ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತಂದೆ ತಾಯಿ ವಿಶೇಷವಾದ ಉಪಯುಕ್ತ ಸಲಹೆಗಳು, ನಿಮ್ಮ ಮಕ್ಕಳ ಮದುವೆ ಮಾಡಬೇಡಿ ಹೌದು ಸ್ನೇಹಿತರೆ ನಿಮ್ಮ ಮಕ್ಕಳು ಡಾಕ್ಟರ್, ಕಂಡಕ್ಟರ್, ಇಂಜಿನಿಯರ್, ಪ್ರೊಫೆಸರ್ ಆಗದೇ ಇರಬಹುದು ಆದರೆ ಅವರು ಗಂಡ ಹೆಂಡತಿ ಅಪ್ಪ-ಅಮ್ಮ ಸೊಸೆ ಮತ್ತು ಅಳಿಯಂದು ಖಂಡಿತವಾಗಿಯೂ ಆಗೇ ಆಗುತ್ತಾರೆ. ಆದ್ದರಿಂದ ಅವರಿಗೆ ಏನಾದರೂ ಕಲಿಸಿ ಅಥವಾ ಬಿಡಿ ಆದರೆ ಅವರಿಗೆ ಒಂದು ಒಳ್ಳೆಯ ಕುಟುಂಬ ಹೇಗೆ ನಡೆಸಬೇಕೆಂದು ತಪ್ಪದೆ ಕಲಿಸಿ ಇದು ನಿಮ್ಮ ಜವಾಬ್ದಾರಿ.
ಹೌದು ನಾಳೆ ನಿಮ್ಮ ಮಗ ಹುಡುಗಿಯ ಬದುಕಲು ನರಕ ಮಾಡಿದರೆ ಅಥವಾ ನಿಮ್ಮ ಮಗಳು ಒಬ್ಬ ಸೂಕ್ಷ್ಮ ಮನೋಭಾವ ಹೊಂದಿದ್ದರೆ ಒಳ್ಳೆ ಹುಡುಗನ ಜೀವನವನ್ನು ನರಕ ಮಾಡಿದರೆ ಏನು ಗತಿ ಇದಕ್ಕೆಲ್ಲ ನಿಮ್ಮನ್ನೇ ದ್ವೇಷಿಸಲಾಗದು. ಹೌದು ಎಂತಹ ಮಕ್ಕಳಪ್ಪ ಇವರು ಇವರ ತಂದೆ ತಾಯಿ ಒಳ್ಳೇ ಸಂಸ್ಕಾರ ಕಲಿಸಿ ಕೊಟ್ಟಿಲ್ಲ ಅಂತ, ಆದ್ದರಿಂದ ಅವರು ಏನೇ ಆದರೂ ಯಾವುದೇ ಕೆಲಸ ಮಾಡಿದರು ಕೂಡ ಮದುವೆಯ ನಂತರ ತಮ್ಮ ಜೀವನದಲ್ಲಿ ಖುಷಿಯಾಗಿರುವುದಕ್ಕೆ ಸಾಧ್ಯವಾಗುವುದಿಲ್ಲ,
ಆದ್ದರಿಂದ ಅವರ ಮದುವೆ ಮಾಡಬೇಡಿ. ಪ್ರಯೋಜನವಾದರೂ ಏನು ಹೇಳಿ ಒಬ್ಬ ತಂದೆ ತಾಯಿಯ ಮಗಳ ಭವಿಷ್ಯ ಹಾಳು ಮಾಡೋಕೆ ಅವರಿಗೆ ಯಾವ ಹಕ್ಕು ಇಲ್ಲ. ಕೆಲವರು ಹೇಳುತ್ತಾರೆ ಮದುವೆ ಮಾಡೋಣ ಮದುವೆಯಾದ ನಂತರ ಎಲ್ಲಾ ಸರಿ ಹೋಗುತ್ತದೆ ಸುಧಾರಣೆ ಆಗುತ್ತದೆ ಹಾಗೂ ಜವಾಬ್ದಾರಿ ಬರುತ್ತದೆ ಅಂತ ಎಲ್ಲಾ ಹೇಳುತ್ತಾರೆ ಆದರೆ ನೀನೇ ಹೇಳಿ ಅದು ಹೇಗೆ ಸಾಧ್ಯ ಅಂತ.
ಮದುವೆ ಅನ್ನೋದು ಹುಡುಗಾಟ ಅಲ್ಲ ಸೀರಿಯಸ್ ಆಗಿ ಯೋಚನೆ ಮಾಡಿ ಮದುವೆ ಅನ್ನೋದು ಎರಡು ಜೀವಗಳು ಸೇರಿ ಒಂದೇ ಆತ್ಮ ಆಗಬಹುದು. ಎರಡು ಹೃದಯಗಳು ಸೇರಿ ಒಂದೇ ಹೃದಯ ಆಗುವುದು ಎರಡು ಮನಸ್ಸಿನ ಭಾವನೆಗಳು ಸೇರಿ ಒಂದೇ ಭಾವನೆ ಆಗುವುದು.ಎರಡು ಜೀವಗಳ ಕನಸುಗಳು ಸೇರಿ ಒಂದೇ ಕನಸಾಗುವುದು.
ಎರಡು ಕಷ್ಟಗಳು ಸೇರಿ ಒಂದೇ ಕಷ್ಟ ಆಗುವುದು.
ಎರಡು ನೋವು ಸೇರಿ ಒಂದೇ ನೋವಾಗುವುದು. ಇವೆಲ್ಲವೂ ಸೇರಿ ಒಂದು ಪವಿತ್ರವಾದ ಸಂಬಂಧದ ಮುಖಾಂತರ ಮದುವೆ ಆಗುವುದು. ಅದಕ್ಕೆ ಹಿರಿಯರು ಹೇಳಿರುವುದು ಮದುವೆ ಅನ್ನೋದು ಒಂದೆರಡು ದಿನದ ಆಟವಲ್ಲ ಇದು ಜೀವನಪೂರ್ತಿಯಾಗಿ ಸಂಗಾತಿ ಜೊತೆಗೆ ಬಾಳುತ್ತೇವೆ ಎನ್ನುವುದು. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅಪ್ಪ ಅಮ್ಮ ಅಥವಾ ಸಂಬಂಧಿಕರು ಹುಡುಕಿದವರ ಅಥವಾ ವಧುವನ್ನು ಮದುವೆಯಾಗುತ್ತಲಿದ್ದರು. ಆದರೆ ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ ಬದಲಾವಣೆಯೇ ಜಗದ ನಿಯಮ ಎನ್ನುವಂತೆ ಹೌದು ಮದುವೆಯ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ,
ಅದರಲ್ಲೂ ಮಹಿಳೆಯರು ಕೂಡ ತಮ್ಮ ಸಂಗಾತಿ ಆಯ್ಕೆಯಲ್ಲಿ ಹಿಂದೆ ಬಿದ್ದಿಲ್ಲ ಆದರೆ ಒಂದಂತೂ ಸತ್ಯ ಮದುವೆ ಮೊದಲಿದ್ದ ಜಾಲಿ ಲೈಫ್ ಸ್ಟೈಲ್ ಮದುವೆ ಆದ ಬಳಿಕ ಎಲ್ಲರ ಜೀವನದಲ್ಲಿ ಖಂಡಿತವಾಗಿಯೂ ಇರುವುದಿಲ್ಲ ಹೀಗಾಗಿ ಇದೆಲ್ಲಾ ನಿಯಮಗಳನ್ನು ಅನುಸರಿಸಿಕೊಂಡು ಸಂಸಾರವನ್ನು ಸಂತೋಷವಾಗಿಡುವುದು ಇಬ್ಬರ ಕೈಯಲ್ಲೂ ಇರುತ್ತದೆ. ಇನ್ನೊಬ್ಬರುಶನಾಗಲಿ ಅಥವಾ ಮಹಿಳೆ ಆಗಲಿ ವಿವಾಹದ ಬಳಿಕ ಎಲ್ಲವೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ ಹೌದು ಈ ಸಮಯದಲ್ಲಿ ಹಲವಾರು ರೀತಿಯ ತಿರುವುಗಳು ಏರುಪೇರು ಉಂಟಾಗಬಹುದು ಇದನ್ನೆಲ್ಲಾ ಎದುರಿಸುವ ಧೈರ್ಯ ಇಬ್ಬರಲ್ಲಿಯೂ ಇರಬೇಕು ಅದಕ್ಕೆ ಹೇಳುವುದು ಮದುವೆ ಅಲ್ಲ ಜೀವನದ ಸತ್ಯ ಎಲ್ಲರಿಗೂ ಗೊತ್ತಿರಲೇಬೇಕು.ಆಗಲೇ ಸಂಸಾರದ ಬಂಡಿ ನಡೆಯಲು ಸಾಧ್ಯ. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು