ಗುರುವಾರ ದಿನದ ಅರಿಶಿನದ ಪವಾಡ

ಗುರುವಾರದ ದಿನದಲ್ಲಿ ಮಾಡುವ ಅರಿಶಿಣದ ಪವಾಡ ಗುರುವಾರದ ದಿನ ಅರಿಶಿಣದಿಂದ ಹೀಗೆ ಮಾಡುವುದರಿಂದ ಏನೆಲ್ಲಾ ಪವಾಡಗಳು ನಡೆಯುತ್ತವೆ ನಿಮಗೆ ಗೊತ್ತೆ? ಗುರುವಾರದ ದಿನವನ್ನು ಭಗವಂತ ವಿಷ್ಣುವಿಗೆ ಸಮರ್ಪಿತವಾದ ದಿನ. ವಿಷ್ಣುವನ್ನು ಮೆಚ್ಚಿಸುವುದರಿಂದ ತಾಯಿ ಮಹಾಲಕ್ಷ್ಮಿ ಒಲಿಯುತ್ತಾಳೆ. ವಿಷ್ಣುದೇವರ ಮೆಚ್ಚಿನ ವಸ್ತುಗಳಲ್ಲಿ ಅರಿಶಿಣವು ಒಂದಾಗಿದೆ. ಗುರುವಾರದ ದಿನ ಉಪವಾಸವನ್ನು ಮಾಡುವವರು ಸಹ ವಿಷ್ಣು ದೇವರನ್ನು ಪೂಜಿಸುತ್ತಾರೆ. ಅರಿಶಿಣದ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಪೌರಾಣಿಕ ಪ್ರಾಮುಖ್ಯತೆಯಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ. ಇದು ನಮ್ಮ ಹಣೆಯ ಬರಹವನ್ನು ಬದಲಾಯಿಸುತ್ತದೆ. ಅಷ್ಟೇ ಅಲ್ಲದೇ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನವು ಬಲವಾಗುತ್ತದೆ.

ಗುರುವಾರದ ದಿನದಂದು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದರೇ ಗಣೇಶ ದೇವರಿಗೆ ಅರಿಶಿಣದ ತಿಲಕವನ್ನು ಹಚ್ಚಿ ನಂತರ ಮನೆಯಿಂದ ಹೊರಡಿ. ಇದರಿಂದಾಗಿ ನಿಮ್ಮ ಕೆಲಸಗಳಿಗೆ ಬರುವ ಯಾವುದೇ ಅಡೆತಡೆಗಳಿಂದ ಮುಕ್ತಿ ಹೊಂದಿ ಶುಭ ಫಲಿತಾಂಶವನ್ನು ಪಡೆಯಬಹುದು.

ದೇವ ಗುರುವಾದ ಬೃಹಸ್ಪತಿಯನ್ನು ಮೆಚ್ಚಿಸಲು ಅರಿಶಿಣ, ಹಳದಿ ಬಟ್ಟೆ, ಕಡಲೆ ಹಿಟ್ಟಿನ ನಟ್ಟುಗಳು, ನುಗ್ಗಿಕಾಯಿಯನ್ನು ಅರ್ಹ ಬ್ರಾಹ್ಮಣರಿಗೆ ದಾನ ಮಾಡಿರಿ. ಇದರ ಜೊತೆಗೆ ಗುರುವಾರದ ದಿನದಂದು ಬಾಳೆಗಿಡದ ಬುಡದಲ್ಲಿ ಅರಿಶಿಣವನ್ನು ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಸ್ಥಗಿತಗೊಂಡ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತದೆ.

ಹಣದ ಸಮಸ್ಯೆಯನ್ನು ದೂರ ಮಾಡಲು ಗುರುವಾರ ವಿಷ್ಣು ದೇವರಿಗೆ ನಿಮ್ಮ ಕೈಯಿಂದ ಅರಿಶಿಣ ಮತ್ತು ಅಕ್ಷತೆಯನ್ನು ಹಾಕುತ್ತಾ ವಿಷ್ಣು ಸಹಸ್ರ ನಾಮವನ್ನು ಮನಃ ಶುದ್ಧೀಯಿಂದ ಪಠಿಸಿದರೇ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗಿ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೇ ನಡೆಯುತ್ತದೆ.

ನಿಮ್ಮ ಕುಟುಂಬ ಮತ್ತು ನಿಮ್ಮ ಪತಿಯು ಸಂತೋಷವಾಗಿರಲು ಬಯಸಿದರೇ ಗುರುವಾರದ ದಿನ ಅರಿಶಿಣವನ್ನು ಹಚ್ಚಿಕೊಂಡು ಅರಿಶಿಣದ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ವೈವಾಹಿಕ ಸಂಬಂಧ ಸಿಹಿಯಾಗಿರುತ್ತದೆ.

ಗುರುವಾರದ ದಿನ ತುಂಡಾಗದ ಐದು ಅರಿಶಿಣದ ಉಂಡೆಗಳನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಹಣವನ್ನು ಇಡುವ ಜಾಗದಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿರುವ ಹಣಕಾಸಿನ ಕೊರತೆ ನಿವಾರಣೆಯಾಗುತ್ತದೆ. ಲಕ್ಷ್ಮಿ ದೇವಿಯ ದಯೆ ನಿಮ್ಮ ಮೇಲೆ ಇರುತ್ತದೆ. ಹೀಗೆ ಈ ಅರಿಶಿಣ ತುಂಡನ್ನು ಯಾರು ತುಳಿಯದ ಪವಿತ್ರ ಸ್ಥಳದಲ್ಲಿ ಊತು ಹಾಕಿ ಹಾಗೂ ಮತ್ತೊಂದು ಅರಿಶಿಣದ ಗಂಟನ್ನು ಇಟ್ಟುಕೊಳ್ಳಿ.

Leave a Comment