ಮಿಥುನ ರಾಶಿಯ ಮಹಿಳೆಯರ ಗುಣಸ್ವಭಾವಗಳು 

ನಾವು ಈ ಲೇಖನದಲ್ಲಿ ಮಿಥುನ ರಾಶಿ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಿಥುನ ರಾಶಿಯ ಸ್ತ್ರೀಯರು ಕಲ್ಪನಾ ಲೋಕದಲ್ಲಿ ಇರುತ್ತಾರೆ . ಕೆಲವು ಆಸೆ ಆಕಾಂಕ್ಷೆಗಳನ್ನು ಕಲ್ಪನೆಗಳಲ್ಲಿ ಮಾಡಿಕೊಳ್ಳುತ್ತಾರೆ . ಅವರದೇ ಆದ ಒಂದು ರೀತಿಯ ಕಲ್ಪನೆ ಇರುತ್ತದೆ . ಅವರ ವಿಚಾರಗಳಿಗೆ ರೆಕ್ಕೆ ಪುಕ್ಕಗಳನ್ನು ಕಟ್ಟಿಕೊಂಡು ಮನ ಬಂದಲ್ಲಿ ವಿಹಾರ ಮಾಡುತ್ತಾರೆ . ಅಂದರೆ ಅವರ ಇಚ್ಛೆಯಂತೆ ಒಂದು ಕಲ್ಪನೆಯನ್ನು ಮಾಡಿಕೊಂಡು ಇರುವ ಗುಣ ಸ್ವಭಾವವನ್ನು ಹೊಂದಿರುತ್ತಾರೆ . ಇವರ ವಿಚಾರದಲ್ಲಿ ಚಂಚಲತೆ ಹೆಚ್ಚಾಗಿರುತ್ತದೆ . ಇವರು ದ್ವಂದ್ವವಾದ ನಿಲುವನ್ನು ತೆಗೆದುಕೊಳ್ಳುತ್ತಾರೆ .

ಒಂದು ಸಮಯದಲ್ಲಿ ಗಂಭೀರವಾಗಿ ಇರುತ್ತಾರೆ . ಒಂದು ಕ್ಷಣ ಉದಾಸೀನವಾಗಿ ಇರುತ್ತಾರೆ . ಮರುಕ್ಷಣ ಉತ್ಸಾಹದಿಂದ ಇರಲು ಪ್ರಯತ್ನ ಮಾಡುತ್ತಾರೆ . ಇವರ ಸ್ವಭಾವ ಮಳೆ ಸುರಿದಂತೆ ತಂಪಾಗುತ್ತದೆ . ಬಹಳಷ್ಟು ಚಾತುರ್ಯದಿಂದ ಕೂಡ ವರ್ತಿಸುತ್ತಾರೆ . ಅಷ್ಟೇ ಮಂದಗತಿಯಲ್ಲೂ ಕೂಡ ಇರುತ್ತಾರೆ . ಇವರಲ್ಲಿ ಒಂದು ರೀತಿಯ ಚಂಚಲ ಸ್ವಭಾವ ಗೋಚರವಾಗುತ್ತದೆ . ಇವರ ಬುದ್ಧಿಚಾತುರ್ಯ ಬಹಳಷ್ಟು ಜನರನ್ನು ಆಕರ್ಷಣೆ ಮಾಡುತ್ತದೆ . ಎಲ್ಲರನ್ನು ಆಕರ್ಷಣೆ ಮಾಡುವ ಗುಣ ಇವರಲ್ಲಿ ಇರುತ್ತದೆ .

ಮಿಥುನ ರಾಶಿಯ ಸ್ತ್ರೀಯರು ಯಾವುದೇ ಒಂದು ಕೆಲಸ ಕಾರ್ಯಗಳು ಇರಬಹುದು , ಅಥವಾ ಯಾವುದೇ ಒಂದು ಯೋಜನೆ ಇರಬಹುದು , ಇದರಲ್ಲಿ ಬಹಳಷ್ಟು ಯಶಸ್ಸನ್ನೂ ಗಳಿಸುತ್ತಾರೆ . ಯಾವುದೇ ಕೆಲಸ ಇದ್ದರೂ ಮಾಡುವ ಚಾಣಾಕ್ಷತೆ ಇರುತ್ತದೆ . ಇವರ ಹಠಮಾರಿತನ ಕೆಲವೊಮ್ಮೆ ಬಹಳಷ್ಟು ಸಮಸ್ಯೆಗಳನ್ನು ತರುತ್ತದೆ . ಮತ್ತು ಬಹಳಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ .ತೊಂದರೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ . ಇವರ ಹಠಮಾರಿ ತನದಿಂದ ಚರ್ಚೆಯ ವಿಷಯ ಆಗಿರುತ್ತದೆ .

ಪ್ರೇಮ ಸಂಬಂಧದ ವಿಚಾರದಲ್ಲಿ ಒಗ್ಗಟ್ಟಿನಿಂದ ಇದ್ದರೂ ಕೂಡ , ಚಂಚಲತೆ ಇರುವುದರಿಂದ ಸಂಬಂಧದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಮತ್ತೆ ಒಂದು ಕ್ಷಣದಲ್ಲಿ ಪ್ರೇಮಿಯಂತೆ ವರ್ತಿಸುತ್ತಾರೆ . ಮತ್ತೊಂದು ಕ್ಷಣ ಆ ಸಂಬಂಧವನ್ನು ಉಪೇಕ್ಷೆ ಮಾಡುತ್ತಾರೆ . ಅಂದರೆ ಆ ಸಂಬಂಧವನ್ನು ಮುರಿದು ಹಾಕುತ್ತಾರೆ . ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಯೋಚನೆ ಮಾಡುವುದಿಲ್ಲ . ಇವರ ವಿವಾಹ ಮಿಥುನ ರಾಶಿಯ ಪುರುಷರೊಡನೆ ಯೋಗ್ಯವಾಗಿರುತ್ತದೆ .

ಇಬ್ಬರ ಗುಣ ಸ್ವಭಾವ ಒಂದೇ ಆಗಿರುವುದರಿಂದ , ಮಿಥುನ ರಾಶಿಯ ಪುರುಷರು ಮಿಥುನ ರಾಶಿಯ ಸ್ತ್ರೀಯರಿಗೆ ಬಹಳಷ್ಟು ಹೊಂದಾಣಿಕೆ ಆಗುತ್ತಾರೆ . ಉತ್ಸುಕರಾಗಿ ಇರುವುದರಿಂದ ಬಹಳಷ್ಟು ಒಳ್ಳೆಯ ಕಾರ್ಯಗಳು , ಒಳ್ಳೆಯ ಕೆಲಸಗಳು, ಪರೋಪಕಾರ , ಸ್ಥಿತಿಗತಿಗಳ ಬಗ್ಗೆ ಸ್ಮರಿಸಬೇಕಾಗುತ್ತದೆ . ಆದರೆ ದಾಂಪತ್ಯ ಜೀವನದಲ್ಲಿ ಇವರು ಎಂದಿಗೂ ಬೇಸರ ಮಾಡಿಕೊಳ್ಳುವುದಿಲ್ಲ . ಹೊಂದಾಣಿಕೆ ಮಾಡಿಕೊಂಡು ನಿರಂತರವಾಗಿ ಜೀವನವನ್ನು ನಡೆಸುವ ಪ್ರಯತ್ನವನ್ನು ಮಾಡುತ್ತಾರೆ . ಇವರ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗುವುದಿಲ್ಲ .

ಕೆಲವೊಮ್ಮೆ ದಂಪತಿಗಳು ಅಜ್ಞಾನಿಗಳಂತೆ ಕೆಲವೊಮ್ಮೆ ವಾದ ವಿವಾದಗಳನ್ನು ಮಾಡುತ್ತಾರೆ . ಆದರೆ ಪತಿ-ಪತ್ನಿಯರಲ್ಲಿ ವಾದ ವಿವಾದ ಸರ್ವೇ ಸಾಮಾನ್ಯವಾಗಿರುತ್ತದೆ . ಇವರು ಇದನ್ನು ಹೆಚ್ಚು ಮಾಡಿದರು ಕೂಡ ಇದರಿಂದ ದಾಂಪತ್ಯ ಜೀವನಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಬಾಧಿಸುವುದಿಲ್ಲ . ಪರಸ್ಪರ ಹೊಂದಾಣಿಕೆ ಇರುವುದರಿಂದ ಕ್ಷಣ ಮಾತ್ರದ ಸಮಸ್ಯೆಗಳು ಮಾತ್ರ ಇರುತ್ತದೆ .ಚೆನ್ನಾಗಿ ಹರಿತುಕೊಂಡು ತಿಳಿದುಕೊಂಡು , ವಾಸ್ತವ ಸ್ಥಿತಿಯನ್ನು ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಇವರಲ್ಲಿ ಇರುತ್ತದೆ .
ಇವರ ಮನಸ್ಸು ಬಹಳ ಪ್ರಾಧಾನ್ಯತೆ ಹೊಂದಿರುತ್ತದೆ .

ಇವರ ಮನಸ್ಸು ಶರೀರವನ್ನು ನಿಯಂತ್ರಿಸಿ ಕೊಳ್ಳುವ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತದೆ . ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುತ್ತಾರೆ . ಇವರ ಯೋಚನೆ ಯಾವಾಗಲು ಸಕಾರಾತ್ಮಕವಾಗಿ ಇರುತ್ತದೆ . ಮಾನಸಿಕ ರೋಗಗಳಿಂದ ಒಳಗೊಂಡಿರುವ ಮಿಥುನ ರಾಶಿಯವರಿಗೆ ಮಾನಸಿಕ ಸಮಸ್ಯೆಗಳು ತುಂಬಾ ಇರುತ್ತವೆ . ಇವರ ಮನಸ್ಸನ್ನು ಪ್ರಸನ್ನವಾಗಿ ಇರಿಸಿಕೊಂಡರೆ ರೋಗಗಳು ಕೂಡ ಬರುವುದಿಲ್ಲ . ಇವರ ಕಲ್ಪನೆ ಯೋಚನೆ ನಕಾರಾತ್ಮಕವಾಗಿ ಇದ್ದರೆ , ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ . ಇವರಿಗೆ ಔಷಧೀಯ ಬದಲಿಗೆ ಸುಖ ನಿದ್ರೆ ಬಹಳಷ್ಟು ಕೆಲಸ ಮಾಡುತ್ತದೆ . ಶುದ್ಧ ಗಾಳಿ ಸೂಕ್ತವಾದ ಆಹಾರದ ಅವಶ್ಯಕತೆ ಇರುತ್ತದೆ . ಮಿಥುನ ರಾಶಿ ಅವರು ಬಹಳಷ್ಟು ಚಂಚಲ ಸ್ವಭಾವದವರು ಆಗಿದ್ದರೂ ಕೂಡ , ಜನರ ಸಮಸ್ಯೆಗಳು ಬಹಳಷ್ಟು ವಿಪರೀತವಾಗಿ ಬಾಧಿಸುತ್ತದೆ . ದಾಂಪತ್ಯದಲ್ಲಿ ಹೊಂದಾಣಿಕೆಯ ಜೀವನ ಇರುತ್ತದೆ .

Leave a Comment