ಅತಿಯಾದ ನಿದ್ರೆ ಅಪಾಯ

ನಮಸ್ಕಾರ ಸ್ನೇಹಿತರೇ ನಮ್ಮ ಯುವಜನತೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದು ರಾತ್ರಿ ಗೆಳೆಯರೊಂದಿಗೆ ಪಾರ್ಟಿ ನೈಟ್ ಔಟ್ ಮೊಬೈಲ್ ನಲ್ಲಿ ಕಾಲಹರಣ ಮಾಡುವುದು ಒಂದು ಗುಂಪಾದರೆ ರಾತ್ರಿ ಪಾಳಯದ ಕೆಲಸದಲ್ಲಿ ಇರುವುದು ಎರಡನೇ ಗುಂಪು ಹಾಗೆ ಮೂರನೇ ವರ್ಗದ ಜನರು ಏನು ಕೆಲಸ ಕಾರ್ಯ ಮಾಡದೇ ಸುಮ್ಮನೆ ತಿಂದು ಉಂಡು ಮಲಗುವ ಕೆಲಸವನ್ನು ಮಾಡುವವರು ಮೊದಲೆರಡು ವರ್ಗದ ಜನರು ಕಳೆದುಕೊಳ್ಳುವುದು ನಿದ್ರೆಯನ್ನು ನಿದ್ರೆ ಕಡಿಮೆಯಾದರೂ ಕಷ್ಟನೇ ನಿದ್ರೆ ಅತಿಯಾದರೂ ಕಷ್ಟ ನೇ ನಿದ್ರೆ ಅಗತ್ಯಕ್ಕಿಂತ ಜಾಸ್ತಿ ಆದರೆ ಕಷ್ಟ ಅಂತ ಹಿರಿಯರು ಹೇಳುತ್ತಾರೆ ಆದರೆ ನಿದ್ರೆ ಕಡಿಮೆಯಾಗಿ

ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ವರಿಗಿಂತ ಐಷಾರಾಮಿ ಜೀವನ ಶೈಲಿಗೆ ಮಾರುಹೋಗಿ ನಿದ್ದೆಯನ್ನು ಅತಿಯಾಗಿ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವವರು ಜಾಸ್ತಿ ಒಬ್ಬ ವ್ಯಕ್ತಿಗೆ ಸರಾಸರಿಯಾಗಿ 7ರಿಂದ 8 ಗಂಟೆ ನಿದ್ದೆ ಅವಶ್ಯಕ ಅತಿಯಾದ ನಿದ್ದೆ ಮೊದಲು ಪ್ರಭಾವ ಬೀರುವುದು ದೇಹದ ತೂಕಕ್ಕೆ ಅತಿಯಾದ ನಿದ್ದೆಯನ್ನು ಮಾಡುವುದರಿಂದ ಕ್ಯಾಲೋರಿಗಳು ಅಧಿಕವಾಗಿ ತೂಕವು ಅಧಿಕವಾಗಿ ಬೊಜ್ಜು ಬೆಳೆಯುತ್ತದೆ ಹಾಗೆ ಅತಿಯಾದ ನಿದ್ರೆಯಿಂದ ಮಧುಮೇಹ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಅತಿಯಾದ ನಿದ್ದೆಯಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ಚಟುವಟಿಕೆ ಪ್ರಮಾಣ ಕಡಿಮೆಯಾಗಿ ಗ್ಲುಕೋಸ್ ಪ್ರಮಾಣ ಕರಗದೆ ಹಾಗೆ ಇದ್ದು ಇದರಿಂದ ಮಧುಮೇಹ ಬರುತ್ತದೆ

ಹಾಗೆ ಅತಿಯಾಗಿ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಸಂಶೋಧನೆಯ ಪ್ರಕಾರ 9 ರಿಂದ 11 ಗಂಟೆ ಕಾಲ ಮಲಗುವವರು 8:00 ಗಂಟೆ ಕಾಲ ಮಲಗುವವರಿಗಿಂತ 38% ಹೃದಯ ಕಾಯಿಲೆ ಹೊಂದಿರುತ್ತಾರೆ ಹೀಗೆಂದು ಸಾಬೀತು ಕೂಡ ಆಗಿದೆ ಅತಿಯಾದ ನಿಧಿಯು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದರಿಂದ ಬಹುಬೇಗ ನಿದ್ದೆಯಿಂದ ಎಚ್ಚರಗೊಳ್ಳುವ ಸಾಧ್ಯತೆ ಇರುತ್ತದೆ ಅತಿಯಾದ ನಿದ್ದೆ ಮಾಡಿದರೆ ಹೆಚ್ಚು ಚುರುಕಾಗಿರಲು ಸಾಧ್ಯವಾಗದೆ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೆ ಅತಿಯಾಗಿ ನಿದ್ರೆ ಮಾಡುವುದರಿಂದ ಮೆದುಳಿನ ಕಾರ್ಯ ಕುಸಿಯುವುದಲ್ಲದೆ ಮೆದುಳಿನ ಶಕ್ತಿ ದುರ್ಬಲವಾಗುತ್ತ ಹೋಗುತ್ತದೆ

ಹಾಗೆ ವಾರವೆಲ್ಲ ಪೂರ್ತಿ ದುಡಿದು ವಾರಾಂತ್ಯದಲ್ಲಿ ಅಧಿಕವಾಗಿ ನಿದ್ರೆ ಮಾಡುವವರು ನಮ್ಮಲ್ಲಿ ಇದ್ದಾರೆ ಹೀಗೆ ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ಹೆಚ್ಚು ಸಮಯ ನಿದ್ರೆ ಮಾಡುವುದರಿಂದ ಕೆಲವು ನರಗಳ ಮೇಲೆ ಪರಿಣಾಮ ಬೀರುವುದಲ್ಲದೆ ತಲೆನೋವು ಆಗಾಗ ಕಾಣಿಸಿಕೊಳ್ಳುತ್ತದೆ ಹಾಗೆ ಅತಿಯಾದ ನಿದ್ರೆಯಿಂದ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಇರುತ್ತದೆ ಅತಿಯಾದ ನಿದ್ದೆ ಒಂದು ಕಡೆ ಕುಳಿತು ಕೆಲಸ ಮಾಡುವುದರಿಂದ ದೇಹದ ಚಟುವಟಿಕೆ ಕಡಿಮೆಯಾಗಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಸಂಶೋಧನೆಯ ಪ್ರಕಾರ ದಿನಕ್ಕೆ 9 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಲಗುವವರಿಗೆ ಎಂಟು ಗಂಟೆಗಳ ಕಾಲ ಮಲಗುವ ವರಿಗಿಂತ ಅಕಾಲಿಕ ಮರಣ ಹೆಚ್ಚು ಬರುತ್ತದೆ ಅಂತ ಸಾಬೀತಾಗಿದೆ ಅತಿಯಾದ ನಿದ್ದೆಯಿಂದ ಇಷ್ಟೆಲ್ಲಾ ತೊಂದರೆ ಇರುವುದರಿಂದ ಇನ್ನಾದರೂ ಒಂದೇ ಸಲ ಜಾಸ್ತಿ ಹೊತ್ತು ಮಲಗುವುದಕ್ಕಿಂತ ನಿಗದಿತ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಒಳ್ಳೆಯದು ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment