ಲಕ್ಷ್ಮಿ ಪೂಜೆ ಆಗಿ ಬರಲ್ಲಾ| ಪೂಜೆ ಮಾಡಿದಷ್ಟು ಕಷ್ಟಗಳು ಜಾಸ್ತಿಯಾಗ್ತಿದೆ| ನಾನು ಇದನ್ನ ಕಣ್ಣಾರೆ ನೋಡಿದ್ದೀನಿ|

ನಾವು ಈ ಲೇಖನದಲ್ಲಿ ಕಷ್ಟಪಟ್ಟು ಲಕ್ಷ್ಮಿ ಪೂಜೆ ಮಾಡಿದರೂ ಸಹ ಕಷ್ಟಗಳು ಜಾಸ್ತಿ ಆಗಿದೆ ಎಂದು ಕೆಲವರು ಏಕೆ ಹೇಳುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಕರ್ಮದ ಫಲದ ಅನುಸಾರವಾಗಿ ನಮಗೆ ದೊರೆಯುತ್ತದೆ. ನಾವು ಒಳ್ಳೆಯ ಕೆಲಸವನ್ನು ಮಾಡಿದರೆ ಒಳ್ಳೆಯ ಫಲವನ್ನು ಅನುಭವಿಸುತ್ತೇವೆ. ನಾವು ತಪ್ಪು ಮಾಡಿದರೆ ನಾವು ಕೆಟ್ಟ ಫಲಗಳನ್ನು ಅನುಭವಿಸುತ್ತೇವೆ. ಆದರೆ ಪೂಜೆ ಮಾಡಿ ಕಷ್ಟ ಜಾಸ್ತಿ ಆಯ್ತು ಎಂದು ಅಂದುಕೊಳ್ಳಬೇಡಿ. ನಾನು ಪೂಜೆ ಮಾಡಿದಾಗ ಒಳ್ಳೆಯದೇ ಆಗುತ್ತದೆ

ಎಂಬ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕು. ನಾವು ಯಾವುದೇ ದೇವರ ಪೂಜೆಯನ್ನು ಮಾಡಿದರೆ, ಅದರಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೆ ಕೊನೆಯಲ್ಲಿ ಕ್ಷಣ ಕ್ಷಮಾಪಣ ಮಂತ್ರವನ್ನು ಪಟಿಸಿಕೊಳ್ಳಬೇಕು. ಕ್ಷಮಾಪಣ ಮಂತ್ರ ಬರದೇ ಹೋದರೆ ನಾನು ಮಾಡಿದ ತಪ್ಪನ್ನು ಕ್ಷಮಿಸು ಎಂದು ಬೇಡಿಕೊಳ್ಳಬೇಕು. ಆದರೆ ಮಹಾಲಕ್ಷ್ಮಿಯ ಪೂಜೆಯ ಸಮಯದಲ್ಲಿ ಇದು ನಡೆಯುವುದಿಲ್ಲ ಏಕೆಂದರೆ ಶ್ರೀ ಮಹಾಲಕ್ಷ್ಮಿಯು ತುಂಬ ಸ್ವಾಭಿಮಾನಿ ಆಗಿರುತ್ತಾಳೆ. ಆದ್ದರಿಂದ ಪೂಜೆ ಮಾಡಿದ

ನಂತರ ನಾನು ಯಾವ ತಪ್ಪುಗಳನ್ನು ಮಾಡಿದ್ದೇನೆ ಎಂದು ಅರಿತುಕೊಂಡು ನಂತರ ಪೂಜೆಯ ಸಮಯದಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಮಹಾಲಕ್ಷ್ಮಿಗೆ ಅವಮಾನವಾದ ಜಾಗದಲ್ಲಿ ಅವಳು ಒಂದು ಕ್ಷಣವೂ ಸಹ ನಿಲ್ಲುವುದಿಲ್ಲ . ಈ ವಿಷಯವನ್ನು ನಾವು ತುಂಬಾ ಕಥೆಗಳಲ್ಲಿ ಓದಿರುತ್ತೇವೆ. ಮಹಾಲಕ್ಷ್ಮಿ ಪೂಜೆಯನ್ನು ಮಾಡಿ ನಮಗೆ ಕಷ್ಟ ಜಾಸ್ತಿ ಆಯ್ತು ಎಂದು ಯಾವ ವಿಧದಲ್ಲೂ ಸಹ ಹೇಳಿಕೊಳ್ಳಬಾರದು. ವರಮಹಾಲಕ್ಷ್ಮಿ ಹಬ್ಬವನ್ನು ಪ್ರತಿಯೊಬ್ಬರಿಗೂ ಮಾಡಬೇಕು

ಎಂಬ ಆಸೆ ಇರುತ್ತದೆ. ಹಿಂದಿನ ದಿನಗಳಲ್ಲಿ ಬ್ರಾಹ್ಮಣರು ಮತ್ತು ಶೆಟ್ಟರು ಬಿಟ್ಟರೆ ಯಾವ ಜನಾಂಗದವರು ಸಹ ಲಕ್ಷ್ಮಿ ಪೂಜೆಯನ್ನು ಮಾಡುತ್ತಿರಲಿಲ್ಲ ಆದರೆ ಇಂದು ಎಲ್ಲರೂ ಸಹ ಮಾಡುತ್ತಾರೆ. ಮಹಾಲಕ್ಷ್ಮಿ ವ್ರತವನ್ನು ಸಾಲ ಮಾಡಿ ಎಂದು ಸಹ ಮಾಡಬೇಡಿ ನಿಮ್ಮ ಹತ್ತಿರ ಇರುವ ಹಣದಲ್ಲೇ ಭಕ್ತಿ ಮತ್ತು ಶ್ರದ್ಧೆಗಳಿಂದ ಮಾಡಿ. ಆಡಂಬರವನ್ನು ಮಾಡಬೇಡಿ. ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಒಂದೊಂದಾಗಿ ಬಗೆಹರಿಸಿಕೊಳ್ಳಬೇಕು. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಅರಿತುಕೊಂಡು ನಡೆಯಬೇಕು. ನಾವು ಎಷ್ಟೇ ಪೂಜೆಯನ್ನು ಮಾಡಿದರೂ ಸಹ ನಾವು ಎಷ್ಟೇ ಮಂತ್ರ ಸ್ತೋತ್ರಗಳನ್ನು

ಪಠಿಸಿದರು ಸಹ ಕಷ್ಟಗಳು ಪರಿಹಾರವಾಗುವುದಿಲ್ಲ ಇದನ್ನು ಏಕೆ ಮಾಡಬೇಕು ಎಂದರೆ ಮನೆಯಲ್ಲಿ ಒಂದು ಸಕಾರಾತ್ಮಕ ವಾತಾವರಣವಿರಲಿ ಎಂದು ಪೂಜೆಯನ್ನು ಮಾಡಿಕೊಳ್ಳಬೇಕು. ವರಮಹಾಲಕ್ಷ್ಮಿ ಪೂಜೆಯನ್ನು ಆದಷ್ಟು ಸರಳತೆಯಿಂದ ಆಚರಿಸಿ ಬೇರೆಯವರನ್ನು ಮೆಚ್ಚಿಸಲು ಹೋಗಬೇಡಿ. ದೇವಿಗೆ ಒಡವೆ ಯಾವ ರೀತಿ ಹಾಕಿದ್ದಾರೆ ಮತ್ತು ದೇವಿಗೆ ಯಾವ ಸೀರೆಯನ್ನು ಉಡಿಸಿದ್ದಾರೆ ಎಂದು ನೋಡುತ್ತಾರೆ ಎಂಬ ಮನೋಭಾವನೆ ಇಟ್ಟುಕೊಂಡು ಪೂಜೆಯನ್ನು ಮಾಡಲು ಹೋಗಬೇಡಿ.

ನಿಮ್ಮ ಕೈಲಾದಷ್ಟು ಮಟ್ಟಿಗೆ ವತ್ರವನ್ನು ಆಚರಿಸಿಕೊಳ್ಳಿ. ಹಬ್ಬವನ್ನು ಆಡಂಬರದಿಂದ ಆಚರಿಸಲು ಹೋಗಿ ನಿಮ್ಮ ಕೈಯನ್ನು ಸುಟ್ಟುಕೊಳ್ಳಬೇಡಿ. ಮುತ್ತೈದೆಯರಿಗೆ ಅರಿಶಿನ ಕುಂಕುಮ ತಾಂಬೂಲವನ್ನು ಕೊಟ್ಟು ಆಶೀರ್ವಾದವನ್ನು ಪಡೆದುಕೊಂಡರೆ ಸಾಕು. ಇದರಿಂದ ವರಮಹಾಲಕ್ಷ್ಮಿ ಸಂತ್ರಪ್ತಳಾಗಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಕೊಡುತ್ತಾಳೆ. ಇರುವುದರಲ್ಲೇ ತೃಪ್ತಿಪಡಿ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮರು ಹೇಳಿದ್ದಾರೆ. ನಾವು ಆಡಂಬರವಾಗಿ ಮಾಡಲು ಹೋಗಿ ಸಾಲ ಮಾಡಿಕೊಂಡು ಅದರ

ತಪ್ಪನ್ನು ದೇವರ ಮೇಲೆ ಹೊರಿಸಲು ಹೋಗಬೇಡಿ. ವರಮಹಾಲಕ್ಷ್ಮಿ ಪೂಜೆಯನ್ನು ಮಾಡುವಾಗ ಹಿಂದಿನ ದಿನವೇ ಕಳಶ ಸಮೇತವಾಗಿ ಪ್ರತಿಷ್ಠಾಪನೆ ಮಾಡಿಬಿಡುತ್ತಾರೆ ಇದು ತಪ್ಪು ತಿಳುವಳಿಕೆಯಾಗಿದೆ ಏಕೆಂದರೆ ಹಬ್ಬದ ದಿನ ಶುಭ ಮುಹೂರ್ತದಂದೆ ಕಳಶವನ್ನು ಪ್ರತಿಷ್ಠಾಪನೆ ಮಾಡುವುದು ಒಳ್ಳೆಯದು. ಹಿಂದಿನ ದಿನವೇ ಒಳ್ಳೆಯ ಸಮಯ ಇಲ್ಲದಿರುವಾಗ ದೇವಿಯನ್ನು ಪ್ರತಿಷ್ಠಾಪಿಸಿ ನಾಳೆ ಸಮಯದಲ್ಲಿ ಅನುಕೂಲ ಮಾಡಿಕೊಳ್ಳುವುದು ತಪ್ಪು ಅಭಿಪ್ರಾಯವಾಗಿದೆ.

ನಮ್ಮ ಬೇಜವಾಬ್ದಾರಿತನದಿಂದ ದುಡ್ಡನ್ನು ಅಥವಾ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಅದನ್ನು ದೇವರ ಮೇಲೆ ಹಾಕುವುದು ತಪ್ಪಾಗಿದೆ. ಆಡಂಬರವಾಗಿ ಪೂಜೆ ಮಾಡಲು ಹೋಗಿ ಹೆಚ್ಚಾಗಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೆ ಒದ್ದಾಡುವಂತಹ ಗೋಜಲಿಗೆ ಸಿಕ್ಕಿಕೊಳ್ಳಬೇಡಿ ಇರುವುದರಿಂದಲೇ ತೃಪ್ತಿಯಾಗಿ ಹಬ್ಬವನ್ನು ಮಾಡಿದಾಗ ನಮಗೆ ಹಣದ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಗತ್ಯವಿರುವುದಿಲ್ಲ. ನಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಇಲ್ಲ ಎಂದಾಗ ಮಾತ್ರ ಹಬ್ಬವನ್ನು ಆಡಂಬರವಾಗಿ ಅದ್ದೂರಿಯಾಗಿ ಆಚರಿಸಿದರೆ ಅದು ತಪ್ಪಿಲ್ಲ. ನಮಗೆ ಅನುಕೂಲವಾದ ರೀತಿಯಲ್ಲಿ ಮಾತ್ರ ವ್ರತವನ್ನು ಆಚರಿಸಿಕೊಳ್ಳಬೇಕು.

ಸರಳವಾಗಿ ಕಳಶ ಇಟ್ಟು ಪೂಜೆ ಮಾಡುವುದು ಒಳಿತು. ಮೊದಲನೆಯ ವರ್ಷವೇ ಅಥವಾ ನಮಗೆ ಅನುಕೂಲವಿಲ್ಲದಿದ್ದರೂ ಸಹ ಸೀರೆಯನ್ನು ಉಡಿಸಿ ಬೆಳ್ಳಿಯ ದೀಪದ ಕಂಬವನ್ನು ಇಟ್ಟು ನಾನಾ ರೀತಿಯಲ್ಲಿ ಅಲಂಕರಿಸಿ ತುಂಬಾ ಜನರನ್ನು ಮನೆಗೆ ಕರೆದು ಎಲ್ಲರಿಗೂ ಸಹ ಉಡುಗೊರೆಯನ್ನು ನೀಡಬೇಕು ಎಂದುಕೊಳ್ಳುವ ನಿಯಮವೇನು ಇಲ್ಲ ಇದೆಲ್ಲವೂ ನಾವು ತಿಳಿದುಕೊಂಡಿರುವಂತಹ ತಪ್ಪು ಅಭಿಪ್ರಾಯ. ಮನಸ್ಸಿನಲ್ಲಿ ಖುಷಿಯನ್ನು ಇಟ್ಟುಕೊಂಡು ದೇವರಿಗೆ ಅಲಂಕಾರ ಮಾಡಿದರೆ ಪೂಜೆಯ ಪ್ರತಿಫಲ ನಮಗೆ ದೊರೆಯುತ್ತದೆ. ಸರಳತೆಯಿಂದ ಮಾಡಿದರು ಸಹ ದೇವಿಯು ಕಳೆಯಾಗಿ ಕಾಣಿಸುತ್ತದೆ.

ಆದ್ದರಿಂದ ನಿಮ್ಮ ಅನುಕೂಲತೆಗಳನ್ನು ನೋಡಿಕೊಂಡು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಮಾಡಿಕೊಳ್ಳಿ. ಆದ್ದರಿಂದ ಪೂಜೆ ಮಾಡಿ ಕಷ್ಟ ಬಂತು ಎಂದುಕೊಳ್ಳುವ ಎಂದು ಕೊಳ್ಳಬೇಡಿ. ನೀವು ಆ ಪೂಜೆಯಲ್ಲಿ ಏನೆಲ್ಲ ತಪ್ಪು ಮಾಡಿದ್ದೀರಾ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಲಕ್ಷ್ಮಿ ಪೂಜೆ ಎಂದಲ್ಲ ನಾವು ಮನೆಯಲ್ಲಿ ಮಾಡುವಂತಹ ಯಾವುದೇ ಪೂಜೆಯನ್ನಾದರೂ ಸಹ ಸಾಲ ಮಾಡಿ ಮಾಡಲು ಹೋಗಬೇಡಿ. ನಮಗೆ ಅನುಕೂಲವಿದ್ದಾಗ ನಮ್ಮ ಕೈಯಲ್ಲಿ ದುಡ್ಡಿದ್ದಾಗ ಮಾತ್ರ ಎಲ್ಲವನ್ನು ಮಾಡಿಕೊಳ್ಳಬೇಕು. ಹಾಗೆಯೇ ಹರಕೆ ಮಾಡಿಕೊಳ್ಳುವಾಗ ಅದನ್ನು ನಮ್ಮ ಸ್ಥಿತಿಗತಿಗೆ ಅನುಗುಣವಾಗಿ ಮಾಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ನಾವು ಉಳಿತಾಯವನ್ನು ಕಲಿತುಕೊಂಡರೆ ನಮಗೆ ಕಷ್ಟಗಳು ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ನಮಗೆ ಅಭಿವೃದ್ಧಿಯು ಕಾಣುತ್ತದೆ.

Leave a Comment