ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಜೂನ್ ತಿಂಗಳ ರಾಶಿ ಫಲವನ್ನು ತಿಳಿದುಕೊಳ್ಳೋಣ. ಕುಂಭ ರಾಶಿಯವರ ಲಾಂಛನವು ಬಿಂದಿಗೆ ಹೊತ್ತಿರುವಂತಹ ಸ್ತ್ರೀ ಆಗಿರುತ್ತದೆ. ರಾಶಾಧಿಪತಿಯು ಶನಿಯು ಆಗಿರುತ್ತದೆ . ವಾಯು ತತ್ವದ ರಾಶಿ ಆಗಿರುತ್ತದೆ ಪುರುಷಲಿಂಗದ ರಾಶಿ ಆಗಿರುತ್ತದೆ. ಪಶ್ಚಿಮ ದಿಕ್ಕಿನ ರಾಶಿ ಆಗಿರುತ್ತದೆ. ರಾಶಿಯ ರತ್ನವು ನೀಲವಾಗಿರುತ್ತದೆ. ರಾಶಿಯ ಬಣ್ಣವು ನೀಲಿ ಮತ್ತು ಕಪ್ಪು ಆಗಿರುತ್ತದೆ . ಶುಕ್ರವಾರ ಶನಿವಾರ ಅದೃಷ್ಟದ ದಿನಗಳಾಗಿರುತ್ತದೆ.
ಶನಿ ಪರಮಾತ್ಮ ಅದೃಷ್ಟದ ದೇವತೆಯಾಗಿರುತ್ತದೆ. ಮೂರು ಆರು, ನಾಲ್ಕು , ಎಂಟು , ಅದೃಷ್ಟದ ಸಂಖ್ಯೆಗಳಾಗಿರುತ್ತದೆ. 8, 17 , 26, ಅದೃಷ್ಟದ ದಿನಾಂಕಗಳಾಗಿರುತ್ತದೆ. ಮಿತ್ರ ರಾಶಿಯು ವೃಷಭ ಮಕರ ಮೀನವಾಗಿರುತ್ತದೆ. ಶತ್ರು ರಾಶಿ ಮೇಷ , ಕುಂಭ , ಸಿಂಹ, ರಾಶಿ ಆಗಿರುತ್ತದೆ. ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಶತಭಿಷ ನಕ್ಷತ್ರದ ನಾಲ್ಕು ಚರಣಗಳು ಪೂರ್ವ ಬಾದ್ರದ ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುತ್ತದೆ. ಎಂತಹ ಕಠಿಣ ಸಮಸ್ಯೆಯಾದರೂ ಸಹ ಅದನ್ನು ನಿಭಾಯಿಸಲು ಆತ್ಮಸ್ಥೈರ್ಯವಿರಬೇಕು. ಸಮಸ್ಯೆಯನ್ನು ಎದುರಿಸಲು ಅದೃಷ್ಟವೂ ಮತ್ತು ಧೈರ್ಯ ದೈವ ಕೃಪೆಯು ಬೇಕು
ಅದರ ಜೊತೆಗೆ ನಮ್ಮ ಪ್ರಯತ್ನವೂ ಸಹ ಇರಬೇಕು. ಸಮಯವನ್ನು ನೀವು ಯಾವ ರೀತಿ ಉಪಯೋಗಿಸಿಕೊಳ್ಳುತ್ತೀರಾ ಎನ್ನುವುದು ಗಮನಾರ್ಹ ಅಂಶವಾಗಿರುತ್ತದೆ . ಸಮಯವನ್ನು ಸರಿಯಾಗಿ ಸದ್ವಿನಿಯೋಗ ಮಾಡಿಕೊಂಡು ಸಮಯಕ್ಕೆ ಸರಿಯಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು . ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ಕೈಗೊಂಡರೆ ನಿಮಗೆ ಅನುಕೂಲತೆಯು ಆಗುತ್ತದೆ. ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇದರಿಂದ ನಿಮಗೆ ಲಾಭಗಳು ದೊರೆಯುತ್ತದೆ. ಸಮಯ ಪ್ರಜ್ಞೆಯನ್ನು ತೆಗೆದುಕೊಂಡು ಸಮಯಕ್ಕೆ ತಕ್ಕಂತಹ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ನಿಮಗೆ ಅದ್ಭುತವಾದಂತಹ ಫಲವು ದೊರಕುತ್ತದೆ. ನಿಮ್ಮ ಕಡೆ ಹಣವಿದ್ದರೆ ಬೇರೆ ಕಡೆ ಅದನ್ನು ಹೂಡಿಕೆ ಮಾಡಲು ಹೋಗಬೇಡಿ. ಬೇರೆಯವರಿಗೆ ಕಷ್ಟವಿದೆ ಎಂದ ಮಾತ್ರಕ್ಕೆ ಅದರಲ್ಲಿ ಮದ್ಯ ಭಾಗವಹಿಸಲು ಹೋಗಬೇಡಿ. ಮೂರನೆಯ ವ್ಯಕ್ತಿಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಲು ಹೋಗಬೇಡಿ. ಕುಂಭ ರಾಶಿಯ ವ್ಯಕ್ತಿತ್ವವೂ ಬೇರೆಯವರ ಕಷ್ಟಕ್ಕೆ ಬೇಗನೆ ಸ್ಪಂದಿಸುವಂತಹ ವ್ಯಕ್ತಿಯತ್ವವಾಗಿರುತ್ತದೆ.
ನೇರವಾಗಿ ಮಾತನಾಡುವಂತಹ ಮತ್ತು ನಿಷ್ಟೂರವಾದಿಗಳಾಗಿರುತ್ತಾರೆ . ಈ ನಿಮ್ಮ ವ್ಯಕ್ತಿತ್ವವು ನಿಮಗೆ ಮುಳುವಾಗುತ್ತದೆ. ಇದರಿಂದ ನಿಮಗೆ ತಾಳ್ಮೆ ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಯ ಅಗತ್ಯವಿರುತ್ತದೆ. ಉದ್ಯೋಗವನ್ನು ಬದಲಾಯಿಸುವಂತಹ ತೀರ್ಮಾನವನ್ನು ತೆಗೆದುಕೊಳ್ಳಲು ಇಚ್ಛಿಸುತ್ತಿದ್ದರೆ ತೀರ ಅವಶ್ಯಕತೆ ಇದ್ದರೆ ಮಾತ್ರ ಮಾಡಿಕೊಳ್ಳಿ. ಅವಶ್ಯಕತೆ ಇಲ್ಲದಿದ್ದರೆ ಬದಲಾಯಿಸಲು ಹೋಗಬೇಡಿ. ಸ್ತ್ರೀಯರಾಗಲಿ ಪುರುಷರೇ ಆಗಲಿ ರಾಜಕಾರಣಿಗಳಿಗೆ ಒಳ್ಳೆಯ ಹುದ್ದೆ ಮತ್ತು ಸ್ಥಾನಮಾನಗಳು ದೊರಕುತ್ತದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಯಲ್ಲಿ ಉದ್ಯೋಗ ಮಾಡುವಂತಹವರಿಗೆ ಒಳ್ಳೆಯ ಅವಕಾಶಗಳು ಲಭಿಸುತ್ತದೆ.
ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಒಳ್ಳೆಯ ಸ್ಥಾನಮಾನಗಳು ಮತ್ತು ಗೌರವಗಳು ಲಭಿಸುತ್ತದೆ. ಕೆಲವೊಂದು ಜನರಿಗೆ ಬಿರುದುಗಳು ದೊರಕುತ್ತದೆ. ಪಾಲುದಾರಿಕೆಯಲ್ಲಿ ಕೆಲಸವನ್ನು ಮಾಡಲು ಹೋಗಬೇಡಿ ಯಾವುದೇ ಕೆಲಸ ಮಾಡುವುದಾದರೂ ಸ್ವತಂತ್ರವಾಗಿ ಮಾಡಿಕೊಳ್ಳಿ. ವಿಶೇಷವಾಗಿ ಬಟ್ಟೆ ವ್ಯಾಪಾರ ಮಾಡುವವರಿಗೆ ಆಹಾರ ಪದಾರ್ಥಗಳನ್ನು ಮತ್ತು ವ್ಯಾಪಾರ ಮಾಡುವಂಥವರಿಗೆ ಬಹಳ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾದಂತಹ ವಾತಾವರಣ ನಿರ್ಮಾಣವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಏನನ್ನಾದರೂ ವಿಶೇಷವಾಗಿ ಸಾಧಿಸಲು ನೀವು ಇಚ್ಛೆ ಪಡುತ್ತಿದ್ದರೆ ಇದು ಒಳ್ಳೆಯ ಅನುಕೂಲಕರವಾದಂತಹ ವಾತಾವರಣವಾಗಿದೆ. ನಿಮ್ಮ ಪ್ರಯತ್ನವಿದ್ದರೆ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಫಲವನ್ನು ಪಡೆಯುತ್ತೀರಾ. ನಿಮ್ಮ ಆತ್ಮವಿಶ್ವಾಸವು ನಿಮ್ಮನ್ನು ರಕ್ಷಣೆ ಮಾಡುತ್ತದೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಹೋಗಬೇಡಿ. ಬೇರೆಯವರ ಮೇಲೆ ನಂಬಿಕೆ ಇಡಲು ಹೋಗಬೇಡಿ .
