ಗಳಿಸಿಕೊಂಡ ಮೇಲೆ ಅರ್ಥ ಆಗುವುದು ಗೌರವ, ಉಳಿಸಿಕೊಂಡ ಮೇಲೆ ಅರ್ಥ ಆಗುವುದು ನಂಬಿಕೆ, ಕಳೆದುಕೊಂಡ ಮೇಲೆ ಅರ್ಥ ಆಗುವುದು ಪ್ರೀತಿ, ತಿಳಿದುಕೊಂಡ ಮೇಲೆ ಅರ್ಥ ಆಗುವುದು ಸ್ನೇಹ. ಜೀವಿಸಬೇಕು ನೋವೇ ಇಲ್ಲ ಅನ್ನೋಥರ ನಗಬೇಕು ಅಳುವೇ ಇಲ್ಲ ಅನ್ನೋಥರ. ಆಟ ಆಡಬೇಕು ಸೋಲೇ ಇಲ್ಲ ಅನ್ನೋಥರ ಸ್ನೇಹ ಮಾಡಬೇಕು, ಕೊನೆಯೇ ಇಲ್ಲ ಅನ್ನೋಥರ. ಜನ ನಿಮ್ಮ ಹಿಂದೆ ಮಾತನಾಡಿಕೊಂಡರೆ ಬೇಸರಿಸದಿರಿ. ನೀವು ಅವರಿಗಿಂತ ಮುಂದಿದ್ದೀರಾ ಎಂದರ್ಥ.
ಜೀವನದಲ್ಲಿ ಯಾರನ್ನು ದ್ವೇಷಿಸಬೇಡಿ. ಕೆಲವರು ನಿಮಗೆ ಅನುಭವವನ್ನು ನೀಡುತ್ತಾರೆ. ಕೆಲವರು ಸಂತೋಷವನ್ನು ಉಂಟು ಮಾಡುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳನ್ನು ಎದುರಿಸುವ ದಾರಿಯನ್ನು ತೋರಿಸುತ್ತಾರೆ. ಬಂಗಾರದ ಮಾತು ಬಡವರ ಮುಂದೆ ನಿನ್ನ ಉತ್ತಮವಾದ ಸಂಪತ್ತಿನ ಕುರಿತು ಮಾ.ತನಾಡಬೇಕು. ರೋಗಿಯ ಮುಂದೆ ನಿನ್ನ ಉತ್ತಮವಾದ ಆರೋಗ್ಯದ ಬಗ್ಗೆ ಮಾತನಾಡಬೇಡ.
ದುರ್ಬಲರ ಮುಂದೆ ನಿನ್ನ ಶಕ್ತಿಯ ಬಗ್ಗೆ ಮಾತನಾಡಬೇಡ. ದುಃಖಿತನ ಮುಂದೆ ನಿನ್ನ ಜೀವನ ಸುಖಗಳ ಬಗ್ಗೆ ಮಾತನಾಡಬೇಡ ಖೈದಿಯ ಮುಂದೆ ನಿನ್ನ ಸ್ವತಂತ್ರ್ಯದ ಬಗ್ಗೆ ಮಾತನಾಡಬೇಡ. ಮಕ್ಕಳಿಲ್ಲದವನ ಮುಂದೆ ನಿನ್ನ ಮಕ್ಕಳ ಬಗ್ಗೆ ಮಾತನಾಡಬೇಡ. ಅನಾಥರ ಮುಂದೆ ನಿನ್ನ ತಂದೆ ತಾಯಿಯ ಬಗ್ಗೆ ಮಾತನಾಡಬೇಡ. ಕಾರಣ ಅದು ಅವರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.