ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ಸದಾ ಸಂಪತ್ತು ನೆಲೆಸಬೇಕೆಂದರೆ ಮನೆಗೆ ಸಕಾರಾತ್ಮಕತೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಾಸ್ತ್ರದಲ್ಲಿ ಹಲವಾರು ಮಾರ್ಗಗಳ ಕುರಿತು ಹೇಳಲಾಗಿದೆ ನಾವು ತಿಳಿದು ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮನೆಯಿಂದ ಹೊರ ಹಾಕುತ್ತದೆ ಅಲ್ಲದೆ ಕೆಲವು ವಸ್ತುಗಳು ಅಲ್ಲದೆ ಕೆಲವು ವಸ್ತುಗಳು ಮನೆಯಲ್ಲಿ ಖಾಲಿ
ಇರಬಾರದು ಮನೆಯಲ್ಲಿ ಇವುಗಳನ್ನು ಕಾಲಿ ಇಡುವುದರಿಂದ ಅದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣದ ಸಮಸ್ಯೆಯನ್ನು ದುರಾದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ ಶಾಸ್ತ್ರದ ಪ್ರಕಾರ ಮನೆಯಲ್ಲಿ ನಾವು ಯಾವ ವಸ್ತುಗಳನ್ನು ಕಾಲಿ ಇಡಬಾರದು ಎಂಬುದನ್ನು ತಿಳಿಯೋಣ # ನಿಮ್ಮ ತಿಜೋರಿ ಮತ್ತು ಕೈಚೀಲಗಳನ್ನು ಎಂದಿಗೂ ಖಾಲಿ ಇಡಬಾರದು ಇವುಗಳಲ್ಲಿ ನೀವು ಒಂದಿಷ್ಟು ಹಣವನ್ನು ಯಾವಾಗಲೂ ಇಟ್ಟುಕೊಂಡಿರಬೇಕು ಶಾಸ್ತ್ರದ ಪ್ರಕಾರ ಇವುಗಳನ್ನು ನಾವು ಎಂದಿಗೂ ಖಾಲಿ ಬಿಡಬಾರದು ಶಾಸ್ತ್ರದ ಪ್ರಕಾರ ತಿಜೋರಿ ಅಥವಾ ಪರ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ದರೆ
ಲಕ್ಷ್ಮೀದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಅಂತಹ ಸಂದರ್ಭದಲ್ಲಿ ಲಕ್ಷ್ಮೀದೇವಿಯನ್ನು ಸಮಾಧಾನ ಪಡಿಸಲು ಗೋಮತಿ ಚಕ್ರ ಅರಿಶಿಣವನ್ನು ಮತ್ತು ಸ್ವಲ್ಪ ಹಣವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇವುಗಳಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ # ಶಾಸ್ತ್ರದ ಪ್ರಕಾರ ಖಾಲಿ ಬಕೆಟ್ ಅನ್ನು ಸ್ನಾನ ಗೃಹದಲ್ಲಿ ಇಡಬಾರದು ಆ ಬಕೆಟ್ ನಲ್ಲಿ ನೀರಿಲ್ಲದಿದ್ದಾಗ ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಯನ್ನು ಪ್ರವೇಶಿಸುತ್ತದೆ ಇದನ್ನು ಹೊರತುಪಡಿಸಿ ನೀವು ನಿಮ್ಮ ಬಾತ್ರೂಮ್‌ನಲ್ಲಿ ಮುರಿದ ಅಥವಾ ಕಪ್ಪು ಬಕೇಟನ್ನು ಎಂದಿಗೂ ಬಳಸಬೇಡಿ ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು
ಮತ್ತು ವಾಸ್ತುದೋಷಗಳು ಉಂಟಾಗುತ್ತವೆ. ಮನೆಯ ಅತ್ಯಂತ ಮಹತ್ವದ ಅಂಶವೆಂದರೆ ಅದು ಆ ಮನೆಯ ದೇವರ ಕೋಣೆ. ಶಾಸ್ತ್ರವು ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಲಶವನ್ನು ಇಡಬಾರದು. ಕಳಸದಲ್ಲಿ ಸ್ವಲ್ಪ ನೀರನ್ನು ಹಾಕಿಡಿ ಖಾಲಿ ಕಲಶವನ್ನು ದೇವರ ಕೋಣೆಯಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು. ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಕುಟುಂಬದ ಮೇಲೆ ದೇವರ ಅನುಗ್ರಹವಿರುತ್ತದೆ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿಯೂ ನೆಲೆಸುತ್ತದೆ.
ಅನ್ನಪೂರ್ಣ ದೇವಿಯು ಅಡುಗೆ ಮನೆಯಲ್ಲಿ ಇರಿಸಲಾಗಿರುವ ಧಾನ್ಯದ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳೆ. ಅಡುಗೆ ಮನೆಯಲ್ಲಿ ನಾವು ಧಾನ್ಯಗಳನ್ನು ಹಾಕಿಡುವ ಪಾತ್ರೆಯನ್ನು ಖಾಲಿ ಬಿಡಬಾರದು. ಇದರಿಂದ ಮನೆಯಲ್ಲಿ ದುರಾದೃಷ್ಟವೂ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ.
ಅಡುಗೆ ಮನೆಯ ಮಸಾಲೆಗಳಲ್ಲಿ ಒಂದಾದ ಅರಿಶಿನವು ಬಹುತೇಕ ಎಲ್ಲದರಲ್ಲೂ ಬಳಸಲಾಗುವ ವಸ್ತುವಾಗಿದೆ. ಮತ್ತೊಂದೆಡೆ, ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದರೆ, ಅರಿಶಿನದ ಸಂಬಂಧವು ಗುರು ಗ್ರಹ ದೊಂದಿಗೆ ಇದೇ ಎಂದು ನಂಬಲಾಗಿದೆ. ನಿಮ್ಮ ಅಡುಗೆ ಮನೆಯಲ್ಲಿ ಅರಿಶಿನ ಖಾಲಿಯಾದರೆ, ಅದು ಗುರುದೋಷದಂತೆ.
ಗುರುವಿನ ದೋಷದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ಮತ್ತು ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿನ ಅರಿಶಿನ ಖಾಲಿಯಾಗುತ್ತಿದೆ ಎಂದಾದಲ್ಲಿ ಅದಕ್ಕೂ ಮುನ್ನ ಹೊಸ ಅರಿಶಿನ ತಂದು ಅರಿಶಿಣದ ಡಬ್ಬ ತುಂಬಿಸಿ.
ಮನೆಯಲ್ಲಿ ಅರಿಶಿನದ ಕೊರತೆಯು ಸಂಪತ್ತು ಮತ್ತು ಹಣದ ಕೊರತೆಯನ್ನು ಸೂಚಿಸುತ್ತದೆ ಮತ್ತು ಶುಭ ಕಾರ್ಯಗಳಲ್ಲಿ ಅಡಚಣೆಯನ್ನು ಸೂಚಿಸುತ್ತದೆ. ಅರಿಶಿನವನ್ನು ಯಾರಿಂದಲೂ ಕೇಳಬೇಡಿ ಅಥವಾ ಯಾರಿಗೂ ಕೊಡಬೇಡಿ ಎನ್ನುವುದನ್ನು ನೆನಪಿನಲ್ಲಿಡಿ.
ಅಡುಗೆ ಮನೆಯಲ್ಲಿ ಉಪ್ಪು ಇಲ್ಲದಿದ್ದರೆ ಆಹಾರವನ್ನು ಬೇಯಿಸಲು ಸಾಧ್ಯವಿಲ್ಲ. ಕೆಲವರು ಮೊದಲು ಡಬ್ಬಿಯಲ್ಲಿ ತುಂಬಿದ ಉಪ್ಪನ್ನು ಮುಗಿಸಿ ನಂತರ ಅದರಲ್ಲಿ ಹೊಸ ಉಪ್ಪನ್ನು ತುಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪ್ಪನ್ನು ರಾಹುವಿನ ವಸ್ತು ಎಂದು ಪರಿಗಣಿಸಲಾಗುತ್ತದೆ. ಅಡುಗೆ ಮನೆಯಲ್ಲಿ ಉಪ್ಪು ಖಾಲಿ ಆದರೆ, ರಾಹುವಿನ ದುಷ್ಟ ಕಣ್ಣು ನಿಮ್ಮ ಮೇಲೆ ಬೀಳುತ್ತದೆ ಮತ್ತು ನಂತರ ನಿಮ್ಮ ಕೆಲಸವು ಪ್ರಾರಂಭಿಸುತ್ತದೆ ಮತ್ತು ನೀವು ಆರ್ಥಿಕ ಬಿಕಟ್ಟನ್ನು ಎದುರಿಸಬೇಕಾಗುತ್ತದೆ.
ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿಯನ್ನು ಎಂದಿಗೂ ಖಾಲಿ ಬಿಡಬೇಡಿ ಎನ್ನುವುದನ್ನು ನೆನಪಿನಲ್ಲಿಡಿ. ಅದರ ಜೊತೆಗೆ, ಇನ್ನೊಬ್ಬರ ಮನೆಯಿಂದ ಉಪ್ಪು ಕೇಳಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ವಂತ ಮನೆಯ ಅಡುಗೆ ಮನೆ ಯಾವಾಗಲೂ ಖಾಲಿ ಆಗಿರುತ್ತದೆ. ಅಂದರೆ ಹಣಕಾಸಿನ ಸಮಸ್ಯೆ ನಿಮ್ಮನ್ನು ಸದಾ ಕಾಡುತ್ತದೆ.
ಕುಂಕುಮ ಹೆಣ್ಣಿನ ಸೌಭಾಗ್ಯದ ಸಂಕೇತ ಹಾಗಾಗಿ ಕುಂಕುಮ ಎಂದಿಗೂ ಖಾಲಿಯಾಗಬಾರದು. ಮನೆಯಲ್ಲಿ ಸದಾ ಅರಿಶಿನ-ಕುಂಕುಮ ಇರುವುದು, ಸಕಾರಾತ್ಮಕತೆಯ, ಮಂಗಳಕರವಾದ ಸಂಕೇತವಾಗಿರುತ್ತದೆ. ಹಾಗಾಗಿ ಅರಿಶಿನ – ಕುಂಕುಮ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಸ್ನೇಹಿತರೆ ಇವತ್ತಿನ ಈ ಸಂಚಿಕೆ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು