ಕಳಸದ ಒಳಗಡೆ ಯಾವುದು, ಯಾವುದನ್ನು ಹಾಕಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೆಲವರು ಕಳಸದ ಒಳಗಡೆ ಅಕ್ಕಿಯನ್ನು ಹಾಕುತ್ತಾರೆ, ಇನ್ನು ಕೆಲವರು ನೀರನ್ನು ತುಂಬಿಸಿ ಇಡುತ್ತಾರೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸಿಕೊಡುತ್ತೇವೆ. ಕೆಲವರಿಗೆ ಲಕ್ಷ್ಮಿ ಪೂಜೆಯನ್ನು ಮಾಡಿದ ನಂತರ ಕಷ್ಟಗಳು ಬಂದಿತು ಎಂದು ಹೇಳುತ್ತಾರೆ.ಹಾಗಾಗಿ ಪೂಜೆಯನ್ನು ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಿದರೆ ಉತ್ತಮ. ಕಳಸದ ಒಳಗಡೆ ಕೊಳೆಯುವ ವಸ್ತುಗಳನ್ನು ಹಾಕಬಾರದು.
ಕೆಲವರು ಒಂದೇ ದಿನದಲ್ಲಿ ಕಳಸವನ್ನು ವಿಸರ್ಜನೆಯನ್ನು ಮಾಡುತ್ತೀರಿ ಮತ್ತು ಇನ್ನು ಕೆಲವರು ಮೂರು ಅಥವಾ ಒಂದು ವಾರಕ್ಕೊಮ್ಮೆ ಕಳಸವನ್ನು ವಿಸರ್ಜನೆಯನ್ನು ಮಾಡುವುದರಿಂದ ಕಳಸಕ್ಕೆ ಯಾವ ವಸ್ತುವನ್ನು ಹಾಕಬೇಕು ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಮನೆಯೊಳಗೆ ಲಕ್ಷ್ಮಿ ಪೂಜೆಯನ್ನು ಹೇಗೆ ಸಿದ್ಧ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ತುಳಸಿ ಪೂಜೆಯನ್ನು ಮಾಡುವುದು ಅಷ್ಟೇ ಮುಖ್ಯ. ಮೊದಲು ತುಳಸಿ ಗಿಡಕ್ಕೆ ಅರಿಶಿಣ, ಕುಂಕುಮ, ಗೆಜ್ಜೆವಸ್ತ್ರವನ್ನು ಇಟ್ಟು ಪೂಜೆ ಮಾಡಿಕೊಳ್ಳಬೇಕು.
ದೀಪವನ್ನು ಹಚ್ಚಿ, ರಂಗೋಲಿಯನ್ನು ಹಾಕಿ ಪೂಜೆ ಮಾಡಿಕೊಳ್ಳಬೇಕು ಅದೇ ರೀತಿ ಹೊಸ್ತಿಲಿಗೂ ಕೂಡ ರಂಗೋಲಿಯನ್ನು ಹಾಕಬೇಕು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಹೊಸ್ತಿಲಿಗೆ ದೀಪವನ್ನು ಹಚ್ಚುವುದು ತುಂಬಾ ಒಳ್ಳೆಯದು. ಮನೆಯ ಮುಖ್ಯದ್ವಾರದ ಬಳಿ ರಂಗೋಳಿಯನ್ನು ಬಿಟ್ಟು ಅಲಂಕಾರ ಮಾಡಿದರೇ ಒಳ್ಳೆಯದು ಇಲ್ಲವೇ ದೇವರ ಮನೆಯ ಹೊಸ್ತಿಲ ಬಳಿಯೂ ರಂಗೋಲಿಯನ್ನು ಬಿಟ್ಟು ದೀಪವನ್ನು ಹಚ್ಚಿ ಅಲಂಕಾರವನ್ನು ಮಾಡಬಹುದು.
ಜೊತೆಗೆ ಬಂದವರಿಗೆ ಕುಂಕುಮವನ್ನು ಕೊಡಲು ಹೊರಗಡೆ ಇಟ್ಟುಕೊಂಡರೆ ಅನುಕೂಲವಾಗುತ್ತದೆ. ಕಳಸದ ಚಂಬಿನೊಳಗೆ ಯಾವುದು ವಸ್ತು ಹಾಕಬೇಕು ಎಂದರೆ ಕಳಸದ ಚಂಬಿನೊಳಗೆ ಲಾವಂಚ ಬೇರು ಇದನ್ನು ವರಮಹಾಲಕ್ಷ್ಮಿಯ ಹಬ್ಬದ ದಿನ ಈ ಬೇರನ್ನು ಕಳಸಕ್ಕೆ ಹಾಕಬೇಕು. ಇದನ್ನು ಮರೆಯಬಾರದು. ಈ ಬೇರು ಯಾವ ರೀತಿ ಉಪಯೋಗಕ್ಕೆ ಬರುತ್ತದೆಂದರೆ ಮಕ್ಕಳು ಮತ್ತು ಮನೆಯವರಿಗೆ ಕೆಟ್ಟ ದೃಷ್ಟಿ ತಾಗುತ್ತಿದ್ದರೇ ಸ್ನಾನದ ನೀರಿಗೆ ಒಂದು ಎಳೆ ಬೇರನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಆ ನೀರನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಆ ವ್ಯಕ್ತಿಗೆ ಕೆಟ್ಟ ದೃಷ್ಟಿ ತಾಕುವುದಿಲ್ಲ.
ಆ ವ್ಯಕ್ತಿಗೆ ಜನಾಕರ್ಷಣೆ ಮತ್ತು ಧನಾಕರ್ಷಣೆ ಚೆನ್ನಾಗಿ ಆಗುತ್ತದೆ. ಈ ಲಾವಂಚ ಬೇರಿಗೆ ಆಕರ್ಷಣಾ ಶಕ್ತಿ ಹೆಚ್ಚು ಇರುವುದರಿಂದ ಕಳಸಕ್ಕೆ ಈ ಒಂದು ವಸ್ತುವನ್ನು ಮರೆಯಲೇಬಾರದು. ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಕಳಸ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆ ಬೇರನ್ನು ನಿಮ್ಮ ಬೀರುವಿನಲ್ಲಿ ಅಥವಾ ನೀವು ಹಣವಿಡುವ ಪೆಟ್ಟಿಗೆಯನ್ನು ಇಟ್ಟುಕೊಳ್ಳಬಹುದು. ಲಕ್ಷ್ಮಿ ಕಳಸದ ಒಳಗಡೆ ಗುಂಡು ಅಡಿಕೆಯನ್ನು ಹಾಕಬೇಕು. ಬೆಳ್ಳಿ ಕಾಯಿನ್ ಮತ್ತು ಸ್ವಲ್ಪ ಅರಿಶಿಣ,
ಕುಂಕುಮ ಮತ್ತು ಒಂದು ಕೆಂಪು ಹೂ ಅಥವಾ ಬಿಲ್ವಪತ್ರೆ ಇವುಗಳನ್ನೇ ಹಾಕಿದರೇ ಸಾಕು. ವರಮಹಾಲಕ್ಷ್ಮಿ ಹಬ್ಬದ ದಿನ ಇಡುವ ಲಕ್ಷ್ಮಿ ಕಳಸಕ್ಕೆ ಇಷ್ಟನ್ನು ಹಾಕಿದರೇ ಸಾಕು. ಕಳಸವನ್ನು ಅಕ್ಕಿ ಇರುವ ತಟ್ಟೆಯಲ್ಲಿ ಸ್ಥಾಪಿಸುವುದರಿಂದ ಆ ಕಳಸಕ್ಕೆ ನೀರನ್ನು ಹಾಕಿದರೇ ಉತ್ತಮ. ಹಬ್ಬ ಆದ ನಂತರ ಆ ನೀರನ್ನು ನಮ್ಮ ಮನೆಗೆಲ್ಲಾ ಪ್ರೋಕ್ಷಣೆ ಮಾಡಬೇಕು ಮತ್ತು ನಮ್ಮ ತಲೆಗೆಲ್ಲಾ ಪ್ರೋಕ್ಷಣೆ ಮಾಡಿಕೊಳ್ಳಬೇಕು. ಉಳಿದ ನೀರನ್ನು ಗಿಡಗಳಿಗೆ ಹಾಕಬೇಕು. ಒಂದು ತಟ್ಟೆಗೆ ಸೀರೆ, ಬಳೆ, ಮಡಲಕ್ಕಿಯ ಸಾಮಾನುಗಳನ್ನು ಒಂದು ತಟ್ಟೆಯಲ್ಲಿಡಬೇಕು. ಒಂದು ಹೊಸದಾದ ಬೌಲ್ಸ್ ಪೀಸ್ ಅನ್ನು ತೆಗೆದುಕೊಂಡು ಮೂರು ಇಡಿ ಅಕ್ಕಿಯನ್ನು ಹಾಕಿ ಒಂದು ಕೊಬ್ಬರಿ ಬಟ್ಟಲು ಮತ್ತು
ಒಂದು ಅಚ್ಚು ಬೆಲ್ಲ ಕೊಬ್ಬರಿ ಬಟ್ಟಲಿನ ಒಳಗಡೆ ಎರಡು ಖರ್ಜೂರ ಅಥವಾ ಎರಡು ಬಾದಾಮಿಯನ್ನು ಹಾಕಿರಿ, ಚಿಕ್ಕದಾದ ಅರಿಶಿಣ ಕುಂಕುಮದ ಪ್ಯಾಕೆಟ್ ಅನ್ನು ಹಾಕಬೇಕು. ಐದು ಅಥವಾ 11 ರೂಪಾಯಿ ಕಾಣಿಕೆಯನ್ನು ಹಾಕಿ ಸಣ್ಣ ಗಂಟನ್ನು ಕಟ್ಟಿ ಸಣ್ಣ ಗಂಟನ್ನು ಏಕೆ ಇಡಬೇಕು ಎಂದರೆ ದೇವರ ಮನೆಯಲ್ಲಿ ಲಕ್ಷ್ಮಿಯ ಪಕ್ಕ ಇಡಲು ಸ್ಥಳದ ಅವಕಾಶ ಕಡಿಮೆ ಇರುತ್ತದೆ. ಹಬ್ಬ ಮುಗಿದ ಮೇಲೆ ಆ ಗಂಟಿನ ಜೊತೆಗೆ ಇನ್ನು ಸ್ವಲ್ವ ಅಕ್ಕಿಯನ್ನು ಸೇರಿಸಿ ಶಕ್ತಿದೇವಸ್ಥಾನಕ್ಕೆ ಹೋಗಿ ಕೊಡಬಹುದು. ಮಡಲಕ್ಕಿಯ ಜೊತೆಗೆ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಹೋಗಿ ಅದನ್ನು ಅವರು ಇಟ್ಟುಕೊಂಡರೂ ಪರವಾಗಿಲ್ಲ ನಿಮಗೆ ಕೊಟ್ಟರೂ ಪರವಾಗಿಲ್ಲ.