ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ.

ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ.

ಸದಾ ತಂಗಳು ಆಹಾರ ಚರ್ಮರೋಗವನ್ನುಂಟು ಮಾಡುತ್ತದೆ.

ಊಟ, ವ್ಯಾಯಾಮ, ಸ್ನಾನ ಹಾಗೂ ದುಡಿಮೆಯ ನಂತರ ತಕ್ಷಣ ಮೂತ್ರ ಮಾಡುವುದು ಆರೋಗ್ಯಕರ.

ಸಂಧಿವಾತಕ್ಕೆ ಪ್ರತಿದಿನ ಎರಡು ದಳ ಬಿಲ್ವಪತ್ರೆ ಸೇವಿಸಿ.

ನಿತ್ಯ ವಯಸ್ಸಿನಗುಣವಾಗಿ ವ್ಯಾಯಾಮ ಆರೋಗ್ಯ ವೃದ್ದೀಸುತ್ತದೆ.

ಆರೋಗ್ಯವಂತರಿಗೆ ತಣ್ಣೀರಿನ ಸ್ನಾನ ಸರ್ವದಾ ಶ್ರೇಷ್ಠ.

ನಿತ್ಯ ಮಲಗುವಾಗ ಹದವಾದ ಬಿಸಿನೀರು ಕುಡಿಯುವುದು ಉತ್ತಮ.

ಅರಿಶಿಣ ಬೆಲ್ಲ ಸೇರಿಸಿದ ಬಿಸಿ ಹಾಲು ನೆಗಡಿ ಕೆಮ್ಮು ನಿವಾರಕ.

ಸ್ವಲ್ಪ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿದರೆ ಧ್ವನಿ ಬಾಯಿ ರುಚಿ ಉತ್ತಮವಾಗುತ್ತದೆ.

ಎಳ್ಳೆಣ್ಣೆ ಅಭ್ಯಂಜನ ದೇಹಕ್ಕೆ ಪುಷ್ಠಿ ಕಣ್ಣಿಗೆ ತಂಪು ಚರ್ಮಕ್ಕೆ ಕಂಪು

ನೀರನ್ನು ಶುದ್ಧಗೊಳಿಸಲು ಐದಾರು ತುಳಸಿ ಎಲೆ ಹಾಕಿಡಿ.

ನೆಲ್ಲಿಕಾಯಿ ಸೇವಿಸಿದ ಎರಡು ಗಂಟೆಗಳ ಒಳಗೆ ಹಾಲು ಸೇವಿಸಬಾರದು.

ಕಬ್ಬು ಪ್ರಕೃತಿ, ಬೆಲ್ಲ ಸಂಸ್ಕೃತಿ, ಸಕ್ಕರೆ ವಿಕೃತಿ

ಬಾಯಿಯ ಹುಣ್ಣಿಗೆ ಕೊಬ್ಬರಿ ಮತ್ತು ಗಸಗಸೆ ಮೆಲ್ಲಿದರೆ ಹುಣ್ಣು ಮಾಯಾ.

ಸೂರ್ಯೋದಯದ ಮೊದಲ ನಡಿಗೆ ರಕ್ತದೊತ್ತಡ ನಿಯಂತ್ರಿಸುತ್ತದೆ.

ಮೂಗಿನಲ್ಲಿ ರಕ್ತ ಸೋರಿದರೆ ಹಸಿ ಕೊತ್ತಂಬರಿ ರಸ ನಾಲ್ಕು ಹನಿ ಹಾಕಬೇಕು.

ಕರಿಬೇವು ಬೆರೆಸಿದ ಮಜ್ಜಿಗೆ ವಾಂತಿ ಭೇದಿಗೆ ಹಿತಕರ.

ಕಾಲಿಗೆ ಆಣೆಗೆ ಉತ್ತರಣೆ ಎಲೆಯನ್ನು ಅರಿಶಿಣದಲ್ಲಿ ಅರೆದು ಲೇಪಿಸಬೇಕು.

ಅಡಿಕೆ ಸೇರಿದ ತಾಂಬೂಲ ಸೇವನೆ ಜಂತು ಭಾದೆ ನಿವಾರಣೆ.

ಸುವರ್ಣ ಗೆಡ್ಡೆಯ ನಿಯಮಿತ ಸೇವನೆ ಮೂಲವ್ಯಾಧಿಗೆ ನಿವಾರಣೆ.

ರಕ್ತ ಹೀನತೆಯು ನಿಧಾನವಾಗಿ ಕೊಲ್ಲುವ ಪಿಡುಗು.

ದಾಳಿಂಬೆ, ಅಂಜೂರ ರಕ್ತ ಹೀನತೆಯನ್ನೂ ನಿವಾರಿಸುತ್ತದೆ.

ರಕ್ತ ಶುದ್ಧಿಗೆ ಕಿತ್ತಳೆ ಹಣ್ಣು ತುಂಬಾ ಪ್ರಯೋಜನಕಾರಿ.

ಭೋಜನದ ತಕ್ಷಣ ಶ್ರಮದಾಯಕ ಕೆಲಸ ಹಾಗೂ ನಿದ್ರೆ ಮಾಡಬಾರದು.

ಹಸಿದಾಗ ಹಣ್ಣು, ಊಟವಾದ ಮೇಲೆ ಕಬ್ಬು ಸೇವನೆ ಒಳ್ಳೆಯದು.

ಒಂದು ಬೆಟ್ಟದ ನೆಲ್ಲಿಕಾಯಿ ಒಂದು ಕೆಜಿ ಸೇಬು ಹಣ್ಣಿಗೆ ಸಮ.

ಹಸಿವೆಯಾದಾಗ ಹಲಸು ಊಟವಾದ ಮೇಲೆ ಮಾವು.

ನುಗ್ಗೆಕಾಯಿಯ ನಿಯಮಿತ ಬಳಕೆಯಿಂದ ನರದೌರ್ಬಲ್ಯ ಹಾಗೂ ಕಣ್ಣಿನ ತೊಂದರೆ ದೂರವಾಗುತ್ತದೆ.

ಜೀರಿಗೆ, ಬೆಲ್ಲ ಸೇವಿಸಿದರೆ ತಲೆಸುತ್ತು ನಿವಾರಣೆಯಾಗುತ್ತದೆ.

ಎಳ್ಳೆಣ್ಣೆಯನ್ನೂ ರಾಜತೈಲ ಎನ್ನುವರು ಪ್ರತಿದಿನ ಸ್ನಾನಕ್ಕೆ ಉಪಯೋಗಿಸಿದರೆ ಒಳ್ಳೆಯದು.

ಆಹಾರದಲ್ಲಿ ನಿಯಮ ಪಾಲಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ.

ಪ್ರತಿದಿನ ಒಣದ್ರಾಕ್ಷಿಅಥವಾ ಹಸಿ ಬೆಳ್ಳುಳ್ಳಿಯಿಂದ ಬಿಪಿ ದೂರ ಇರುತ್ತದೆ.

ಸಕ್ಕರೆ ಖಾಯಿಲೆ ಇರುವವರು ವಾರದಲ್ಲಿ ಎರಡು ಚಮಚ ಜೇನು ನೀರಿನಲ್ಲಿ ಹಾಕಿ ಸೇವಿಸಬಹುದು.

ಹಾಲು ಜೇನು ಸೇರಿಸಿ ಅದಕ್ಕೆ ಏಲಕ್ಕಿ ಪುಡಿ ಬೆರೆಸಿ ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಹಲ್ಲು ಸಡಿಲವಾಗಿದ್ದರೆ ಎಳ್ಳೆಣ್ಣೆಯಲ್ಲಿ ನಿಧಾನವಾಗಿ 10 ನಿಮಿಷ ಮುಕ್ಕಳಿಸಬೇಕು.

ಗರ್ಭಿಣಿಯರು ಹಗಲು ವಿಶ್ರಾಂತಿಸಬೇಕು ನಿದ್ರೆ ಮಾಡಬಾರದು.

ಯಾವುದೇ ಮಾದಕ ಪದಾರ್ಥವನ್ನು ಮನುಷ್ಯನನ್ನು ಬಿಟ್ಟು ಯಾವ ಪ್ರಾಣಿಯು ಸೇವಿಸುವುದಿಲ್ಲ.

ಮೊಸರು ಮಜ್ಜಿಗೆಯನ್ನು ಮಧ್ಯಾಹ್ನದ ಸಮಯದಲ್ಲಿ ಸೇವಿಸುವುದು ಉತ್ತಮ.

ಗರ್ಭಿಣಿಯರು ಬೆಳ್ಳಿ ಪಾತ್ರೆಯಲ್ಲಿ ಆಗಾಗ ಮೊಸರು ಸೇವನೆಯಿಂದ ಸಹಜ ಹೆರಿಗೆಗೆ ಸಹಾಯವಾಗುತ್ತದೆ.

Leave a Comment