ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ ಯಾವ ಬಣ್ಣದ ಚಪ್ಪಲಿಗಳನ್ನು ಧರಿಸಬೇಕು ಯಾವುದನ್ನು ಧರಿಸಬಾರದು? ಕಾಲಿಗೆ ಧರಿಸುವುದು ಎಂಬ ಕಾರಣಕ್ಕೆ ಪಾದರಕ್ಷೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಏಕೆಂದರೆ ಪಾದರಕ್ಷೆಗಳಿಗೂ ವಾಸ್ತು ನಿಯಮವಿದೆ. ನಿರ್ದಿಷ್ಟ ಬಣ್ಣದ ಪಾದರಕ್ಷೆಗಳು ನಿಮ್ಮ ಜೀವನವನ್ನು ಸಂತೋಷವನ್ನಾಗಿಸುತ್ತದೆ. ಹಾಗೇ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ಪ್ರಮುಖ ವಿಚಾರಗಳು ಇಲ್ಲಿವೆ.
ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೇ ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿದ್ದ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೇ, ನೀವು ಧರಿಸುವ ಬಟ್ಟೆಗಳು, ಪೂಜಾ ಕೋಣೆ, ನಿಮ್ಮ ಪರ್ಸ್ ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆ ವಿಚಾರದಲ್ಲಿ ಕೂಡಾ ನೀವು ವಾಸ್ತುವನ್ನು ಪಾಲಿಸಿದರೆ ಸಂತೋಷ ಎನ್ನುವುದು ಸದಾ ಕಾಲ ನಿಮ್ಮ ಪಾಲಿಗೆ ಇರಲಿದೆ.
ಅನೇಕ ಜನರು ಫ್ಯಾಷನ್ ಮತ್ತು ಟ್ರೆಂಡಿಂಗ್ ಹೆಸರಿನಲ್ಲಿ ತಮ್ಮ ಮೆಚ್ಚಿನ ಬಣ್ಣದ ಉಡುಪುಗಳನ್ನು ಖರೀದಿಸುತ್ತಾರೆ. ಅದಕ್ಕೆ ಮ್ಯಾಚ್ ಆಗುವಂಥಹ ಪಾದರಕ್ಷೆಗಳನ್ನು ಕೂಡಾ ಖರೀದಿಸುತ್ತಾರೆ.
ಆದರೆ ನೀವು ಕೆಲವೊಂದು ಬಣ್ಣದ ಪಾದರಕ್ಷೆಗಳನ್ನು ಧರಿಸುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಕೆಲವು ಬಗೆಯ ಬಣ್ಣಗಳು ಕೆಲವರ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ವಾಸ್ತುಪ್ರಕಾರ ನೀವು ಯಾವ ಬಣ್ಣದ ಪಾದರಕ್ಷೆಗಳನ್ನು ಧರಿಸಬೇಕು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
• ಹಳದಿ ಬಣ್ಣದ ಪಾದರಕ್ಷೆಗಳು ಬೇಡ: ವಾಸ್ತುಶಾಸ್ತ್ರದ ಪ್ರಕಾರ ಹಳದಿ ಬಣ್ಣದ ಪಾದರಕ್ಷೆಗಳನ್ನು ಯಾವುದೇ ಸಂದರ್ಭದಲ್ಲೂ ಧರಿಸಬಾರದು ಏಕೆಂದರೆ ಈ ಬಣ್ಣ ಗುರುವನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಪಾದರಕ್ಷೆ ಧರಿಸುವುದರಿಂದ ನೀವು ಗುರುವಿಗೆ ಅಗೌರವ ತೋರುತ್ತೀರಿ ಎಂದರ್ಥ. ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನವೂ ದುರ್ಬಲವಾಗುತ್ತದೆ. ವಾಸ್ತು ಪ್ರಕಾರ ಗುರು ದುರ್ಬಲನಾಗಿದ್ದರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಯಶಸ್ಸು ಕಾಣದೆ ನಿರಾಸೆಗೊಳ್ಳುವಿರಿ. ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ಮನೆಯಲ್ಲಿ ಅಶಾಂತಿ ಇರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಈ ಬಣ್ಣದ ಶೂ ಅಥವಾ ಚಪ್ಪಲಿಗಳನ್ನು ಧರಿಸಬೇಡಿ.
