ನಾವು ಈ ಲೇಖನದಲ್ಲಿ, 21 ದಿನದಲ್ಲಿ , ಹೇಗೆ ನಮ್ಮ ತ್ವಚೆಯನ್ನು ಬೆಳ್ಳಗಾಗಿಸಬಹುದು . ಆ ಮನೆ ಮದ್ದು ಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು. ಮತ್ತು ಚರ್ಮದಲ್ಲಿ ಹೊಳಪಿರಬೇಕು , ಎಂಬುದು ಎಲ್ಲರ ಕನಸಾಗಿದೆ. ಕೆಲವರ ಮುಖದಲ್ಲಿ ಕಳೆಯು ತುಂಬಿರುತ್ತದೆ . ಸಾಧಾರಣ ಬಣ್ಣ ವಿದ್ದರೂ , ಅವರ ಮುಖದಲ್ಲಿ ಹೊಳಪಿರುತ್ತದೆ. ಮುಖದ ಒಳಗಿರುವಂತಹ ಚರ್ಮದ ಕೋಶಗಳಿಂದ ಈ ಹೊಳಪು ಬರುತ್ತದೆ. ಮುಖ ಕಪ್ಪಾಗುವುದಕ್ಕೆ ,
ಬಂಗು ಬರುವುದಕ್ಕೆ , ಮುಖದಲ್ಲಿ ಕಳೆ ಕಡಿಮೆಯಾಗುವುದನ್ನು, ತಪ್ಪಿಸಲು , ಮುಖದಲ್ಲಿ ಕಾಂತಿ ಬರಲು , ಯಾವ ಮನೆ ಮದ್ದುಗಳನ್ನು ಉಪಯೋಗಿಸಬೇಕು , ಎಂಬುದನ್ನು ತಿಳಿದುಕೊಳ್ಳೋಣ. ಆದರೆ ಕೆಲವಾರು ಕಾರಣಗಳಿಂದ, ಚರ್ಮವು ನಿತ್ಯ ಕಳೆಗುಂದಿರುತ್ತದೆ. ಕೆಲವು ಜನರು ಬೆಳ್ಳಗೆ ಇರುತ್ತಾರೆ. ಆದರೆ , ಅವರ ಮುಖದಲ್ಲಿ ಕಾಂತಿ ಇರುವುದಿಲ್ಲ. ಕೆಲವರು ಕಪ್ಪು ಇದ್ದರೂ ಕೂಡ ,ಅವರ ಮುಖದಲ್ಲಿ ಕಳೆಯಿರುತ್ತದೆ. ಮೊದಲನೆಯದಾಗಿ, ಮುಖ ಕಾಂತಿಯಿಂದ , ಕೂಡಿರಬೇಕಂದರೆ ಮುಖದಲ್ಲಿ,
ನಗು ತುಂಬಾ ಮುಖ್ಯ. ಇದು ಒಂದು ಒಳ್ಳೆಯ ಆಭರಣ. ಮುಖ ಕಪ್ಪಾಗಲಿಕ್ಕೆ , ಕಳೆ ಕಡಿಮೆಯಾಗಲು ,ಮೂಲ ಕಾರಣ ದೈಹಿಕವಾಗಿರುವ ಸಮಸ್ಯೆಗಳಲ್ಲಿ , ಮಲಬದ್ಧತೆಯಿಂದ, ಅಜೀರ್ಣದಿಂದ, ಪಿತ್ತ ವಿಕಾರವಾಗುವುದರಿಂದ, ಚರ್ಮದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ . ಯಾರ ಚರ್ಮದಲ್ಲಿ ಸಂಪೂರ್ಣವಾಗಿ. ಕಾಂತಿ ಕ್ರಿಯಾಶೀಲವಾಗಿ ಇರುತ್ತದೆ . ಅಂತಹ ಶರೀರದಲ್ಲಿ ಪಿತ್ತ ದೋಷ ತುಂಬಾ ಪ್ರಭಾವಶಾಲಿಯಾಗಿ ಕ್ರಿಯಾಶೀಲವಾಗಿರುತ್ತದೆ .
ಪಿತ್ತವು ಚರ್ಮದ ವರ್ಣವನ್ನು ನಿರ್ಧರಿಸುತ್ತದೆ . ಯಾರ ಶರೀರದಲ್ಲಿ ಅತ್ಯಂತ ಕ್ರಿಯಾಶೀಲವಾದಂತಹ, ಪಿತ್ತ ದೋಷವಿರುತ್ತದೆಯೋ , ಅವರಿಗೆ ಯಾವತ್ತೂ ಸಹ ಚರ್ಮದಲ್ಲಿ, ಕಪ್ಪು ಕಳೆ ಹೀನತೆ ,ಇರುವುದಿಲ್ಲ ಆದ್ದರಿಂದ ಪಿತ್ತ ದೋಷ ಕ್ರಿಯಾಶೀಲವಾಗಿ ಇರಬೇಕು . ಪಿತ್ತವು ಸಾಮ್ಯಾವಸ್ಥೆಯಲ್ಲಿ ಇರಬೇಕು. ಎಂದರೆ , ನಾವು ವತ್ರಪಾನವನ್ನು ಮಾಡಬೇಕು . ಆಹಾರದಲ್ಲಿ ತುಪ್ಪವನ್ನು ಉಪಯೋಗಿಸಬೇಕು. ಕ್ಷಾರಯುಕ್ತವಾದ , ಆಹಾರ ಎಂದರೆ ಉಪ್ಪು , ಹುಳಿ , ಕಾರ ,ಸಿಹಿ , ಒಗರು , ಕಹಿ ,ಈ ಆರು ರುಚಿಗಳನ್ನು, ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು . ಇದರಿಂದ ಶರೀರವು ಪಿತ್ತ ವಿಕಾರಗಳಿಂದ ಸಮಸ್ಥಿತಿಯಲ್ಲಿ ಇರುತ್ತದೆ.
ಪಿತ್ತ ವಿಕಾರಗಳು ಸಂಭವಿಸದೆ ಇದ್ದರೆ, ಚರ್ಮವು ಕಾಂತಿಯುತವಾಗಿ ಕೂಡಿರುತ್ತದೆ .ಕೆಲವು ಜನ ತುಂಬಾ ತೇಜಸ್ವಿನಿಂದ, ಕಾಣುತ್ತಾರೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಪಿತ್ತ ದೋಷ ತುಂಬಾ, ಕ್ರಿಯೆ ಶೀಲವಾಗಿರುತ್ತದೆ. ಎಂದು ಅರ್ಥ ಮಾಡಿಕೊಳ್ಳಬೇಕು . ಪಿತ್ತ ಹದಗೆಟ್ಟರೆ , ಚರ್ಮವು ಹಾಳಾಗುತ್ತದೆ. ಪಿತ್ತವು ಕ್ರಿಯಾಶೀಲವಾಗಿದ್ದರೆ, ಚರ್ಮವು ಕಾಂತಿಯುತವಾಗಿ, ಅದ್ಭುತವಾಗಿರುತ್ತದೆ . ಈ ರೀತಿಯ ದೈಹಿಕ ಕಾರಣಗಳಾದರೆ , ಮಾನಸಿಕ ಕಾರಣಗಳನ್ನು, ತಿಳಿದುಕೊಳ್ಳೋಣ .
