ನಾವು ಈ ಲೇಖನದಲ್ಲಿ ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಧನಸ್ಸು ರಾಶಿಯ ಲಾಂಛನವು ಬಿಲ್ಲು ಆಗಿರುತ್ತದೆ. ರಾಶಾಧಿಪತಿ ಗುರುವಾಗಿರುತ್ತದೆ . ಪೂರ್ವ ದಿಕ್ಕನ್ನು ಹೋಲುತ್ತದೆ . ರಾಶಿಯ ಲಿಂಗವು ಪುರುಷ ಲಿಂಗವಾಗಿರುತ್ತದೆ. ರಾಶಿಯ ರತ್ನವು ಪುಷ್ಯ ರಾಗ . ಹಳದಿ ಮತ್ತು ಕೆಂಪು ಅದೃಷ್ಟದ ಬಣ್ಣಗಳಾಗಿರುತ್ತದೆ. ಗುರುವಾರ ಮತ್ತು ಭಾನುವಾರ ಅದೃಷ್ಟದ ದಿನಗಳಾಗಿರುತ್ತದೆ . ಮಹಾವಿಷ್ಣು ಅದೃಷ್ಟದ ದೇವತೆಯಾಗಿರುತ್ತದೆ.
3, 14 , 5 ಅದೃಷ್ಟದ ಸಂಖ್ಯೆಗಳಾಗಿರುತ್ತದೆ. 3, 12 , 21 30 ,ಅದೃಷ್ಟದ ದಿನಾಂಕಗಳಾಗಿರುತ್ತದೆ. ಮಿತ್ರ ರಾಶಿಯು ಮೇಷ ಮತ್ತು ಸಿಂಹ ವಾಗಿರುತ್ತದೆ . ಶತ್ರು ರಾಶಿಯು ಕಟಕ ,ಮೀನ ,ವೃಶ್ಚಿಕ , ರಾಶಿಯು ಶತ್ರು ರಾಶಿಗಳಾಗಿರುತ್ತದೆ. ಮೂಲ ನಕ್ಷತ್ರದ ನಾಲ್ಕು ಚರಣಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣಗಳು ಉತ್ತರಾಷಾಡ ನಕ್ಷತ್ರದ ಮೊದಲನೇ ಚರಣವು ಸೇರಿರುತ್ತದೆ. ಬಂಧು ಬಾಂಧವರು ಸ್ನೇಹಿತರು ಕಾರ್ಯಕ್ಷೇತ್ರದಲ್ಲಿರುವವರು ಬೇರೆ ಯವರ ಮೇಲೆ ನಿಮ್ಮ ಮಾತು ಆದಷ್ಟು ಸೌಮ್ಯವಾಗಿರಲಿ.
ನಿಮ್ಮ ವ್ಯಕ್ತಿತ್ವ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವವಾಗಿರುತ್ತದೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಿ . ಮಾತಿನ ಮೇಲೆ ನಿಗಾ ಇರಲಿ. ಸಾರ್ವಜನಿಕ ವಲಯದಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮದುವೆ ವಿಚಾರದಲ್ಲಿ ಅಂದರೆ ಮಕ್ಕಳ ಮದುವೆ ನಿಮ್ಮ ಮದುವೆ ಇಂತಹ ವಿಚಾರಗಳಲ್ಲಿ ಒಳ್ಳೆಯ ಬದಲಾವಣೆ ಇರುವುದಿಲ್ಲ. ಆ ವಿಚಾರವನ್ನು ಸ್ವಲ್ಪ ತಡೆ ಹಿಡಿಯುವುದು ಉತ್ತಮವಾಗಿರುತ್ತದೆ. ಎಂಥಾ ಸವಾಲುಗಳನ್ನು ಸಹ ಮೆಟ್ಟಿ ನಿಲ್ಲುವಂತಹ ಗುಣ ಧನಸ್ಸು ರಾಶಿಯವರಿಗೆ ಇರುತ್ತದೆ.
ಇವರ ಮುಂದೆ ಗುರಿ ಇರುತ್ತದೆ, ಇನ್ನೊಬ್ಬರ ಅದೀನದಲ್ಲಿ ಇರಲು ಇಷ್ಟಪಡುವುದಿಲ್ಲ. ಸ್ವತಂತ್ರವಾಗಿ ಜೀವಿಸಲು ಇಷ್ಟಪಡುವಂತಹ ವ್ಯಕ್ತಿತ್ವ ಧನುರಾಶಿಯವರಾಗಿರುತ್ತಾರೆ. ಈ ರೀತಿಯ ವಾತಾವರಣದಲ್ಲಿ ಶತ್ರುಗಳ ನಡುವೆಯೂ ಸಹ ನಿಮಗೆ ಜಯ ಲಭಿಸುತ್ತದೆ. ನೀವು ಯೋಜನೆಯ ಪ್ರಕಾರ ಕೆಲಸ ಮಾಡಿದರೆ ನಿಮಗೆ ಯಶಸ್ಸು ಲಭಿಸುತ್ತದೆ. ನೂತನ ವಸ್ತು ಆಭರಣ ವಾಹನಗಳನ್ನು ಖರೀದಿಸುವಂತಹ ಅದೃಷ್ಟ ಕೆಲವರಿಗೆ ಕಂಡುಬರುತ್ತದೆ. ಸಭೆ ಸಮಾರಂಭಗಳಿಗೆ ಪ್ರಯಾಣ ಮಾಡುವಂತಹ ವಿಚಾರಗಳಿಗೆ
ಖರ್ಚು ಮಾಡುವಂತಹ ಸನ್ನಿವೇಶಗಳು ಇರುತ್ತದೆ. ಖರ್ಚಿಗೆ ಕಡಿವಾಣವನ್ನು ಹಾಕಿದರೆ ಒಳ್ಳೆಯ ಯಶಸ್ಸ ಲಭಿಸುತ್ತದೆ. ಅನಾವಶ್ಯಕವಾಗಿ ದುಂದು ವೆಚ್ಚವನ್ನು ಮಾಡಬೇಡಿ. ಬಂದು ಮಿತ್ರರ ಭೇಟಿ ಮಾಡುವುದು ಹಳೆಯ ನೆನಪುಗಳು ಮರುಕಳಿಸುವಂತದ್ದು ಈ ರೀತಿಯ ಸನ್ನಿವೇಶಗಳು ಉಂಟಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಸಾಕಷ್ಟು ಆಸಕ್ತಿ ಇರುತ್ತದೆ.
ದೇವಿ ಆರಾಧನೆ ಮಾಡುವುದು ಇಂತಹ ಕಾರ್ಯಗಳು ಜರಗುತ್ತದೆ. ಬಂಧು ಮಿತ್ರರಿಗೆ ಮತ್ತು ಸ್ನೇಹಿತರಿಗೆ ಉಡುಗೊರೆಯನ್ನು ಕೊಡುವಂತಹ ಅವಕಾಶಗಳು ಇರುತ್ತದೆ. ಅನಾವಶ್ಯಕವಾಗಿ ಖರ್ಚುಗಳನ್ನು ಮಾಡಿ ತೊಂದರೆಯನ್ನು ಅನುಭವಿಸುವಂತಹ ಗೊಂದಲಕ್ಕೆ ಒಳಗಾಗಬೇಡಿ. ಮಕ್ಕಳ ವಿಚಾರದಲ್ಲಿ ಅವರ ಅಗತ್ಯತೆಗಳನ್ನು ಪೂರೈಸಲು ನೀವು ಕಷ್ಟಪಡುತ್ತಿರುತ್ತೀರಾ ಹಣಕಾಸಿನ ವಿಚಾರದಲ್ಲಿ ಆಗಿರಲಿ ಭವಿಷ್ಯತ್ತಿನ ವಿಚಾರದಲ್ಲಿ ಆಗಿರಲಿ ಒಂದು ಚಿಂತನೆಯು ಕಂಡುಬರುತ್ತದೆ.
ಕೆಲವು ವಿದ್ಯಾರ್ಥಿಗಳು ಗಾಬರಿ ಪಡುವುದು , ಚಿಂತೆ ಮಾಡುವುದು ಹೆಚ್ಚಿನ ಮೊಬೈಲ್ ಬಳಕೆಯನ್ನು ಉಪಯೋಗಿಸುವುದು ಇಂತಹ ಕಾರಣದಿಂದ ವಿದ್ಯಾಭ್ಯಾಸವು ಹಿನ್ನಡೆಯಾಗುವಂತಹ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು. ಇದರಿಂದ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಬಹುದು. ಯಾವುದೇ ಕೆಲಸವನ್ನು ಮಾಡಬೇಕಾದರೆ ನೀವು ಯೋಜನೆಯನ್ನು ಮಾಡಿಕೊಂಡು ಆ ಕೆಲಸವನ್ನು ಮಾಡಿಕೊಳ್ಳಿ.
ಕೆಲಸದ ಬಗ್ಗೆ ಆದಷ್ಟು ನಿಗಾ ಇರಲಿ. ವಾದ ವಿವಾದಗಳನ್ನು ಮಾಡುವಾಗ ನಿಮಗೆ ಜಯವು ಲಭಿಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ಪರ್ಧೆಯು ಇದ್ದರೂ ಸಹ ನಿಮಗೆ ಲಾಭ ದೊರಕುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರುಗಳು ಉಂಟಾಗುತ್ತದೆ. ಅಂದರೆ ಸುಸ್ತು ನಿಶಕ್ತಿ ಈ ರೀತಿಯ ತೊಂದರೆಗಳು ಕಾಣಬಹುದು . ಆದ್ದರಿಂದ ಆರೋಗ್ಯದಲ್ಲಿ ಹೆಚ್ಚಿನ ನಿಗ ವಹಿಸಿ. ಆಹಾರದಲ್ಲಿ ಎಚ್ಚರಿಕೆ ಮತ್ತು ಯೋಗ ವ್ಯಾಯಾಮ ಧ್ಯಾನ ಇಂತಹ ಕೆಲಸಗಳನ್ನು ರೂಢಿಸಿಕೊಳ್ಳಿ.
ಹೆಚ್ಚಿನ ಪ್ರಯತ್ನದಿಂದ ಕಾರ್ಯಸಿದ್ಧಿಯಾಗುತ್ತದೆ. ಪಿತೃ ವರ್ಗದಿಂದ ಬಹಳಷ್ಟು ಅನುಕೂಲವಾದಂತಹ ವಾತಾವರಣ ನಿಮಗೆ ದೊರಕುತ್ತದೆ. ಸಮಯವನ್ನು ವ್ಯರ್ಥ ಮಾಡಲು ಹೋಗಬೇಡಿ. ಸಮಯವನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳುತ್ತೀರಾ ಅದರ ಮೇಲೆ ನಿಮ್ಮ ಯಶಸ್ಸು ನಿಂತಿರುತ್ತದೆ . ಅನವಶ್ಯಕವಾಗಿ ದಿನಗಳನ್ನು ದೂಡುವ ಪ್ರಯತ್ನವನ್ನು ಮಾಡಲು ಹೋಗಬೇಡಿ. ಇದರಿಂದ ಬಹಳಷ್ಟು ಆರ್ಥಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಮಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಇದರಿಂದ ನಿಮಗೆ ಮಾನಸಿಕ ಮತ್ತು ದೈಹಿಕ ನೆಮ್ಮದಿ ದೊರಕುತ್ತದೆ.
ಇದರಿಂದ ಕೆಲವು ಅಡೆತಡೆಗಳು ದೂರವಾಗುತ್ತದೆ. ರಾಜಕಾರಣಿಗಳಿಗೆ ಒಳ್ಳೆಯ ಅವಕಾಶ ಲಭಿಸುತ್ತದೆ. ಒಟ್ಟಾರೆಯಾಗಿ ತಿಂಗಳಿನಲ್ಲಿ ಅದ್ಭುತ ಫಲಗಳು ನಿಮಗೆ ದೊರಕುತ್ತದೆ. ಜೂನ್ ತಿಂಗಳಿನಲ್ಲಿ ಧನುರಾಶಿಯವರಿಗೆ ಅದ್ಭುತ ಪರಿಹಾರಗಳೆಂದರೆ ತಾಯಿ ದುರ್ಗಾ ದೇವಿಯ ಆರಾಧನೆಯನ್ನು ಮಾಡಿಕೊಳ್ಳಿ. ದುರ್ಗಾಮಾತೆಯ ದರ್ಶನವನ್ನು ಮಾಡುವುದು ಇದರಿಂದ ಒಳ್ಳೆಯ ಫಲಗಳು ನಿಮಗೆ ಲಭಿಸುತ್ತದೆ. ಸಾಧುಸಂತರಿಗೆ ಪಶು ಪಕ್ಷಿಗಳಿಗೆ ಆಹಾರವನ್ನು ನೀಡಿ. ಗುರುವಿಗೆ ಮತ್ತು ತಂದೆ ತಾಯಿಗಳಿಗೆ ಗೌರವವನ್ನು ಕೊಡಿ. ಅವರ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನವನ್ನು ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ನಿಮಗೆ ಶುಭಕಾರಕವಾದ ಅಂತಹ ಫಲಗಳು ದೊರಕುತ್ತದೆ.