ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಮೊಟ್ಟೆ ಮೀನನ್ನು ತಿನ್ನುವ ಹಾಗಿಲ್ಲ ಯಾಕೆ ಗೊತ್ತಾ ಯಾಕೆ ಅನ್ನುವ ರಹಸ್ಯ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ಈ ಸಂಚಿಕೆಗೆ ಒಂದು ಲೈಕ್ ಕೊಟ್ಟು ಓಂ ನಮಃ ಶಿವಾಯ ಅಂತ ಕಾಮೆಂಟ್ ಮಾಡುವುದನ್ನು ಮರೆಯಬೇಡಿ ಈ ಚುಮು ಚುಮು ಚಳಿಯಲ್ಲಿ ನಾನ್ ವೆಜ್ ಪ್ರಿಯರಿಗೆ ನಾನ್ ವೆಜ್ ಕೊಟ್ಟರೆ ಸ್ವರ್ಗ ಸಿಕ್ಕಿದ ಹಾಗೆ ಏನು ಸುಖ ಅಂದರೆ ಅದನ್ನು ಮಾತಿನಲ್ಲಿ ಹೇಳಿದರೆ ತೃಪ್ತಿ ಸಿಗಲಾರದು ಅದನ್ನು ಸವಿದವರಿಗೆ ಗೊತ್ತು ಅದರ ಸವಿ ಒಂದೇ ಒಂದು ದಿನ ನಾನ್ ವೆಜ್ ಸಿಗದೇ ಇದ್ದರೆ ಸಾಕು, ಅವರಿಗೆ ಏನೋ ಒಂಥರಾ ಅತೃಪ್ತಿ ಮೂಡುತ್ತದೆ ಒಂದೆರಡು ದಿನ ಹೇಗೋ ಕಂಟ್ರೋಲ್ ಮಾಡಿಕೊಂಡವರು ಮೂರನೆಯ ದಿನ ನಾನ್ ವೆಜ್ ತಿಂದವರು ಸಮಾಧಾನ ಪಡುತ್ತಾರೆ
ಇಷ್ಟು ನಾನ್-ವೆಜ್ ಇಷ್ಟಪಡುವವರಿಗೆ ಶ್ರಾವಣ ಮಾಸ ಬಂದರೆ ಸಾಕು ತಲೆನೋವು ಶುರುವಾಗಿಬಿಡುತ್ತದೆ ಯಾಕೆ ಅಂದರೆ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಈ ತಿಂಗಳಲ್ಲಿ ಅಪಿತಪಿಯು ನಾನ್ ವೆಜ್ ಸೇವಿಸುವ ಹಾಗಿಲ್ಲ ಇದಕ್ಕೆ ಕಾರಣ ಏನು ಎನ್ನುವುದನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ ಅದು ಏನು ಅಂತ ಗೊತ್ತಾದರೆ ಸಾಕು ನೀವು ಕೂಡ ಶ್ರಾವಣ ಮಾಸದಲ್ಲಿ ನಾನ್ ವೆಜ್ ಊಟವನ್ನು ಮುಟ್ಟುವುದಿಲ್ಲ ಯಾಕೆ ಶ್ರಾವಣ ಮಾಸದಲ್ಲಿ ನಾನ್ ವೆಜ್ ಊಟವನ್ನು ನಿಷೇಧ ಮಾಡಲಾಗಿದೆ ಅಂತ ಗೊತ್ತಾ ಅದನ್ನು ಈ ಸಂಚಿಕೆಯಲ್ಲಿ ಹೇಳುತ್ತೇವೆ ಬನ್ನಿ ಶ್ರಾವಣ ಮಾಸ ಸನಾತನ ಧರ್ಮವನ್ನು ಪಾಲಿಸುವವರ ಪಾಲಿಗೆ
ಇದು ಅತ್ಯಂತ ಪವಿತ್ರವಾದ ಮಾಸ ಆಷಾಢ ಮಾಸದಲ್ಲಿ ದರ್ಶನ ಕೊಡುವ ವರುಣದೇವ ಶ್ರಾವಣದಲ್ಲಿ ಜೀವನದಿಗಳಲ್ಲ ಮೈತುಂಬಿಕೊಂಡು ಹರಿಯುವಂತೆ ಮಾಡುತ್ತಾನೆ ಹಾಗೆ ಶಿವನ ಭಕ್ತರು ಕೂಡ ಈ ಮಾಸದ ಒಂದೊಂದು ದಿನವನ್ನು ಶಿವನನ್ನು ಆರಾಧಿಸುವುದಕ್ಕಂತಲೇ ಮೀಸಲಿಟ್ಟಿರುತ್ತಾರೆ ಈ ಮಾಸದ ಇನ್ನೊಂದು ವಿಶೇಷತೆ ಏನೆಂದರೆ ಈ ತಿಂಗಳಲ್ಲಿ ಸಾಲು ಸಾಲಾಗಿ ಹಬ್ಬ ಹರಿದಿನಗಳು ಬರುತ್ತವೆ ಈ ದಿನಗಳಲ್ಲಿ ಮನೆಯ ಹೆಣ್ಣು ಮಕ್ಕಳು ವಿಶೇಷ ಭೋಜನಗಳನ್ನು ಮಾಡುತ್ತಾರೆ ಕುಟುಂಬದವರೆಲ್ಲ ಸೇರಿ ಆ ಪಕ್ಷವನ್ನು ಸವಿಯುವುದೇ ಒಂದು ಖುಷಿ ಆದರೆ ಈ ಶ್ರಾವಣ ಮಾಸ ಬಂದರೆ ಸಾಕು ಕೆಲವರಿಗೆ
ಒಂದು ರೀತಿಯ ಸಂಕಟ ಶುರುವಾಗಿಬಿಡುತ್ತದೆ ಈ ಶ್ರಾವಣ ಮಾಸದಲ್ಲಿ ಅವರು ಒಂದೊಂದು ದಿನಗಳನ್ನು ಎಣಿಸಿ ಎಣಿಸಿ ಕಳೆಯುತ್ತಾ ಇರುತ್ತಾರೆ ಅಂಥವರು ಯಾರು ಅಂದರೆ ಚಿಕನ್ ಮಟನ್ ಫಿಶ್ ಗಳನ್ನು ಸವಿಯುವವರು ಶ್ರಾವಣ ತಿಂಗಳಲ್ಲಿ ನಾನ್ ವೆಜ್ ತಿನ್ನುವುದನ್ನು ನಿಷೇಧ ಮಾಡಲಾಗಿದೆ ಯಾಕೆ ಈ ತಿಂಗಳಲ್ಲಿ ನಾನ್ ವೆಜ್ ಆಹಾರವನ್ನು ನಿಷೇಧ ಮಾಡಲಾಗಿದೆ ಅಂತ ನೋಡುವುದಾದರೆ ಅದರ ಜೊತೆಗೆ ಕೆಲವು ತರಕಾರಿಗಳನ್ನು ಕೂಡ ಅಪ್ಪಿತಪ್ಪಿಯು ತಿನ್ನಬಾರದು ಅಂತಾನು ಕೂಡ ಹೇಳಲಾಗಿದೆ ಹಿಂದೂ ಧರ್ಮದ ಪ್ರಕಾರ ಈ ತಿಂಗಳಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಾಗಿಡಲಾಗಿರುತ್ತದೆ
ಹಾಗಾಗಿ ಇಡೀ ತಿಂಗಳು ಮಂಗಳಕರ ಅಂತ ಪರಿಗಣಿಸಲಾಗುತ್ತದೆ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಾಗಿಡಲಾಗಿದೆ ಸೋಮವಾರ ಶಿವನಿಗೆ ಮಂಗಳವಾರ ಮಂಗಳಗೌರಿಗೆ ಬುಧವಾರ ಬುಧಪೂಜೆ ಮಾಡಲಾಗುತ್ತದೆ ಗುರುವಾರ ಬೃಹಸ್ಪತಿ ಪೂಜೆ ಶುಕ್ರವಾರ ಜಲಪೂಜೆ ಶನಿವಾರವನ್ನು ಮಾರುತಿ ಪೂಜೆಗಾಗಿ ಮೀಸಲಿಡಲಾಗುತ್ತದೆ ಅದರಲ್ಲೂ ಶ್ರಾವಣ ಬಂತು ಅಂದರೆ ಸಾಕು ಒಂದರ ಮೇಲೊಂದರಂತೆ ಹಬ್ಬಗಳು ಬರುತ್ತವೆ ಹಿಂದೂ ಧರ್ಮದಲ್ಲಿ ಸತ್ಯಹಾರಿಗಳು ಮತ್ತು ಮಾಂಸಹಾರಿಗಳು ಇಬ್ಬರು ಇದ್ದಾರೆ ಈ ಮಾಸದಲ್ಲಿ ಮಾಂಸಾಹಾರಿಗಳು ಮಾಂಸ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಡುತ್ತಾರೆ
ಕಾರಣ ಇಷ್ಟೇ ಗೌರವ ಮತ್ತು ನಂಬಿಕೆಗಾಗಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಮಾಂಸ ಆಹಾರವನ್ನು ಬಿಡುವುದು ದೊಡ್ಡ ಮಾತಲ್ಲ ಅನ್ನುವುದು ಅವರ ಆಲೋಚನೆ ಆಗಿರುತ್ತದೆ ಆಹಾರ ಪದ್ಧತಿ ಅವರ ವೈಯಕ್ತಿಕ ಆಯ್ಕೆಯಾಗಿದ್ದರು ಕೂಡ ನಮ್ಮ ಪುರಾತನ ಭಗವದ್ಗೀತೆ ವೇದ ಪುರಾಣ ಮಹಾಭಾರತ ದಂತಹ ಹಿಂದೂ ಧರ್ಮದ ಕೆಲವು ಗ್ರಂಥಗಳ ಕೆಲವು ಭಾಗಗಳಲ್ಲಿ ಮಾಂಸ ಸೇವನೆಗೆ ಕಂಡನೆ ಇದೆ ಶ್ರಾವಣ ಮಾಸದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಮಾಂಸ ಆಹಾರವನ್ನು ತ್ಯಜಿಸುತ್ತಾರೆ ಇದು ನಂಬಿಕೆಯ ಪ್ರಕಾರ ಆದರೆ ಆಯುರ್ವೇದ ಶಾಸ್ತ್ರದಲ್ಲೂ ಕೂಡ ಈ ಮಾಸದಲ್ಲಿ ನಾನ್ ವೆಜ್ ಸೇವನೆ ಬೇಡವೇ ಬೇಡ ಅಂತ ಹೇಳಲಾಗಿದೆ
ಅದಕ್ಕೆ ಕಾರಣ ಏನೆಂದರೆ ಈ ಒಂದು ತಿಂಗಳ ಅವಧಿಯಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿರುತ್ತದೆ ಈ ಸಮಯದಲ್ಲಿ ಮಾಂಸ ಆಹಾರ ಸೇವನೆ ಮಾತ್ರವಲ್ಲ ಯಾವುದೇ ರೀತಿಯ ಮಸಾಲೆಯುಕ್ತ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹಾಗೂ ಜೀರ್ಣಕ್ರಿಯೆಯು ಹದಗೆಡುವ ಸಾಧ್ಯತೆ ಇರುತ್ತದೆ ಈ ಕಾರಣಕ್ಕಾಗಿ ಆಯುರ್ವೇದ ಲಘು ಆಹಾರವನ್ನು ಸೇವಿಸಬೇಕು ಅಂತ ಹೇಳುತ್ತದೆ ಹಾಗೆ ವೈಜ್ಞಾನಿಕ ದೃಷ್ಟಿಯಿಂದ ಈ ಶ್ರಾವಣ ಮಾಸದಲ್ಲಿ ಕಬಾಬ್ ಬಿರಿಯಾನಿ ಮಟನ್ ಮಸಾಲ ಫಿಶ್ ಕರಿ ಇವುಗಳಿಂದ ದೂರ ಯಾಕ ಇರಬೇಕು ಗೊತ್ತಾ
ಈ ತಿಂಗಳಲ್ಲಿ ಮೋಡ ಆವರಿಸಿಕೊಂಡಿರುವ ವಾತಾವರಣ ಇರುತ್ತದೆ ಸೂರ್ಯನ ಬೆಳಕಿನ ಕೊರತೆ ಇರುವುದರಿಂದ ಮಳೆಗಾಲದ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ ಅಲ್ಲದೆ ಶ್ರಾವಣ ಮಾಸದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುತ್ತದೆ ಇದರಿಂದ ಪರಿಸರದಲ್ಲಿ ಶಿಲೀಂದ್ರ ಸೇರಿದಂತೆ ಇತರ ಸೋಂಕುಗಳು ಬೆಳೆಯಲು ಆರಂಭಿಸುತ್ತವೆ ಮಳೆಗಾಲದಲ್ಲಿ ಆಹಾರ ಪದಾರ್ಥಗಳು ಬೇಗನೆ ಕೆಡುವುದಕ್ಕೆ ಶುರುವಾಗುತ್ತವೆ ಅದರ ದೊಡ್ಡ ಪರಿಣಾಮವು ಮಾಂಸ ಆಹಾರದ ಮೇಲೆ ಇರುತ್ತದೆ ಹಾಗಾಗಿ ಈ ಸಮಯದಲ್ಲಿ ಮಾಂಸ ಆಹಾರವನ್ನು ತಪ್ಪಿಸುವುದು ಉತ್ತಮ ಅನ್ನುವುದನ್ನು ವೈಜ್ಞಾನಿಕ ದೃಷ್ಟಿಯಿಂದ ಹೇಳಲಾಗುತ್ತದೆ ಹಾಗೆ ಜಲಚರ ಜೀವಿಗಳನ್ನು ತಿನ್ನಬಾರದು ಅಂತಾನು ಹೇಳಲಾಗುತ್ತದೆ
ಅಂದರೆ ಮೀನು ಸಿಗಡಿ ಏಡಿ ಇವುಗಳು ಸಹ ನಿಮ್ಮ ಆಹಾರ ಪದ್ಧತಿಯಲ್ಲಿ ಇದ್ದರೆ ಇದರಿಂದ ದೂರ ಇದ್ದುಬಿಡಿ ಇದಕ್ಕೆ ಕಾರಣ ಏನೆಂದರೆ ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರ ಜೀವಿಗಳು ಸಂತಾನೋತ್ಪತ್ತಿ ಮಾಡುತ್ತದೆ ಈ ಸಮಯದಲ್ಲಿ ಜಲಚರ ಜೀವಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ ಆದ್ದರಿಂದ ಈ ಸಮಯದಲ್ಲಿ ಜಲಚರ ಜೀವಿಗಳನ್ನು ತಿನ್ನಬಾರದು ಅಂತಾನೂ ಕೂಡ ಹೇಳಿರಬಹುದು ಹಿಂದೂ ಧರ್ಮದಲ್ಲಿ ಯಾವುದೇ ಜೀವಿಗಳನ್ನು ಕೊಂದುವುದು ಅನೈತಿಕತೆ ಅಂತ ಆಗಿರುವುದರಿಂದ ಜನರು ಶ್ರಾವಣ ಮಾಸದಲ್ಲಿ ಮಾಂಸ ಆಹಾರವನ್ನು ತ್ಯಜಿಸುತ್ತಾರೆ