ಯಾರಿಗೆ ಒತ್ತಡವಿರುತ್ತದೆಯೋ ,ಅವರಿಗೆ ಮುಖ ಕಪ್ಪಾಗುತ್ತದೆ . ಮಾನಸಿಕ ಸಮಸ್ಯೆಯೂ ಕೂಡ ಮುಖ ಕಳೆ ಹೀನವಾಗಲಿಕ್ಕೆ , ಒಂದು ಮೂಲ ಕಾರಣ .ಆದ್ದರಿಂದ ಮನಸ್ಸನ್ನು ಪ್ರಶಾಂತವಾಗಿ, ಇಟ್ಟುಕೊಳ್ಳಬೇಕು ಮುಂಜಾನೆ ಎದ್ದು ಯೋಗ ಮಾಡಿದರೆ , ಮನಸ್ಸು ಪ್ರಶಾಂತವಾಗಿ ,ಇಲ್ಲದಿದ್ದರೆ ಯೋಗ ಮಾಡುವುದು, ವ್ಯರ್ಥ . ನಮಗೆ ಯಾರು ಏನೇ ಹೇಳಿದರೂ ಕುಗ್ಗಿ ಹೋಗಬಾರದು. ಚಿಂತೆಗೆ ಒಳಗಾಗಬಾರದು. ಮನಸ್ಸು ಬಹಳ ನಿರ್ಲಿಪ್ತತೆಯಿಂದ , ಇದ್ದರೆ ಅದು ಮುಖದಲ್ಲಿ ಸೂಚಿಸುತ್ತದೆ. ಮತ್ತೆ. ಕೆಲವು ವೈಜ್ಞಾನಿಕ ಅಂಶಗಳಿಂದ, ನೋಡುವುದಾದರೆ ವಿಟಮಿನ್ ಈ ಕೊರತೆಯಿಂದ, ಚರ್ಮದಲ್ಲಿ ಬಹಳಷ್ಟು ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ .
ಚರ್ಮದ ಶಕ್ತಿಗೆ ಮೂಲವಾದ ಅಂಶವೆಂದರೆ, ಬಹಳಷ್ಟು ಪೋಷಕಾಂಶ ಕೊಡುವುದು ವಿಟಮಿನ್ ಇ . ವಿಟಮಿನ್ ಇ ನಮಗೆ ದೊರೆಯಬೇಕೆಂದರೆ, ನಾವು ಸೊಪ್ಪು ,ತರಕಾರಿ ,ಹಣ್ಣುಗಳನ್ನು, ಹೆಚ್ಚಾಗಿ ಸೇವನೆ ಮಾಡಬೇಕು. ಇದರಿಂದ ನಮಗೆ ತುಂಬಾ ಸುಲಭವಾಗಿ , ವಿಟಮಿನ್ ಈ ಅಂಶ ಸಿಗುತ್ತದೆ .ಹೀಗೆ ಇದನ್ನು ರೂಡಿಸಿಕೊಳ್ಳುವುದು ,ಬಹಳ ಮುಖ್ಯ . ಚರ್ಮದಲ್ಲಿ ಇರುವಂತಹ, ಒಂದು ವಿಷಕಾರಿ ಅಂಶವು ಚರ್ಮದಿಂದ ಸಂಪೂರ್ಣವಾಗಿ ಹೋಗಬೇಕು ಸ್ವಚ್ಛವಾಗಬೇಕು . ಎಂದರೆ ನಮ್ಮ ಆಹಾರದಲ್ಲಿ , ನಾರಿನ ಅಂಶವಿರಬೇಕು .
ಹಾಗೆ ಸರಿಯಾದ ರೀತಿಯಲ್ಲಿ , ಖನಿಜಾಂಶಗಳಿರಬೇಕು. ಪೋಷಕಾಂಶಗಳು ಇರಬೇಕು. ವಿಟಮಿನ್ ಇ ಬಹಳ ಮುಖ್ಯವಾಗಿ ಬೇಕು .ಹೀಗೆ ಸಮರ್ಪಕವಾಗಿ , ಸಿಕ್ಕರೆ ಸಹಜವಾಗಿ , ಚರ್ಮದ ಎಲ್ಲಾ ರೀತಿಯ ಸಮಸ್ಯೆಗಳು, ದೂರವಾಗುತ್ತದೆ. ಚರ್ಮವು ಕೂಡ ಹಲವಾರು ರೀತಿಯಲ್ಲಿ ,ಶರೀರದ ಮೇಲೆ ಪ್ರಭಾವ ಬೀರುತ್ತದೆ. ಶರೀರದ ಒಳಗಡೆ ಏನಾದರೂ ಸಮಸ್ಯೆಗಳಿದ್ದರೆ ,ಚರ್ಮದ ಮೂಲಕ , ಸಹ ತಿಳಿದುಕೊಳ್ಳಬಹುದು .ಕಾಮಾಲೆ ರೋಗವಿದ್ದರೆ , ಚರ್ಮವು ಹಳದಿ ಬಣ್ಣವನ್ನು ,ಸೂಚಿಸುತ್ತದೆ .
ಕಿಡ್ನಿ ಸಮಸ್ಯೆ ಇದ್ದರೆ, ಗುಳ್ಳೆಗಳು ಹೆಚ್ಚು ಬರಲು ಶುರುವಾಗುತ್ತದೆ .ಕೆರೆತ, ಕಪ್ಪು ಕಲೆಗಳು , ಸಹ ಹೆಚ್ಚಾಗುತ್ತದೆ. ಆದ್ದರಿಂದ ಮುಖದ ಕಾಂತಿ ಹೆಚ್ಚಾಗಲು ವಿಟಮಿನ್ ಇ ಅವಶ್ಯಕತೆ ತುಂಬಾ ಇದೆ .ಇದರ ಜೊತೆಗೆ ಮುಖಕ್ಕೆ ,ಹಚ್ಚಲು ಎಳನೀರನ್ನು ತೆಗೆದುಕೊಂಡು, ಅದರ ಜೊತೆಗೆ ಸಮ ಪ್ರಮಾಣದಲ್ಲಿ ಅಲೋವೆರವನ್ನು ತೆಗೆದುಕೊಂಡು ,ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ, ಮಸಾಜ್ ಮಾಡಿ .ಮಾಡಿದ ನಂತರ ಒಂದು ಗಂಟೆ ಬಿಟ್ಟು, ಮುಲ್ತಾನಿ ಮಿಟ್ಟಿ , ಅಥವಾ ಅಂಟುವಾಳದ ಕಾಯಿಯಿಂದ, ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು . ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮತ್ತು ಮುಖದ ವರ್ಣ ಬೆಳ್ಳಗಾಗುತ್ತದೆ .
ಇದರ ಜೊತೆಗೆ ಇನ್ನೊಂದು , ಪ್ರಭಾವಕಾರಿ ಮನೆಮದ್ದು , ಎಂದರೆ ನಿಂಬೆಹಣ್ಣು .ನಿಂಬೆ ಹಣ್ಣನ್ನು, ಸಮ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ ,ಅರ್ಧ ತಾಸು ,ಮುಖವನ್ನು ಮಸಾಜ್ ಮಾಡಿ .ಒಂದು ಗಂಟೆಯ ನಂತರ ಮುಲ್ತಾನಿ ಮಿಟ್ಟಿ ,ಅಥವಾ ಅಂಟುವಾಳದ , ಕಾಯಿಯಲ್ಲಿ ಮುಖವನ್ನು, ಸ್ವಚ್ಛಗೊಳಿಸಬೇಕು . ಇದರಿಂದ ಚರ್ಮದಲ್ಲಿ ಕಾಂತಿ ವೃದ್ಧಿಯಾಗುತ್ತದೆ . ಮುಲ್ತಾನಿ ಮಿಟ್ಟಿಯನ್ನು , ಸಮ ಪ್ರಮಾಣದಲ್ಲಿ ಹಾಲಿನೊಂದಿಗೆ, ಬೆರೆಸಿ ,ಗಟ್ಟಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು.ನಂತರ ಒಂದು ಬಾಳೆ ಎಲೆಯನ್ನು , ಮುಖದ ಮೇಲೆ ಅಂಟಿಸಿಕೊಳ್ಳಬೇಕು .