ಕಚೇರಿಗೆ ಕಂದು ಬಣ್ಣದ ಚಪ್ಪಲಿಗಳು ಬೇಡ: ಕೆಲವರು ಕಚೇರಿಗೆ ಒಂದು, ಹೊರಗೆ ಹೋಗಲು ಒಂದು, ಪಂಕ್ಷನ್ಗಳಿಗೆ ಮತ್ತೊಂದು ಬಣ್ಣದ ಪಾದರಕ್ಷೆಗಳನ್ನು ಇಟ್ಟಿರುತ್ತಾರೆ. ಅದರಲ್ಲಿ ಕಚೇರಿಗಾಗಿ ಕೆಲವರು ಕಂದು ಬಣ್ಣದ ಬೂಟುಗಳು,ಚಪ್ಪಲಿಗಳನ್ನು ಮೀಸಲಿಡುತ್ತಾರೆ. ಆದರೆ ಕಂದು ಬಣ್ಣದ ಶೂಗಳ ಬದಲಿಗೆ ಕಡು ಕಂದು ಅಥವಾ ಕಾಫಿ ಬಣ್ಣದ ಶೂ ಅಥವಾ ಚಪ್ಪಲಿಗಳನ್ನು ಧರಿಸಿದರೆ ಸೂಕ್ತ. • ಪಾದರಕ್ಷೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು:
• ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು, ಬಿಳಿ, ನೀಲಿ, ಹಸಿರು ಬಣ್ಣಗಳ ಪಾದರಕ್ಷೆ ಅಥವಾ ಚಪ್ಪಲಿಯನ್ನು ಧರಿಸಬೇಕು. ಇವುಗಳನ್ನು ಧರಿಸುವುದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ನೀವು ಪ್ರತಿ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ. • ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಪಾದರಕ್ಷೆಗಳನ್ನು ಮೆಟ್ಟಿಲುಗಳ ಕೆಳಗೆ ಇಡಬಾರದು. ಇದನ್ನು ವಾಸ್ತು ಪ್ರಕಾರ ದೋಷವೆಂದು ಪರಿಗಣಿಸಲಾಗಿದೆ.• ವಾಸ್ತುಶಾಸ್ತ್ರದ ಪ್ರಕಾರ ಯಾವುದೇ ಸಂದರ್ಭದಲ್ಲೂ ನಿಮ್ಮ ಚಪ್ಪಲಿ ಅಥವಾ ಬೂಟುಗಳನ್ನು ಬ್ರಹ್ಮನ ಸ್ಥಾನದಲ್ಲಿ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.
• ಮನೆ ಒಳಗೆ ಹೋಗುವ ಮುನ್ನ ನಿಮ್ಮ ಬೂಟುಗಳು ಅಥವಾ ಚಪ್ಪಲಿಗಳನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮುಂಭಾಗಿಲಿನ ಎದುರು ಇಡಬೇಡಿ. ಬದಲಿಗೆ ಪಕ್ಕಕ್ಕೆ ಸರಿಯಾಗಿ ಜೋಡಿಸಿ ಇಡಿ. • ಮುರಿದಾ ಅಥವಾ ಹಾನಿಗೊಳಗಾದ ಚಪ್ಪಲಿಗಳನ್ನು ಜನರು ಮನೆಗಳಲ್ಲಿ ಇಡುವುದನ್ನು ನೀವು ಆಗಾಗೆ ನೋಡಿರಬಹುದು. ಅದನ್ನು ರಿಪೇರಿ ಮಾಡಿ ಇಡುತ್ತೇವೆ ಎಂದು ಭಾವಿಸಿ. ಮನೆಯಲ್ಲೇ ಇಡುತ್ತಾರೆ. ಆದರೆ ಒಡೆದ ಚಪ್ಪಲಿ ಮನೆಯಲ್ಲಿ ಇಡುವುದರಿಂದ ಗಲಾಟೆಗಳನ್ನು ಉಂಟುಮಾಡುತ್ತದೆ. ಮುರಿದ ಚಪ್ಪಲಿಗಳನ್ನು ತಕ್ಷಣ ಮನೆಯಿಂದ ತೆಗೆದುಹಾಕಲು ಪ್ರಯತ್ನಿಸಿ.
• ಅನೇಕ ಬಾರಿ ಚಪ್ಪಲಿಗಳನ್ನು ತೆಗೆಯುವಾಗ ಚಪ್ಪಲಿಗಳು ಚಪ್ಪಲಿಗಳ ಮೇಲೆ ಅಂಟಿಕೊಂಡಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ರೀತಿ ಚಪ್ಪಲಿಯನ್ನು ನೋಡುವುದು ಅಶುಭ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಚಪ್ಪಲಿಯಲ್ಲಿ ಇನ್ನೊಂದು ಚಪ್ಪಲಿ ಅಂಟಿಕೊಂಡಿದ್ದರೆ ಅಥವಾ ಚಪ್ಪಲಿಗಳು ತಲೆಕೆಳಗಾಗಿ ತಿರುಗಿದರೆ ತಕ್ಷಣ ಅವುಗಳನ್ನು ತೆಗೆದುಹಾಕಿ. ಇದನ್ನು ಮಾಡದಿದ್ದರೆ ಚಪ್ಪಲಿ ಧರಿಸಿದವರ ಮೇಲೆ ರೋಗಗಳ ನೆರಳು ಬೀಳಲಾರಂಭಿಸುತ್ತದೆ.
• ಮನೆಯ ಬಾಗಿಲಲ್ಲಿ ಚಪ್ಪಲಿ ಇಡುವುದರಿಂದ ಮನೆಗೆ ಯಾವುದೇ ಸೌಭಾಗ್ಯ ಸಿಗುವುದಿಲ್ಲ. ಮನೆಗೆ ಯಾವುದೇ ಸೌಭಾಗ್ಯ ಸಿಗುವುದಿಲ್ಲ. ಯಾರಿಂದಲೂ ಶೂ ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ತೆಗೆದುಕೊಳ್ಳಬೇಡಿ. ಅಂತಹ ಪರಿಸ್ಥಿತಿಯಲ್ಲಿ ಅವನ ದುರಾದೃಷ್ಟವು ನಿಮ್ಮ ಅದೃಷ್ಟವನ್ನು ನಾಶಪಡಿಸುತ್ತದೆ. ಮುರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸುವುದನ್ನು ಸಹ ನೀವು ತಪ್ಪಿಸಬೇಕು. ಇವು ದುರಾದೃಷ್ಟವನ್ನು ಆಹ್ವಾನಿಸುತ್ತವೆ. ಸ್ವಚ್ಛ ಮತ್ತು ಸುಂದರವಾದ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸುವುದು ಅದೃಷ್ಟವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.
• ಶೂ ಮತ್ತು ಚಪ್ಪಲಿ ಧರಿಸಿ ಆಹಾರವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ದುರಾದೃಷ್ಟ ಹೆಚ್ಚಾಗುತ್ತದೆ. ಅಡುಗೆ ಕೋಣೆಗೆ ಬರಿಗಾಲಿನಲ್ಲಿ ಪ್ರವೇಶಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶೂ ಮತ್ತು ಚಪ್ಪಲಿಯನ್ನು ಕೆಳೆದುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸಂಭವಿಸಿದಾಗ ಅಶುಭ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ.• ಮನೆಯ ಹೊರಗೆ ಇಟ್ಟ ಪಾದರಕ್ಷೆಗಳು ನಿಮಗೆ ಅದೃಷ್ಟವನ್ನು ತರುತ್ತವೆ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
• ಪಾದರಕ್ಷೆಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ. ಹೀಗೆ ಮಾಡಿದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ.• ವಾಸ್ತುಶಾಸ್ತ್ರದ ಪ್ರಕಾರ ಚಪ್ಪಲಿಗಳನ್ನು ಉಲ್ಟಾ ಇಡಬಾರದು. ಈಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. • ಶೂ, ಚಪ್ಪಲಿಗಳನ್ನು ಇಡಲು ಲೋಹದ ಕಪಾಟು, ಸ್ಟ್ಯಾಂಡ್ ಗಳ ಬದಲಿಗೆ ಮರದ ಕಪಾಟುಗಳನ್ನು ಬಳಸಿ.• ಕಾಲಿಗೆ ಬಳಸುವುದು ತಾನೇ ಎಂಬ ನಿರ್ಲಕ್ಷ್ಯ ಬೇಡ. ನಿಮ್ಮ ಪಾದರಕ್ಷೆಗಳನ್ನು ಆಗ್ಗಾಗ್ಗೆ ಸ್ವಚ್ಛಗೊಳಿಸುತ್ತಿರಿ.