ತುಂಬಾ ಕಷ್ಟಪಟ್ಟು ತಿಂಗಳುಗಳಗಟ್ಟಲೇ ಯೋಜನೆಯನ್ನು ಮಾಡಿ ಮಾಡಿರುವ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿರುತ್ತೀವಿ. ಲಕ್ಷ್ಮಿದೇವಿಯು ನಮ್ಮ ಪೂಜೆಯನ್ನು ತಾಯಿ ಲಕ್ಷ್ಮಿದೇವಿಯು ಮೆಚ್ಚಿಕೊಂಡಿದ್ದಾಳಾ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು? ಕೆಲವರಿಗೆ ಹಬ್ಬಕ್ಕೆ ಮುಂಚೆಯೇ ಒಳ್ಳೆ ಒಳ್ಳೆಯ ಸೂಚನೆಗಳು ಸಿಗುತ್ತದೆ ಇನ್ನು ಕೆಲವರಿಗೆ ಹಬ್ಬವಾದ ನಂತರ ಮನೆಯಲ್ಲಿ ಮತ್ತು ನಮ್ಮಲ್ಲಿ ಬದಲಾವಣೆಗಳು ಕಾಣಿಸುತ್ತಿರುತ್ತದೆ. ಯಾವೆಲ್ಲಾ ಸೂಚನೆಗಳನ್ನು ಗಮನಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂಬ ಸಣ್ಣ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಮನೆಯನ್ನು ಕ್ಲೀನ್ ಮಾಡುವಾಗ ಕೆಲವೊಂದು ಸೂಚನೆಗಳು ಕಾಣಿಸುತ್ತಿರುತ್ತದೆ ಅದೇನೆಂದರೆ ಜರಿ ಕಾಣಿಸುವುದು, ಕಪ್ಪು ಇರುವೆಗಳು ಕಾಣಿಸುವುದು, ಏನಾದರೂ ಶುಭ ಸಮಾಚಾರವನ್ನು ಕೇಳುವಂತದ್ದು ಆಗಿರಬಹುದು. ಮನೆಗೆ ಕೆಲವೊಂದು ವಸ್ತುವನ್ನು ತರಲು ಆಗುತ್ತಿರುವುದಿಲ್ಲ ಈ ಸಮಯದಲ್ಲಿ ತರುವ ಅವಕಾಶ ಒದಗಿ ಬರುತ್ತದೆ. ಹಬ್ಬಕ್ಕೆ ಮುಂಚಿತವಾಗಿ ತಾಯಿಯ ಅನುಗ್ರಹ ಸಿಕ್ಕಿದೆ ಎಂದು ತಿಳಿದುಕೊಳ್ಳಬೇಕು. ಹಬ್ಬವಾಗದ ಮೇಲೆ ತಾಯಿ ಅನುಗ್ರಹ ಸಿಕ್ಕಿದೆ ಎಂದು ಹೇಗೆ ತಿಳಿಯುತ್ತದೆ
ಎಂದರೆ ಲಕ್ಷ್ಮಿ ಕಳಸದ ಮೇಲೆ ಕಪ್ಪು ಇರುವೆಗಳು ಓಡಾಡುತ್ತಿವೆ ಎಂದರೆ ಅದು ಖುಷಿ ಪಡುವ ವಿಚಾರವಾಗಿದೆ. ಮನೆ ಕಟ್ಟಬೇಕು ಎಂದು ನಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದರೇ ಆ ಕೆಲಸ ಬಹಳ ಬೇಗ ನೆರವೇರುತ್ತದೆ. ಮನೆಯನ್ನು ಕ್ಲೀನ್ ಮಾಡುವಾಗ ಜರಿ ಕಂಡರೇ ಅದನ್ನು ಸಾಯಲು ಹೋಗಬೇಡಿ ಅದನ್ನು ಒಂದು ಕವರ್ ನಲ್ಲಿ ಹಾಕಿ ಹೊರಗಡೆ ಹಾಕಿಬಿಡಿ. ಇದು ಲಕ್ಷ್ಮಿ ಸ್ವರೂಪ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದೇ ರೀತಿ ಹಬ್ಬಕ್ಕೆ ಮುಂಚೆ ಅಥವಾ ಹಬ್ಬವಾದ ನಂತರ ಮುತ್ತೈದೆ ಹೆಂಗಸರು ಮನೆ ಒಳಗಡೆ ಬಂದ ರೀತಿ ಕಾಣಿಸಿದರೇ ಆ ಮಹಾತಾಯಿ ಲಕ್ಷ್ಮಿದೇವಿ ಬಂದಿದ್ಧಾಳೆಂದು ತಿಳಿದುಕೊಳ್ಳಬೇಕು.
ಕನಸಿನಲ್ಲಿ ದಾಸವಾಳ, ರುದ್ರಾಕ್ಷಿ, ಬಿಲ್ವಪತ್ರೆ, ಹೋಮ ಹವನದಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿ ಮಂಗಳ ದ್ರವ್ಯಗಳು ಕನಸಿನಲ್ಲಿ ಕಂಡರೆ ಲಕ್ಷ್ಮಿಮಾತೆಯ ಅನುಗ್ರಹ ಸಿಕ್ಕಿದೆ ಮತ್ತು ನಾವು ಮಾಡಿರುವ ಪೂಜೆಯನ್ನು ತಾಯಿ ಲಕ್ಷ್ಮಿದೇವಿಯು ಸ್ವೀಕಾರ ಮಾಡಿದ್ದಾಳೆಂದು ಅರ್ಥ. ಇಂತಹ ವಸ್ತುಗಳು ನಿಮ್ಮ ಕನಸಿನಲ್ಲಿ ಬಂದರೇ ಇನ್ನೊಬ್ಬರ ಹತ್ತಿರ ಹೇಳಿಕೊಳ್ಳಬೇಡಿ ಏಕೆಂದರೆ ಅದರ ಫಲಗಳು ಕಡಿಮೆಯಾಗುತ್ತದೆ. ಹಸು, ಸಗಣಿ, ಗೋಮೂತ್ರ, ಹಸುವಿನ ಕೊಟ್ಟಿಗೆ,
ತೆಂಗಿನ ಮರಮ ಉಂಡೆ ತೆಂಗಿನ ಕಾಯಿ, ಗೋಮತಿ ಚಕ್ರ, ಶ್ರೀಫಲ ಈ ರೀತಿಯಾಗಿ ಕನಸುಗಳು ಬಂದರೆ ನಮ್ಮ ಪೂಜೆಗೆ ಖಂಡಿತವಾಗಿ ಫಲ ಸಿಗುತ್ತದೆ. ನಾವು ಪೂಜೆ ಮಾಡುವಾಗ ದೇವರ ಬಳಿ ಏನು ಸಂಕಲ್ಪ ಮಾಡಿಕೊಂಡಿರುತ್ತೇವೆಯೋ ಅದು ಈ ವರ್ಷ ನೆರವೇರುತ್ತದೆ. ಲಕ್ಷ್ಮಿಯನ್ನು ಅಲಂಕಾರ ಮಾಡುವಾಗ ಕೈ, ಕಾಲುಗಳನ್ನು ಹಾಕಿ ಅಲಂಕಾರ ಮಾಡುತ್ತಾರೆ ಅದು ತಪ್ಪು. ಲಕ್ಷ್ಮಿ ಪೂಜೆಯನ್ನು ಭಕ್ತಿ, ಶ್ರದ್ಧೆ, ಶಿಸ್ತು, ಸರಳವಾಗಿ ಪೂಜೆ ಮಾಡಿದರೇ ಉತ್ತಮ.