ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಚಮಚ ಮೆಂತ್ಯ ಕಾಳನ್ನು ನೆನೆ ಹಾಕಿ ಮರುದಿನ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಉರಿ ಮೂತ್ರದಿಂದ ಒದ್ದಾಡುತ್ತಿದ್ದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅಡುಗೆ ಸೋಡವನ್ನು ಬೆರೆಸಿಕೊಂಡು ಕುಡಿಯಿರಿ. ಬೇಗನೇ ಉರಿಮೂತ್ರ ನಿವಾರಣೆಯಾಗುತ್ತದೆ.

ಮುಟ್ಟಿನ ಸಮಯದಲ್ಲಿ ಸುವರ್ಣಗಡ್ಡೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು ಹಾಗೂ ಋತುಸ್ರಾವದ ಅನೇಕ ಸಮಸ್ಯೆಗಳಿಂದ ಇದು ನಮ್ಮನ್ನು ಕಾಪಾಡುತ್ತದೆ.

ಮುಖ ಎಣ್ಣೆಯುಕ್ತವಾಗಿ ಹಾಗೂ ಮೊಡವೆಗಳು ಹೆಚ್ಚು ಹೆಚ್ಚು ಆಗುತ್ತಿರುವ ಸಮಸ್ಯೆಗೆ ಕಡಲೆಹಿಟ್ಟಿಗೆ ರೋಸ್ ವಾಟರ್ ಅನ್ನು ಬೆರೆಸಿಕೊಂಡು ಆ ಮಿಶ್ರಣವನ್ು ಎರಡು ದಿನಕ್ಕೊಮ್ಮೆ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಮುಖವನ್ನು ತೊಳೆಯಿರಿ.

ಸ್ವಲ್ಪ ತೆಂಗಿನಕಾಯಿ ಹಾಲನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ, ಇದು ನಮ್ಮ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ತಡೆಯುತ್ತದೆ ಹಾಗೂ ಸುಕ್ಕುಗಳು ಮೊಡವೆಗಳು ದೂರವಾಗುತ್ತದೆ.

ನಿದ್ರೆ ಬಾರದ ಸಮಸ್ಯೆಯಿಂದ ಒದ್ದಾಡುತ್ತಿದ್ದವರು, ಸಬ್ಬಸಿಗೆ ಸೊಪ್ಪನ್ನು ಸ್ವಚ್ಛಗೊಳಿಸಿ ಅದನ್ನು ತಲೆದಿಂಬಿನ ಅಡಿ ಇಟ್ಟುಕೊಂಡು ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

ಸೌತೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು, ಹೋಳುಗಳನ್ನಾಗಿ ಮಾಡಿ ಆ ಹೋಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಕೊಂಡು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳು ನಮಗೆ ದೊರಕುತ್ತದೆ ಹಾಗೂ ಚರ್ಮದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.

ಕರಳು ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸಲು ಊಟದ ನಂತರ ಬಾಳೆಹಣ್ಣುಗಳನ್ನು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ ಇದರಲ್ಲಿರುವ ನಾರಿನಾಂಶ ಚೆನ್ನಾಗಿ ಜೀರ್ಣವಾಗಲು ನಮಗೆ ಸಹಾಯ ಮಾಡುತ್ತದೆ.

ಅಸಿಡಿಟಿ ತೊಂದರೆಯಿಂದ ಒದ್ದಾಡುತ್ತಿದ್ದರೆ, ಒಂದು ಲೋಟ ತಣ್ಣಗಿನ ಹಾಲನ್ನು ಕುಡಿಯಿರಿ. ಇದು ಅಸಿಡಿಟಿಗೆ ಸಂಬಂಧಪಟ್ಟ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗೆ ಒಳ್ಳೆಯದು. ಇದಕ್ಕೆ ಸಕ್ಕರೆ ಹಾಗೂ ಏನನ್ನು ಬೆರೆಸಬಾರದು.

ಕೆಮ್ಮು ಹಾಗೂ ನೆಗಡಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ, ನಿಂಬೆ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿಕೊಂಡು ಸೇವನೆ ಮಾಡಿ. ಇದು ಗಂಟಲು ಕಿರಿಕಿರಿ ಹಾಗೂ ನೆಗಡಿಗೆ ಸಂಬಂಧಪಟ್ಟ ಸಮಸ್ಯೆ ಕೆಮ್ಮು ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

Leave a Comment