ನಿಮಗೆ ಇರುವ ಎಂತಹ ದಾರಿದ್ರ್ಯ ದೋಷವನ್ನು ಈ ಒಂದು ಎಲೆ ಬಹಳ ಸುಲಭ ಮತ್ತು ಪರಿಣಾಮಕಾರಿಯಾಗಿ ದೂರವಾಗುತ್ತದೆ. ಇಲ್ಲಿ ತಿಳಿಸಿರುವ ಈ ಒಂದು ಪರಿಹಾರ ನಿಮ್ಮ ಜೀವನದ ಹಾದಿಯನ್ನು ಸಂಪೂರ್ಣವಾಗಿ ಸರಿಪಡಿಸುತ್ತದ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಎಂದಿಗೂ ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಈ ಎಲೆಯನ್ನು ಯಾವ ದಿನ ಯಾವ ನಕ್ಷತ್ರ ಇದ್ದಾಗ ಮನೆಗೆ ತರಬೇಕು ಮತ್ತು ಹಣದ ಸಮಸ್ಯೆ ಹೆಚ್ಚಾಗಿದ್ದರೇ, ಬಡತನ ನಿಮ್ಮನ್ನು ಬೆಂಬಿಡದೇ ಕಾಡುತ್ತಿದ್ದರೇ, ಸಂಪಾದನೆ ಮಾಡಿದ ಹಣ ಕೈನಲ್ಲಿ ನಿಲ್ಲಲ್ಲು ಒಂದು ಪರಿಹಾರ ಮಾಡಿಕೊಂಡರೇ
ಅದ್ಭುತವಾದ ಬದಲಾವಣೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ. ಈ ಪರಿಹಾರ ಮಾಡಿಸಿದವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಜನ್ಮ ಜನ್ಮಗಳ ದರಿದ್ರ ದೋಷಗಳನ್ನು ಮಾನವ ಜೀವನದಿಂದ ದೂರಮಾಡುವಂತಹ ಏಕೈಕ ಶಕ್ತಿಶಾಲಿ ಪರಿಹಾರವೆಂದರೆ ಈ ಒಂದು ಎಲೆಯ ವಿಶೇಷ ಪರಿಹಾರವೆಂದು ಹೇಳಬಹುದು. ಈ ಪರಿಹಾರವನ್ನು ಯಾವ ತಿಂಗಳಿನಲ್ಲಾದರೂ ಕೂಡ ಮಾಡಿಕೊಳ್ಳಬಹುದು.
ಆದರೇ ರೋಹಿಣಿ ನಕ್ಷತ್ರವಿದ್ದಾಗ ಈ ಪರಿಹಾರ ಮಾಡಿಕೊಂಡರೇ ಅದು ಸಿದ್ದಿಸುತ್ತದೆ. ಈ ಪರಿಹಾರ ಅಥವಾ ಎಲೆಯನ್ನು ಮನೆಗೆ ತರುವ ಸಮಯದಲ್ಲಿ ರೋಹಿಣಿ ನಕ್ಷತ್ರವಿರಬೇಕು. ಕ್ಯಾಲೆಂಡ್ ನಲ್ಲಿ ರೋಹಿಣಿ ನಕ್ಷತ್ರ ಯಾವಾಗ ಬರುತ್ತದೆಂದು ತಿಳಿದುಕೊಳ್ಳಬೇಕು. ನಕ್ಷತ್ರದ ಸಮಯ ಮುಗಿಯುವ ಒಳಗೆ ಈ ಪರಿಹಾರವನ್ನು ಮಾಡಿ ಮುಗಿಸಬೇಕು. ಆ ಎಲೆಯನ್ನು ಮನೆಗೆ ತರಬೇಕು. ಸೂರ್ಯೋದಯದ ಸಮಯದಲ್ಲಿ ರೋಹಿಣಿ ನಕ್ಷತ್ರ ಬರುವ ದಿನವನ್ನು ಗುರುತು ಮಾಡಿಕೊಳ್ಳಿ.
ರೋಹಿಣಿ ನಕ್ಷತ್ರ ಚಂದ್ರನ ನಕ್ಷತ್ರವಾಗಿದೆ. ಚಂದ್ರನಿಗೆ ಅಧಿಪತ್ಯವಹಿಸುವ ದೇವತೆ ಸಾಕ್ಷಾತ್ ಮಹಾಲಕ್ಷ್ಮಿದೇವಿಯಾಗಿದ್ದಾಳೆ. ಆದ್ದರಿಂದ ರೋಹಿಣಿ ನಕ್ಷತ್ರದ ದಿನ ಈ ಕೆಲಸವನ್ನು ಮಾಡಿದರೇ ನಿಮ್ಮಲ್ಲಿ ಐಶ್ವರ್ಯ, ಸಂಪತ್ತು ಹಾಗೂ ಹಣ ಸ್ಥಿರವಾಗಿ ನಿಲ್ಲುತ್ತದೆ. ನಿಮಗೆ ಇರುವ ಎಲ್ಲಾ ದಾರಿದ್ರ್ಯ ಬಾಧೆಗಳು ಕ್ರಮೇಣ ಕಡಿಮೆಯಾಗುತ್ತದೆ. ಬಿಲ್ವ ಮರವು ದೇವಾಲಯ ಅಥವಾ ಯಾವ ಜಾಗದಲ್ಲಿ ಇದೆ ಎಂದು ನೋಡಿಕೊಳ್ಳಿ, ರೋಹಿಣಿ ನಕ್ಷತ್ರ ಇರುವ ಸಮಯದಲ್ಲಿ ಮನೆಯಿಂದ ಹೊರಡುವಾಗ ಒಂದು ಬಿಂದಿಗೆಯಷ್ಟು ಶುದ್ಧ ಜಲ, ಪೂಜೆಯ ಸಾಮಾಗ್ರಿಗಳು, ಹಣ್ಣು, ಮಣ್ಣಿನ ದೀಪ, ವೀಳ್ಯದೆಲೆ, ಬಟ್ಟಲು ಅಡಿಕೆ,
ದಕ್ಷಿಣೆಯನ್ನು ತಯಾರು ಮಾಡಿಕೊಳ್ಳಬೇಕು. ಬಿಲ್ವ ಮರದ ಬಳಿ ಹೋಗಿ ಶುದ್ಧ ಜಲವನ್ನು ಅರ್ಪಿಸಿ ಹಣ್ಣು ಹಂಪಲುಗಳನ್ನು ನೈವೇದ್ಯವಾಗಿ ಇಡಬೇಕು. ದೇವಾಲಯದ ಬಿಲ್ವಪತ್ರೆಯ ಮರಕ್ಕೆ ಈ ಪರಿಹಾರವನ್ನು ಮಾಡುತ್ತಿದ್ದರೇ ದೇವಾಲಯದ ಹುಂಡಿಗೆ 11 ರೂಪಾಯಿಗಳನ್ನು ಅಥವಾ ನಿಮ್ಮ ಕೈಲಾದ ದಕ್ಷಿಣೆಯನ್ನು ಹುಂಡಿಗೆ ಹಾಕಬೇಕು. ದೇವಾಲಯದ ಬಿಟ್ಟು ಬೇರೆ ಕಡೆ ಬೆಳೆದಿರುವ ಬಿಲ್ವಪತ್ರೆಯ ಮರದ ಬಳಿ ಈ ಪರಿಹಾರ ಮಾಡುತ್ತಿದ್ದರೇ ಮರದ ಬಳಿ ಎರಡು ವೀಳ್ಯದೆಲೆ ಮತ್ತು ಬಟ್ಟಲು ಅಡಿಕೆ ಜೊತೆಗೆ ದಕ್ಷಿಣೆಯನ್ನು ಇಡಬೇಕಾಗುತ್ತದೆ. ಅಗರಬತ್ತಿಯಿಂದ ಬೆಳಗಿ
ಲಕ್ಷ್ಮಿದೇವಿಯ ಸ್ತ್ರೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ದಾರಿದ್ರ್ಯ ದೋಷಗಳು, ಬಡತನ, ಹಣದ ಸಂಕಷ್ಟ, ಅನಾರೋಗ್ಯ, ಮಾನಸಿಕ ಕಿರಿಕಿರಿ ಎಲ್ಲವೂ ದೂರವಾಗಲಿ ಎಂದು ಕೇಳಿಕೊಳ್ಳಬೇಕು. ಪೂಜೆ ಆದ ನಂತರ ಮರದ ಬಳಿ ಸ್ವಲ್ಪ ಹೊತ್ತು ಕುಳಿತು ಧ್ಯಾನವನ್ನು ಮಾಡಿ ಮತ್ತು ಕೋರಿಕೆಗಳನ್ನು ಮರದ ಬಳಿ ಹೇಳಿಕೊಂಡು ಚೆನ್ನಾಗಿ ಇರುವ ಎರಡು ಅಥವಾ ಮೂರು ಬಿಲ್ವ ಎಲೆಗಳನ್ನು ಮನೆಗೆ ತರಬೇಕು. ಒಂದು ಎಲೆಯನ್ನು ನೀಟಾಗಿ ಕವರ್ ನಲ್ಲಿ ಹಾಕಿ ನೀವು ದುಡ್ಡು ಇಡುವ ಜಾಗದಲ್ಲಿ ಇಡಬೇಕು ಮತ್ತು ವ್ಯಾಪಾರ ಮಾಡುತ್ತಿದ್ದರೇ ವ್ಯಾಪಾರ ಮಾಡುವ ಸ್ಥಳದಲ್ಲಿ ಇಡಬೇಕು.
ಹೀಗೆ ಮಾಡುವುದರಿಂದ ಆ ಜಾಗದಲ್ಲಿ ಹಣ ಅಕ್ಷಯವಾಗುತ್ತದೆ. ಸಾಕಷ್ಟು ಜನರು ಈ ರೀತಿಯ ಪೂಜಾ ವಿಧಾನದಿಂದ ಏಳಿಗೆಯನ್ನು ಕಂಡಿದ್ದಾರೆ. ಹಣಕಾಸಿನ ಸಮಸ್ಯೆಗಳು ತೀವ್ರವಾದಾಗ ಮತ್ತು ಜೀವನ ಕಷ್ಟವೆನಿಸಿದಾಗ ಈ ರೀತಿಯಾದ ದೈವ ಮಾರ್ಗಗಳಿಂದ ಶೀರ್ಘ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮಗೆ ಇರುವಂತಹ ದಾರಿದ್ರ್ಯ ದೋಷಗಳು ದೂರವಾಗಲು ನೀವು ತಂದ ಇನ್ನುಳಿದ ಎರಡು ಎಲೆಯನ್ನ ಮನೆಯ ಯಜಮಾನ ತನ್ನ ಜೇಬಿನಲ್ಲಿ ಮತ್ತು ಕ್ಯಾಶ್ ಬಾಕ್ಸ್ ನಲ್ಲಿಇಡಬೇಕು. ಹೀಗೆ ಮಾಡುವುದರಿಂದ ಕೈಗೆ ಬಂದ ಹಣ ಸ್ಥಿರವಾಗಿ ನಿಲ್ಲುತ್ತದೆ. ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ದೇವರ ಮರವಾದ ಬಿಲ್ವಮರದ ಪರಿಹಾರವನ್ನು ಪಾಲಿಸಿದರೇ ಅದ್ಭುತ ಫಲವನ್ನು ಪಡೆಯುತ್ತೀರಿ.