ನಾವು ಈ ಲೇಖನದಲ್ಲಿ ಮನೆಯಲ್ಲಿ ದೈವಶಕ್ತಿ ಹೆಚ್ಚಾಗಲು ಯಾವ ಯಾವ ವಸ್ತುಗಳನ್ನು ಬಳಸಬೇಕು ಯಾವ ವಸ್ತುಗಳನ್ನು ಇಟ್ಟು ಪೂಜೆ ಮಾಡಬೇಕು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಆಗಲು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಂದು ವಸ್ತುಗಳು ದೈವದ ಸ್ವರೂಪವಾಗಿರುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ದೈವಶಕ್ತಿಯು ಮನೆಯಲ್ಲಿ ವೃದ್ಧಿಯಾಗುತ್ತದೆ. ಕಳಸದ ಕೆಳಗಡೆ ಇಡುವ ಅಕ್ಕಿ ಮತ್ತು ಪುಟ್ಟ ಪುಟ್ಟ ವಿಗ್ರಹದ ಕೆಳಗಡೆ ಇರುವ ಅಕ್ಕಿಯನ್ನು ಅಡುಗೆಯಲ್ಲಿ ಬಳಸಿಕೊಳ್ಳಬೇಕು.
ವಿಗ್ರಹದ ಕೆಳಗಡೆ ಅಕ್ಕಿಯನ್ನು ಹಾಕದಿದ್ದರೆ ಪೀಠದ ಮೇಲೆ ಇಡಬೇಕು ಅಥವಾ ವಸ್ತ್ರದ ಮೇಲೆ ಇಡಬೇಕು. ದೇವರ ಮನೆಯಲ್ಲಿ ಚಿಕ್ಕ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಇಟ್ಟಿರಬೇಕು. ಮತ್ತು ಪಂಚಪಾತ್ರೆಯಲ್ಲಿ ನೀರು ಇರಬೇಕು. ಈ ನೀರನ್ನು ಗಿಡಗಳಿಗೆ ಹಾಕಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ಕಳಸದ ನೀರನ್ನು ಗಿಡಗಳಿಗೆ ಹಾಕಬೇಕು. ಕಳಸದೆ ಕೆಳಗಡೆ ಇಡುವ ತಟ್ಟೆಯಲ್ಲಿ ಅಷ್ಟದಳ ಪದ್ಮವಿದೆ . ಮತ್ತು ಲಕ್ಷ್ಮಿಗೆ ಪ್ರಿಯವಾದಂತಹ ವಸ್ತುಗಳ ಅಂದರೆ ತಟ್ಟೆಯಲ್ಲಿ ಮೀನು ಸ್ವಸ್ತಿಕ್ ಮುಂತಾದವು
ಚಿತ್ರವಿರುವ ತಟ್ಟೆಯನ್ನು ಇಡಬೇಕು. ದೇವರ ಮನೆಯಲ್ಲಿ ಕೆಲವು ವಸ್ತುಗಳು ಅಂದರೆ ದೀಪದ ಎಣ್ಣೆ ಬತ್ತಿ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಕರ್ಪೂರ ಊದುಬತ್ತಿ ಕಾಲಿಯಾಗದಂತೆ ನೋಡಿಕೊಳ್ಳಬೇಕು. ದೇವರ ಮನೆಯಲ್ಲಿ ಕಳಸದ ಬಿಂದಿಗೆ ಅದರ ಜೊತೆಗೆ ತಾಮ್ರದ ಚೊಂಬು ಇಡಬೇಕು. ದೇವರ ಮನೆಯಲ್ಲಿ ಕುಬೇರ ಮೂಲೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕಳಸದ ಒಳಗಡೆ ಬೆಳ್ಳಿ ನಾಣ್ಯವನ್ನು ಹಾಕಬೇಕು. ಅದರಲ್ಲಿ ಗಜಲಕ್ಷ್ಮಿಯ ಚಿತ್ರ ಅಥವಾ.
ಗಣೇಶನ ಚಿತ್ರ ಅಥವಾ ಶ್ರೀ ಎಂಬ ಬೀಜಾಕ್ಷರ ಮಂತ್ರ ವಿರುತ್ತದೆ. ಯಾವುದಾದರೂ ಸಹ ಹಾಕಬಹುದು. ದೇವರ ಮನೆಯಲ್ಲಿ ಹೆಚ್ಚಿನ ವಿಗ್ರಹಗಳಿದ್ದರೆ ಅದಕ್ಕೆ ಅಭಿಷೇಕ ಮಾಡಬೇಕಾಗುತ್ತದೆ. ಆದ್ದರಿಂದ ಕಡಿಮೆ ವಿಗ್ರಹಗಳನ್ನು ಇಟ್ಟುಕೊಳ್ಳಬೇಕು. ದೇವರ ಮನೆಯಲ್ಲಿ ಚಿಕ್ಕದಾದಂತ ಮರದ ಕಡಗೋಲನ್ನು ಇಡಬೇಕು ಅದಕ್ಕೆ ಪೂಜೆ ಮಾಡಿಕೊಳ್ಳಬೇಕು. ಮನೆಯಲ್ಲಿ ದೇವರ ಮನೆಯಲ್ಲಿ ಆದಷ್ಟು ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಕಡಗೋಲು ಕೃಷ್ಣನಿಗೆ ತುಂಬಾ ಪ್ರಿಯವಾದಂತಹ ವಸ್ತುವಾಗಿರುತ್ತದೆ . ಆದ್ದರಿಂದ ಲಕ್ಷ್ಮಿಗೂ ಅದು ಇಷ್ಟವಾಗಿರುತ್ತದೆ.
ಬೆಣ್ಣೆಯನ್ನು ಕಡೆಯುವಂತಹ ಕಡಗೋಲು ಆಗಿರುವುದರಿಂದ ಲಕ್ಷ್ಮಿಯ ಫೋಟೋ ಮುಂದೆ ಇಟ್ಟು ಇದನ್ನು ಪೂಜಿಸಬೇಕಾಗುತ್ತದೆ. ಕಳಸದ ಪಕ್ಕದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಲಕ್ಷ್ಮೀನಾರಾಯಣನನ್ನು ಪೂಜಿಸಿದಂತಾಗುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿ ಮಂದಿರದಲ್ಲಿಯೂ ದೇವಿ ಪಕ್ಕದಲ್ಲಿ ಕಡಗೋಲು ಇರುತ್ತದೆ. ಹಾಗಾಗಿ ಮನೆಯಲ್ಲಿ ದೇವರ ಮನೆಯಲ್ಲಿ ಕಡಗೋಲು ಇಟ್ಟು ಪೂಜೆ ಮಾಡುವುದರಿಂದ ಸಮೃದ್ಧಿಯಾಗುತ್ತದೆ. ಮನೆಯಲ್ಲಿ ಧನ ಅಭಿವೃದ್ಧಿಯಾಗುತ್ತದೆ . ಮತ್ತು ನಕಾರಾತ್ಮಕ ಕಥೆಯು ದೂರ ಹೋಗುತ್ತದೆ. ದೈವಿ ಶಕ್ತಿ ವೃದ್ಧಿಯಾಗುತ್ತದೆ. ಕಡಗೋಲಿನ ಕೆಳಗಡೆ ಅಕ್ಕಿಯಲ್ಲಿ ಇಟ್ಟು ಪೂಜೆ ಮಾಡಿಕೊಳ್ಳಬೇಕು.
ಮನೆಯಲ್ಲಿ ಶ್ರೀ ಫಲವನ್ನು ಇಟ್ಟು ಪೂಜೆ ಮಾಡಬೇಕು. ಇದು ಚಿಕ್ಕ ತೆಂಗಿನ ಕಾಯಿ ಆಗಿರುತ್ತದೆ . ಇದನ್ನು ದೇವರ ಮನೆಯಲ್ಲಿ ಕುಂಕುಮದ ಬಟ್ಟಲಿನಲ್ಲಿ ಪೂರ್ತಿ ಕುಂಕುಮವನ್ನು ಮುಚ್ಚಿ ಇಡಬೇಕು. ಪ್ರತಿದಿನ ಕೆಂಪು ಹೂವನ್ನು ಹಾಕಿ ಪೂಜೆ ಮಾಡಬೇಕು. ಪ್ರತಿ ಅಮಾವಾಸ್ಯೆ ಎಂದು ಈ ಕುಂಕುಮವನ್ನು ಬದಲಾಯಿಸಿ ಬೇರೆ ಕುಂಕುಮವನ್ನು ಹಾಕಿ ಇಡಬೇಕು. ತಾಯಿ ಮಹಾಲಕ್ಷ್ಮಿಯ ಫೋಟೋದಲ್ಲಿ ನವಿಲುಗರಿಯನ್ನು ಹಾಕಿ ಇಟ್ಟರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ದೇವರ ಮನೆಯಲ್ಲಿ ಬಳೆ ಮಲಾರವನ್ನು ಇಡಬೇಕು.
ಈ ಬಳೆಗಳು ಕೆಂಪು ಹಸಿರು ಕಪ್ಪನೆಯ ಬಣ್ಣದಲ್ಲಿ ಸಿಗುತ್ತದೆ. ಸಣ್ಣ ಸಣ್ಣ ಬಳೆಗಳಾಗಿರುತ್ತದೆ. ಕಪ್ಪು ಬಳೆಗಳನ್ನ ಮನೆಯಲ್ಲಿರುವ ದೃಷ್ಟಿ ದೋಷ ಪರಿಹಾರಕ್ಕಾಗಿ ಮತ್ತು ಕೆಂಪು ಬಣ್ಣದ ಬಳೆಗಳನ್ನು ಒಳ್ಳೆಯ ದನಾಕರ್ಷಣೆಗಾಗಿ ಹಸಿರು ಬಳೆಯನ್ನು ಮನೆಯಲ್ಲಿ ಮದುವೆಯಾಗದ ಹೆಣ್ಣು ಮಕ್ಕಳು ತಂದಿಟ್ಟು ಪೂಜೆ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಲಕ್ಷ್ಮಿ ಪಾರ್ವತಿ ಸರಸ್ವತಿ ತ್ರಿಶಕ್ತಿಗಳ ಸಂಗಮ ಕಾಮಾಕ್ಷಿ ದೀಪವಾಗಿರುತ್ತದೆ. ಬೆಳ್ಳಿ ಅಥವಾ ಕಂಚಿನ ದೀಪ ತುಂಬಾ ಒಳ್ಳೆಯದಾಗಿರುತ್ತದೆ. ಕಾಮಾಕ್ಷಿ ದೀಪದ ಮೇಲೆ ಗೆರೆಗಳು ಲಾಭದಿಂದ ಶುರುವಾಗಿ ಲಾಭದಲ್ಲೇ ಕೊನೆಗೊಳ್ಳಬೇಕು
ಈ ರೀತಿ ನೋಡಿ ತೆಗೆದುಕೊಳ್ಳಬೇಕು. ಮನೆಯಲ್ಲಿ ಒಂದು ಕಾಮಾಕ್ಷಿ ದೀಪವನ್ನು ಹಚ್ಚಬಹುದು ಅಥವಾ ಎರಡು ಕಾಮಾಕ್ಷಿ ದೀಪವನ್ನು ಸಹ ಹಚ್ಚಬಹುದು. ಚಿಕ್ಕ ವಿಗ್ರಹಗಳ ಜೊತೆಗೆ ಒಂದು ರುದ್ರಾಕ್ಷಿಯನ್ನು ಸಹ ಇಡಬಹುದು. ಧರ್ಮ ಸ್ಥಳ ಇಂತಹ ಪುಣ್ಯಕ್ಷೇತ್ರಗಳಿಗ ಹೋದಾಗ ರುದ್ರಾಕ್ಷಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಿ. ಹಬ್ಬ ಹರಿದಿನಗಳಲ್ಲಿ ಅಭಿಷೇಕ ಮಾಡುವಾಗ ಅದಕ್ಕೂ ಸಹ ಸೇರಿಸಿ ಮಾಡಿ. ಈ ರೀತಿ ಪೂಜೆ ಮಾಡಿರುವಂತಹ ರುದ್ರಾಕ್ಷಿಯನ್ನು ಗಂಡಸರು ಧರಿಸಿದರೆ ತುಂಬಾ ಒಳ್ಳೆಯ ಪ್ರಭಾವ ಬೀರುತ್ತದೆ. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ಲಕ್ಷ್ಮಿ ವಿಷ್ಣುವಿನ ಪಾದ ಲಕ್ಷ್ಮೀನಾರಾಯಣರನ್ನು ಜೊತೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸುಖ ಶಾಂತಿ ಸಮೃದ್ಧಿ ದೊರೆಯುತ್ತದೆ.
ಗಂಟೆಯನ್ನು ಆದಷ್ಟು ಪೀಠದ ಮೇಲಿಡಿ ಅಥವಾ ಒಂದು ಕೆಂಪು ವಸ್ತ್ರದ ಮೇಲೆ ಇಡಿ. ದೇವರ ಅಲಂಕಾರ ಮುಗಿದ ಮೇಲೆ ದೇವರ ಮೇಲೆ ವಿಗ್ರಹದ ಮೇಲೆ ಪಚ್ಚ ಕರಪೂರದ ಪುಡಿಯನ್ನು ಎಲ್ಲಾ ದೇವರಗಳ ವಿಗ್ರಹದ ಮೇಲೆ ಚುಮುಕಿಸಿ. ಇದರಿಂದ ದೇವರ ಮನೆಯಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. ಊದುಬತ್ತಿ ಮತ್ತು ಸಾಮ್ರಾಣಿಯನ್ನು ದೇವರ ಎಡ ಭಾಗದಲ್ಲಿ ಇಡಬೇಕು. ತಾಮ್ರದ ಬಿಂದಿಗೆ ನೀರನ್ನು ಬಲಭಾಗದಲ್ಲಿ ಇಡಬೇಕು. ನಿಮ್ಮ ದೇವರ ಮನೆಯ ಯಾವ ದಿಕ್ಕಿನಲ್ಲಿ ಇದೆ ಎಂಬುದನ್ನು ನಿರ್ಧಾರ ಮಾಡಿಕೊಂಡು ನೀವು ಕುಬೇರ ಮೂಲೆಯಲ್ಲಿ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಇಡಬೇಕು. ಇನ್ನು ಸಾಕಷ್ಟು ಜನ ಶಂಖ ಕವಡೆ ಗೋಮತಿ ಚಕ್ರ ಇಟ್ಟು ಪೂಜೆ ಮಾಡುತ್ತಾರೆ.