ಅಕ್ಕಿ

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರಿಗೆ ಸೌತೆಕಾಯಿಯ ಬೀಜವನ್ನು ಅರೆದು ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಶಾಂತವಾಗುವುದು.

ಅಕ್ಕಿಯ ಗಂಜಿಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿಯು ನಿಲ್ಲುತ್ತದೆ.

ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಫೇಸ್ ಪ್ಯಾಕ್ ತರಹ ದಿನವು ಹಚ್ಚಿಕೊಂಡರೆ ಮುಖವು ಶುಭ್ರವಾಗಿ ಕಾಂತಿಯುಕ್ತವಾಗುವುದು.

ಅಕ್ಕಿಯನ್ನು ಬಸಿದ ಗಂಜಿಯಲ್ಲಿ ವಾಯುವಿಳಂಗ ಶುಂಠಿ ಮೆಣಸು ಹಿಪ್ಪಲಿ ಇವುಗಳ ಚೂರ್ಣವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಯು ಶುದ್ಧವಾಗುವುದು.

ಅಕ್ಕಿಯನ್ನು ತೊಳೆದ ನೀರಿನಿಂದ ಮುಖ ತೊಳೆಯುವುದರಿಂದ ಬೆವರುಸಾಲೆಗಳು ಮಾಯವಾಗುವವು.

ಅಕ್ಕಿಯನ್ನು ತೊಳೆದ ನೀರಿನಲ್ಲಿ ಒಂದು ಚಮಚ ಕೊತ್ತಂಬರಿ ಬೀಜದ ಪುಡಿ ಮತ್ತು ಒಂದು ಚಮಚ ಕಲ್ಲುಸಕ್ಕರೆಯನ್ನು ಸೇರಿಸಿ ಕುಡಿದರೆ ಗರ್ಭಿಣಿಯರಿಗೆ ಬರುವ ವಾಕರಿಕೆ ಕಡಿಮೆಯಾಗುವುದು.

ಒಂದು ಲೋಟ ಅಕ್ಕಿ ತೊಳೆದ ನೀರಿಗೆ ಅರ್ಧ ಚಮಚ ಜೇನುತುಪ್ಪದೊಡನೆ ದಿನವೂ ತೆಗೆದುಕೊಳ್ಳುತ್ತಾ ಬಂದರೆ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುವುದು.

ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಹೊಟ್ಟೆಯ ಉರಿ, ದಣಿವು, ಬಾಯಾರಿಕೆಯನ್ನು ನೀಗಿಸುವಲ್ಲಿ ಅಕ್ಕಿಗಂಜಿಯಷ್ಟು ಉತ್ತಮವಾದದ್ದು ಸರಳವಾದದ್ದು ಮತ್ತೊಂದಿಲ್ಲ.

ಬ್ರೌನ್ ರೈಸ್ ಉಪಯೋಗಿಸುವುದರಿಂದ ಪ್ರಯಾಂಕ್ರಿಯಾಟಿಕ್ ಕ್ಯಾನ್ಸರ್, ಗ್ಯಾಸ್ಟ್ರಿಕ್ ಕ್ಯಾನ್ಸರ್ ಹೀಗೆ ಹಲವು ಬಗೆಯ ಕ್ಯಾನ್ಸರ್ಗಳನ್ನು ತಡೆಗಟ್ಟಬಹುದು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಬ್ರೌನ್ ರೈಸ್ ಉಪಯೋಗಿಸುವುದು ಮಧುಮೇಹಿಗಳಿಗೆ (ಡಯಾಬಿಟಿಸ್ ರೋಗಿಗಳಿಗೆ) ಉತ್ತಮ. ಇದರಲ್ಲಿ ಸಕ್ಕರೆಯ ಅಂಶವು ಸಾಮಾನ್ಯವಾಗಿ ಉಪಯೋಗಿಸುವ ಬಿಳಿ ಅಕ್ಕಿಗಿಂತ ನಿಧಾನವಾಗಿ ಬಿಡುಗಡೆಯಾಗುತ್ತದೆ.

ತೂಕ ಇಳಿಕೆಯಿಂದ ಚಿಂತೆಗೊಳಗಾದವರು ಅಕ್ಕಿಯನ್ನು ಹೆಚ್ಚು ಆಹಾರದಲ್ಲಿ ಉಪಯೋಗಿಸುವುದರಿಂದ ತಮ್ಮ ತೂಕವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದಾಗಿದೆ.

ಬ್ರೌನ್ ರೈಸ್ ಉಪಯೋಗಿಸುವುದು ಹೃದಯದ ಕಾಯಿಲೆಗಳಿಗೆ ಉತ್ತಮವಾಗಿದೆ.

ಅಕ್ಕಿಯು ಪ್ರುಮುಖವಾಗಿ ಕಾರ್ಬೋಹೈಡ್ರೇಟ್ನಿಂದ ಸಂಮೃದ್ಧವಾಗಿದ್ದು ಶಕ್ತಿಯ ಆಗರವಾಗಿದೆ.

ಅಕ್ಕಿಯಲ್ಲಿ ವಿಟಮಿನ್ ಬಿ ಮ್ಯಾಂಗನೀಸ್ ಸೆಲೆನಿಯಂ ಮೆಗ್ನೀಷಿಯಂ ಮತ್ತು ಇದಲ್ಲದೇ ಅಲ್ವ ಪ್ರಮಾಣದಲ್ಲಿ ಕಬ್ಬಿಣದ ಸತ್ತ್ವ ಮತ್ತು ಜಿಂಕ್ ಕೂಡ ಒಳಗೊಂಡಿದೆ. ಇವೆಲ್ಲವೂ ದೇಹಕ್ಕೆ ಉತ್ತಮ ಪೋಷಣೆಯನ್ನು ಪದಗಿಸುತ್ತವೆ.

Leave a Comment