ನಾವು ಈ ಲೇಖನದಲ್ಲಿ ಈ ಜಗತ್ತಿನಲ್ಲಿ ಬದುಕುವುದು ನೀವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನಿನ್ನ ಇಷ್ಟದಂತೆ ನೀನು ಬದುಕಲು ಪ್ರಾರಂಭ ಮಾಡು. ಆಗ ನೋಡು ಅಸಾಧ್ಯವಾದುದ್ದು ಸಾಧ್ಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀರಿನ ಹನಿಯೂ ಸರೋವರದಲ್ಲಿ ಬೆರೆತಾಗಲೂ ಯಾರು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಅದೇ ನೀರಿನ ಹನಿ ಎಲೆಗಳ ಮೇಲೆ ಇದ್ದಾಗ ವಜ್ರದಂತೆ ಹೊಳೆಯುತ್ತದೆ. ಹಾಗಾಗಿ ಮೊದಲು ನಾವು ಇರುವ ಜಾಗವನ್ನು ಗುರುತಿಸಿಕೊಳ್ಳಬೇಕು.
ನೆಟ್ಟ ನೇರ ನುಣುಪಾದ ರಸ್ತೆಯಲ್ಲಿ ಉತ್ತಮ ಚಾಲಕ ರೂಪುಗೊಳ್ಳುವುದಿಲ್ಲ ಜೀವನದಲ್ಲಿಯೂ ಸಹ ಏರಿಳಿತಗಳೇ ನಮ್ಮನ್ನು ಪರಿಪಕ್ವಗೊಳಿಸುವುದು . ಇಷ್ಟಪಡುವುದಕ್ಕೂ, ಪ್ರೀತಿಸುವುದಕ್ಕೂ ತುಂಬಾ ವ್ಯತ್ಯಾಸಗಳಿವೆ . ಇಷ್ಟ ಪಟ್ಟ ಹೂವನ್ನು ನಿಜವಾಗಲೂ ಪ್ರೀತಿಸಲು ಸಾಧ್ಯವಾಗುವುದು. ಆ ಗಿಡಕ್ಕೆ ನೀರೆರದು ಪೋಷಿಸಿದಾಗ ಮಾತ್ರ . ಕಣ್ಣು ಚೆನ್ನಾಗಿದ್ದರೆ ನಾವು ಜಗತ್ತನ್ನು ನೋಡಬಹುದು . ನಾಲಿಗೆ ನಡತೆಗಳು ಚೆನ್ನಾಗಿದ್ದರೆ ಜಗತ್ತೇ ನಮ್ಮನ್ನು ನೋಡುತ್ತದೆ. ಪ್ರಪಂಚವು ನಮ್ಮನ್ನು ನೋಡುವಂತೆ ನಾವು ಬದುಕಬೇಕು .
ದುಡಿಯುವಾಗ ಎಲ್ಲವನ್ನು ನಾನೇ ಮಾಡುತ್ತೇನೆ ಎನ್ನುವ ಮನಸ್ಥಿತಿ ಇರಲಿ. ಪಡೆಯುವಾಗ ಪಾಲಿಗೆ ಬಂದದ್ದು ಪಂಚಾಮೃತವೆನ್ನುವ ಸೌಜನ್ಯವಿರಲಿ. ಭೂತಕಾಲವನ್ನು ಮರೆಯಬಾರದು ಅಂದಿನ ನೋವು ನೋವಿನಿಂದಲೇ ಇಂದಿನ ಬಲ ಬಂದಿದ್ದು ಎಂಬುವ ತಿಳಿವಳಿಕೆ ಇರಬೇಕು. ಆಗಿನ ಭಯದಿಂದಲೇ ಇಂದಿನ ಧೈರ್ಯ ಗಳಿಸಿಕೊಂಡಿದ್ದು ಎನ್ನುವ ಆತ್ಮವಿಶ್ವಾಸವಿರಬೇಕು . ಈಗಿನ ಕಾಲದಲ್ಲಿ ಎಲ್ಲರೂ ಸ್ವತಂತ್ರರು ಆದರೂ ಇಬ್ಬರಿಗೆ ನಾವು ಅಂಜಿ ಬದುಕಲೇಬೇಕು. ಒಂದು ಭಗವಂತನಿಗೆ ಮತ್ತು ನಮ್ಮ ನೆರಳಿಗೆ.
ನಾಳಿನ ಒಳಿತಿಗಾಗಿ ಇಂದಿನ ಕೆಲವು ಸಮಯವನ್ನು ಮೀಸಲಿಡುವುದು ತಪ್ಪಲ್ಲ. ನಾಳೆಯ ಚಿಂತೆಯಲ್ಲಿ ಇಂದಿನ ದಿನದ ಜೀವನದ ಸಂತೋಷವನ್ನು ಕಳೆದುಕೊಳ್ಳಬಾರದು. ನಂಬಿಕೆ ಮತ್ತು ಸಂದೇಹಗಳು ಒಂದರ ಹಿಂದೆ ಒಂದು ಬದುತ್ತಲೇ ಇರುತ್ತದೆ. ಸಂದೇಹದ ಮದ್ಯ ನಂಬಿಕೆ ಗಟ್ಟಿಯಾಗಿರುವಂತೆ ನೋಡಿಕೊಂಡು ಸಂಬಂಧವನ್ನು ಉಳಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವ ಮಹಾರಾಜರಂತೆ ಇರಲಿ ಆದರೆ ಅಹಂಕಾರ ಯಾವಾಗಲೂ ಸೇವಕನಂತೆ ಇರಲಿ. ಆಗ ನಾವು ಯಶಸ್ಸಿನ ರಾಜ್ಯವನ್ನೇ ಕಟ್ಟಬಹುದು.
ಆಗ ಎದುರಾಗ ಬಹುದಾದಂತಹ ಯಾವುದೇ ಸಮಸ್ಯೆಯನ್ನು ಕುರಿತು ದೂರ ದೃಷ್ಟಿಯುಳ್ಳವನು ಪ್ರಾಮಾಣಿಕತೆಯಿಂದ ಕೆಲಸ ಮಾಡುವವನು ನಿಜವಾದ ನಾಯಕನಾಗಿರುತ್ತಾನೆ . ಮಾಡುವ ಪ್ರತಿಯೊಂದು ಪಾಪಗಳು ಸಾಲವಿದ್ದಂತೆ. ಎಂದೋ ಒಂದು ದಿನ ಅದನ್ನು ಬಡ್ಡಿ ಸಮೇತ ತೀರಿಸಲೇ ಬೇಕಾಗುತ್ತದೆ. ಆದರೆ ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಗಳು ಉಳಿತಾಯ ಖಾತೆಯಲ್ಲಿ ಜಮಾ ಆಗಿರುತ್ತದೆ. ಇಷ್ಟಕಾಲದಲ್ಲಿ ಅವುಗಳು ನಮ್ಮ ಸಹಾಯಕ್ಕೆ ಬರುತ್ತದೆ.
ಈ ಬದುಕು ಅಂದುಕೊಂಡಷ್ಟು ಸುಲಭವೂ ಅಲ್ಲ . ಕಷ್ಟವೂ ಅಲ್ಲ ಆದರೆ ಸುಲಭ ಮಾಡಿಕೊಳ್ಳಬೇಕಾದರೆ ಆತ್ಮವಿಶ್ವಾಸವಿರಬೇಕು . ವಿಶ್ವಾಸದ ಜೊತೆಗೆ ಪ್ರಾಮಾಣಿಕತೆಯ ನಂಬಿಕೆಯು ಇರಬೇಕು. ಸಂಶಯ ಪ್ರವೃತ್ತಿ ಇರುವಂತ ವ್ಯಕ್ತಿಗಳನ್ನು ನಂಬಬಾರದು. ನಂಬಿಕಸ್ತರ ಮೇಲೆ ಯಾವತ್ತೂ ಸಂಶಯ ಪಡಬಾರದು . ಇಲ್ಲಿ ಜನಗಳು ನಿಮ್ಮ ತಪ್ಪನ್ನು ಮಾತ್ರವೇ ಲೆಕ್ಕ ಹಾಕುತ್ತಾರೆ. ಆದರೆ ನೀವು ತಲೆಕೆಡಿಸಿಕೊಳ್ಳಬೇಡಿ. ಆದರೆ ಒಳ್ಳೆಯದನ್ನು ಮಾತ್ರ ದೇವರು ಲೆಕ್ಕಾಚಾರವಾಗುತ್ತಾನೆ.
ನಿಮ್ಮ ಪ್ರೀತಿಯನ್ನು ಯಾರಾದರೂ ತಿರಸ್ಕರಿಸಿದರೆ ಚಿಂತಿಸಬೇಡಿ. ಸಮಯ ನಿಮ್ಮಲ್ಲಿಲ್ಲ . ಆದರೆ ಸಮಸ್ಯೆ ಖಂಡಿತ ಅವರಲ್ಲಿ ಇರುತ್ತದೆ. ನಿಮ್ಮ ಸಮಯವೂ ಸಹ ಬರುತ್ತದೆ . ಆ ವ್ಯಕ್ತಿಗೆ ನಿಮ್ಮ ಮೇಲೆ ಇರುವಂತಹ ಸಂದೇಹ ಸಮಸ್ಯೆ ಏನೆಂದು ಪರಿಹರಿಸಿಕೊಳ್ಳುವ ಪ್ರಯತ್ನ ನೀವೇ ಪಡಬೇಕು . ಸಣ್ಣ ಸಣ್ಣ ಸಂಗತಿಗಳಲ್ಲೂ ಖುಷಿ ಕಾಣುತ್ತಾ ಸಂಭ್ರಮಿಸುತ್ತಾ ಸಾಗಿದರೆ ಜೀವನ ಖುಷಿಯಿಂದ ಸಾಗುತ್ತದೆ. ಜೀವನದಲ್ಲಿ ಹಣಕ್ಕಿಂತ ಗುಣ ಬಹಳ ಮುಖ್ಯ. ಏಕೆಂದರೆ ನಮ್ಮಲ್ಲಿರುವ ಹಣ ಮತ್ತು ಬಂಗಾರವನ್ನು ನಾವೇ ಕಾಯಬೇಕು .
ಆದರೆ ನಮ್ಮಲ್ಲಿರುವ ಒಳ್ಳೆಯ ಗುಣ ಮತ್ತು ನಡತೆಗಳು ನಮ್ಮನ್ನು ಕಾಯುತ್ತವೆ. ನಿಮ್ಮ ಹೋರಾಟದಿಂದ ಎಂದಿಗೂ ಹಿಂದಕ್ಕೆ ಸರಿಯಬೇಡಿ. ಒಳ್ಳೆಯ ಕೆಲಸಗಳಿಗೆ ತುಂಬಾ ಸಮಯ ಹಿಡಿಯುತ್ತದೆ. ಫಲ ಬರುವುದು ತಡವಾದ ಮಾತ್ರಕ್ಕೆ ನೀವು ವಿಫಲರಾದಿರಿ ಎಂದರ್ಥವಲ್ಲ. ಪ್ರಾಮಾಣಿಕವಾಗಿ ಬದುಕಿದವರಿಗೆ ಮನುಷ್ಯರು ಸಹಾಯ ಮಾಡದೆ ಹೋದರು ದೇವರು ಸಹಾಯ ಮಾಡುತ್ತಾನೆ .
ಶುದ್ಧವಾದ ಮನಸ್ಸಿನಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಹೋದರು ಶಾಶ್ವತವಾದ ಸುಖವನ್ನು ಪಡೆಯುತ್ತಾರೆ . ಎಂದಿಗೂ ನೀವು ನೀವಾಗಿರಿ ಎಂದಿಗೂ ಸಹ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಸ್ಪೂರ್ತಿ ಪಡೆಯಲು ಹೊರಗಿನ ವ್ಯಕ್ತಿಗಳ ಹತ್ತಿರ ಕೈಚಾಚ ಬೇಡಿ. ನಿಮ್ಮೊಳಗಿರುವ ಚೇತನವನ್ನು ಬಡಿದು ಎಬ್ಬಿಸಿ ಸಾಧನೆಗೆ ಮುಂದಾಗಿ. ಜೀವನದಲ್ಲಿ ನೀವೊಂದುಕೊಂಡಿದ್ದಲ್ಲವನ್ನು ಪಡೆಯಲು ಸಾಧ್ಯವಾಗದೇ ಇದ್ದರು
ಏನನ್ನೇ ಪಡೆದರು ಸಂತೋಷ ಕಾಣೋದು ನಿಜವಾದ ನೆಮ್ಮದಿಯಾಗಿರುತ್ತದೆ. ಅಂತಹ ಮನಸ್ಥಿತಿಯನ್ನು ನೀವು ಬೆಳೆಸಿಕೊಂಡರೆ ನೀವು ಎಂದಿಗೂ ದುಃಖಿಗಳಾಗುವುದಿಲ್ಲ .
ನಮ್ಮ ಬಗ್ಗೆ ಆಡಿಕೊಳ್ಳುವವರ ಬಗ್ಗೆ ಹೆಮ್ಮೆ ಪಡಬೇಕು . ಎಷ್ಟೊಂದು ಸಮಯ ನಮಗಾಗಿ ಮೀಸಲಾಗಿ ಇಟ್ಟಿದ್ದಾರಲ್ಲ ಎಂದು ನಾವು ಅಂದುಕೊಳ್ಳಬೇಕು. ನಿಮ್ಮ ಭಾವನೆಗಳನ್ನು ನಿಯಂತ್ರಣ ಮಾಡುವುದನ್ನು ಕಲಿತುಕೊಳ್ಳಬೇಕು, ಇಲ್ಲವಾದರೆ ನಿಮ್ಮ ಶತ್ರುಗಳು ನಿಮ್ಮ ವಿರುದ್ಧವೇ ಅವುಗಳನ್ನು ಬಳಸಿಕೊಳ್ಳಬಹುದು. ತೊಂದರೆಗಳಿಗೆ ಎರಡು ಕಾರಣಗಳಿದೆ. ಒಂದು ಹಿತ ಶತ್ರುಗಳ ಮೇಲೆ ನಂಬಿಕೆ ಇಡುವುದು ಇನ್ನೊಂದು ನಮಗೆ ಒಳ್ಳೆಯದನ್ನು ಬಯಸುವ ಬಯಸುವವರ ಮೇಲೆ ಸಂಶಯ ಪಡುವುದು.
ಕೆಲಸ ಮಾಡುವಾಗ ನಿಮಗೆ ಸುಸ್ತಾದರೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಹಾಗೆಂದು ಕೆಲಸವನ್ನೇ ಬಿಟ್ಟುಬಿಡುವುದು ಸೂಕ್ತವಲ್ಲ. ಸಮಸ್ಯೆಗಳು ಎದುರಾದಾಗ ಪರಿಹಾರದ ಮಾರ್ಗವನ್ನು ಹುಡುಕಬೇಕು ಪಲಾಯನವಾದ ಸರಿಯಲ್ಲ. ಒಪ್ಪಿನಲ್ಲಿ ನೀವು ಎಲ್ಲಿ ಕುಳಿತಿದ್ದೀರಿ ಎಂದು ನೋಡಿ ಯೌವ್ವನದಲ್ಲಿ ಎಲ್ಲಿ ನಿಂತಿದ್ದೀರಿ ಎಂಬುದನ್ನು ಹೇಳಬಹುದು ಕೈಯಲ್ಲಿ ಶಕ್ತಿ ಇದ್ದಾಗ ಚೆನ್ನಾಗಿ ದುಡಿದರೆ ಜೀವನದ ಕೊನೆಯಲ್ಲಿ ಸುಖವಾಗಿ ಬದುಕಬಹುದು. ಜೀವನಕ್ಕೆ ತಾಲೀಮು ಎನ್ನುವುದು ಇಲ್ಲ ನಿತ್ಯವೂ ನೂತನವಾದ ಪ್ರಯೋಗಕ್ಕೆ ಹಣಿಯಾಗುತ್ತಲೇ ಸಾಗುವ ಅನಿವಾರ್ಯತೆ ಖಂಡಿತವಾಗಿಯೂ ಎಲ್ಲರ ಬದುಕಲ್ಲಿ ಬರುತ್ತದೆ .
ನಮ್ಮೆಲ್ಲರ ಸಾಮರ್ಥ್ಯದ ಜೊತೆಗೆ ಬದುಕುವುದೇ ನಿಜವಾದ ಬದುಕು. ಜೀವನದಲ್ಲಿ ನೋವನ್ನು ಅನುಭವಿಸಲು ಸಾಧ್ಯವಾಗದಿದ್ದರೆ ಸಾಹಸಿಗಳಾಗಲು ಸಾಧ್ಯವಿಲ್ಲ. ತಪ್ಪು ಮಾಡದಿದ್ದರೆ ಕಲಿಯುವುದು ಇಲ್ಲ . ಹೀಗಾಗಿ ಈ ನಿಂದನೆಗಳು, ಕ್ಷಣಿಕವೆಂದು ಭಾವಿಸಿ. ನಿಮ್ಮ ಪ್ರಯತ್ನಗಳು ಮಾತ್ರವೇ ನಿಮ್ಮನ್ನು ಸಾಧಕರನ್ನಾಗಿ ಮಾಡುತ್ತದೆ. ಗಿಡವು ಯಾವಾಗಲೂ ಉದಿರಿ ಹೋದ ಹೂಗಳು ಮತ್ತು ಎಲೆಗಳ ಬಗ್ಗೆ ಚಿಂತಿಸುವುದಿಲ್ಲ. ಹೊಸ ಹೂಗಳನ್ನು ಸೃಷ್ಟಿಸುವುದೇ ಅದರ ಅಧ್ಯಾಯವಾಗಿರುತ್ತದೆ. ಆಗಿ ಹೋದ ಕಾರ್ಯಕ್ಕೆ ಚಿಂತಿಸಿ ಅಗತ್ಯವಿಲ್ಲ. ಹೊಸದನ್ನು ಸೃಷ್ಟಿಸುವ ಉತ್ಸಾಹ ಮತ್ತು ಆತ್ಮವಿಶ್ವಾಸ ನಿಮ್ಮಲ್ಲಿರಲಿ .
ನಿಮ್ಮ ಕಣ್ಣ ಮುಂದೆ ಮತ್ತು ನಿಮ್ಮ ಬೆನ್ನ ಹಿಂದೆ ಪ್ರಾಮಾಣಿಕವಾಗಿ ಇರುವಂತವರು ನಿಜವಾದ ಸ್ನೇಹಿತರಾಗಿರುತ್ತಾರೆ. ಕಲಿಕೆಯ ಬಗ್ಗೆ ಅದ್ಭುತವಾದ ವಿಷಯವೇನೆಂದರೆ ನಮ್ಮಿಂದ ಕಿತ್ತುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಬೇವನ್ನು ಬಿತ್ತಿದರೆ ಮಾವು ಸಿಗಲು ಸಾಧ್ಯವಿಲ್ಲ. ಬದುಕಿನಲ್ಲಿ ನಮಗೆ ಒಳಿತಾಗಬೇಕು ಎಂದರೆ, ನಾವು ಕೂಡ ಒಳಿತನೆ ಮಾಡಬೇಕು ಸಂಬಂಧಗಳ ನಡುವೆ ಸ್ವಾರ್ಥದ ಸುಳಿ ಇದ್ದರೆ ಅಲ್ಲಿ ಪ್ರೀತಿಗೆ ಬೆಲೆ ಇಲ್ಲ ಎಂದು ಅರ್ಥವಾಗಿರುತ್ತದೆ. ಕೆಲಸ ಮಾಡಲು ಅಥವಾ ಮಾಡದೇ ಇರಲು ಕಾರಣಗಳನ್ನು ಹುಡುಕಬೇಡಿರಿ . ಏಕೆಂದರೆ ಒಂದು ಕೆಲಸ ಆಗಬೇಕು ಎಂದಿದ್ದರೆ ಬೇಕಾಗಿರುವುದು ಇಚ್ಛೆ. ಆ ಕೆಲಸ ಆಗಬಾರದು ಎಂದಿದ್ದರೆ ಅದಕ್ಕೆ ಬೇಕಾಗಿರೋದು ಕೇವಲ ನೆಪಗಳು ಅಷ್ಟೇ. ಆದ್ದರಿಂದ ಮನಸ್ಸನ್ನು ದೃಢವಾಗಿಟ್ಟುಕೊಳ್ಳಬೇಕು.