P ಹೆಸರಿನ ಜನರ ಬಗ್ಗೆ ಇರುವ 15 ಅಂತಹ ರಹಸ್ಯ ವಿಷಯಗಳು ನಿಮಗೆ ಗೊತ್ತಿಲ್ಲದೇ ಇರಬಹುದು P ಹೆಸರಿನ ಜನರು ಹೇಗಿರುತ್ತಾರೆ?

ನಾವು ಈ ಲೇಖನದಲ್ಲಿ P ಹೆಸರಿನ ಜನರ ಬಗ್ಗೆ ಇರುವ 15 ರಹಸ್ಯ ವಿಷಯಗಳು ಯಾವುದು ಎಂದು ತಿಳಿಯೋಣ .ಯಾರ ಹೆಸರು P ಅಕ್ಷರದಿಂದ ಶುರುವಾಗುತ್ತದೆಯೋ, ಅವರ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವರ ಆಚಾರ , ವಿಚಾರ , ವ್ಯವಹಾರ , ಶುಭ ಬಣ್ಣ , ಶುಭ ಸಂಖ್ಯೆ ಮತ್ತು ಶುಭ ದಿನದ ಬಗ್ಗೆ ತಿಳಿಸಲಾಗಿದೆ . ವಿವಾಹ ಯೋಗದಲ್ಲಿ ಇವರಲ್ಲಿ ಕಂಡುಬರುವ ಕೆಲವು ಕೊರತೆಗಳು , ವಿಶೇಷತೆಯ ಬಗ್ಗೆ ತಿಳಿಸಲಾಗಿದೆ . ಜೊತೆಗೆ ಯಾವ ಯಾವ ವರ್ಷದಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ ಎಂದು ತಿಳಿಸಲಾಗಿದೆ . ಇದು ಇವರ ವೃತ್ತಿಗೂ ಕೂಡ ಸಹಾಯ ಮಾಡುತ್ತದೆ .

ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಯ ಹೆಸರು “ಪಿ ” ಅಕ್ಷರದಿಂದ ಶುರುವಾಗುತ್ತದೆಯೋ , ಈ ಜನರು ಎಷ್ಟು ಭಿನ್ನವಾಗಿ ಇರುತ್ತಾರೆ ಎಂದರೆ, ಇವರ ರೀತಿ ಬೇರೆ ಯಾರು ಇರಲು ಸಾಧ್ಯವಿಲ್ಲ . ಇವರು ಜಗತ್ತಿನಲ್ಲಿ ಭಿನ್ನವಾದ ಯೋಚನೆಯನ್ನು ಹೊಂದಿರುತ್ತಾರೆ . ಜೊತೆಗೆ ಅವರ ಕೆಲಸ ಕಾರ್ಯ ಮಾಡುವ ಶೈಲಿ ಭಿನ್ನವಾಗಿರುತ್ತದೆ . ಇದು ಎಲ್ಲರನ್ನೂ ಆಕರ್ಷಣೆ ಮಾಡುತ್ತದೆ . ಜನರು ಇವರ ವ್ಯಕ್ತಿತ್ವದತ್ತ ಬೇಗ ಆಕರ್ಷಣೆಗೆ ಒಳಗಾಗುತ್ತಾರೆ . ಇವರು ಎಲ್ಲಾ ಕಡೆ ಆಕರ್ಷಕ ಕೇಂದ್ರ ಬಿಂದು ಆಗಿರುತ್ತಾರೆ .

ಬೇರೆ ಜನರ ಜೊತೆ ಹೊಂದಿಕೊಳ್ಳಲು ತುಂಬಾ ಇಷ್ಟ ಪಡುತ್ತಾರೆ . ಇವರು ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ಮಾಡುವುದರ ಜೊತೆಗೆ , ಶ್ರಮಜೀವಿಯು ಆಗಿರುತ್ತಾರೆ . ಆತ್ಮ ನಿರ್ಬಲ ಮತ್ತು ಸಾಹಸಿಯಾಗುವುದರ ಜೊತೆಗೆ , ನಿಸ್ವಾರ್ಥಿಗಳು ಆಗಿರುತ್ತಾರೆ . ಈ ಜನರು ಯಾವತ್ತಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ . ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದರಲ್ಲಿ ನೂರು ಪರ್ಸೆಂಟ್ ಪ್ರಯತ್ನ ಹಾಕುತ್ತಾರೆ. ಜೀವನದಲ್ಲಿ ಹೇಗೆ ಯಶಸ್ಸು ಪಡೆಯಬೇಕೆಂದು ಇವರು ಯೋಚನೆ ಮಾಡುತ್ತಾರೆ .ಅಥವಾ ಜೀವನದಲ್ಲಿ ಹೇಗೆ ಮುಂದೆ ಸಾಗುವುದು ಎಂದು ಯೋಚನೆ ಮಾಡುತ್ತಾರೆ .

