ದೇವರ ಮನೆಯಲ್ಲಿ ಇಟ್ಟಿರುವ ಅರಿಶಿಣ ಮತ್ತು ಕುಂಕುಮವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಹೊಸದಾಗಿ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳುವವರು ಯಾವ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕು? ಅಕ್ಷತೆಯ ಮಹತ್ತ್ವವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಎಲ್ಲಾ ದೇವರ ಫೋಟೋಗಳಿಗೆ ಶ್ರೀಗಂಧದ ಬಟ್ಟನ್ನು ಇಟ್ಟು ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಇಡಬಹುದು.
ದೇವರ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಅದೇನೆಂದರೆ ಅರಿಶಿಣ, ಕುಂಕುಮ, ಅಕ್ಷತೆ, ದೀಪದ ಎಣ್ಣೆ ಯಾವಗಲೂ ದೇವರ ಕೋಣೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಅರಿಶಿಣ ಮತ್ತು ಕುಂಕುಮದ ಬಟ್ಟಲುಗಳಲ್ಲಿ ಅರಿಶಿಣ ಮತ್ತು ಕುಂಕುಮವು ತುಂಬಾ ಇರುವಂತೆ ನೋಡಿಕೊಳ್ಳಬೇಕು. ಒಬ್ಬೊಬ್ಬರ ಮನೆಯಲ್ಲಿ ಒಂದು ರೀತಿಯಲ್ಲಿ ದೇವರ ಸಾಮಾನುಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಕೆಲವರು ವಾರಕ್ಕೊಮ್ಮೆ,
ಹದಿನೈದಿ ದಿನಗಳಿಗೊಮ್ಮೆ ತೊಳೆದು ಪೂಜೆ ಮಾಡುತ್ತಿರುತ್ತಾರೆ ಹಾಗಾಗಿ ಅರಿಶಿಣ ಕುಂಕುಮದ ಬಟ್ಟಲುಗಳನ್ನು ತಿಂಗಳಿಗೊಮ್ಮೆ ತೊಳೆದರೇ ಸಾಕು. ಹಬ್ಬಗಳಿಗೆ ಅರಿಶಿಣ ಮತ್ತು ಕುಂಕುಮವನ್ನು ಬದಲಾಯಿಸಿದರೇ ಸಾಕು. ದೇವರ ಮನೆಯಲ್ಲಿ ದೇವರಿಗೋಸ್ಕರ ಪ್ರತ್ಯೇಕವಾದ ಅರಿಶಿಣ ಕುಂಕುಮದ ಬಟ್ಟಲುಗಳನ್ನು ಇಟ್ಟುಕೊಳ್ಳಬೇಕು. ಇನ್ನೊಂದು ಜೊತೆಯನ್ನು ಪ್ರತ್ಯೇಕವಾಗಿ ಮನೆಗೆ ಬರುವ ಮುತ್ತೈದೆಯರಿಗೆ ಕೊಡಲು ಇಟ್ಟುಕೊಳ್ಳಬೇಕು ಮತ್ತು ಜೊತೆಗೆ ಅದನ್ನು ಕೂಡ ನಾವು ಬಳಸಬಹುದು.
ದೇವರ ಮನೆಯಲ್ಲಿರುವ ಅರಿಶಿಣ ಮತ್ತು ಕುಂಕುಮವನ್ನು ದೇವರಿಗೋಸ್ಕರನೇ ಇಟ್ಟುಕೊಳ್ಳಬೇಕು. ದೇವರ ಮನೆಯ ಬಟ್ಟಲುಗಳನ್ನು ಕ್ಲೀನ್ ಮಾಡುವಾಗ ಅಲ್ಲಿರುವ ಅರಿಶಿಣ ಮತ್ತು ಕುಂಕುಮವನ್ನು ಹೊರಗಡೆ ಬಟ್ಟಲುಗಳಿಗೆ ಹಾಕಿಕೊಳ್ಳಬಹುದು. ಅಕ್ಷತೆಯನ್ನು ಹೇಗೆ ಮಾಡಿಕೊಳ್ಳಬೇಕೆಂದರೆ ನಿಮ್ಮ ಮನೆಗೆ ಹೊಸದಾಗಿ ಅಕ್ಕಿಯನ್ನು ತಂದಾಗ ಅದರಲ್ಲಿ ಮೂರು ಇಡಿಯಷ್ಟು ಅಕ್ಕಿಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಅಕ್ಕಿಯಲ್ಲಿ ನುಚ್ಚು ಇಲ್ಲದಂತಹ ಚೆನ್ನಾಗಿರುವ ಅಕ್ಕಿಯನ್ನು ಬಳಸಬೇಕು.
ದೇವರ ಪೂಜೆಗೆ ಬಳಸುವ ತುಪ್ಪವನ್ನು ಸ್ವಲ್ಪ ತೆಗೆದುಕೊಂಡು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಅಕ್ಕಿಯನ್ನು ಹಾಕಿ ನಂತರ ಒಂದು ಚಿಟಿಕಿ ಅರಿಶಿಣ ಮತ್ತು ಒಂದು ಚಿಟಿಕಿ ಕುಂಕುಮವನ್ನು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಅಕ್ಷತೆ ಇದ್ದರೆ ಒಳ್ಳೆಯದು. ಸ್ನಾನ ಮಾಡಿಯೇ ಅಕ್ಷತೆಯನ್ನು ತಯಾರು ಮಾಡಬೇಕು. ಸೋಮವಾರ ಮತ್ತು ಗುರುವಾರ ಅಕ್ಷತೆಯನ್ನು ತಯಾರು ಮಾಡಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಹಿರಿಯರ ಕೈಯಲ್ಲಿ ಮತ್ತು ಮುತ್ತೈದೆಯರು
ಈ ಅಕ್ಷತೆಯನ್ನು ತಯಾರು ಮಾಡಬಹುದು. ಹೊಸದಾಗಿ ಯಾವ ಯಾವ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕೆಂದರೆ ನೀವು ಎಲೆ ಮಾತ್ರ ಧರಿಸುವುವವರಾಗಿದ್ದರೇ ಪುಟ್ಟ ಚೊಂಬು ತೆಗೆದುಕೊಂಡರೇ ಸಾಕು. ತೆಂಗಿನ ಕಾಯಿಯನ್ನು ಚೊಂಬಿಗೆ ಇಡುವುದಾದರೇ ತಾಮ್ರದ ಚೊಂಬು ಸಿಗುತ್ತದೆ ಅದನ್ನು ತೆಗೆದುಕೊಂಡರೇ ಉತ್ತಮ. ನಾಲ್ಕು ಇಂಚು ಇರುವ ಎರಡು ದೀಪವನ್ನು ತೆಗೆದುಕೊಳ್ಳಿ. ಅದಕ್ಕಿಂತ ದೊಡ್ಡ ದೀಪವನ್ನು ತೆಗೆದುಕೊಳ್ಳಬೇಕೆನಿಸಿದರೆ ಸಮಸಂಖ್ಯೆಯಲ್ಲಿರುವ ದೀಪವನ್ನು ತೆಗೆದುಕೊಳ್ಳಬೇಕು.
ಚಿಕ್ಕದಾದ ದೀಪವನ್ನು ತೆಗೆದುಕೊಳ್ಳಬೇಕೆನಿಸಿದರೆ ಎರಡು ಇಂಚು ದೀಪವನ್ನು ತೆಗೆದುಕೊಳ್ಳಿ. ಗಣೇಶನ ವಿಗ್ರಹವನ್ನು ತೆಗೆದುಕೊಂಡರೆ ಸಾಕು. ಗಣೇಶನನ್ನು ಪೂಜೆ ಮಾಡಿದರೇ ಸಾಕು ಎಲ್ಲಾ ದೇವರಿಗೂ ಪೂಜೆ ಸಲ್ಲುತ್ತದೆ. ಮೀನಾಕ್ಷಿ ದೀಪ ಇಷ್ಟವಾದರೆ ತೆಗೆದುಕೊಳ್ಳಿ. ಪಂಚಪತ್ರೆ, ಉದ್ಧರಣೆ, ದೀಪವನ್ನು ಇಡಲು ಎರಡು ಚಿಕ್ಕ ಎರಡು ಪ್ಲೇಟ್ ಗಳು, ಗಂಟೆಯನ್ನು ತೆಗೆದುಕೊಳ್ಳಬೇಕು.ಗಂಟೆಯ ಮೇಲೆ ಆಂಜನೇಯಸ್ವಾಮಿ ಅಥವಾ ನಂದಿ ಇರುವುದನ್ನು ಖರೀದಿಸಿ.
ಕರ್ಪೂರದ ಆರತಿ ಮತ್ತು ತುಪ್ಪದ ದೀಪಗಳು ಅದಕ್ಕೆ ಸರಿ ಹೊಂದುವಂತಹ ಚಿಕ್ಕ ಪ್ಲೇಟ್. ಜೊತೆಗೆ ಒಂದು ತಾಮ್ರದ ಚೊಂಬು ಅಥವಾ ಸಣ್ಣ ಬಿಂದಿಗೆ ತರಹ ತೆಗೆದುಕೊಳ್ಳಿ ಅದಕ್ಕೆ ನೀರನ್ನು ತುಂಬಿಸಿ ದೇವರ ಮನೆಯಲ್ಲಿ ಇಡಿ. ಪ್ರತಿನಿತ್ಯ ಸೂರ್ಯನಿಗೆ ಅರ್ಗ್ಯವನ್ನು ಕೊಡಲು ಉಪಯೋಗಕ್ಕೆ ಬರುತ್ತದೆ. ದೇವರ ಫೋಟೋವನ್ನು ಗಣೇಶ, ಲಕ್ಷ್ಮಿ, ಸರಸ್ವತಿ ಇರುವ ಒಂದು ಪೋಟೋವನ್ನು ಇಟ್ಟುಕೊಂಡರೆ ಸಾಕು. ಅಥವಾ ನಿಮ್ಮ ಮನೆ ದೇವರ ಫೋಟೋವನ್ನು ಇಟ್ಟುಕೊಂಡರೆ ಸಾಕು. ಪೂಜಾ ಸಾಮಾಗ್ರಿಗಳನ್ನು ಗುರುವಾರ ಮತ್ತು ಭಾನುವಾರ ಪೂಜಾ ಸಾಮಾಗ್ರಿಗಳನ್ನು ತರಬಹುದು.