ಕೆಲವರು ಧಾರ್ಮಿಕ ಕಾರಣಗಳಿಂದಾಗಿ ಉಪ್ಪನ್ನು ಸೇವಿಸುವುದನ್ನು ಕೂಡ ಬಿಟ್ಟಿರುತ್ತಾರೆ ಅಥವಾ ಒಂದು ಊಟಕ್ಕೆ ಮಾತ್ರ ಉಪ್ಪನ್ನು ಬಳಸುತ್ತಾರೆ ಅದಕ್ಕೆ ಕಾರಣ ಏನೆಂದರೆ ಈ ಮಳೆಗಾಲದಲ್ಲಿ ನಮ್ಮ ದೇಹದಲ್ಲಿ ಈಗಾಗಲೇ ಸೋಡಿಯಂ ಪ್ರಮಾಣ ತುಂಬಾನೇ ಹೆಚ್ಚಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಸೋಡಿಯಂ ಭರಿತ ಉಪನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಾನಿಯಾಗುತ್ತದೆ ನೀವು ಉಪ್ಪನ್ನು ತೆಜಿಸುವುದಕ್ಕೆ ಸಾಧ್ಯವಾಗದಿದ್ದರೆ ನೀವು ಊಟಕ್ಕೆ ಕಲ್ಲುಪ್ಪನ್ನು ಬಳಸುವುದು ಉತ್ತಮ ಹಾಗೆ ಶ್ರಾವಣ ಮಾಸದಲ್ಲಿ ಬದನೆಕಾಯಿ ಹಾಗೂ ಹಸಿರು ತರಕಾರಿಗಳನ್ನು ಸೇವಿಸಬಾರದು ಅಂತ ಹೇಳಲಾಗಿದೆ ಯಾಕೆ ಅಂದರೆ ಹಸಿ ತರಕಾರಿಗಳನ್ನು ಹಾಗೆ ತಿನ್ನುವುದು ಬೇಡ ಅಂತ ಹೇಳಲಾಗಿದೆ ಅದರಲ್ಲೂ ಬಿಳಿ ಬದನೆಕಾಯಿಯನ್ನು ತಿನ್ನಲೇಬಾರದು ಅಂತ ಹೇಳಲಾಗಿದೆ ಇದಕ್ಕೆ ವೈಜ್ಞಾನಿಕ ಕಾರಣ ಏನೆಂದರೆ
ಈ ಮಾಸದಲ್ಲಿ ಕ್ರಿಮಿಗಳು ಬದನೆಕಾಯಿಯಲ್ಲಿ ಹೆಚ್ಚಾಗಿರುತ್ತವೆ ಮತ್ತೊಂದೆಡೆ ಹಸಿರು ಎಲೆ, ತರಕಾರಿಗಳು ಕೂಡ ಕೀಟಗಳನ್ನು ಹೊಂದಿರುತ್ತವೆ ನೀವು ಈ ತರಕಾರಿಗಳನ್ನು ಸೇವಿಸಿದರೆ ಆ ಹುಳಗಳು ಮತ್ತು ಬ್ಯಾಕ್ಟೀರಿಯಾ ಗಳು ನಿಮ್ಮ ಹೊಟ್ಟೆಗೆ ಹೋಗುವ ಮೂಲಕ ರೋಗಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ ಹಾಗೆ ಕೊನೆಯದಾಗಿ ಈ ಮಾಸದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿನ್ನಬಾರದು ಅಂತ ಹೇಳಲಾಗಿದೆ ವೈಜ್ಞಾನಿಕ ದೃಷ್ಟಿಯಿಂದ ಹೇಳುವುದಾದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯು ಈ ತಿಂಗಳಲ್ಲಿ ದುರ್ಬಲವಾಗಿರುವುದರಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ಜೀರ್ಣ ಮಾಡಿಕೊಳ್ಳುವುದಕ್ಕೆ ನಮ್ಮ ಜೀರ್ಣಾಂಗ ಕ್ರಿಯೆಗೆ ಕಷ್ಟವಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು