ದೇವರ ಕೋಣೆಯಲ್ಲಿ ಈ 3 ಮೂರ್ತಿಗಳನ್ನು ಯಾವತ್ತಿಗೂ ಇಡಬಾರದು? ವಾಸ್ತುದೋಷ ಉಂಟಾಗುತ್ತದೆ

ನಾವು ಈ ಲೇಖನದಲ್ಲಿ ದೇವರ ಕೋಣೆಯಲ್ಲಿ, ಯಾವ ಮೂರು ಮೂರ್ತಿಗಳನ್ನು ಇಟ್ಟರೆ, ವಾಸ್ತುದೋಷ ಉಂಟಾಗುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಈಶ್ವರನು ನಮ್ಮೆಲ್ಲರ ಹೃದಯದಲ್ಲಿ ಸದಾ ವಾಸವಾಗಿದ್ದಾನೆ. ಈಶ್ವರನು ಈ ಸೃಷ್ಟಿಯ ಕಣಕಣದಲ್ಲೂ, ಸದಾ ನೆಲೆಸಿದ್ದಾರೆ.ಆದರೆ ಯಾವಾಗ ನಾವು ಭಗವಂತನನ್ನು ಅವರ ಮಂಗಳ ಸರ್ಪದಲ್ಲಿ ನೆಲೆಸಿರುವಂತೆ ಮೂರ್ತಿಯನ್ನು ನೋಡಿ ಯಾವಾಗ ಪೂಜೆ ಮಾಡುತ್ತೇವೆಯೋ ಇದರಿಂದ ನಮಗೆ ಪೂಜೆಯ ಅಧಿಕ ಲಾಭಗಳು ಸಿಗುತ್ತದೆ.

ಭಗವಂತನನ್ನು ಮೂರ್ತಿಯ ರೂಪದಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡುವುದರ ಜೊತೆಗೆ ,ಆಧ್ಯಾತ್ಮಿಕ ಅಲ್ಲದೆ ಅದರ ಜೊತೆಗೆ ವೈಜ್ಞಾನಿಕ ರಹಸ್ಯವು ಅಡಗಿದೆ.ಯಾವಾಗ ನಾವು ನಮ್ಮ ಆರಾಧ್ಯ ದೈವನನ್ನು ಮೂರ್ತಿಯ ರೂಪದಲ್ಲಿ ನೋಡುತ್ತೇವೆಯೋ, ಆಗ ನಮ್ಮ ಮನಸ್ಸು ಮತ್ತು ಆತ್ಮ ಸಂಪೂರ್ಣ ರೂಪದಲ್ಲಿ ಭಗವಂತನಿಗೋಸ್ಕರ ಸಮರ್ಪಣೆ ಆಗುತ್ತದೆ. ಯಾವಾಗ ಆ ಮೂರ್ತಿ ಭಿನ್ನವಾಗುತ್ತದೆಯೋ, ಅಥವಾ ನಮಗೆ ತಿಳಿಯದೆ ಕೆಳಗೆ ಬೀಳುತ್ತದೆಯೋ, ಆಗ ನಮಗೆ ತುಂಬಾ ನೋವು ದುಃಖ ಉಂಟಾಗುತ್ತದೆ .

ಯಾಕೆಂದರೆ ನಮ್ಮ ಶ್ರದ್ದೆ ಮತ್ತು ಭಕ್ತಿ ನಂಬಿಕೆ ಮೂರ್ತಿಯಲ್ಲಿ ಇರುವ, ಭಗವಂತನಿಗೆ ಹೊಂದಿ ಕೊಂಡಿರುತ್ತದೆ. ಪ್ರಾಚೀನ ಕಾಲದಿಂದಲೂ , ಮೂರ್ತಿಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ, ತುಂಬಾ ಅಧಿಕವಾದ ಮಹತ್ವವನ್ನು ಕೊಡುತ್ತಾ ಬಂದಿದ್ದೇವೆ. ಮನೆಯಲ್ಲಿ ಮೂರ್ತಿಗಳನ್ನು ಇಡುವುದಾಗಲಿ, ಅವುಗಳ ವಿಧಿ ವಿಧಾನದಿಂದ ಪೂಜೆ ಮಾಡುವುದರಿಂದ, ಮನುಷ್ಯನ ಶರೀರ ಮತ್ತು ಮನಸ್ಸನ್ನು ಶುದ್ಧಿ ಮಾಡುತ್ತವೆ. ಶಾಸ್ತ್ರಗಳ ಅನುಸಾರವಾಗಿ ಪ್ರತಿನಿತ್ಯ ಮೂರ್ತಿಗಳ ಪೂಜೆಯನ್ನು ಮಾಡುವುದರಿಂದ ,ಭಗವಂತನ ಮೇಲಿನ ಶ್ರದ್ಧೆ ,

