇರುತ್ತದೆ. ಆದರೆ ಇವೆರಡಕ್ಕೂ ರಾಮಬಾಣ ಎಂದರೆ , ಕರಿ ಬೇವಿನ ಸೊಪ್ಪು. ಕರಿಬೇವಿನ ಸೊಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ. ದೀರ್ಘ ಕಾಲದ ಕಾಯಿಲೆಗೆ ಕಾರಣವಾಗಬಹುದು .
ಪ್ರತಿದಿನ 5 ಅಥವಾ 10 ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು. ಕರಿಬೇವಿನ ಎಲೆಯಲ್ಲಿ ಉತ್ತಮ ಪ್ರಮಾಣದ ನಾರಿನ ಅಂಶವಿದೆ . ಅಲ್ಲದೆ ಕರಿಬೇವು ಎಲೆಗಳನ್ನು ಸೇವಿಸುವುದು ಮಲಬದ್ಧತೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ . ಕರಿಬೇವಿನ ಎಲೆಗಳು ದೇಹವನ್ನು ರೋಗಿಗಳಿಂದ ರಕ್ಷಿಸುವ ದೊಡ್ಡ ಪ್ರಮಾಣದ ಸಾಹಸಗಳನ್ನು ಹೊಂದಿರುತ್ತವೆ .
ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವವರನ್ನು ರಕ್ಷಿಸುವಲ್ಲಿ ಕರಿಬೇವು ತುಂಬಾ ಉಪಯುಕ್ತವಾಗಿದೆ .
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ . ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಹೃದಯ ರಕ್ತನಾಳದ ಆರೋಗ್ಯ ಸುಧಾರಿಸುತ್ತದೆ . ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ . ಕರಿಬೇವಿನ ಸೊಪ್ಪು ಹೃದಯಕ್ಕೆ ಮಾತ್ರವಲ್ಲ , ಮೆದುಳಿನ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು . ಕರಿಬೇವಿನ ಎಲೆಗಳು ನಮ್ಮ ನರ ಮಂಡಲವನ್ನು ರಕ್ಷಿಸುತ್ತದೆ.
ಮಧುಮೇಹಿಗಳು ಕೂಡ ಕಲಿಬೇವಿನ ಎಲೆಗಳನ್ನು ನಿಯಮಿತವಾಗಿ ತಿನ್ನಬಹುದು . ಏಕೆಂದರೆ ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ . ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ .
ಕರಿಬೇವಿನ ಎಲೆಗಳನ್ನು ತಿನ್ನಲು ಇಷ್ಟವಿಲ್ಲದಿದ್ದರೆ ಅದನ್ನು ನೆನೆಸಿದ ನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ . ಏಕೆಂದರೆ ಇದರಲ್ಲಿರುವ ನಾರಿನ ಅಂಶ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡಲು ಪ್ರಾರಂಬಿಸಿ , ನೀವು ಸೇವಿಸಿದ ಆಹಾರದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಬೇಗನೆ ಬಿಡುಗಡೆ ಮಾಡುವುದಿಲ್ಲ. ಇದರಿಂದ ನಿಮ್ಮ ಸಕ್ಕರೆ ಕಾಯಿಲೆ ಕಂಟ್ರೋಲ್ ನಲ್ಲಿ ಇರುತ್ತದೆ .