ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿ , ಸಮೃದ್ಧಿಗಾಗಿ ಮಹಿಳೆಯರಿಗಾಗಿ ಕಿವಿ ಮಾತುಗಳು ಯಾವುದು ಎಂದು ತಿಳಿಯೋಣ .
1 . ಮನೆಗೆ ಬಂದ ಹೆಂಗಸರಿಗೆ ಅರಿಶಿಣ ಕುಂಕುಮ ಬೆಳ್ಳಿ ಬಂಗಾರ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು .
2 . ಮಹಿಳೆಯರು ತಮ್ಮ ಕಾಲಿನ ಪಾದಗಳನ್ನು ಒಡೆಯದಂತೆ ನೋಡಿಕೊಳ್ಳಬೇಕು . ಕೈ ಕಾಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು .
3 . ಮನೆಯಲ್ಲಿನ ಅಕ್ಕ- ತಂಗಿಯರನ್ನು ತವರಿಗೆ ವರ್ಷಕ್ಕೊಮ್ಮೆ ಕರೆಸಿ ಅರಿಶಿಣ ಕುಂಕುಮ ಬೆಳ್ಳಿ – ಬಂಗಾರ ಫಲ ತಾಂಬೂಲವನ್ನು ಕೊಟ್ಟು ಹರಸಿದರೆ ಮನೆತನ ತುಂಬಾ ಎತ್ತರಕ್ಕೆ ಬೆಳೆಯುತ್ತದೆ .
4 . ಸೂರ್ಯೋದಯಕ್ಕೆ ಮುಂಚೆ ಮನೆ ಬಾಗಿಲಿಗೆ ನೀರು ಹಾಕಿ ಒಂದು ಚಿಕ್ಕ ರಂಗೋಲಿಯನ್ನು ಇಡಲೇಬೇಕು . ಸ್ನಾನ ಮಾಡಿ ಹೊಸ್ತಿಲ ಪೂಜೆ ಮಾಡಿ ನಂತರ ಅಡುಗೆ ಮಾಡಬೇಕು . ಮನೆಯ ಸುಮಂಗಲಿಯರು ಈ ನಿಯಮವನ್ನು ಪಾಲಿಸಿದರೆ ತಾಯಿ ಮಹಾಲಕ್ಷ್ಮಿಯು ಸಹ ಸಂತುಷ್ಟಗೊಂಡು ಆ ಮನೆಯಲ್ಲಿ ನೆಲೆಸುತ್ತಾಳೆ .
5 . ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿ ಒಡೆಯ ಕೂಡದು ಮತ್ತು ಒಡೆಯುವ ಜಾಗದಲ್ಲಿಯೂ ಸಹ ಇರಕೂಡದು .
6 . ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ದೀಪ ಹಚ್ಚಬಾರದು .
7 . ಮನೆಯಲ್ಲಿ ಯಾವುದಾದರೂ ವಸ್ತು ಖಾಲಿಯಾಗಿ ಇದ್ದರೆ ಅದು ಖಾಲಿಯಾಯಿತು ಎಂದು ಹೇಳಬಾರದು. ಬದಲಾಗಿ ಅಂಗಡಿಯಿಂದ ತೆಗೆದುಕೊಂಡು ಬರಬೇಕು ಎಂದು ಹೇಳಬೇಕು .
8 . ದುಃಖ ವಿಚಾರಿಸಲು ಬಂದವರು ಹೋಗುವಾಗ ಹೋಗಿ ಬರುತ್ತೇನೆ ಎಂದು ಹೇಳಬಾರದು. ಹಾಗೇನೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಎಂದು ಆಹ್ವಾನಿಸಿ, ಸ್ಥಳ ಕೊಟ್ಟು ಕೂರಿಸಿ ಅತಿಥಿ ಸತ್ಕಾರ ಮಾಡಿದರೆ, ಅದು ಪರೋಕ್ಷವಾಗಿ ಅಶುಭಕ್ಕೆ ನಾಂದಿ ಹಾಡಿದಂತೆ ಆಗುತ್ತದೆ.
10 . ಕಪ್ಪು ವರ್ಣದ ಬಟ್ಟೆಗಳನ್ನು ಧರಿಸುವುದು ಎಂದಿಗೂ ಒಳ್ಳೆಯದಲ್ಲ .
11 . ಉಪ್ಪು ಹುಣಸೆ ಹಣ್ಣನ್ನು ಯಾರಿಗೂ ಕೈಯಲ್ಲಿ ಕೊಡಬಾರದು .
12 . ಪ್ರತಿನಿತ್ಯ ಊಟಕ್ಕೂ ಮುನ್ನ ದೇವರನ್ನು ಸ್ಮರಿಸಬೇಕು. ಸಾಕು ಪ್ರಾಣಿಗಳಿಗೆ ಊಟ ಇಟ್ಟರೆ ತುಂಬಾ ಒಳ್ಳೆಯದು .
13 . ಹೆಂಗಸರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿ ಕಾಲಿನಲ್ಲಿ ನಿಲ್ಲುವುದು ಎಂದಿಗೂ ಮಾಡಬಾರದು . ಇದು ಒಳ್ಳೆಯದಲ್ಲ. ಇದರಿಂದ ದರಿದ್ರ ಉಂಟಾಗುತ್ತದೆ .
14 . ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಸ್ವಲ್ಪ ನೀರನ್ನು ಸಿಂಪಡಿಸಿ , ಅದಕ್ಕೆ ಸ್ವಲ್ಪ ಅರಿಶಿಣವನ್ನು ಆ ಬಟ್ಟೆಯ ಯಾವುದಾದರೂ ಒಂದು ಕಡೆಗೆ ಹಚ್ಚಿ ನಂತರ ಧರಿಸಬೇಕು .
