ದೇವರ ಕೋಣೆಯಲ್ಲಿ ಈ ಐದು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ

ದೇವರ ಕೋಣೆಯಲ್ಲಿ ಈ ಐದು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.
ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ ಎರಡು ವಸ್ತುಗಳು ಇಡುವುದರಿಂದ ಮನೆಯಲ್ಲಿ ಸಮಸ್ಯೆಗಳು, ಕಷ್ಟಗಳು ಬರುವುದು ಖಚಿತ. ಹಾಗಾದರೆ ದೇವರ ಕೋಣೆಯಲ್ಲಿ ಯಾವ ಐದು ವಸ್ತುಗಳನ್ನು ಇರಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ವಾಸ್ತುಪ್ರಕಾರ ಯಾವುದೇ ಮನೆಯಲ್ಲಿ ದೇವರ ಕೋಣೆ ಅಥವಾ ಪೂಜೆಯ ಮಂದಿರ ಪ್ರಮುಖವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳ ಪ್ರಕಾರ ಅಶುಭವೆಂದು ಪರಿಗಣಿಸಲಾದ ಕೆಲವು ವಸ್ತುಗಳನ್ನು ಮನೆಯ ದೇವರ ಕೋಣೆಯೊಳಗೆ ಇಡಬಾರದು. ಇದರಿಂದ ಮನಸ್ಸು ಚಂಚಲತೆಯ ಜೊತೆಗೆ, ಧನಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ, ಮರೆತೂ ದೇವರ ಕೋಣೆಯಲ್ಲಿ ಇಡಬಾರದ ವಸ್ತುಗಳಾವುವು ಎಂಬುದನ್ನು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ದೇವರಿಗೆ ಅಲಂಕಾರ ಮಾಡಿರುವಂತಹ ಹೂವನ್ನು ಹೆಚ್ಚು ದಿನ ಹಾಗೆಯೇ ಬಿಡಬಾರದು. ಒಂದು ವೇಳೆ ಹೂವು ಚೆನ್ನಾಗಿದೆ ಎಂದು ಎರಡು ಮೂರು ದಿನಗಳ ಕಾಲ ಹಾಗೆ ಬಿಟ್ಟರೆ ದೋಷವು ಉಂಟಾಗುತ್ತದೆ.
ಒಂದು ವೇಳೆ ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟಿದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ವಿಗ್ರಹಗಳನ್ನು ಇಟ್ಟುಕೊಂಡು ಅಭಿಷೇಕ, ಪೂಜೆಯನ್ನು ಮಾಡದಿದ್ದರೆ ಅದರಿಂದ ದೋಷವು ಉಂಟಾಗುತ್ತದೆ.

ದೇವರ ಕೋಣೆಯಲ್ಲಿ ಉಗ್ರರೂಪವಾದ ಚಿತ್ರಪಟವನ್ನು ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು. ಮನುಷ್ಯನಿಗೆ ಅದೃಷ್ಟವನ್ನು ತಂದುಕೊಡುವ ಹಾಗೂ ಶಾಂತಿಯನ್ನು ನೀಡುವ ದೇವರ ಚಿತ್ರಪಟವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಗೆ ದೇವರ ಕೋಣೆಯಲ್ಲಿ ಒಣಗಿದ ಹೂವುಗಳನ್ನು ಇಡಬಾರದು ಮತ್ತು ದೇವರಕೋಣೆಯಲ್ಲಿ ಉಗ್ರ ಸ್ವರೂಪವಾದ ದೇವರ ಚಿತ್ರಪಟ ಅಥವಾ ವಿಗ್ರಹಗಳನ್ನು ಇಡಬಾರದು.
ಶಂಖದ ನಿಯಮ: ಪೂಜೆಯ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಶಂಖಗಳನ್ನು ಇಡಬೇಡಿ. ಪೂಜೆಗೆ ಪ್ರತಿದಿನ ಒಂದೇ ಒಂದು ಶಂಖವನ್ನು ಬಳಸಿ. ಶಂಖವನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಅದನ್ನು ಪ್ರತಿದಿನ ಬದಲಾಯಿಸುವುದು ಸರಿಯಲ್ಲ.

ದೇವಸ್ಥಾನದಲ್ಲಿ ಹರಿತವಾಗಿರುವ ಯಾವುದೇ ವಸ್ತುವನ್ನು ಇಡಬೇಡಿ. ದೇವಸ್ಥಾನದಲ್ಲಿ ಚೂಪಾದ ಕಬ್ಬಿಣದ ವಸ್ತುಗಳನ್ನು ಇಡುವುದರಿಂದ ನಿಮ್ಮ ಮೇಲೆ ಶನಿಯ ದುಷ್ಪರಿಣಾಮಗಳು ಉಂಟಾಗುತ್ತವೆ ಮತ್ತು ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರಸಾದದಲ್ಲಿ ಹಣ್ಣುಗಳನ್ನು ಕತ್ತರಿಸಲು ಚಾಕುವನ್ನು ಬಳಸಿದರೂ, ಅದನ್ನು ಬಳಸಿದ ತಕ್ಷಣ ಅದನ್ನು ಆ ಸ್ಥಳದಿಂದ ಹೊರಗೆ ಇಡಿ.

ಪೂರ್ವಜರ ಫೋಟೋ ಇಡಬೇಡಿ. ಪೂಜೆಯ ಕೋಣೆಯಲ್ಲಿ ಪೂರ್ವಜರ ಭಾವಚಿತ್ರವನ್ನು ಹಾಕಬಾರದು. ದೇವರ ಕೋಣೆಯಲ್ಲಿ ಪೂರ್ವಜರ ಚಿತ್ರಗಳನ್ನು ಹಾಕುವ ಬದಲು ನಿಮ್ಮ ಮನೆಯ ದಕ್ಷಿಣ ಗೋಡೆಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ನಿಮ್ಮ ಬಗ್ಗೆ ಸಂತಸಪಡುತ್ತಾರೆ. ದೇವರ ಕೋಣೆಯಲ್ಲಿ ಯಾವ ರೀತಿಯ ಶಿವಲಿಂಗ ಇರಬೇಕು ಎಂಬುದರ ಬಗ್ಗೆ ಶಾಸ್ತ್ರಗಳಲ್ಲಿ ವಿಶೇಷ ನಿಯಮಗಳನ್ನು ಹೇಳಲಾಗಿದೆ. ದೇವರ ಕೋಣೆಯಲ್ಲಿ ಶಿವಲಿಂಗವನ್ನು ಇಡಲು ಬಯಸಿದರೆ ಅದು ಹೆಬ್ಬೆರಳು ಗಾತ್ರಕ್ಕಿಂತ ದೊಡ್ಡದಾಗಿರಬಾರದು ಎಂಬುದನ್ನು ನೆನಪಿಡಿ. ಶಿವಲಿಂಗವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ.

Leave a Comment