ಮನೆಯಲ್ಲಿ ಕೆಟ್ಟ ಶಕ್ತಿಗಳು ಇದ್ದರೇ ಈ ತರಹದ ಸೂಚನೆಗಳು ಕಾಣಿಸುತ್ತವೆ. ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಿ. ಯಾವ ರೀತಿ ಎಂದರೆ ನಮ್ಮ ಮನೆಯಲ್ಲಿ ದೈವ ಅನುಗ್ರಹವಿಲ್ಲ ಎಂದಾಗ ಕೆಲವು ಸೂಚನೆಗಳು ನಮ್ಮ ಕಣ್ಣಿಗೆ ಕಾಣಿಸುತ್ತಿರುತ್ತದೆ. ಅವುಗಳನ್ನು ಮೊದಲು ಗುರುತಿಸಬೇಕು. ಕೆಟ್ಟ ಶಕ್ತಿ ಎನ್ನುವುದು ಮನೆಯಲ್ಲಿ ಬರುವ ಸಮಸ್ಯೆಗಳು ತುಂಬಾ ಇರುತ್ತವೆ. ಮನೆಯಲ್ಲಿ ದುಡ್ಡಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ ಬರುವುದು,
ಸ್ನೇಹಿತರು ಮೋಸ ಮಾಡುವುದು, ಮನೆಯಲ್ಲಿ ಕುಟುಂಬದವರ ಜೊತೆ ಯಾವಾಗಲೂ ಜಗಳ ಮಾಡುವುದು ಈ ತರಹದ ಸಮಸ್ಯೆಗಳು ಹೆಚ್ಚಾಗುತ್ತವೆ. ಮೊದಲು ಕೆಟ್ಟ ಶಕ್ತಿಯನ್ನು ಯಾವ ರೀತಿ ಗುರುತಿಸಬೇಕು ಎಂಬ ಐದು ಸೂಚನೆಗಳು ನಮ್ಮ ಮನೆಯಲ್ಲಿ ನಡೆಯುತ್ತಿದ್ದರೇ ಅದಕ್ಕೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ.
ಹಲ್ಲಿ: ಯಾರ ಮನೆಯಲ್ಲಿ ಹಲ್ಲಿಯು ಹೆಚ್ಚಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ದೈವಶಕ್ತಿ ಇದೆ ಅಥವಾ ಪಾಸಿಟಿವ್ ಎನರ್ಜಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಹಲ್ಲಿ ಮನೆಯಲ್ಲಿ ಯಾವಾಗಲೂ ಶಬ್ಧ ಮಾಡುತ್ತಿದ್ದರೇ ಸಾಕ್ಷಾತ್ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಿದ್ದಾಳೆಂದು ತಿಳಿದುಕೊಳ್ಳಬೇಕು. ಕೆಲವರ ಮನೆಯಲ್ಲಿ ಒಂದು ಹಲ್ಲಿಯೂ ಇರುವುದಿಲ್ಲ ಮತ್ತು ಕಾಣಿಸುವುದಿಲ್ಲ ಅಂತಹವರ ಮನೆಯಲ್ಲಿ ಕೆಟ್ಟ ಶಕ್ತಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಹಲ್ಲಿ ಮನೆಯಲ್ಲಿ ನೆಲೆಸಿ ಓಡಾಡುಕೊಂಡು ಶಬ್ಧ ಮಾಡುತ್ತಿದ್ದರೇ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯು ಓಡಾಡಿದ ರೀತಿ ಎಂದುಕೊಳ್ಳಬೇಕು. ಹಲ್ಲಿ ಮನೆಯಲ್ಲಿ ಓಡಾಡಿಕೊಂಡು ಇಲ್ಲವೆಂದಾದರೇ ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು.
ಕಾಗೆ: ನಾವು ಊಟ ಮಾಡುವಾಗ ಕಾಗೆ ನಮ್ಮ ಬಳಿ ಬಂದರೇ ಒಂದು ತುತ್ತು ಆಹಾರವನ್ನು ಹಾಕೇ ಹಾಕುತ್ತೀವಿ. ಹೀಗೆ ಊಟ ಕೊಡುವಾಗ ಅದು ಮುಟ್ಟಿಲ್ಲವೆಂದರೇ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬೇಕು. ಕೆಟ್ಟ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎಂದು ಅರ್ಥ ಮಾಡಿಕೊಳ್ಳಿ. ನಿಮ್ಮ ಮನೆ ಮತ್ತು ನಿಮ್ಮ ದೇಹದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾದರೇ ಮಾತ್ರ ಕಾಗೆಗೆ ಗೊತ್ತಾಗುತ್ತದೆ. ಅದಕ್ಕಾಗಿ ಕಾಗೆ ನೀವು ಏನೇ ಕೊಟ್ಟರೂ ಮುಟ್ಟುವುದಿಲ್ಲ. ಇದು ಕೂಡ ಒಂದು ಸೂಚನೆಯಾಗಿದೆ.
ಇದಕ್ಕೆ ಪರಿಹಾರವೇನೆಂದರೆ ಗೋಮೂತ್ರವನ್ನು ಸಂಗ್ರಹ ಮಾಡಿಕೊಂಡು ಎರಡು ಮೂರು ಇಟ್ಟುಕೊಂಡು ಈ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಿ. ನೀವು ನೆಲ ಹೊರಸುವಾಗ ಗೋಮೂತ್ರ ಸ್ವಲ್ಪ, ಕಲ್ಲು ಉಪ್ಪು ಸ್ವಲ್ಪ ಮತ್ತು ಚಿಟಿಕಿ ಅರಿಶಿಣವನ್ನು ಹಾಕಿಕೊಂಡು ಮನೆಯನ್ನು ಹೊರೆಸಿ ಮತ್ತು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಗೋಮೂತ್ರವನ್ನು ಪ್ರೋಕ್ಷಣೆ ಮಾಡಿಕೊಳ್ಳಿ. ಹೀಗೆ ವಾರಕ್ಕೆ ಮೂರು ಬಾರಿ ನೆಲವನ್ನು ಹೊರೆಸಿ ಮತ್ತು ಪ್ರೋಕ್ಷಣೆ ಮಾಡಿಕೊಳ್ಳಿ. ಈ ರೀತಿ ನೀವು ಮಾಡಿದ ನಂತರ ಕಾಗೆಗೆ ಊಟವನ್ನು ಹಾಕಿ ನೋಡಿ ನಿಮಗೆ ತಿಳಿಯುತ್ತದೆ.
ನಿಮ್ಮ ಮನೆಯ ಗಿಡಗಳು ಸತ್ತು ಹೋಗುತ್ತದೆ: ನಿಮ್ಮ ಮನೆಯಲ್ಲಿ ಬೆಳೆಸಿರುವ ದೈವ ಮೂಲಿಕೆಗಳಾದ ತುಳಸಿ, ದೊಡ್ಡಪತ್ರೆ, ವೀಳ್ಯೆದೆಲೆ, ಅಲೋವೆರಾ ಗಿಡಗಳು ಇದ್ದಕ್ಕಿದ್ದಾಗೆ ಸತ್ತು ಹೋದರೇ ಇದು ಕೂಡ ಒಂದು ಸೂಚನೆ ಎಂದು ಹೇಳಬಹುದು. ದೇವರಿಗೆ ಸಂಬಂಧಪಟ್ಟಂತಹ ಗಿಡಗಳು ಸತ್ತು ಹೋದರೇ ಈ ತರಹದ ಕೆಟ್ಟ ಶಕ್ತಿಗಳು ಇದೆ ಎಂದು ಅರ್ಥ ಮಾಡಿಕೊಳ್ಳಿ. ಮನೆಯನ್ನು ಎಷ್ಟೇ ನೀಟಾಗಿ ಇಟ್ಟುಕೊಂಡಿದ್ದರೂ ವಿಷ ಜಂತುಗಳು ಕಾಣಿಸುತ್ತವೆ. ಚೇಳು, ಜರಿ, ಚಿಕ್ಕ ಚಿಕ್ಕ ಹಾವುಗಳು ಕಾಣಿಸುತ್ತವೆ.
ಈ ರೀತಿ ಕಂಡರೆ ನಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಕಂಡರೆ ಮನೆಯನ್ನು ಗೋಮೂತ್ರ, ಕಲ್ಲು ಉಪ್ಪು ಮತ್ತು ಅರಿಶಿಣವನ್ನು ಹಾಕಿಕೊಂಡು ಮನೆಯನ್ನೆಲ್ಲಾ ಹೊರೆಸಬೇಕು ಮತ್ತು ಗೋಮೂತ್ರವನ್ನು ನೀವು ಕೂಡ ಪ್ರೋಕ್ಷಣೆ ಮಾಡಿಕೊಂಡರೇ ಸರಿ ಹೋಗುತ್ತದೆ. ಇದರ ಜೊತೆಗೆ ವಾರದಲ್ಲಿ ಒಮ್ಮೆಯಾದರೂ ಸಾಂಬ್ರಾಣಿಯನ್ನು ಹಾಕಬೇಕು. ಸಾಂಬ್ರಾಣಿಯ ಜೊತೆಗೆ ಬಿಳಿ ಸಾಸಿವೆಯನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಮನೆಯಲ್ಲೆಲ್ಲಾ ಸಾಂಬ್ರಾಣಿಯನ್ನು ಹಾಕಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿ ನೋಡಿ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೇ ಬೇಗನೇ ದೂರವಾಗುತ್ತದೆ.
ಕನಸಿನಲ್ಲಿ ಎತ್ತು ಬಂದರೇ: ನಿಮ್ಮ ಕನಸಿನಲ್ಲಿ ಹಸು ಕಾಣಿಸಿದರೇ ತುಂಬಾ ಒಳ್ಳೆಯದು. ಆದರೇ ನಿಮ್ಮ ಕನಸಿನಲ್ಲಿ ಎತ್ತು ಕಾಣಿಸಿ ನೀವು ಭಯಪಟ್ಟರೇ ಇದು ಕೂಡು ಒಂದು ಸೂಚನೆ ಎಂದು ಹೇಳಬಹುದು. ಈ ರೀತಿಯ ಕನಸು ಬಿದ್ದರೇ ಯಾವುದಾದರೂ ಶಕ್ತಿ ಮಂದಿರಕ್ಕೆ ಹೋಗಿ ಮೂರು ನಿಂಬೆಹಣ್ಣನ್ನು ತಂದು ನಿಮ್ಮ ಮನೆಯ ಬಾಗಿಲಿಗೆ ಕಟ್ಟಬೇಕು. ಈ ತರಹ ಕಟ್ಟಿದರೇ ಇನ್ನು ಮುಂದೆ ಇಂತಹ ಕೆಟ್ಟ ಕನಸುಗಳು ಬರುವುದಿಲ್ಲ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೂ ಬೇಗನೇ ಕಡಿಮೆಯಾಗುತ್ತದೆ.
ಮನಸ್ಸಿನಲ್ಲಿ ಭಯ ಮತ್ತು ಆಯಾಸ: ದೇಹವು ಆಯಾಸ ರೀತಿಯಾಗಿ ಹುಷಾರು ತಪ್ಪಿದಂಗೆ ಕಾಣುವ ರೀತಿ ಮತ್ತು ಎಷ್ಟು ತಿಂದರೂ ಸಣ್ಣವಾಗಿರುವುದು, ಇನ್ನು ಕೆಲವರು ಆರೋಗ್ಯವಾಗಿದ್ದರೂ ಮನಸ್ಸಿನಲ್ಲಿ ನೋವು, ತಳಮಳ ಈ ರೀತಿಯ ಸಮಸ್ಯೆ ಇದ್ದರೇ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಈ ರೀತಿಯ ಸಮಸ್ಯೆ ಇರುವಾಗ ಮೂರು ನಿಂಬೆಹಣ್ಣನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಮನೆಯಲ್ಲಿ ಯಾರಿಗೆ ಈ ತರಹದ ಸಮಸ್ಯೆ ಇರುತ್ತದೆಯೋ ಅಂತಹವರಿಗೆ ನಿಂಬೆ ಜ್ಯೂಸ್ ಮಾಡಿ ಅವರಿಗೆ ಕುಡಿಸಿ ಮತ್ತು ಸ್ನಾನ ಮಾಡುವಾಗ ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ ಕಲ್ಲು ಉಪ್ಪನ್ನು ಹಾಕಿಕೊಂಡು ಸ್ನಾನ ಮಾಡಿದರೇ ಒಳ್ಳೆಯದು. ಈ ರೀತಿಯ ಪರಿಹಾರಗಳನ್ನು ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ.