ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ.

ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮಾವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ನಂತರ ಐದು ಅಗರಬತ್ತಿಯನ್ನು ಹಚ್ಚಿ. ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ, ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ. ಯಾವುದೇ ವಸ್ತುವನ್ನು ದಾನ ಮಾಡುವಾಗ, ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ.

ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ. ಯಾವುದೇ ಒಳ್ಳೆಯ ಕೆಲಸಕ್ಕೆ ಹೋದಾಗ, ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತನನ್ನು ನೆನೆದು, ನಿಮ್ಮ ಬೇಡಿಕೆ ಮುಂದಿಡಿ. ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.
ಕಪ್ಪು ಎಳ್ಳು ಕೆಟ್ಟ ದಿನಗಳನ್ನು ದೂರ ಮಾಡುತ್ತದೆ.

ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದರಿಂದ ರಾಹು-ಕೇತು-ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷಾ, ಸಾಡೆ ಸಾಥಿ, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.

Leave a Comment