ನಮಸ್ಕಾರ ಎಲ್ಲರಿಗೂ, ಲಕ್ಷ್ಮಿ ದೇವಿಗೆ ಇಷ್ಟವಾದ ಈ ಐದು ವಸ್ತುಗಳು ಮನೆಯಲ್ಲಿ ಇದ್ದರೆ ಸಾಕು ಕೈ ಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ. ಹೌದು ದೇವಿ ಮಹಾ ಲಕ್ಷ್ಮಿಯು ಅಷ್ಟ ಐಶ್ವರ್ಯಯವನ್ನು ಕರುಣಿಸೋ ದೇವಿ ಹಣ ಧಾನ್ಯ, ಆರೋಗ್ಯ, ಐಶ್ವರ್ಯ ಸಂಪತ್ತಿಗೆ ಆದಿ ದೇವತೆ ಮಹಾಲಕ್ಷ್ಮಿಯನ್ನು ಹೋಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಮಹಾ ವಿಷ್ಣುವಿಗೆ ಸಹ ಅದು ಕಷ್ಟವಾಗುತ್ತದೆ. ಒಂದು ವೇಳೆ ನಿಮ್ಮ ಜಾತಕ ಅದೃಷ್ಟ ಚೆನ್ನಾಗಿ ಇದ್ದರೆ ಲಕ್ಷ್ಮಿ ತಾನಾಗಿಯೇ ನಿಮ್ಮ ಬಳಿ ಇರುತ್ತಾಳೆ. ಮನೆಯಲ್ಲಿ ಕೆಲವು ವಸ್ತುಗಳು ಯಾವಾಗಲೂ ಇರಬೇಕು ಒಂದು ವೇಳೆ ಅವು ಕಾಲಿಯಾದರೆ ಮಹಾಲಕ್ಷ್ಮಿ ನೆಲೆಸಿಲ್ಲ ಎಂಬ ಸೂಚನೆಯನ್ನು ಅದು ಹೇಳುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಆ ವಸ್ತುಗಳು ಮುಗಿದು ಹೋದರೆ ಮುಗಿದು ಹೋಗಿತ್ತು ಎಂದು ಹೇಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಬದಲಾಗಿ ಆ ವಸ್ತು ತುಂಬಿ ಕೂಂಡಿದೆ ಎಂದು ಹೇಳಲಾಗುತ್ತದೆ. ಈ ವಸ್ತುಗಳು ಮನೆಯಲ್ಲಿ ಇರುವುದರಿಂದ ಲಕ್ಷ್ಮಿ ಮನೆಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆಆ ವಸ್ತುಗಳು ಯಾವುದು ಅಂತ ಸಂಪೂರ್ಣವಾಗಿ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಮೊದಲನೇಯದಾಗಿ ಹಾಲು ಮನೆಯಲ್ಲಿ ಯಾವಾಗಲೂ ಹಾಲು ಇರಲೇ ಬೇಕು ಹಾಲು ಖಾಲಿಯಾಗಿ ಹೋಯಿತು ಎಂದು ಯಾವಾಗಲೂ ಹೇಳಬಾರದು ಹಾಲು ಮೊಸರು, ಮಜ್ಜಿಗೆ ಯಾವಾಗಲೂ ಮನೆಯಲ್ಲಿ ಇರಬೇಕು ಆಗ ಮಹಾಲಕ್ಷ್ಮಿ ಯಾವಾಗಲೂ ನೆಲೆಸುತ್ತಾಳೆ.ಎರಡನೇಯದಾಗಿ ನೀರು ಮನೆಯಲ್ಲಿ ನೀರಿನ ಕೊರತೆ ದರಿದ್ರವನ್ನು ಸೂಚಿಸುತ್ತದೆ ಒಂದು ವೇಳೆ ನಿಮಗೆ ನೀರಿನ ಕೊರತೆ ಇದ್ದರೆ ನೀರನ್ನು ಹಿತ ಮಿತಿವಾಗಿ ಬಳಸಬೇಕು ಕುಡಿಯಲು ನೀರು ಇಲ್ಲ ಎಂದು ಹೇಳುವ ಪರಿಸ್ಥಿತಿ ಇರಬಾರದು. ಹಾಗೆ ಮಾಡಿದರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ.
ಮೂರನೇಯದಾಗಿ ಅಕ್ಕಿ ಅಕ್ಕಿ ಕಾಲಿಯಾಗಬಹುದು ಸಾಧ್ಯವಾದಷ್ಟು ಅಕ್ಕಿ ಕಾಲಿಯಾಗುವ ಮೊದಲೇ ಅಕ್ಕಿಯನ್ನು ತನ್ನಿ ಬತ್ತ ಹಾಗೂ ಅಕ್ಕಿ ಇದ್ದರೆ ಅದು ಸಮೃದ್ಧಿಯನ್ನು ಸೂಚಿಸುತ್ತದೆ. ಅಂತಹ ಸ್ಥಳಗಳಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.ನಾಲ್ಕನೇಯದಾಗಿ ಹಣದ ನಾಣ್ಯಗಳು ಈಗಂತೂ ನೋಟುಗಳು ಬಂದ ಮೇಲೆ ನಾಣ್ಯಗಳ ಶೇಖರಣೆ ಯಾರು ಮಾಡುವುದಿಲ್ಲ ದೇವರ ಕೋಣೆಯಲ್ಲಿ ಅಥವಾ ನಿಮ್ಮ ಪರ್ಸ್ ನಲ್ಲಿ ಹಣದ ನಾಣ್ಯ ಇಡುವುದರಿಂದ ಹಣದ ಸಮಸ್ಯೆ ಇರುವುದಿಲ್ಲ.
ಇನ್ನು ಐದನೇಯದಾಗಿ ಉಪ್ಪು, ಉಪ್ಪು ಇಲ್ಲದೇ ಅಡಿಗೆ ಆಗುವುದಿಲ್ಲ ಉಪ್ಪು ಮನೆಯಲ್ಲಿ ಕಾಲಿಯಾಗಲೇ ಬಾರದು ಉಪ್ಪು ಕಾಲಿಯಾಗದಂತೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸಬೇಕು. ಉಪ್ಪು ಕಾಲಿಯಾಗಿದೆ ಎಂದರೆ ಅದು ದರಿದ್ರ ಸಂಕೇತ ಅದರಿಂದ ಈ ಎಲ್ಲಾ ವಸ್ತುಗಳು ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ನೆಲೆಸಿರುತ್ತಾರೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು