ಭವಿಷ್ಯವನ್ನೇ ಭಯಪಡಿಸುತ್ತಿರುವ 2024 ರ ಕಾಲಜ್ಞಾನ

ಈ ಲೇಖನದಲ್ಲಿ ಶ್ರೀ ಪೋತನೂರಿ ವೀರ ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಹೇಳಿರುವ ಭವಿಷ್ಯವನ್ನೇ ಭಯಪಡಿಸುತ್ತಿರುವ 2024ರ ಕಾಲಜ್ಞಾನದ ಬಗ್ಗೆ ತಿಳಿದುಕೊಳ್ಳೋಣ . ಈ ಪೋತನೂರಿ ವೀರ ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಹೇಳಿದ ವಿಷಯಗಳೆಲ್ಲವೂ ಇಲ್ಲಿಯವರೆಗೂ ನಡೆದಿದೆ. ಮತ್ತೆ ಕೆಲವು ಖಂಡಿತವಾಗಿಯೂ ನಡೆಯುತ್ತದೆ. ಭವಿಷ್ಯತ್ತನ್ನು ತನ್ನ ಮನೋ ನೇತ್ರದಿಂದ ದರ್ಶಿಸಿದ ಬ್ರಹ್ಮೇಂದ್ರರವರು ಪ್ರತಿಯೊಂದು ಕೂಡ ತಮ್ಮ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ .

ಅವರು ರಚಿಸಿದ ಕಾಲಜ್ಞಾನದ ಪತ್ರಗಳು ಇಲ್ಲಿಯವರೆಗೂ ಕೆಲವು ಲಭ್ಯವಾಗಿವೆ . ಕೆಲವೊಂದು ಘಟನೆಗಳು ರಹಸ್ಯವಾಗಿಯೇ ಇವೆ. ಮತ್ತೆ 2024 ರ ನಂತರ ಕಾಲಜ್ಞಾನದ ಪ್ರಕಾರ ಖಂಡಿತವಾಗಿಯೂ ನಡೆಯುವ ಘಟನೆಗಳ ಸಾಧ್ಯತೆ ಇದೆ. ಹಾಗಾದರೆ ವೀರ ಬ್ರಹ್ಮ ಜ್ಞಾನೇಂದ್ರರ ಪ್ರಕಾರ 2024ರ ನಂತರ ನಡೆಯುವ ಘಟನೆಗಳು ಯಾವುವು ಎಂತಹ ಅದ್ಭುತ ಘಟನೆಗಳು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಶ್ರೀ ಪೋತನೂರಿ ವೀರ ಬ್ರಹ್ಮೇಂದ್ರ ರವರು ಕಾಲಜ್ಞಾನದಲ್ಲಿ ಸಾವಿರಾರು ವಿಷಯಗಳನ್ನು ಹೇಳಿದ್ದಾರೆ.

ಇಲ್ಲಿಯವರೆಗೂ ಅವು ನಿಜವಾಗಿದೆ ಆದ್ದರಿಂದಲೇ ಅವುಗಳು ಪ್ರಪಂಚ ವ್ಯಾಪ್ತಿಯಲ್ಲಿ ಪ್ರಸಿದ್ಧಿ ಪಡೆದಿದೆ. ಕಳ್ಳ ಬಾಬಾಗಳನ್ನು ಹಿಡಿದು ಮಟ್ಟ ಹಾಕುವುದು. ಆರು ವರ್ಷದ ಹುಡುಗಿ ಗರ್ಭವತಿಯಾಗುವುದು ಮತ್ತು ಮಹಿಳೆಯರು ತಮ್ಮ ಶೀಲವನ್ನು ಮಾರಿಕೊಳ್ಳುವುದು. ಗಾಂಧಿ ಮಹಾತ್ಮರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರುವುದು. ಹೀಗೆ ಕಾಲಜ್ಞಾನದಲ್ಲಿ ಹೇಳಿರುವ ವಿಷಯಗಳು ಬಹಳಷ್ಟು ನಿಜವಾಗಿ ನಡೆದಿದೆ . ಶ್ರೀ ಪೊತನೂರಿ ವೀರ ಬ್ರಹ್ಮೇಂದ್ರ ರವರು ಕರ್ನೂಲು ಜಿಲ್ಲೆಯ ಬನಗಾನಪಲ್ಲಿ ಮಂಡಲದ ಗಮಿನಿ