ಒಂದು ಗಂಟೆಯ ನಂತರ, ಆ ಎಲೆಯನ್ನು ತೆಗೆದು, ಮತ್ತೆ ಹಾಲಿನಿಂದ ಮಸಾಜ್ ಮಾಡಿ, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು .ಇದನ್ನು ಮಾಡುವುದರಿಂದ , ನಿಮಗೆ ಚರ್ಮವು ತುಂಬಾ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ. ಬೆಳ್ಳಗೆ ಆಗಬಹುದು. ಇನ್ನೊಂದು ಮನೆ ಮದ್ದು ಎಂದರೆ, ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ,15- 20 ನಿಮಿಷ ಚೆನ್ನಾಗಿ ಉಜ್ಜಿ .ಒಂದು ಗಂಟೆಯ ನಂತರ ಮುಖವನ್ನು, ತೊಳೆಯಬೇಕು .ಇದರಿಂದ ಚರ್ಮವು ಚೆನ್ನಾಗಿ ಹೊಳೆಯುತ್ತದೆ. ಬೆಳ್ಳಗಾಗುತ್ತದೆ . ಇನ್ನೊಂದು ಮನೆ ಮದ್ದನ್ನು, ತಿಳಿದುಕೊಳ್ಳುವುದಾದರೆ, ಸೌತೆಕಾಯಿ, ಸೌತೆಕಾಯಿಯನ್ನು, ತೊಳೆದು ,
ರುಬ್ಬಿ ಅದರ ಮಿಶ್ರಣವನ್ನು ,ಅದರ ಲೇಪನವನ್ನು. ಮುಖಕ್ಕೆ ಹಚ್ಚಿಕೊಳ್ಳಬೇಕು. ನಂತರ ಅದರ ಮೇಲೆ ಬಾಳೆ ಎಲೆ ಅಥವಾ ಅರಿಶಿಣದ ಎಲೆಗಳನ್ನು , ಅಂಟಿಸಿಕೊಳ್ಳಬೇಕು. ಇದಾದ ಒಂದು ತಾಸಿನ ನಂತರ ಮುಖವನ್ನು , ಅಂಟುವಾಳದ ಕಾಯಿ ಅಥವಾ ಮುಲ್ತಾನಿ ಮಿಟ್ಟಿಯಿಂದ, ತೊಳೆಯಬೇಕು. ಇದರಿಂದ ಅದ್ಭುತವಾದ, ಪರಿಣಾಮವನ್ನು, ಕಾಣಬಹುದು. ಇದರಿಂದ ,ಚರ್ಮದ ಮೂಲದಲ್ಲಿರುವಂತಹ ,ಕೊಳೆ ವಿಷಕಾರಿ ಅಂಶಗಳು, ಹೀರಿ ಹೊರಬರುತ್ತದೆ .ಇದರ ಜೊತೆಗೆ ಹಾಲಿನ ಕೆನೆ ಯೊಂದಿಗೆ, ಸಮ ಪ್ರಮಾಣದಲ್ಲಿ ಕಡಲೆಹಿಟ್ಟನ್ನು, ಬೆರೆಸಿ
ಈ ಮಿಶ್ರಣವನ್ನು. ಮುಖಕ್ಕೆ ಹಾಕಿ . ಅದರ ಮೇಲೆ ಬಾಳೆ ಎಲೆ ,ಅಥವಾ ಅರಿಶಿನದ ಎಲೆಯನ್ನು ಅಂಟಿಸಿ, ಒಂದು ಗಂಟೆಯ ನಂತರ ಎಳನೀರು, ಮುಲ್ತಾನಿ ಮಿಟ್ಟಿ ,ಅಂಟುವಾಳದ ಕಾಯಿಯಿಂದ , ಮುಖವನ್ನು ತೊಳೆಯಬೇಕು. .ಇದರಿಂದ ಮುಖದಲ್ಲಿ ಅದ್ಭುತವಾದಂತಹ ಕಾಂತಿ ಸಿಗುತ್ತದೆ. ಈ ಮನೆಮದ್ದುಗಳನ್ನು ನೀವು ಸತತವಾಗಿ 21 ದಿನ. ಅಥವಾ ಮೂರು ತಿಂಗಳುಗಳ ಕಾಲ ಮಾಡಿದರೆ , ನಿಮ್ಮ ಮುಖದಲ್ಲಿ ತೇಜಸ್ಸು , ಕಾಂತಿ, ವರ್ಣ ವೃದ್ಧಿಯಾಗುತ್ತದೆ.