ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿಟ್ಟರೆ ದುಡ್ಡೇ ದುಡ್ಡು!

ಹಿಂದೂ ಸಂಪ್ರದಾಯದಲ್ಲಿ ಲೋಹಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ತಾಮಕ್ಕೆ ನೀಡಲಾಗುತ್ತದೆ. ಮನೆಯಲ್ಲಿ ಒಂದು ತಾಮ್ರದ ತುಂಡು ಇದ್ದರು ಸಾಕು. ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ ತಾಮ್ರ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಳೆಯ ಕಾಲದ ಜನರು ಅಂದರೆ ನಮ್ಮ ಪೂರ್ವಜರು ಅಡುಗೆಗಾಗಿ ತಾಮ್ರದ ಪಾತ್ರೆಗಳನ್ನು ಬಳಕೆಯನ್ನು ಮಾಡುತ್ತ ಇದ್ದರು. ಅಷ್ಟೇ ಅಲ್ಲದೇ ತಾಮ್ರವನ್ನು ಮೈ ಮೇಲೆ ಧರಿಸುವದನ್ನು ನಾವು ನೋಡಿದ್ದೇವೆ. ಇನ್ನು ತಾಮ್ರದಿಂದಾಗುವ ಉಪಯೋಗಗಳು ಹಲವಾರು. ತಾಮ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವದರಿಂದ ನಿಮ್ಮ ಮನೆಯಲ್ಲಿ ಧನವು ಆಕರ್ಷಿಸುತ್ತದೆ ಎಂದು ಪಂಡಿತರು ಹೇಳುತ್ತಾರೆ.

ಅದರಲ್ಲೂ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿಟ್ಟರಂತು ಅದೃಷ್ಟದ ಬಾಗಿಲು ತೆರೆಯುತ್ತದೆ. ಐಶ್ವರ್ಯ ಲಕ್ಷ್ಮೀಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಇನ್ನು ಮನೆಯ ಯಾವ ಸ್ಥಳದಲ್ಲಿ ಇಡಬೇಕು ಎಂದು ನೋಡೋಣ ಬನ್ನಿ. ಅಡುಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಇಡಬೇಕು. ಹೀಗೆ ಇಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ. ಇನ್ನು ಎಷ್ಟೇ ದಿನದಿಂದ ನೀವು ಎಷ್ಟೇ ಕಷ್ಟ ಪಟ್ಟು ದುಡಿದರು ನಿಮಗೆ ಯಾವುದೇ ರೀತಿಯ ಫಲಿತಾಂಶ ಸಿಗುತ್ತಿಲ್ಲ ಎಂದಾದರೆ ನೀವು ಮಲಗುವ ಮಂಚದ ಕೆಳಗಡೆ ಅದು ಕೂಡ ತಲೆ ಭಾಗದ ಕೆಳಗಡೆ ಒಂದು ತಾಮ್ರದ ತುಂಬಾ ನೀರನ್ನು ಇಟ್ಟು ಅದರಲ್ಲಿ ಗಂಧದ ಪುಡಿಯನ್ನು ಸೇರಿಸಿ ಅದನ್ನು ಮಂಚದ ಕೆಳಗಡೆ ಇಟ್ಟು ಮಲಗುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಇನ್ನು ಬೆಳಗ್ಗೆ ಎದ್ದು ತಕ್ಷಣ ತಲೆ ಸ್ನಾನ ವನ್ನು ಮಾಡಿ. ಆ ನೀರನ್ನು ಸಸಿಗಳಿಗೆ ಹಾಕಬೇಕು. ಅದರಲ್ಲೂ ತುಳಸಿ ಗಿಡಕ್ಕೆ ಗಂಧದ ಪುಡಿ ಸೇರಿಸಿದ ತಾಮ್ರದ ತಂಬಿಗೆಯಲ್ಲಿ ತುಂಬಿದ ನೀರನ್ನು ನೀವು ಹಾಕುವುದರಿಂದ ನಿಮ್ಮ ದುರದೃಷ್ಟಗಳು ದೂರವಾಗುತ್ತದೆ. ಅಲ್ಲದೇ ಅದೃಷ್ಟದ ಬಾಗಿಲು ತೆರೆಯುತ್ತದೆ. ಇನ್ನು ದೇವರ ಕೋಣೆಯಲ್ಲಿ ಶಿವನ ಮುಂದೆ ಅಥಾವ ಯಾವುದೇ ದೇವರ ವಿಗ್ರಹದ ಭಾವ ಚಿತ್ರದ ಮುಂದೆ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಮಾತ್ರವಲ್ಲ ಧನಾಕರ್ಷಣೆಗೆ ಒಳಪಡುತ್ತದ್ದೆ. ಇನ್ನು ರಾತ್ರಿ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಇಟ್ಟು ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಮಕ್ಕಳು, ಮನೆಯ ಯಜಮಾನರು ಇದನ್ನು ಕುಡಿಯುವದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ನೀವು ಅದೃಷ್ಟ ಪಡೆವುದು ಖಂಡಿತಾ.

Leave a Comment