ರೆಡ್ಡಿ ಅಚ್ಚಮ್ಮನವರ ಮನೆಯಲ್ಲಿ ಹಸುಗಳಿಗೆ ಕಾವಲುಗಾರನಾಗಿದ್ದುಕೊಂಡು ರವಲಕೊಂಡದಲ್ಲಿ ಕಾಲಜ್ಞಾನವನ್ನು ರಚಿಸಿದ್ದಾರೆ . ರವಲಕೊಂಡ ಬನಗಾನ ಪಲ್ಲಿಗೆ ಒಂದುವರೆ ಕಿಲೋಮೀಟರ್ ದೂರದ ಬೆಟ್ಟದ ಮೇಲಿದೆ . ಈ ಬೆಟ್ಟದ ಗುಹೆಯಲ್ಲಿ ಕುಳಿತುಕೊಂಡು ಬ್ರಹ್ಮೇಂದ್ರರವರು ಕಾಲಜ್ಞಾನವನ್ನು ರಚಿಸಿದ್ದಾರೆ. ಆದ್ದರಿಂದಲೇ ಬೆಟ್ಟವನ್ನು ಬ್ರಹ್ಮೆಂದ್ರರವರ ಬೆಟ್ಟಗಳೆಂದು ಕರೆಯುತ್ತಿರುತ್ತಾರೆ. ಇವರು ದೇಶ ಪರ್ಯಟನೆ ಮಾಡುತ್ತಾ ಕಾಲಜ್ಞಾನ ರಚಿಸಿದ್ದಾರೆ .

ಪಶುಗಳ ಕಾವಲುಗಾರನಾಗಿ ಮತ್ತು ಕೆತ್ತನೆ ಕೆಲಸ ಮಾಡುತ್ತಾ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ವೀರ ಬ್ರಹ್ಮೇಂದ್ರ ರವರು ಭವಿಷ್ಯತ್ತಿನಲ್ಲಿ ನಡೆಯುವ ಅನೇಕ ಘಟನೆಗಳನ್ನು ತಮ್ಮ ದಿವ್ಯದೃಷ್ಟಿಯಿಂದ ದರ್ಶನ ಪಡೆದು ತಾಳೆ ಪತ್ರ ಗ್ರಂಥಗಳಲ್ಲಿ ಭದ್ರವಾಗಿರಿಸಿದ್ದಾರೆ . ಈಗ ಪ್ರಸ್ತುತ ನಡೆಯುತ್ತಿರುವ ಅನೇಕ ವಿಷಯಗಳು ಅವರ ಕಾಲಜ್ಞಾನದಲ್ಲಿ ಇರುವಂತಹವೇ ಶ್ರೀ ಪೋತಲೂರಿ ವೀರ ಬ್ರಹ್ಮೇಂದ್ರ ರವರು ಒಂದೇ ಬಾರಿ ಅಲ್ಲದೆ ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಅವರು ತಮ್ಮ ಕಾಲಜ್ಞಾನವನ್ನು ವಿವರಿಸಿದ್ದಾರೆ. ಶ್ರೀ ವೀರ ಬ್ರಹ್ಮೇಂದ್ರ ರವರು ಕಾಲಾಯಕರಾಗುವ

