ಆರೋಗ್ಯ ಭಾಗ್ಯಕ್ಕೆ ನಾಳೆಯ ದಿನ ತಪ್ಪದೆ ಈ ದಾನಗಳನ್ನು ಮಾಡಿ ಈ ಶ್ಲೋಕ ತಪ್ಪದೆ ಪಾರಾಯಣ ಮಾಡಿ

ನಮಸ್ಕಾರ ಸ್ನೇಹಿತರೆ, ಈ ದಿನ ವಿಶೇಷ ಯೋಗದಲ್ಲಿ ಬಂದಿರುವಂತಹ ಯೋಗಿನಿ ಏಕಾದಶಿಯ ಬಗ್ಗೆ ಈಗಾಗಲೇ ತಿಳಿಸಿ ಕೊಟ್ಟಿರುವೆ ನಾಳೆ ನಿಮ್ಮ ಆರೋಗ್ಯ ಒಳ್ಳೆಯದಾಗಿರಬೇಕು ಅಂದರೆ ಕೆಲವು ದಾನಗಳನ್ನು ಹೇಳ್ತಿನಿ ಇಂದು ಈ ದಿವಸ ತಪ್ಪದೆ ದಾನವನ್ನು ಮಾಡಿ ಮಕ್ಕಳ ಆರೋಗ್ಯ ನಿಮ್ಮ ಆರೋಗ್ಯ ಪತಿಯ ಆರೋಗ್ಯ ಎಲ್ಲರ ಮನೆಯಲ್ಲಿ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ನೀವು ದಾನವನ್ನು ಮಾಡಿದಾಗ ಅಕಸ್ಮಾತ್ ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಹೆಸರಿನಲ್ಲಿ ದಾನವನ್ನು ಮಾಡಿ ಒಂದಿಷ್ಟು ಶ್ಲೋಕವನ್ನು ಹೇಳಿಕೊಡ್ತೀನಿ ತಪ್ಪದೆ ಆ ಶ್ಲೋಕವನ್ನು ಹೇಳಿ ನಾಳೆ

ಈ ದಿವಸ ಎಷ್ಟೋ ಜನರಿಗೆ ಚರ್ಮ ರೋಗ ಅಂತ ಹೇಳ್ತಿರ್ತೀರಿ ನಾನಾತರದ ರೋಗಗಳಿಂದ ಬಳಲುತ್ತಿದ್ದರೆ ನಿಮ್ಮಲ್ಲಿ ಆರೋಗ್ಯ ಬಾಗ್ಯ ದೊರಕ್ತದ ಈಗಾಗಲೇ ನಾನು ಯೋಗಿನಿ ಏಕಾದಶಿಯ ಬಗ್ಗೆ ಪುರಾಣದಲ್ಲಿ ಬರುವಂತಹ ಕಥೆಯನ್ನು ಕೂಡ ತಿಳಿಸಿ ಕೊಟ್ಟಿದ್ದೇನೆ ಆ ಕಥೆಯನ್ನ ನೀವು ಲಕ್ಷ್ಯ ಕೊಟ್ಟು ಕೇಳಿದರೆ ಅರ್ಥ ಆಗ್ತದ ಅಂದ್ರೆ ಕೊನೆಯಲ್ಲಿ ಅವ್ನಿಗೆ ಕುಬೇರನಿಂದ ಶಾಪ ಪಡೆಯುತ್ತಾನೆ ಕುಷ್ಟ ರೋಗಿಯಾಗು ಭೂಮಿಯಲ್ಲಿ ನಾನಾ ಕಷ್ಟಗಳಿಂದ ನೀನು ನರಳುವಂತಾಗಲಿ ಎಂದು ಅವನಿಗೆ ಶಾಪವನ್ನು ಕೊಡುತ್ತಾನೆ

ಆ ಶಾಪವನ್ನು ಪಡೆದಂತಹ ಯಕ್ಷ ಆತ ತನ್ನ ತಪ್ಪು ಯಾವುದರಿಂದ ಆಗಿದೆ ಎಂದು ಯೋಚನೆ ಮಾಡ್ತಾ ಕಾಡಲ್ಲಿ ತಿರುಗುತ್ತಾ ಇರ್ತಾನೆ ಅಂತಹ ಸಂದರ್ಭದಲ್ಲಿ ಅವನಿಗೆ ಅರಿವಾಗುತ್ತದೆ ಏನೆಂದರೆ ನಾನು ಶಿವನ ಪೂಜೆಗೆ ಭಂಗ ತಂದಿರುವುದಕ್ಕೆ ನನಗೆ ಈ ರೀತಿ ಆಗಿದೆ ಎಂದು ಇವನ ಪೂಜೆಯನ್ನು ಮಾಡಬೇಕು ಅಂತ ಪೂಜೆಯನ್ನು ಮಾಡಲು ಶುರು ಮಾಡುತ್ತಾನೆ ಆತ ತನ್ನ ತಪ್ಪು ಅನ್ನ ಒಪ್ಕೊಂಡ ತಾನು ಮಾಡಿದ ತಪ್ಪಿಗಾಗಿ ಈ ರೀತಿಯಾಗಿದೆ ಎಂದು ಮನುಷ್ಯ ತನ್ನ ತಪ್ಪನ್ನ ಅರ್ಥ ಮಾಡ್ಕೊಂಡು ನಾವು ಎಲ್ಲಿ ತಪ್ಪು ಮಾಡಿದಿವಿ ಎಂದು ಸರಿಯಾಗಿ ಅರ್ಥ ಮಾಡ್ಕೊಂಡ್ರೆ ನಮ್ಮ ಜೀವನ ಕೂಡ ಸಾರ್ಥಕ ಆಗುತ್ತದೆ.

ಇಲ್ಲಿ ಕೂಡ ಅಷ್ಟೇ ಆ ಯಕ್ಷ ತನ್ನ ತಪ್ಪನ್ನ ಅರ್ಥ ಮಾಡ್ಕೊಂಡು ಶಿವನ ಪೂಜೆ ಮಾಡಲು ಶುರು ಮಾಡುತ್ತಾನೆ. ಶಿವ ಎಷ್ಟು ಕರುಣಾಮಯಿ ಅಂತ ಅಂದರೆ ಆತ ಶಿವನ ಪೂಜೆಯನ್ನು ಮಾಡಲು ಪ್ರಾರಂಭಿಸಿದ ಮೇಲೆ ಆತನಲ್ಲಿಗೆ ಮಾರ್ಕಂಡೇಯ ಮಹರ್ಷಿಗಳು ಬರುವಂತಾಗುತ್ತದೆ. ಅಂದರೆ ಆ ಮಹರ್ಷಿಗಳು ಕೂಡ ಶಿವನ ಪರಮ ಭಕ್ತರು, ಆತನ ಕರ್ಮವನ್ನ ಕಳೆಯುವುದಕ್ಕೆ ಮಾರ್ಕಂಡೇಯ ಮಹರ್ಷಿಗಳು ಅಲ್ಲಿಯವರೆಗೆ ಬರುವಂತಹ ಆಗುತ್ತದೆ. ಅದಕ್ಕಾಗಿ ನಾವು ಕೂಡ ಭಕ್ತಿಯಿಂದ ಭಗವಂತನ ಆರಾಧನೆಯನ್ನು ಮಾಡಿದರೆ ನಮ್ಮ ಕರ್ಮಗಳು ಕೂಡ ಇದೇ ರೀತಿಯಾಗಿ ಕಳೆಯುತ್ತವೆ.

ನಾವು ಮಾಡಿದ ಪೂಜೆ ಭಗವಂತನಿಗೆ ಮುಟ್ಟಿದಾಗ ಭಗವಂತ ದಾರಿಯನ್ನು ನಮ್ಮ ಮನೆಯವರಿಗೂ ಕಳಿಸುತ್ತಾನೆ. ಅದಕ್ಕಾಗಿ ಈ ರೀತಿಯಾಗಿ ಮುಂದೆ ಮಾರ್ಕಂಡೇಯನು ಆತನಿಗೆ ಏಕಾದಶಿ ಏಕಾದಶಿ ವ್ರತವನ್ನು ಆಚರಣೆ ಮಾಡಿದರಿಂದ ಆತ ಕುಷ್ಟರೋಗದಿಂದ ಪರಿಹಾರವಾಗಿ ಮುಕ್ತಿ ದೊರಕಿ ಆತನಿಗೆ ಅಲ್ಕಾಪುರಿಯಲ್ಲಿ ಮತ್ತೆ ಜಾಗ ಸಿಗುತ್ತದೆ. ಅದಕ್ಕಾಗಿ ಭೂಮಿ ಮೇಲೆ ಜನರು ನಾನಾ ತರದ ರೋಗದಲ್ಲಿ ಬಳಲ್ತಾ ಇದೀವಿ ಇವೆಲ್ಲವೂ ನಾವು ಮಾಡಿದ ಪೂರ್ವ ಜನ್ಮದ ಕರ್ಮದಿಂದಲೇ ಈ ರೀತಿ ಆಗಿರುತ್ತದೆ. ಅದನ್ನ ನಾವು ಕಳ್ಕೊಬೇಕು ಅಂದ್ರೆ ನಾಳೆ ವಿಶೇಷವಾಗಿ ದಾನಗಳನ್ನು ಹೇಳಿಕೊಡ್ತೀನಿ

ಆ ದಾನಗಳನ್ನು ಮಾಡಿ ಜೊತೆಗೆ ಒಂದು ವಿಶೇಷ ಶ್ಲೋಕ ಅದನ್ನು ನೀವು ಪರಾಯಣ ಮಾಡಿರಿ ಇದನ್ನು ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಸಂತೋಷ ದೊರಕುತ್ತದೆ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ದಾನದಿಂದಲೇ ಮೋಕ್ಷವನ್ನು ಪಡೆಯುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಕೂಡ ದಾನವನ್ನು ಮಾಡು ಎಂದು ಹೇಳಿದ್ದಾನೆ.

ಆದ್ದರಿಂದ ಇಂದಿನ ಏಕಾದಶಿಯ ದಿನ ನಾವು ಕೆಲವು ದಾನಗಳನ್ನು ಹೇಳುತ್ತೇವೆ ಈ ದಾನಗಳನ್ನು ಮಾಡಿ . ಕರ್ಮಗಳು ಕಡೆದು ನೀವು ಆರೋಗ್ಯವಂತರಾಗಿ ಇರ್ತೀರಾ.ಮೊದಲನೇದಾಗಿ ಯಾರಾದರೂ ಚರ್ಮ ರೋಗದಿಂದ ಬಳಲುತ್ತಾ ಇದ್ದರೆ ಹೆಸರು ಕಾಳು ಬೆಲ್ಲ ತುಪ್ಪ ಈ ದಿನ ಈ ಮೂರನ್ನು ತಂದು ಇಟ್ಟುಕೊಳ್ಳಬೇಕು, ದ್ವಾದಶಿಯ ದಿನ ದೇವಸ್ಥಾನಕ್ಕೆ ಹೋಗಿ ತಾಂಬೂಲ ದಕ್ಷಣೆ ಸಮೇತ ಎಲ್ಲಿ ನೈವೇದ್ಯ ಮಾಡುತ್ತಾರೋ ಅಲ್ಲಿ ಬ್ರಾಹ್ಮಣರ ಕೈಯಲ್ಲಿ ಕೊಟ್ಟು ನಮಸ್ಕಾರ ಮಾಡಿಕೊಳ್ಳಬೇಕು.

