ಭೂತ ಪೇತದ ಭಯ ಕಾಡುತ್ತಿದೆಯಾ? ಮನೆಯಲ್ಲಿ ಈ ಗಿಡವಿದ್ದರೇ ಸಾಕು ಯಾವ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಎಂಬ ವಿಷಯವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.
ಲಕ್ಷ್ಮಿದೇವಿ ಎಂದು ಕರೆಯುವ ಈ ಗಿಡ ಮನೆಯ ಮುಂದೆ ಇದ್ದರೇ ಶುಭಕರ. ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ಸುಖ, ಸಂತೋಷ, ಸಂಮೃದ್ಧಿ ನೆಲೆಸಿರುತ್ತದೆಂಬ ನಂಬಿಕೆ ಇದೆ. ಹಿಂದೂ ಧರ್ಮದ ಎಷ್ಟೋ ಪೂಜೆಗಳಲ್ಲಿ ತುಳಸಿ ದಳಗಳನ್ನು ಬಳಸಲಾಗುತ್ತದೆ
ಅದರಲ್ಲೂ ವಿಷ್ಣುವಿನ ಪೂಜೆಯಲ್ಲಿ ತುಳಸಿ ಇಲ್ಲದಿದ್ದರೇ ಅಪೂರ್ಣ. ಇದೇ ಗಿಡ ನಿಮ್ಮನ್ನು ದುಷ್ಟಶಕ್ತಿಗಳಿಂದ ರಕ್ಷಣೆಯನ್ನು ಕೊಡುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ ಈ ಗಿಡಕ್ಕೆ ಅನೇಕ ಶಕ್ತಿಗಳಿವೆ. ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕಿ ಅದಕ್ಕೆ ಕೈ ಮುಗಿದು ನಮಸ್ಕರಿಸುತ್ತಾರೆ. ನಮ್ಮ ಶಾಸ್ತ್ರಗಳ ಪ್ರಕಾರ ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸಿದರೇ ಹಳೆಯ ಜನ್ಮದ ಪಾಪಗಳು ದೂರವಾಗಿ ಹೋಗುತ್ತವೆ. ಜೊತೆಗೆ ಧನಾತ್ಮಕ ಶಕ್ತಿ ನಮ್ಮ ದೇಹವಿಡೀ ವ್ಯಾಪಿಸಿಕೊಳ್ಳುತ್ತಾ ಹೋಗುತ್ತದೆ.
ತುಳಸಿ ಗಿಡದಲ್ಲಿ ಒಟ್ಟು ನಾಲ್ಕು ವಿಧಗಳಿವೆ. ಶ್ಯಾಮ ತುಳಸಿ, ರಾಮ ತುಳಸಿ, ಶ್ವೇತ ತುಳಸಿ, ವನತುಳಸಿ ಮತ್ತು ನಿಂಬೆ ತುಳಸಿ. ಒಂದೊಂದು ಗಿಡ ಒಂದೊಂದು ವಿಶೇಷತೆಯನ್ನು ಹೊಂದಿದೆ. ಹಸಿರು ಬಣ್ಣದ ತುಳಸಿ ಶ್ರೀರಾಮನಿಗೆ ತುಂಬಾ ಪ್ರಿಯವಾಗಿರುವುದು ಮತ್ತು ಇದು ತಿನ್ನಲು ಸಿಹಿಯಾಗಿರುತ್ತದೆ. ಸಾಮಾನ್ಯವಾಗಿ ಇದೇ ಬಗೆಯ ತುಳಸಿ ಗಿಡವನ್ನು ಎಲ್ಲರ ಮನೆಯಲ್ಲೂ ನೋಡಬಹುದು. ಶ್ಯಾಮ ತುಳಸಿಯ ಎಲೆ ನೇರಳೆ ಬಣ್ಣವನ್ನು ಹೊಂದಿದ್ದು ಇದು ಶ್ರೀಕೃಷ್ಣನಿಗೆ ಪ್ರಿಯವಾಗಿರುವಂತಹ ತುಳಸಿ ಗಿಡವೆಂದು ಹೇಳಲಾಗುತ್ತದೆ.
ಆದ್ದರಿಂದ ಇದಕ್ಕೆ ಕೃಷ್ಣ ತುಳಸಿ ಎಂದು ಕರೆಯಲಾಗುತ್ತದೆ. ಮೂರನೇ ಬಗೆಯ ತುಳಸಿ ಯಾವುದು ಎಂದು ಶ್ವೇತ ಬಣ್ಣದ ತುಳಸಿ ಎಂದು ಕರೆಯಲಾಗುವ ಈ ತುಳಸಿ ಗಿಡದ ಎಲೆಯು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಕೆಲವರು ಇದಕ್ಕೆ ವಿಷ್ಣು ತುಳಸಿ ಎಂದು ಕರೆಯುತ್ತಾರೆ. ಈ ತುಳಸಿಯಲ್ಲಿ ಹೂವುಗಳು ಇರುತ್ತವೆ. ವಿಷ್ಣುವಿನ ಪೂಜೆಯಲ್ಲಿ ಇದನ್ನು ತಪ್ಪದೇ ಬಳಸುತ್ತಾರೆ. ನಾಲ್ಕನೇ ತುಳಸಿ ಎಂದರೆ ವನ ತುಳಸಿ ಅಥವಾ ಅರಣ್ಯ ತುಳಸಿ ಈ ಗಿಡದ ಎಲೆಯು ದಪ್ಪವಿದ್ದು ನಿಂಬೆ ಹಣ್ಣಿನ ಎಲೆಯಂತೆ ಕಾಣಿಸುತ್ತದೆ.
ಆದ್ದರಿಂದ ಈ ಗಿಡಕ್ಕೆ ನಿಂಬೆಹಣ್ಣಿನ ತುಳಸಿ ಎಂದು ಹೇಳಲಾಗುತ್ತದೆ. ಈ ಎಲ್ಲಾ ಬಗೆಯ ತುಳಸಿ ಗಿಡವನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಈ ಎಲ್ಲಾ ತುಳಸಿಗಳಲ್ಲಿ ಮುಖ್ಯವಾಗಿರುವ ರಾಮ ತುಳಸಿ ನಮ್ಮನ್ನು ಭೂತ ಪ್ರೇತ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆಯನ್ನು ಕೊಡುತ್ತದೆ.ಹಸಿರು ಸಸ್ಯ, ಹುಲ್ಲುಗಳನ್ನು ಬುಧಗ್ರಹವು ಆಳುವಂತಹ ಗ್ರಹವಾಗಿದೆ ಮತ್ತು ಬುಧನು ತುಳಸಿ ಗಿಡದಲ್ಲಿ ಹೂವು ಬಿಡಲು ಪ್ರೇರೇಪಿಸುತ್ತಾನೆ. ಇದು ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕಂಪನಗಳನ್ನು ಹೆಚ್ಚಿಸುತ್ತದೆಂದು ನಂಬಲಾಗಿದೆ.
ತುಳಸಿಯು ನಿಮ್ಮನ್ನು ವೈಕುಂಠದ ಕಡೆಗೆ ಕರೆದೊಯ್ಯುವ ಮತ್ತು ಜನ್ಮಚಕ್ರದಿಂದ ನಿಮ್ಮನ್ನು ಮುಕ್ತಿಗೊಳಿಸುವ ರಾಜಮಾರ್ಗವಾಗಿದೆ. ತುಳಸಿಯ ಪ್ರತಿಯೊಂದು ಭಾಗವು ವಿವಿಧ ದೇವರುಗಳ ಉಪಸ್ಥಿತಿಯನ್ನು ಹೊಂದಿದೆ. ಲಕ್ಷ್ಮಿದೇವಿಯ ಪ್ರತಿರೂಪವಾದ ತುಳಸಿಯನ್ನು ಪ್ರತಿದಿನ ಪೂಜಿಸಿದರೇ ಮನೆಯಲ್ಲಿ ಸಂಮೃದ್ಧಿ ನೆಲೆಸುತ್ತದೆ.
ತುಳಸಿ ದೇವಿಯ ಕೃಪಾಕಟಾಕ್ಷ ಎಲ್ಲಿ ಇರುತ್ತದೆಯೋ ಆ ವ್ಯಕ್ತಿಯ ಅದೃಷ್ಟವೇ ಬದಲಾಗಿ ಹೋಗುತ್ತದೆ. ವಿಷ್ಣುವಿಗೆ ತುಳಸಿ ದಳವನ್ನು ಅರ್ಪಿಸಿದರೇ ಒಳ್ಳೆಯದು ಆದರೇ ಶಿವನಿಗೆ ಮತ್ತು ಗಣೇಶನಿಗೆ ಅರ್ಪಿಸಬಾರದು. ನೀವು ನಿಮ್ಮ ಜೀವನದಲ್ಲಿ ಹೆಚ್ಚು ಸೋಲನ್ನು ಅನುಭವಿಸುತ್ತಿದ್ದೀರ ಅದಕ್ಕೆ ಸುಲಭ ಪರಿಹಾರವೇನೆಂದರೆ
ಸಂಜೆಯ ಒಳಗೆ ಸ್ವಲ್ಪ ತುಳಸಿ ದಳವನ್ನು ಕಿತ್ತುಕೊಂಡು ಇಟ್ಟುಕೊಳ್ಳಿ ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಿ ಬೆಳಿಗ್ಗೆ ಎದ್ದ ಬಳಿಕ ಆ ಎಲೆಗಳನ್ನು ತೆಗೆದು ಸ್ನಾನ ಮಾಡಿದ ಬಳಿಕ ಆ ಎಲೆಗಳನ್ನು ತಿನ್ನಬೇಕು ಹೀಗೆ ಪ್ರತಿನಿತ್ಯ ಮಾಡಿದರೇ ನಿಮ್ಮ ಜೀವನದಲ್ಲಿರುವ ಒಂದೊಂದೇ ಚಿಂತೆಗಳು ದೂರವಾಗುತ್ತಾ ಹೋಗುತ್ತದೆ. ನಿಮ್ಮ ಮನೆಯಲ್ಲಿ ಒಂದೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೇ ಹಣಕಾಸಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ಮನೆಯಲ್ಲಿ ಕಲಹ, ಕಛೇರಿಯಲ್ಲಿ ನಿಂದನೆ
ಈ ರೀತಿಯ ಕಿರಿಕಿರಿಗಳು ನಿಮ್ಮಿಂದ ದೂರವಾಗಬೇಕೆಂದರೆ ತುಳಸಿ ಗಿಡದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು. ಅದು ರಾಮ ತುಳಸಿಯಾದರೇ ಉತ್ತಮ. ಈ ತುಳಸಿಯನ್ನು ಸ್ವಚ್ಛವಾದ ನೀರಿನಿಂದ ತೊಳೆದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು ನಂತರ ಹಳದಿ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ಆವರಿಸಿಕೊಳ್ಳುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳು ಒಂದೊಂದಾಗಿ ಪರಿಹಾರವಾಗುತ್ತದೆ.
ಪ್ರತಿ ಶುಕ್ರವಾರ ಹಸಿ ಹಾಲನ್ನು ತುಳಸಿ ಗಿಡಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೇ ಅದರಿಂದ ಮುಕ್ತಿ ಸಿಕ್ಕಿ ಲಾಭವನ್ನು ಕಾಣುತ್ತೀರಿ. ತುಳಸಿ ಗಿಡದ ಮುಂದೆ ಸಂಧ್ಯಾ ಸಮಯದಲ್ಲಿ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರ ಹೋಗುತ್ತದೆ. ಭೂತ ಪ್ರೇತದಂತಹ ದುಷ್ಟ ಶಕ್ತಿಗಳು ಹತ್ತಿರಕ್ಕೆ ಸುಳಿಯುವುದಿಲ್ಲ. ಹಾಗೆಯೇ ನಿಮ್ಮ ಎಲ್ಲಾ ಮನೋಕಾಮನೆಗಳು ದೂರವಾಗುತ್ತಾ ಹೋಗುತ್ತದೆ. ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಇಡಬೇಡಿ. ತುಳಸಿಯ ಗಿಡವನ್ನು ಮನೆಗೆ ಗ್ರಹಣದ ದಿನದಂದು ತರಬೇಡಿ. ತುಳಸಿ ಗಿಡವು ಮನೆಯಲ್ಲಿ ಒಣಗದಂತೆ ನೋಡಿಕೊಳ್ಳಿ.