ಮೊದಲು ಅಂದರೆ ವಿಧಿವಶರಾಗುವ ಮೊದಲು ಕಂದಿಮಲ್ಲಯ್ಯ ಪಾಳ್ಯದಲ್ಲಿ ಗಮ್ಮಿನ ರೆಡ್ಡಿ ಅಚ್ಚಮಗಾರಿ ಮನೆಯ ಆವರಣದಲ್ಲಿ ಸುಮಾರು 14,000 ಕಾಲಜ್ಞಾನ ಪತ್ರಗಳನ್ನು ಭೂಮಿಯಲ್ಲಿ ಮುಚಿಕ್ಕಿದ್ದಾರೆ. ಅದರ ಮೇಲೆ ಒಂದು ಹುಣಸೆ ಗಿಡವನ್ನು ಕೂಡ ನೆಟ್ಟಿದ್ದಾರೆ. ಅದು ಒಂದು ಚಿಕ್ಕ ಕೋಣೆಯಷ್ಟು ಅಗಲವಾಗಿರುತ್ತದೆ. ಏನಾದರೂ ವ್ಯಾಧಿಗಳು ಮತ್ತು ಏನಾದರೂ ತೊಂದರೆಗಳು ನಡೆಯುವ ಮೊದಲು ಸೂಚನೆಯಾಗಿ ಆ ಹುಣಸೆ ಮರದ ಹೂವು ಕಾಯಿಗಳೆಲ್ಲವೂ

ಒಂದೇ ರಾತ್ರಿಗೆ ಉದುರಿ ಹೋಗಿ ಮುಂದೆ ನಡೆಯುವ ಅಶುಭಗಳನ್ನು ತಿಳಿಯಪಡಿಸುತ್ತದೆ . ನಂತರ ಆ ಹುಣಸೆ ಮರದಲ್ಲಿರುವ ಹುಣಸೆಹಣ್ಣುಗಳು ಕಪ್ಪು ಬಣ್ಣಕ್ಕೆ ಬದಲಾಗಿ ತಿನ್ನುವುದಕ್ಕೆ ಆಗುವುದಿಲ್ಲ. . ಮರದ ಪಕ್ಕದಲ್ಲಿ ಇರುತ್ತದೆ . ಕೆಂಪಾದ ದ್ರವವು ಸೋರಿ ಅದು ಕುಂಕುಮದ ರೀತಿ ಇರುತ್ತದೆ . ಅದನ್ನು ಅಲ್ಲಿನ ಪ್ರಜೆಗಳು ವ್ಯಾಧಿಗಳು ಮತ್ತು ತೊಂದರೆಗಳಿಗೆ ಪರಿಹಾರವಾಗಿ ಸ್ವೀಕರಿಸುತ್ತಾರೆ. ಬನಗಾನಪಲ್ಲಿಯ ವಯಸ್ಸಾದ ಎಲ್ಲ ಹಿರಿಯರು ಆ ಮರದ ಬಗ್ಗೆ ಹೇಳುತ್ತಾರೆ . ಅಲ್ಲಿ ಹುಣಸೆ ಮರಕ್ಕೆ ಇಂದಿಗೂ

ಸಹ ನಿತ್ಯವೂ ದೀಪಾರಾಧನೆ ನಡೆಯುತ್ತದೆ. ಇದೆಲ್ಲವೂ ಹೀಗೆ ಇದ್ದರೆ 2024ರಲ್ಲಿ ಮತ್ತು ನಂತರ ನಡೆಯುವ ಬ್ರಹ್ಮೆಂದ್ರರವರು ತಮ್ಮ ಕಾಲಜ್ಞಾನದಲ್ಲಿ ಏನು ರಚಿಸಿದ್ದಾರೆ . ಎಂಬುದನ್ನು ತಿಳಿದುಕೊಳ್ಳೋಣ. ತಿರುಪತಿ ವೆಂಕಟೇಶ್ವರ ಸ್ವಾಮಿಯ ಆಲಯದಲ್ಲಿ ಮೊಸಳೆಯು ಪ್ರತ್ಯಕ್ಷವಾಗಿ ಮೂರು ದಿನಗಳು ಪೂಜೆಗಳು ಇಲ್ಲದೆ ದೇವಾಲಯದ ಬಾಗಿಲುಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ. ಇದು ಬ್ರಹ್ಮೇಂದ್ರ ರವರ ಕಾಲಜ್ಞಾನದ ಪ್ರಕಾರ ಅತಿ ಬೇಗ ಕಾಣಿಸುತ್ತದೆ . ಶ್ರೀ ತಿರುಪತಿ ವೆಂಕಟೇಶ್ವರ ಸ್ವಾಮಿಯ ಆಭರಣವನ್ನು ಕಳ್ಳರು ಅಪಹರಿಸುತ್ತಾರೆ. ಗರಡದ್ವಜದಲ್ಲಿ ಓಂಕಾರ ನಾದಗಳು ಕೇಳಿಸುತ್ತದೆ.

ತಿರುವೆಲ್ಲೇರು ವೀರ ರಾಘವ ಸ್ವಾಮಿಯ ಮೂರ್ತಿಯು ಬೆವರುತದೆ ಎಂದು ಕಾಲಜ್ಞಾನದಲ್ಲಿ ಬರೆಯಲಾಗಿದೆ. ಅದು ಈಗ ನಡೆಯುವ ಸೂಚನೆ ಕಾಣಿಸುತ್ತಿದೆ. ಹಾಗೆಯೇ ದನ ಧನ್ಯಗಳ ಬೆಲೆಯೂ ಗಗನಕ್ಕೆ ಇರುತ್ತದೆ. ಅಕ್ಕಿಯನ್ನು ಕೊಂಡುಕೊಳ್ಳಲಾಗದೆ ತೀರ ಕಡುಬಡವರು ಹಸಿವಿನಿಂದ ಸಾವನ್ನಪ್ಪುತ್ತಾರೆ. ಈ ಹಸಿವಿನ ಸಾವುಗಳು‌ ಅತಿ ಹೆಚ್ಚಾಗುತ್ತದೆ. ಎಂದು ಬ್ರಹ್ಮೇಂದ್ರರವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. 2024 ರಿಂದ 2030ರ ಬಳಕೆ ಯಾವಾಗಲಾದರೂ ಸಂಭವಿಸಬಹುದು .ಹಾಗೆಯೇ 2024ರ ನಂತರ ವೀರ ಬ್ರಹ್ಮೇಂದ್ರ ರವರ ಮಠಕ್ಕೆ ಈಶಾನ್ಯ ದಿಕ್ಕಿನಲ್ಲಿ ಒಬ್ಬ ಮಹಿಳೆ ಗರ್ಭ ಧರಿಸುತ್ತಾಳೆ.

ಆ ಗರ್ಭವು ಒಡೆದು ಹೋಗಿ ಮಗು ಜನಿಸುತ್ತದೆ . ಆ ಸಮಯದಲ್ಲಿ ಆಕಾಶದಲ್ಲಿ ಗುಡುಗು ಮಿಂಚುಗಳು ಹೆಚ್ಚಾಗಿ ಅಲ್ಲಿನ ಬಹುಪಾಲು ಪ್ರಜೆಗಳು ಸಾಯುತ್ತಾರೆ ಎಂದು ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಬರೆದಿದ್ದಾರೆ . 2024ರ ನಂತರ ನಮ್ಮ ಭಾರತದಲ್ಲಿ ಒಂದು ದೊಡ್ಡ ಯುದ್ಧವೇ ನಡೆಯುತ್ತದೆ . ದೆಹಲಿಯಲ್ಲಿ ಬಾಂಬುಗಳ ಸುರಿಮಳೆಯಾಗುತ್ತದೆ. ಯುದ್ಧದಲ್ಲಿ ಬಹಳ ಮಂದಿ ಸಾವನ್ನಪ್ಪುತ್ತಾರೆ. ಅದೇ ಸಮಯದಲ್ಲಿ ಸಂಪೂರ್ಣ ನೆಲ್ಲೂರು ನೀರಿನಿಂದ ಮುಳುಗುತ್ತದೆ .

ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ 2024 ನಂತರ ಜಾತಿ ಮತಗಳ ಕಾರಣದಿಂದ ಒಬ್ಬರ ಬಗ್ಗೆ ಒಬ್ಬರು ಒಡೆದಾಡಿಕೊಂಡು ಸಾಯುತ್ತಾರೆ ಎಂದು ಬರೆದಿದ್ದಾರೆ. ಹಾಗೆಯೇ ಪಾಪತ್ಮರೂ ಹೆಚ್ಚು ಕಾಲ ಜೀವಿಸುತ್ತಾರೆ ಮತ್ತು ಒಳ್ಳೆಯವರು ಬಹು ಬೇಗನೆ ಸಾವನ್ನಪ್ಪುತ್ತಾರೆ ಎಂದು ಹೇಳಿದ್ದಾರೆ. ಬಂಗಾರ ಅಪರೂಪವಾಗುತ್ತದೆ ಎಂದು ಮತ್ತು ಇರುವ ಬಂಗಾರಕ್ಕೆ ಬೇಡಿಕೆ ಹೆಚ್ಚಾಗುತ್ತದೆ .ಎಂದು ಬಂಗಾರದ ಬೆಲೆ ಗಗನಕ್ಕೆ ಇರುತ್ತದೆ ಎಂದು ಕಾಲಜ್ಞಾನದಲ್ಲಿ ಹೇಳಿದ್ದಾರೆ. ‌ ಅದೇ ರೀತಿಯಾಗಿ ಈಗ ಪ್ರಸ್ತುತ ನಡೆಯುತ್ತಿರುವುದು ನಮಗೆ ತಿಳಿದಿದೆ.

ಹಿತ್ತಾಳೆಯ ವಸ್ತುಗಳ ಬೆಲೆಗಳು ಕೂಡ ಜಾಸ್ತಿಯಾಗುತ್ತದೆ . ಎಂದು ತಿಳಿಸಿದ್ದಾರೆ . ಕೃಷ್ಣಾ ನದಿ ತೀರದ ಬೆಜವಾಡ ಕನಕ ದುರ್ಗಾದೇವಿಯ ಮೂಗುತಿ ಮೂಗುತಿಯನ್ನು ಮಾರುತ್ತಾರೆ ಎಂದು ಬ್ರಹ್ಮೇಂದ್ರ ರವರು ತಮ್ಮನ ಕಾಲಜ್ಞಾನದಲ್ಲಿ ಹೇಳಿದ್ದಾರೆ. ಒಂದು ವೇಳೆ ಜಲಪ್ರಳಯವಾಗಿ ಅಥವಾ ಭೂಕಂಪ ಸಂಭವಿಸಿ ನಾಗಾರ್ಜುನ ಸಾಗರವು ಬಿರುಕು ಸಂಭವಿಸಿ ವಿಪ್ಪತ್ತು ಸಂಭವಿಸಿದರೆ ಕೃಷ್ಣಾ ನದಿಯು ಇಂದ್ರಕಿಲಾದ್ರಿಯನ್ನು ಮುಟ್ಟುವ ತೊಂದರೆ ಇದೆ. 5000 ವರ್ಷಗಳ ನಂತರ ಗಂಗಾ ನದಿ ಕಾಣಿಸದೆ ಹೋಗುತ್ತದೆ .ಎಂದು ಬ್ರಹ್ಮೇಂದ್ರರವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ . ಇದರ ಕುರಿತಾಗಿ ವಿಭಿನ್ನವಾದ ವಾದ ವಿವಾದಗಳು ಕೂಡ

ಈಗ ನಡೆಯುತ್ತಿದೆ. ಕೃಷ್ಣಾ ನದಿಯ ತೀರದಲ್ಲಿ ಒಂದು ಬಂಗಾರದ ರಥವು ಪ್ರತ್ಯಕ್ಷವಾಗುತ್ತದೆ . ಅದನ್ನು ನೇರವಾಗಿ ನೋಡುವವರಿಗೆ ಅದರ ಕಾಂತಿಯಿಂದ ಕಣ್ಣುಗಳು ಕಾಣಿಸದೆ ಕುರುಡರಾಗುತ್ತಾರೆ ಎಂದು ಕಾಲಜ್ಞಾನದಲ್ಲಿ ಬರೆಯಲಾಗಿದೆ. ಭವಿಷ್ಯತ್ತಿನಲ್ಲಿ ಪರ್ವತಕ್ಕೆ ಒಂದು ಮೊಸಳೆ ಉದ್ಭವಿಸುತ್ತದೆ. ಇದು ಎಂಟು ದಿನಗಳ ಕಾಲ ಇದ್ದು ಭ್ರಮರಾಂಬ ದೇವಸ್ಥಾನದಲ್ಲಿ ಪ್ರವೇಶಿಸಿ ಗಂಡು ಮೇಕೆ ಹಾಗೆ ಕೂಗಿ ಮಾಯವಾಗುತ್ತದೆ ಎಂದು ಬರೆದಿದ್ದಾರೆ. ಬೆಂಗಳೂರಿನಲ್ಲಿರುವ ಕಾಮಾಕ್ಷಿ ದೇವಾಲಯದಲ್ಲಿ ಕಾಮಾಕ್ಷಿ ವಿಗ್ರಹದಿಂದ ರಕ್ತ ಸೋರುತ್ತದೆ.

ಕಂಚಿ ಕಾಮಾಕ್ಷಿಯ ಕಣ್ಣುಗಳು ಕೆಂಪಾಗುತ್ತದೆ. ಆ ಕೆಡುಗಾಲದಲ್ಲಿ ಲಕ್ಷಾಂತರ ಜನರು ಮರಣ ಹೊಂದುತ್ತಾರೆ ಎಂದು ತಮ್ಮ ಕಾಲಜ್ಞಾನದಲ್ಲಿ ಬರೆದಿದ್ದಾರೆ. ಈ ಮುಂಬರುವ ವರ್ಷಗಳಲ್ಲಿ ಅಕ್ರಮ ಸಂಬಂಧಗಳು ತುಂಬಾ ಹೆಚ್ಚಾಗುತ್ತದೆ . ಮತ್ತು ಇವು ಕೊಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಕೂಡ ತಮ್ಮ ಕಾಲಜ್ಞಾನದಲ್ಲಿ ಬರೆಯಲಾಗಿದೆ. ಶ್ರೀ ಕಾಳಹಸ್ತಿ ದೇವಸ್ಥಾನದಲ್ಲಿ ಕಳ್ಳತನ ವಾಗುತ್ತದೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿಯು ಶ್ರೀಶೈಲವನ್ನು ಬಿಟ್ಟು ವಿಂಧ್ಯ ಪರ್ವತಕ್ಕೆ ಹೊರಟು ಹೋಗುತ್ತಾರೆ

ಎಂದು ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಬರೆದಿದ್ದಾರೆ. ಮನುಷ್ಯರಲ್ಲಿ ಅಕಾಲಿಕ ಮರಣ ಹೆಚ್ಚಾಗುತ್ತದೆ ಎಂದು ಸಹ ತಿಳಿಸಿದ್ದಾರೆ . ಅದು ಸಹ ಬಹಳಷ್ಟು ಸತ್ಯವಾಗಿದ್ದು ಈ ಪ್ರಸ್ತುತ ಪ್ರಪಂಚದಲ್ಲಿ ಚಿಕ್ಕ ವಯಸ್ಸಿನಲ್ಲಿ ಬಹಳಷ್ಟು ಮಂದಿ ಮಂದಿ ಈಹ ಲೋಕವನ್ನು ತ್ಯಜಿಸುತ್ತಿದ್ದಾರೆ ಮುಂಬರುವ ವರ್ಷಗಳಲ್ಲಿ ಬೇವಿನ ಮರದಲ್ಲಿ ಅಮೃತದಂತಹ ದ್ರವ ಸೋರಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ. ಶ್ರೀಶೈಲಕ್ಕೆ ಹತ್ತಿರದಲ್ಲಿರುವ ಬೆಟ್ಟಗಳಿಂದ ಬಾರಿ ಗಾತ್ರದ ಬಂಡೆಗಳು ಉರುಳಿ ಬಿದ್ದು ಬಹಳಷ್ಟು ಜನರ ಮಂದಿ ಪ್ರಾಣಕ್ಕೆ ಅಪಾಯವಿದೆ. ಹಾಗೆಯೇ ಹೊಡೆದು ಹೋದಂತಹ ಕಲ್ಲಿನ ಚೂರುಗಳು ಆಕಾಶಕ್ಕೆ ಜಿಗಿಯುತ್ತದೆ ಎಂದು ತಮ್ಮ ಕಾಲಜ್ಞಾನದಲ್ಲಿ ಬರೆದಿದ್ದಾರೆ.

ದೇವಿ ಶಕ್ತಿ ಪೀಠಗಳಲ್ಲಿ ಒಂದಾದಂತಹ ಅಲಂಪುರ ಜೋಗುಳಾಂಬ ಶಕ್ತಿ ಪೀಠ. ಇದು ಮೆಹಬೂಬ ನಗರ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ತಾಯಿ ಜೋಗುಳಾಂಬ ಕಣ್ಣಿನಿಂದ ನೀರು ಮತ್ತು ಸ್ತನಗಳಿಂದ ಹಾಲು ಬರುತ್ತದೆ ಎಂದು ಭ್ರಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಕರ್ನೂಲು ಜಿಲ್ಲೆಯಲ್ಲಿ ಯಾಗಂಟಿ ಪ್ರಸಿದ್ಧ ಪುಣ್ಯಕ್ಷೇತ್ರವಿದೆ. ಅದರಲ್ಲಿ ಯಾಗಂಟಿ ನಂದೀಶ್ವರನು ಬೆಳೆದು ದೊಡ್ಡದಾಗಿ ಕಲ್ಲುಗಳನ್ನು ನುಂಗುತ್ತಾನೆ ಎಂದು ತಿಳಿಸಿದ್ದಾರೆ. ಅದೇ ರೀತಿಯಾಗಿ ಸುಮಾರು ನೂರು ವರ್ಷಗಳ ಹಿಂದೆ ಈ ನಂದೀಶ್ವರನ ಸುತ್ತ ಹಾಕಲು ಜಾಗವಿತ್ತಂತೆ, ಆದರೆ ಈಗ ನಂದೀಶ್ವರನೇ ಬೆಳೆದು

ಆ ಜಾಗವನ್ನು ಆವರಿಸಿಕೊಂಡಿದ್ದಾನೆ ಪ್ರತಿ 20 ವರ್ಷಕ್ಕೊಮ್ಮೆ ಒಂದು ಅಂಗುಲದಷ್ಟು ಬೆಳೆಯುತ್ತದೆ ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಭಾರತ ದೇಶವು ಅಗ್ರ ರಾಷ್ಟ್ರವಾಗುತ್ತದೆ. 2,28ರ ಹೊತ್ತಿಗೆ ಪ್ರಪಂಚದಲ್ಲೇ ವಿಶ್ವವೂ ಬಲಿಷ್ಠ ರಾಷ್ಟ್ರ ಭಾರತವು ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತದೆ. ಎಂದು ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಬರೆದಿದ್ದಾರೆ. ಮತ್ತು ಹಸುವಿನ ಹೊಟ್ಟೆಯಲ್ಲಿ ಮನುಷ್ಯನ ಜನನವಾಗುತ್ತದೆ ಎಂದು ಸಹ ಬರೆದಿದ್ದಾರೆ.

ಭವಿಷ್ಯತ್ತಿನಲ್ಲಿ ಪಂಚಾಂಗಗಳು ದಾರಿ ತಪ್ಪುತ್ತವೆ ಎಂದು ಬ್ರಹ್ಮೇಂದ್ರ ರವರು ಹೇಳಿದ ಹಾಗೆಯೇ ಈ ಸಮಯದಲ್ಲಿ ನಡೆಯುತ್ತಿದೆ ಇನ್ನು ಮುಂದೆ ಇನ್ನು ನಡೆಯುವ ಅವಕಾಶಗಳು ಕಾಣಿಸುತ್ತಿದೆ. ಜನರ ಕಣ್ಣುಗಳಲ್ಲಿ ಬೆಂಕಿ ಕಾಣಿಸುತ್ತದೆ ಬಾಯಿಯಲ್ಲಿ ಬೊಬ್ಬೆ ಬರುತ್ತದೆ. ರಕ್ತದ ವಾಂತಿ ಮಾಡುತ್ತ ಜನರು ಮರಣ ಹೊಂದುತ್ತಾರೆ. ಎಂದು ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಕೃಷ್ಣ ಮತ್ತು ಗೋದಾವರಿ ನದಿಗಳ ಮಧ್ಯ ಹಸುಗಳು ಗುಂಪು ಗುಂಪು ಆಗಿ ಸಾವನ್ನಪ್ಪುತ್ತವೆ. ಮತ್ತು ಸೂರ್ಯ ಮಂಡಲದಲ್ಲಿ ಮಾತುಗಳ ರೂಪದಲ್ಲಿ ಶಬ್ದಗಳು ಕೇಳಿಸುತ್ತದೆ. ರಾತ್ರಿ ಹಗಲೆನ್ನದೆ ರಣಹದ್ದುಗಳು ಗುಂಪು ಗುಂಪಾಗಿ ಕೂಗುತ್ತಿರುತ್ತವೆ.

ನೀರಿನಲ್ಲಿರುವ ಮೀನುಗಳು ನಾವು ಸಾಯುತ್ತಿದ್ದೇವೆ ಎಂದು ಭಾವಿಸಿ ಹೊರಗೆ ಬರುತ್ತದೆ. ವಿಚಿತ್ರವಾದ ಈಚಲು ಮರ ಒಂದು ರಾತ್ರೋರಾತ್ರಿ ಬೆಳೆದು ನಿಲ್ಲುತ್ತದೆ. ಮತ್ತೆ ಬಿದ್ದು ಹೋಗುತ್ತದೆ . ಹೀಗೆ ಎಂಟು ವರ್ಷಗಳು ನಡೆದ ನಂತರ ಅದು ಪೂರ್ತಿಯಾಗಿ ನಶಿಸಿ ಹೋಗುತ್ತದೆ. ಇದು ಮೊದಲಾದ ನಂತರ ದೇಶದಲ್ಲಿ ತೀವ್ರ ಬರಗಾಲ ಶುರುವಾಗುತ್ತದೆ. ಹೀಗೆ ಸಾವಿರಾರು ವಿಷಯಗಳ ಬಗ್ಗೆ ಶ್ರೀ ಪೋತನೂರಿ ವೀರ ಬ್ರಹ್ಮೇಂದ್ರನವರು ಕಾಲಜ್ಞಾನದಲ್ಲಿ ಬರೆದಿದ್ದಾರೆ. ಹೀಗೆ ಪೊತನೂರಿ ವೀರ ಬ್ರಹ್ಮೇಂದ್ರನವರು ರವರು ಹೇಳಿರುವ ಸಾಕಷ್ಟು ವಿಷಯಗಳು ಭೂಮಿಯ ಮೇಲೆ ನಡೆದಿದೆ ಇನ್ನೂ ಕೆಲವು ನಡೆದಿಲ್ಲ ಹಾಗೆಂದ ಮಾತ್ರಕ್ಕೆ ಸಂಭವಿಸುವುದಿಲ್ಲ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಬರುವ ಬದಲಾವಣೆ ಕುರಿತು ಭಗವಂತನ ಅನುಗ್ರಹದಿಂದ ಕಾಲವೇ ನಮಗೆ ಸಮಾಧಾನ ನೀಡುತ್ತದೆ.

Leave a Comment