ಈ ಜನರು ಎಲ್ಲಾ ಜನರ ವಿಚಾರಗಳಿಗೆ , ಅನಿಸಿಕೆಗಳಿಗೆ ಗೌರವ ಕೊಡುತ್ತಾರೆ . ಒಂದು ವೇಳೆ ಯಾವುದಾದರೂ ವ್ಯಕ್ತಿ ಕೆಟ್ಟ ಕಾರ್ಯಗಳನ್ನು ಮಾಡುವುದನ್ನು ಇವರು ನೋಡಿದರೆ , ಅದನ್ನು ಇವರಿಂದ ಸಹಿಸಲು ಸಾಧ್ಯವಾಗುವುದಿಲ್ಲ . ತನ್ನ ಹತ್ತಿರ ಇರುವ ಜನರ ಬಗ್ಗೆ ಕಾಳಜಿಯನ್ನು ವಹಿಸಲು ಜನರನ್ನು ತಮ್ಮ ಬಳಿ ಕರೆದುಕೊಂಡು ಹೋಗುವ ಗುಣ ಇವರಲ್ಲಿ ಇರುತ್ತದೆ . ಹೃದಯದಿಂದ ಇವರು ತುಂಬಾ ಶುದ್ಧವಾಗಿ ಇರುತ್ತಾರೆ . ತಮ್ಮ ರೀತಿಯಲ್ಲಿ ಜನರೊಂದಿಗೆ ಇವರು ತುಂಬಾ ಹೊಂದಿಕೊಂಡು ಇರುತ್ತಾರೆ .

ಯಾರ ಹೆಸರು P ಅಕ್ಷರದಿಂದ ಶುರುವಾಗುತ್ತದೆಯೇ , ಇವರಿಗಾಗಿ ತಮ್ಮ ಗೌರವ – ಘನತೆ ಹೆಚ್ಚಾಗಿರುತ್ತದೆ . ಇದಕ್ಕಾಗಿ ಇವರು ಏನೇ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ . ತಮಗೆ ನಷ್ಟ ಆಗುವ ಕಾರ್ಯವನ್ನು ಮಾಡಲು ಎಂದಿಗೂ ಇಷ್ಟ ಪಡುವುದಿಲ್ಲ . ಇವರ ಜೀವನದ ಮತ್ತೊಂದು ಸತ್ಯ ಏನಿದೆ ಎಂದರೆ , ಇವರು ಬಯಸುವುದು ಒಂದು ಯೋಚನೆ ಮಾಡುವುದು ಇನ್ನೊಂದು ಆಗಿರುತ್ತದೆ . P ಹೆಸರಿನ ಜನರು ಯಾವತ್ತಿಗೂ ಯಾವುದೋ ಒಂದು ಸಮಸ್ಯೆಯಲ್ಲಿ ಸಿಲುಕಿ ಕೊಂಡಿರುತ್ತಾರೆ . ಏಕೆಂದರೆ ಇವರಲ್ಲಿ ಭಿನ್ನವಾದ ವಿಚಾರಗಳು ಇರುತ್ತದೆ . ಅವುಗಳ ಮೇಲೆಯೇ ನಡೆಯುತ್ತಾ ಇರುತ್ತಾರೆ .

ಆ ವಿಚಾರಗಳು ಬೇರೆಯವರಿಗೆ ಇಷ್ಟವಾಗಲಿ ಅಥವಾ ಬಿಡಲಿ , ಅದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ . ಕೆಲವರು ಇವರನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಇವರಿಗೆ ಭಯ ಪಡುತ್ತಾರೆ . ಏಕೆಂದರೆ ಇವರು ತಮ್ಮ ಗೌರವ ಘನತೆಯ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ . ಯಾವ ವ್ಯಕ್ತಿಯ ಹೆಸರು ಪಿ ಅಕ್ಷರದಿಂದ ಶುರುವಾಗುತ್ತದೆಯೋ , ಇವರು ಸಾಮಾನ್ಯವಾಗಿ ಮನಸ್ಸಿನಲ್ಲಿ ಅಶಾಂತಿಯಿಂದ ಇರುತ್ತಾರೆ . ಈ ಹೆಸರಿನ ಜನರಲ್ಲಿ ಯಾವತ್ತಿಗೂ ಏರುಪೇರುಗಳು ನಡೆಯುತ್ತಲೇ ಇರುತ್ತವೆ .

ಆದರೆ ಇವರ ಬಾಹ್ಯ ಸ್ವಭಾವದ ಕಾರಣದಿಂದಾಗಿ ಇವರ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ . ಯಾಕೆಂದರೆ ಇವರಲ್ಲಿ ಇರುವ ಮತ್ತೊಂದು ವಿಶೇಷವಾದ ಗುಣ ಏನೆಂದರೆ , ಇವರ ಮನಸ್ಸಿನಲ್ಲಿ ಏನೇ ನಡೆಯುತ್ತಿದ್ದರು, ಜನರ ಮುಂದೆ ಇವರ ಮುಖ ಹಸನ್ಮುಖವಾಗಿ ಇರುತ್ತದೆ . ಇವರು ತಮ್ಮ ಮನಸ್ಸಿನಲ್ಲಿ ಇರುವ ಮಾತುಗಳನ್ನು ಏಕಾಏಕಿ ಯಾರೊಂದಿಗೂ ಇವರು ಹಂಚಿಕೊಳ್ಳುವುದಿಲ್ಲ . ಇವರ ಮನಸ್ಥಿತಿ ಏನೇ ಇದ್ದರೂ ಕುಟುಂಬದವರನ್ನು ಖುಷಿಯಾಗಿ ಇಡಲು ಪ್ರಯತ್ನಿಸುತ್ತಾರೆ . ಇವರ ವಿಚಾರದಲ್ಲೂ ನೀವು ಪವಿತ್ರತೆಯನ್ನು ನೋಡಬಹುದು .

ಈ ಜನರು ಈಶ್ವರನ ಮೇಲೆ ನಂಬಿಕೆಯನ್ನು ಇಡುತ್ತಾರೆ . ಈ ಜನರ ಗುಣದಲ್ಲಿ ಆಸ್ತಿಕ ಪ್ರವರ್ತಿಯನ್ನು ನೋಡಬಹುದು . ತಮ್ಮ ಭವಿಷ್ಯದ ಬಗ್ಗೆ ನಿರಂತರವಾಗಿ ವಿಚಾರವನ್ನು ಮಾಡುತ್ತಿರುತ್ತಾರೆ . ಮತ್ತು ಶಾಂತಿಯಿಂದ ಜೀವನ ನಡೆಸಲು ಇಷ್ಟಪಡುತ್ತಾರೆ . ಈ ಹೆಸರಿನ ಜನರು ಯಾವತ್ತಿಗೂ ಮುಚ್ಚು ಮರೆ ಮಾಡುವುದಿಲ್ಲ . ಇವರು ಬೇರೆಯವರಿಂದ ಅಥವಾ ತಾವೇ ಮಾಡಿದರು ಆ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಇರಬೇಕು . ಈ ಜನರು ಆಕರ್ಷಕ ಮುಖವನ್ನು ಹೊಂದಿರುತ್ತಾರೆ .

ಇವರ ಇದೇ ಕಾರಣದಿಂದಾಗಿ ಜನರು ಅವರತ್ತ ಬೇಗ ಆಕರ್ಷಣೆ ಹೊಂದುತ್ತಾರೆ . ಪ್ರೀತಿ ಎಂಬ ಶಬ್ದದ ಮೇಲೆ ಇವರಿಗೆ ಅಷ್ಟೊಂದು ನಂಬಿಕೆ ಇರುವುದಿಲ್ಲ . ಇವರ ಮನಸ್ಸಿನ ಇಚ್ಛೆ ಸುಂದರವಾದ ಸಂಗಾತಿ ಸಿಗಲಿ ಎಂದು ಬಯಸುತ್ತಾರೆ . P ಅಕ್ಷರದ ಜನರ ಮತ್ತೊಂದು ವಿಶೇಷತೆ ಏನೆಂದರೆ , ಇವರು ಯಾರನ್ನು ಮದುವೆಯಾಗುತ್ತಾರೋ, ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ .ಇನ್ನೂ ಪಿ ಅಕ್ಷರದ ಜನರ ಕೆಲವೊಂದು ಕೊರತೆಗಳನ್ನು ತಿಳಿದುಕೊಳ್ಳೋಣ .

ಇವರ ವಿಚಾರವನ್ನು ಜನರ ಮೇಲೆ ಹೇರಲು ಪ್ರಯತ್ನ ಮಾಡುತ್ತಿರುತ್ತಾರೆ . ಇದೇ ಒಂದು ಕಾರಣದಿಂದಾಗಿ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ .ಪಿ ಹೆಸರಿನ ಜನರಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ . ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಗೊಂದಲದಲ್ಲಿ ಇರುತ್ತಾರೆ . ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ಮನಸ್ಸಿನಲ್ಲಿಯೇ ಮುಚ್ಚಿಡುವುದರಿಂದ ಹಲವಾರು ಬಾರಿ ಚಿಂತೆಗೆ ಒಳಗಾಗುತ್ತಾರೆ . ಶಾಸ್ತ್ರಗಳ ಅನುಸಾರವಾಗಿ ಪಿ ಹೆಸರಿನ ಜನರಿಗೆ ಹಠವಾದಿ ಎಂದು ಕರೆಯುತ್ತಾರೆ .

ಯಾಕೆಂದರೆ ಇವರು ತುಂಬಾ ಹಠ ವಾದಿಗಳು ಆಗಿರುತ್ತಾರೆ . ಒಂದು ಬಾರಿ ಇವರ ದೃಷ್ಟಿಯಲ್ಲಿ ಯಾರಾದರೂ ಸಣ್ಣವರು ಆದರೆ , ಮುಂದಿರುವ ವ್ಯಕ್ತಿ ಸಾವಿರಾರು ಪ್ರಯತ್ನಗಳನ್ನು ಮಾಡಿದರು ಕೂಡ ಅವರನ್ನು ಇವರು ನೋಡುವುದಿಲ್ಲ . ಇವರ ವೃತ್ತಿಯ ಬಗ್ಗೆ ನೋಡುವುದಾದರೆ , ಲೇಖನ , ಪತ್ರ ಕಾರ , ಕಲಾಕಾರ , ಪೊಲೀಸ್ , ಇಂತಹ ಕಾರ್ಯಗಳಲ್ಲಿ ಇವರನ್ನು ನೋಡಬಹುದು . ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಇವರಿಗೆ ಬೇಗ ಯಶಸ್ಸು ದೊರೆಯುತ್ತದೆ . ಪಿ ಹೆಸರಿನ ಜನರ ಶುಭ ಬಣ್ಣ ಯಾವುದು ಎಂದರೆ , ಹಸಿರು, ಕೆಂಪು, ಗುಲಾಬಿ ಈ ಬಣ್ಣಗಳು ಶುಭ ಬಣ್ಣ ಆಗಿದೆ .ಶುಭ ಸಂಖ್ಯೆಗಳು ಒಂದು ,

ಮೂರು, ಏಳು, ಒಂಬತ್ತು , ಎಂದು ತಿಳಿಸಲಾಗಿದೆ . ಶುಭ ವಾರಗಳು ಸೋಮವಾರ , ಗುರುವಾರ ಮತ್ತು ಶನಿವಾರ ಎಂದು ತಿಳಿಸಲಾಗಿದೆ . ಇನ್ನು ಯಾವ ವರ್ಷದಲ್ಲಿ ಪಿ ಹೆಸರಿನ ಜನರಿಗೆ ಯಶಸ್ಸು ದೊರೆಯುತ್ತದೆ ಎಂದರೆ , ಮೊದಲನೆಯದಾಗಿ , ಪಿ ಹೆಸರಿನ ಜನರು ತಮ್ಮ 19ನೇ ವಯಸ್ಸಿನಲ್ಲಿ ಯಶಸ್ಸನ್ನು ಕಾಣುತ್ತಾರೆ . ಎರಡನೆಯದಾಗಿ , 22ನೇ ವಯಸ್ಸಿನಲ್ಲಿ ಯಶಸ್ಸನ್ನು ಕಾಣುತ್ತಾರೆ . ಮೂರನೆಯದಾಗಿ 25ನೇ ವಯಸ್ಸು ಇವರಿಗೆ ಶುಭ ಆಗಿರುತ್ತದೆ . ನಾಲ್ಕನೆಯದಾಗಿ 27ನೇ ವಯಸ್ಸು ಆಗಿರುತ್ತದೆ . ತಿಳಿಸಿರುವ ವರ್ಷಗಳಲ್ಲಿ ನೀವು ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು . ವಿವಾಹ ಯೋಗದ ಬಗ್ಗೆ ನೋಡುವುದಾದರೆ , ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಪಿ ಹೆಸರಿನ ಜನರ ವಿವಾಹ ವರ್ಷವು 25 , 26 , 28 ಮತ್ತು 30ನೇ ವಯಸ್ಸು ಎಂದು ತಿಳಿಯಲಾಗಿದೆ .

Leave a Comment