ನಮಸ್ಕಾರ ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿ ಆಷಾಢ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಆಷಾಢ ಮಾಸದ ಬಗ್ಗೆ ಇಂದಾದರೂ ಕೇಳಿದ್ದೀರಾ? ಇದ್ಯಾವುದಪ್ಪ ಹೊಸ ಮಾಸ ಅನ್ಕೊಂಡಿದೀರಾ? ಈ ಒಂದು ಸಂಚಿಕೆಯನ್ನು ಪೂರ್ತಿ ನೋಡ್ತಾ ಹೋಗಿ ನಿಮಗೆ ಗೊತ್ತಾಗುತ್ತೆ. ದೇವರ ಬಳಿ ಭಯ ಭಕ್ತಿಯಿಂದ ಈ ಮಾಸದಲ್ಲಿ ನೀವು ಬೇಡಿಕೊಂಡಾಗ ಖಂಡಿತವಾಗಿ ಈಡೇರುತ್ತದೆ. ಮಕ್ಕಳ ಶಿಕ್ಷಣ, ಉದ್ಯೋಗ,ವ್ಯಾಪಾರ, ಮನೆಯಲ್ಲಿ ಪದೇ ಪದೇ ಕಿರಿ ಕಿರಿ, ಮದುವೆ ಸಮಸ್ಯೆಗಳು, ಈ ರೀತಿಯಾದ ಸಮಸ್ಯೆಗಳು ಅದರಲ್ಲೂ ದುಡ್ಡಿನ ಸಮಸ್ಯೆಗಳು ಬಿಡದೆ ಕಾಡುತ್ತಿದ್ದಲ್ಲಿ
ಈ ಮಾಸದಲ್ಲಿ ನೀವು ಕೆಲವೊಂದು ಉಪಾಯಗಳನ್ನು ಮಾಡಲೇಬೇಕು. ದೇವರ ಬಳಿಯೂ ಶ್ರದ್ದೆಯಿಂದ ಶುದ್ದ ಮನಸ್ಸಿನಿಂದ ಬೇಡಿಕೊಳ್ಳಬೇಕು, ನಿಮ್ಮ ಅದೃಷ್ಟ ರಾತ್ರೋ ರಾತ್ರಿ ಕೂಡ ಬದಲಾಗಬಹುದು
ನೀವು ಮಾಡಬೇಕಾದ ಉಪಾಯ ಏನೆಂದರೆ ಮೊದಲಿಗೆ ಈ ಆಷಾಡ ಮಾಸ ಅಂದರೆ ಏನು ಅಂತ ತಿಳಿದುಕೊಳ್ಳೋಣ ಈ ಮಾಸದಲ್ಲಿ ಕಾಲುವೆ, ನದಿಗಳು ಎಲ್ಲವೂ ಕೂಡ ತುಂಬಿ ಹರಿಯುತ್ತಾ ಇರುತ್ತದೆ ಉಕ್ಕಿ ಹರಿಯುವುದರಿಂದ ನೋಡುವುದಕ್ಕೆ ಆ ನೀರು ಶುದ್ಧವಾಗಿಲ್ಲ ಅಂದೇನಿಸುತ್ತದೆ. ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಈ ಮಾಸದಲ್ಲಿ
ನವ ದಂಪತಿಗಳು ಅತ್ತೆ ಮನೆಗೆ ಕಾಲಿಡಬಾರದೆಂಬ ಸಂಪ್ರದಾಯಗಳು ಸಹ ಇವೆ ಈಗ ಗೊತ್ತಾಯ್ತಾ ಈ ಮಾಸಕ್ಕೆ ಅನಾರೋಗ್ಯ ಮಾಸ ಅಂತ ಕೂಡ ಹೇಳುತ್ತಾರೆ. ಈ ಮಾಸ ಆರಂಭವಾಗುವುದೇ ತಡ ಶೀತ, ನೆಗಡಿ, ಕೆಮ್ಮು, ಜ್ವರ, ನಾನಾ ರೀತಿಯ ಸಮಸ್ಯೆಗಳು ಕಾಡುವುದಕ್ಕೆ ಆರಂಭವಾಗುತ್ತದೆ. ಆದ್ದರಿಂದ ಈ ಮಾಸದಲ್ಲಿ ನಿಮ್ಮ ಆರೋಗ್ಯದ ಮೇಲೆ ಗಮನವನ್ನು ಹರಿಸಬೇಕು ಈ ಆಷಾಢ ಮಾಸ ಈ ವರ್ಷ ಜುಲೈ 6ರಂದು ಆರಂಭವಾಗಿ ಆಗಸ್ಟ್ ನಾಲ್ಕರಂದು ಕೊನೆಗೊಳ್ಳುತ್ತದೆ ಈ ಮಾಸದಲ್ಲಿ ಹುಣ್ಣಿಮೆ ದಿನ ಚಂದ್ರನು ಉತ್ತರಾಷಾಡ ಅಥವಾ ಪೂರ್ವಾಷಾಡ ನಕ್ಷತ್ರದಲ್ಲಿರುವಾಗ ಆಷಾಡ ಮಾಸ ಎಂದು ಕರೆಯುತ್ತಾರೆ.
ಸೂರ್ಯ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ ಈ ಮಾಸದಲ್ಲಿ ಮಾಡುವ ಸ್ಥಾನ, ದಾನ ಪುರಾಣಗಳು ವಿಶೇಷ ಫಲವನ್ನು ನೀಡುತ್ತದೆ ಆಶಾಡ ಮಾಸದಲ್ಲಿ ಸಮುದ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಚಪ್ಪಲಿ, ಛತ್ರಿ, ಉಪ್ಪನ್ನು ದಾನ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಸೂರ್ಯದೇವನನ್ನು ಮಂಗಳ ಗ್ರಹವನ್ನು ಹಾಗೂ ವಿಷ್ಣುವಿನ ಪೂಜೆಯನ್ನು ತಪ್ಪದೆ ಮಾಡಬೇಕು, ಅದರಲ್ಲೂ ಸೂರ್ಯದೇವನ ಪೂಜೆ ಮಾಡುವುದು ತುಂಬಾನೇ ಮುಖ್ಯ ಕಾರಣ ಸೂರ್ಯ ಇದೇ ಮಾಸದಲ್ಲಿ ಉತ್ತರದಿಂದ ದಕ್ಷಿಣ ಪಥದ ಕಡೆಗೆ ಚಲಿಸುವುದಕ್ಕೆ ಪ್ರಾರಂಭಿಸುತ್ತಾನೆ ಮೂರು ತಿಂಗಳ ನಂತರ ಮತ್ತೆ ನನ್ನ ಕೇಂದ್ರವನ್ನ ತಲುಪುತ್ತಾನೆ ಇದೇ ಕಾರಣಕ್ಕೆ
ಈ ಮಾಸವನ್ನು ಭಾನುಸಪ್ತಮಿ ಎಂದು ಕರೆಯುತ್ತಾರೆ. ಆಷಾಡ ಮಾಸದಲ್ಲಿ ಚಾತುರ್ಮಾಸ ಕೂಡ ಆರಂಭವಾಗುತ್ತದೆ ಈ ಒಂದು ಮಾಸದಲ್ಲಿ ಏಕಾದಶಿ, ಗುರು ಪೂರ್ಣಿಮಾ, ಹಾಗೂ ಗುಪ್ತನವರಾತ್ರಿಯು ಆರಂಭವಾಗುತ್ತದೆ. ಆಷಾಢ ಮಾಸದಲ್ಲಿ ಒಂದು ಉಪಾಯವನ್ನು ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಅದೆಂಥ ದೊಡ್ಡ ಬಯಕೆ ಇದ್ದರೂ ಕೂಡ ಕೆಲವೇ ಕೆಲವು ದಿನಗಳಲ್ಲಿ ಈಡೇರುತ್ತದೆ. ಆ ಉಪಾಯಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಆಷಾಢ ಮಾಸದಲ್ಲಿ ಭಗವಾನ್ ವಿಷ್ಣುವಿನ ಜೊತೆಗೆ ಜಲದೇವರು ಮತ್ತು ದೇವತೆಯನ್ನು ಕೂಡ ಪೂಜಿಸಬೇಕು. ಇದು ಸಂಪತ್ತು ಮತ್ತು ಅದೃಷ್ಟವನ್ನು ನೀಡುತ್ತದೆ, ಹಾಗೂ
ಈ ಮಾಸದಲ್ಲಿ ಮಂಗಳ ದೇವನನ್ನು ಪೂಜಿಸುವುದರಿಂದ ಜೀವನದಲ್ಲಿ ಯಾವತ್ತೂ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಈ ಮಾಸದಲ್ಲಿ ದಾನ ಮಾಡುವ ಈ ವಿಶೇಷ ವಸ್ತುಗಳು ನಿಮ್ಮ ಜೀವನದಲ್ಲಿ ವಿಶೇಷವಾದ ಫಲ ಪ್ರಾಪ್ತಿಯಾಗುವಂತೆ ಮಾಡುತ್ತದೆ ಆ ವಸ್ತುಗಳು ಯಾವುದೆಂದರೆ, ಛತ್ರಿ, ಚಪ್ಪಲಿ, ಉಪ್ಪು ಮತ್ತು ನೆಲ್ಲಿಕಾಯಿ ಬ್ರಾಹ್ಮಣರಿಗೆ ತಪ್ಪದೇ ದಾನ ಮಾಡಿ. ಆಷಾಡ ಮಾಸದ ಆರಂಭದಿಂದ ಕೊನೆಯ ದಿನದವರೆಗೂ ಪ್ರತಿದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಮುಂದೆ ಎಣ್ಣೆಯ ದೀಪವನ್ನು ಹಚ್ಚಿರಿ ನಂತರ ಈ ಮಂತ್ರವನ್ನು ತಪ್ಪದೆ ಹೇಳಿರಿ ” ಓಂ ನಮಃ ಶಿವಾಯ, ಓಂ ನಮೋ ಭಗವತೇ ವಾಸುದೇವಾಯ, ಓಂ ರಾಮಧೂತಾಯ ನಮಃ ಕ್ರೀಮ್ ಕೃಷ್ಣಾಯ ನಮಃ, ಓಂ ರಾ ರಾಮಾಯ ನಮಃ
” ಈ ಮಂತ್ರವನ್ನು ಹೇಳಿಯ ತಪ್ಪದೇ ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸಿ ಇದರ ಜೊತೆಗೆ ಸಾಧ್ಯವಾದಲ್ಲಿ ಹಣ, ಧಾನ್ಯಗಳ ಜೊತೆಗೆ ಬಟ್ಟೆಗಳನ್ನ ಬಡವರಿಗೆ ಅಥವಾ ಅಸಹಾಯಕರಿಗೆ ದಾನದ ರೂಪವಾಗಿ ಕೊಡಬೇಕು. ಪ್ರತಿದಿನ ಕೊಡಲು ಸಾಧ್ಯವಾಗದ ಯಾವುದಾದರೂ ಒಂದು ದಿನ ದಾನ ಮಾಡಿ. ಹಾಗೆಯೇ ಆಷಾಡ ಮಾಸದ ಪ್ರತಿ ರವಿವಾರ ಒಂದು ರವಿವಾರ ಮಾಡಿದರು ನಡೆಯುತ್ತದೆ. ಆದ್ದರಿಂದ ಶುಕ್ರವಾರ ಅಥವಾ ಶನಿವಾರವೇ ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಬನ್ನಿ ಅದನ್ನು ಮನೆಯಲ್ಲಿ ಸ್ವಚ್ಛವಾದ ನೀರಿಂದ ತೊಳೆದಿಟ್ಟುಬಿಡಿ ಮಾರನೇ ದಿನ ಸೂರ್ಯೋದಯಕ್ಕಿಂತ ಮೊದಲು ಸ್ನಾನ ಮಾಡಿ ಆ ಅರಳಿ ಮರದ ಒಂದು ಎಲೆಯನ್ನು ತೆಗೆದುಕೊಳ್ಳಿ ನಂತರ ಸ್ವಲ್ಪ ಕೆಂಪು ಕುಂಕುಮವನ್ನು
ತೆಗೆದುಕೊಂಡು ಅದಕ್ಕೆ ಕೊಂಚ ನೀರನ್ನು ಸೇರಿಸಿ ಅದೇ ಕುಂಕುಮದ ನೀರಿನಿಂದ ನಿಮ್ಮ ಮನದ ಬಯಕೆಯನ್ನು ಸ್ಪಷ್ಟವಾಗಿ ಬರೆಡಿಡಿ. ಆ ಕೆಂಪು ಕುಂಕುಮ ನೀರಿನಿಂದ ಬರೆಯಲು ಸಾಧ್ಯವಾಗದೆ ಹೋದಲ್ಲಿ ಕೆಂಪು ಶಹಾನ ಇಂದ ಬರೆದರು ಸಾಕು ಅದು ವಿವಾಹದ ಬಗ್ಗೆ ಆಗಿರಬಹುದು, ಸಂತಾನದ ಬಗ್ಗೆ ಆಗಿರಬಹುದು, ಧನದ ಬಗ್ಗೆ ಆಗಿರಬಹುದು, ಹೊಸ ಮನೆಯನ್ನು ಕೊಂಡುಕೊಳ್ಳುವುದರ ಬಗ್ಗೆ ಆಗಿರಬಹುದು, ಮನಸ್ಸಿನಲ್ಲಿ ಎಂತಹದ್ದೇ ಬಯಕೆ ಇದ್ದರೆ ಕೂಡ ಅದನ್ನ ಬರೆದು ನಿಮ್ಮ ಮನೆಯಲ್ಲಿರುವ ವಿಷ್ಣುವಿನ ಫೋಟೋ ಮುಂದೆ ಇಟ್ಟು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ಸಾಕು ಕೊನೆಗೆ ಅದೇ ಎಲೆಯನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಟ್ಟುಬಿಡಿ ಯಾವುದೇ ನದಿ ಅಥವಾ ಕಾಲುವೆ
ನಿಮ್ಮ ಮನೆ ಬಳಿ ಇಲ್ಲದೆ ಹೋದಲ್ಲಿ ಬಾವಿಯಲ್ಲಿ ಹಾಕಿದರೂ ಕೂಡ ನಡೆಯುತ್ತದೆ. ಇನ್ನೊಂದು ಮುಖ್ಯವಾದ ವಿಚಾರ ಯಾವುದೇ ಕಾರಣಕ್ಕೂ ಭಾನುವಾರದಂದು ಅರಳಿ ಎಲೆಯನ್ನು ಕೀಳಬೇಡಿ ಹಾಗೂ ಅದನ್ನು ಕೀಳುವಾಗ ಹರಿಯದೆ ಇರುವಂತೆ ನೋಡಿಕೊಳ್ಳಿ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಉಪಾಯವನ್ನು ಮಾಡುವಾಗ ಜಾಗೃತೆಯಿಂದ ಇರಿ ಈ ಉಪಾಯ ಮಹಿಳೆಯರು ಮಾಡುತ್ತಿದ್ದಲ್ಲಿ ಅವರ ಋತುಮತಿ ಆಗದೆ ಇದ್ದ ದಿನಗಳಲ್ಲಿ ಮಾಡಬಹುದು..
ಈ ಆಶಾಡ ಮಾಸದಲ್ಲಿ ಮಾಡಲೇಬಾರದಂತ ಕೆಲವು ಕೆಲಸಗಳಿವೆ ವಿಶೇಷವಾಗಿ ಶುಭ ಕಾರ್ಯಗಳನ್ನು ಮಾಡುವುದು ಬೇಡ, ಎಂದು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮದುವೆ, ಉಪನಯನ, ನಿಶ್ಚಿತಾರ್ಥ ಇವುಗಳನ್ನು ಮಾಡಬಾರದು ಹಾಗೆಯೇ ಈ ಸಮಯದಲ್ಲಿ ಬಂಗಾರ ಖರೀದಿ ಮಾಡುವುದು ಭೂಮಿಗೆ ಸಂಬಂಧಪಟ್ಟ ವಿಷಯಗಳಿಗೆ ಮುಂದಾಗಬಾರದು ಅದೇ ಮುಂದೊಂದು ದಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ.
ಧನ್ಯವಾದಗಳು.