ನಿನ್ನ ಜೀವನದಲ್ಲಿ ಅತಿಯಾಗಿದ್ದೀರಾ ದುಃಖ ನೆ ಕಡಿಮೆ ಆಗ್ತಾ ಇಲ್ಲ, ಯಾವುದೇ ರೀತಿಯ ಕೆಲಸಗಳು ಕೂಡ ಆಗುತ್ತಿಲ್ಲ ಮನೆಯಲ್ಲಿ ಸದಾ ಅನಾರೋಗ್ಯದಿಂದಲೇ ಇರ್ತೀವಿ ಅಂತ ಹೇಳೋರು ತಿಲದಾನ ಬಿಳಿ ಎಳ್ಳನ್ನು ಒಂದು ಬಟ್ಟಲಿಗೆ ಬಿಳಿ ಎಳ್ಳನ್ನು ಹಾಕಿಕೊಳ್ಳಬೇಕು, ಅದನ್ನು ಇಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ವಿಷ್ಣು ದೇವಸ್ಥಾನ ಎಲ್ಲಿರುತ್ತದೆ ಅಲ್ಲಿ ಹೋಗಿ ಬ್ರಾಹ್ಮಣರಿಗೆ ಎಲೆ ಅಡಿಕೆ ತಾಂಬೂಲ ಹಾಗೂ ಎಳ್ಳನ್ನು ಕೊಟ್ಟು ನಮಸ್ಕಾರ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳಿಗೂ ಪರಿಹಾರ ಸಿಗುತ್ತದೆ. ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಲಕ್ಷ್ಮಿ ಅಥವಾ ವಿಷ್ಣುವಿನ ದೇವಸ್ಥಾನ ಇದ್ದರೆ ಅಲ್ಲಿ ಹೋಗಿ ದ್ವಾದಶಿಯ

ದಿನ ಬೆಲ್ಲ ಹಾಗೂ ತುಪ್ಪದ ದಾನವನ್ನು ಮಾಡಿ. ನಂತರ ಮನೆಗೆ ಬಂದ ಮೇಲೆ ಊಟವನ್ನು ಮಾಡಿ. ಹಾಗೆಯೇ ಧಾನ್ಯದ ದಾನವನ್ನು ಕೂಡ ಮಾಡಿ ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುತ್ತೀರಿ.
ನೀನು ಮನೆಯಲ್ಲಿ ಸಂಬಂಧಗಳೇ ಸರಿಯಾಗಿಲ್ಲ ಕುಟುಂಬದಲ್ಲಿ ಜಗಳಗಳು ಮನಸ್ತಾಪಗಳಾಗುತ್ತಿದ್ದರೆ ಸಕ್ಕರೇ ದಾನವನ್ನು ಮಾಡುವುದು ಒಳ್ಳೆಯದು. ಮನೆಯಲ್ಲಿ ಎಲ್ಲರೂ ಕೂಡ ಸುಖ ಸಂತೋಷದಿಂದ ಇರಬೇಕೆಂದರೆ ಕಲ್ಲು ಸಕ್ಕರೆಯನ್ನು ದಾನವನ್ನು ಮಾಡಿ.

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಕ್ಷೀರ ದಾನವನ್ನು ಮಾಡಿ ಆ ದಾನವನ್ನು ಮಾಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಲ್ಲರಿ. ಮನೆ ಮಕ್ಕಳಿಗಾಗಿ ಕುಟುಂಬದವರಿಗಾಗಿ ಎಲ್ಲರ ಹೆಸರನ್ನ ತೆಗೆದುಕೊಂಡು ಇಂದು ಈ ಶ್ಲೋಕವನ್ನು 108 ಬಾರಿ ಪಾರಾಯಣ ಮಾಡಿ. “ಪ್ರಾಪ್ತಂ ಕಾಲ ಸಂಪ್ರಾಪ್ತಂ ಮೃತ್ಯು ಶತ್ರು ಸತಾನ್ಯಪಿ ಭಕ್ತನಾಂ ನಾಶಯೆದ್ಯಾಸ್ಮಾನೃತ್ಯು ಮೃತ್ಯುಂ ನಮಾಮ್ಯಹಂ ” ಈ ಶ್ಲೋಕವನ್ನು ನೀವು ನಿತ್ಯವೂ ಕೂಡ ಹೇಳಬಹುದು ಇದನ್ನು ಇಂದು ಹೇಳಿ. ಇದರ ಜೊತೆಗೆ ಏಕಾದಶಿಯ ದಿನ ಪೂಜೆ ಮಾಡಿ ದ್ವಾದಶಿಯ ದಿನ ದಾನವನ್ನು ಮಾಡಿರಿ. ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ ಕಳೆದು ಸುಖ ಜೀವನಕ್ಕೆ ನಾಂದಿಯನ್ನು ಹಾಡುತ್ತದೆ.ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡುವುದನ್ನು ಮರೆಯದಿರಿ ಧನ್ಯವಾದಗಳು.

Leave a Comment