ನಿಮ್ಮ ಕೆಲಸವನ್ನು ಸ್ವತಹ ನೀವೇ ಮಾಡಿಕೊಳ್ಳಿ . ನಿಮ್ಮ ಮಾತಿನ ಮೇಲೆ ನಿಮ್ಮ ಎಚ್ಚರಿಕೆ ಇರಲಿ. ನಿಮ್ಮ ಕೆಲಸವನ್ನು ನೀವು ಎಚ್ಚರಿಕೆಯಿಂದ ಮಾಡಿದರೆ ನಿಮಗೆ ಅವಕಾಶಗಳು ಒದಗಿ ಬರುತ್ತದೆ. ಮನೆ ಮತ್ತು ವಾಹನ ಸೈಟನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ಮಾಡಿಕೊಳ್ಳಿ. ಇಲ್ಲದೆ ಹೋದರೆ ಹಣಕಾಸಿನ ತೊಡಕನ್ನು ಅನುಭವಿಸಬೇಕಾಗುತ್ತದೆ. ಕೆಲವೊಂದು ಜನರಿಗೆ ನೀವು ತಪ್ಪಿತಸ್ಥರಲ್ಲದೇ ಹೋದರು ನಿಮ್ಮನ್ನು ತಪ್ಪಿತಸ್ಥರು ಎಂದು ಹೇಳುವ ಸನ್ನಿವೇಶಗಳು ಬರುತ್ತದೆ. ಇದರಿಂದ ನೀವು ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ.
ಉದ್ಯೋಗದಲ್ಲಿ ಸ್ಪರ್ಧಾತ್ಮಕತೆಯು ಏರ್ಪಡುತ್ತದೆ . ಅದನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಯಾವುದೇ ದ್ವೇಷವನ್ನು ಸಾಧಿಸದೆ ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳಿ. ಕೆಲಸದಲ್ಲಿ ಮಂದಗತಿಯಿಂದ ನಡೆದರೂ ಸಹ ಅದನ್ನು ವೇಗವನ್ನು ಕೊಟ್ಟುಕೊಳ್ಳಿ. ಒಟ್ಟಾರೆಯಾಗಿ ಜೂನ್ ತಿಂಗಳಿನಲ್ಲಿ ನಿಮಗೆ ಅದ್ಭುತ ಫಲಗಳು ದೊರಕುತ್ತದೆ . ಅದರ ಜೊತೆಗೆ ಸವಾಲುಗಳನ್ನು ಸಹ ನೀವು ಎದುರಿಸಬೇಕಾಗುತ್ತದೆ. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿಕೊಳ್ಳಿ . ಅದರ ಜೊತೆಗೆ ಶಿವ ಸಹಸ್ರನಾಮವನ್ನು ಓದಿಕೊಳ್ಳಿ. ಜೊತೆಗೆ ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದಂತಹ ಸಹಾಯವನ್ನು ಮಾಡಿ. ನಿಮ್ಮ ಕೆಲಸವನ್ನು ನೀವು ಪ್ರೀತಿಸಿ ದೈವ ಕೃಪೆಗೆ ಪಾತ್ರರಾಗಿ.