15 . ಮನೆಯಲ್ಲಿ ಧೂಳು ಕಸ ಜೇಡರ ಬಲೆ ಕಟ್ಟುವುದು ದರಿದ್ರದ ಸಂಕೇತ. ವಾರಕ್ಕೊಮ್ಮೆ ಅಂದರೆ ಮಂಗಳವಾರ ಶುಕ್ರವಾರ ಬಿಟ್ಟು ಉಳಿದ ದಿನಗಳಲ್ಲಿ ಮನೆಯ ಧೂಳು ಕಸಗಳನ್ನು ತೆಗೆದು ಸ್ವಚ್ಛ ಮಾಡಬೇಕು .
16 . ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದರ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು .
17 . ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮವನ್ನು ಹಾಕಿಕೊಂಡು ಇರಬೇಕು .
18 . ಹಣೆಯನ್ನು ಬೈತಲೆಯನ್ನು ಎಂದಿಗೂ ಕುಂಕುಮ ಇಲ್ಲದೆ ಖಾಲಿ ಬಿಡಬಾರದು .
19 . ಕೆಲವು ಮಹಿಳೆಯರಿಗೆ ತಲೆಯನ್ನು ಎರಡು ಕೈಗಳಿಂದ ಕೆರೆಯುವ ಅಭ್ಯಾಸ ಇರುತ್ತದೆ. ಆದರೆ ಈ ರೀತಿ ಮಾಡುವುದು ಎಂದಿಗೂ ಒಳ್ಳೆಯದಲ್ಲ .
20 . ಸುಮಂಗಲಿಯರು ಕೈಗಳನ್ನು ಕಾಲಿ ಬಿಡಬಾರದು. ಕೈಗಳಿಗೆ ಗಾಜಿನ ಬಳೆ ಹಾಕಿದರೆ , ತುಂಬಾ ಒಳ್ಳೆಯದು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ, ಯಾವುದಾದರೂ ಒಂದು ಅರಿಶಿಣ ದಾರ ಕೈಗೆ ಕಟ್ಟಿ ಕೊಳ್ಳಲೇಬೇಕು. ಅಥವಾ ಬ್ರೇಸ್ಲೈಟ್ ಹಾಕಬೇಕು .
21 . ಸುಮಂಗಲಿಯರ ಬಾಯಿಂದ ಕೆಟ್ಟ ಪದ ಬರಬಾರದು. ಕೆಟ್ಟ ಪದಗಳಿಂದ ಮಕ್ಕಳಿಗೆ ಗಂಡನಿಗೆ ಅಥವಾ ಯಾರಿಗೆ ಆದರೂ ಬಯ್ಯಬಾರದು .
22 . ಯಾವುದೇ ಕಾರಣಕ್ಕೂ ಶುಕ್ರವಾರ ಮಂಗಳವಾರ ಹಾಗೂ ಸಾಯಂಕಾಲದ ಹೊತ್ತು ಕಣ್ಣಲ್ಲಿ ನೀರು ಹಾಕಬಾರದು .
23 . ಕೊಳಕಾದ ಬಟ್ಟೆ ಹರಿದ ಬಟ್ಟೆಗಳನ್ನು ಧರಿಸಬಾರದು . ಮನೆಯಲ್ಲಿ ಇದ್ದರೂ ಸಹ ಸ್ವಚ್ಛವಾಗಿ ಇರುವ ಚೆನ್ನಾಗಿ ಕಾಣಿಸುವ ಬಟ್ಟೆಗಳನ್ನು ಧರಿಸಬೇಕು .
24 . ಎಂದಿಗೂ ಕೂದಲನ್ನು ಕೆದರಿಕೊಂಡು ಇರಬಾರದು. ನೀಟಾಗಿ ಬಾಚಿ ಜಡೆ ಕಟ್ಟಬೇಕು .
25 . ಮಹಿಳೆಯರು ಎಂದಿಗೂ ಕೋಪ ಮಾಡಿಕೊಂಡು ಊಟ ಮಾಡದೆ ಮಲಗಬಾರದು. ಹಾಗೆ ಮಾಡಿದರೆ ತಾಯಿ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ ಆಗುತ್ತದೆ .
26 . ಒಡೆದ ತೆಂಗಿನ ಕಾಯಿಯನ್ನು ಇನ್ನೊಬ್ಬರಿಗೆ ಕೊಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು , ಉಳಿದ ಭಾಗವನ್ನು ಬೇರೆಯವರಿಗೆ ಕೊಡಬೇಕು .
27 . ಸುಮಂಗಲಿಯರು ಹೊತ್ತಲ್ಲದ ಹೊತ್ತಿನಲ್ಲಿ ದೀಪ ಹಚ್ಚುವುದು, ಪೂಜೆ ಮಾಡುವುದು, ಇಂಥವುಗಳನ್ನು ಮಾಡಬಾರದು .
28 . ಹೆಣ್ಣು ಎಂದರೆ ಆಕೆ ಲಕ್ಷ್ಮಿ ಸ್ವರೂಪ . ಹಾಗಾಗಿ ಅವಳನ್ನು ನೋಡಿದ ಕೂಡಲೇ ಕೈಮುಗಿದು ಬೆಳ್ಳಿ ಬಂಗಾರವನ್ನು ಕೊಟ್ಟು ನಮಸ್ಕರಿಸಬೇಕು. ಎನ್ನುವ ಭಾವನೆ ಮೂಡಬೇಕೇ ಹೊರತು, ಬೇರೆ ಇನ್ಯಾವುದೋ ಭಾವನೆಗಳಿಗೆ ಜಾಗ ಕೊಡದಂತೆ ವರ್ತಿಸಬೇಕು.