ಭಕ್ತಿ , ನಂಬಿಕೆ ಹೆಚ್ಚಾಗುತ್ತದೆ. ಯಾವಾಗ ನಮ್ಮ ದೇವರ ಕೋಣೆಯಲ್ಲಿ ಭಗವಂತನ ಮೂರ್ತಿಯನ್ನು ಇಡುತ್ತೇವೆಯೋ, ಆಗ ನಮ್ಮ ಸಂಪೂರ್ಣ ಏಕಾಗ್ರತೆ ದೇವರ ಮೇಲೆ ಇರುತ್ತದೆ. ಈ ಮೂಲಕ ಭಗವಂತನೊಂದಿಗೆ, ನಾವು ಸಂಪರ್ಕ ಹೊಂದುತ್ತೇವೆ.ಇದರಿಂದ ನಮ್ಮ ಮನಸ್ಸು ಸಂಪೂರ್ಣ ಶಾಂತ ಗೊಳ್ಳುತ್ತದೆ . ನಂತರ ನಾವು ಈಶ್ವರನ ಭಕ್ತಿಯಲ್ಲಿ ತಲ್ಲೀನ ಆಗುತ್ತೇವೆ. ಆದರೆ ದೇವರ ಮನೆಯಲ್ಲಿ ದೇವತೆಗಳ ಮೂರ್ತಿಗಳನ್ನು ಇಡುವುದಕ್ಕೂ ಕೂಡ ಕೆಲವು ನಿಯಮಗಳಿವೆ.

ದೇವರ ಮನೆಯಲ್ಲಿ ಮೂರ್ತಿಗಳನ್ನು ಇಡಲು ಮತ್ತು ಪೂಜೆ ಮಾಡಲು , ಶಾಸ್ತ್ರಗಳ ಪ್ರಕಾರ ಕೆಲವು ವಿಧಿ ವಿಧಾನಗಳಿವೆ. ನಮ್ಮ ವಾಸ್ತುಶಾಸ್ತ್ರದಲ್ಲಿ ದೇವರ ಕೋಣೆಯಲ್ಲಿ ವಿಗ್ರಹಗಳನ್ನು, ಇಡಲು ಕೆಲವು ಸರಿಯಾದ ಪದ್ಧತಿಗಳನ್ನು ತಿಳಿಸಿದ್ದಾರೆ. ನಾವು ಕೆಲವು ನಿಯಮಗಳನ್ನು ಪಾಲಿಸಿ ದೇವಾನುದೇವತೆಗಳ ಪೂಜೆಯನ್ನು ಮಾಡಿದರೆ , ಖಂಡಿತವಾಗಿ ನಮ್ಮ ಜೀವನ ಸುಖಕರವಾಗಿ ಸಾಗುತ್ತದೆ. ತಪ್ಪಾದ ರೀತಿಯಲ್ಲಿ ಮೂರ್ತಿಯನ್ನು ಇಡುವುದಾಗಲಿ, ಪೂಜೆ ಮಾಡುವುದಾಗಲೀ, ವಿಚಿತ್ರವಾದ ಮೂರ್ತಿಗಳನ್ನು ಸ್ಥಾಪನೆ ಮಾಡುವುದಾಗಲಿ , ದೇವರ ಕೋಣೆಯಲ್ಲಿ ದೇವರ ವಿಗ್ರಹ ಬಿಟ್ಟು ಬೇರೆ ಚಿತ್ರಗಳನ್ನು ಇಡುವುದಾಗಲಿ ,

ಇತ್ಯಾದಿ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ನಕಾರಾತ್ಮಕವಾದ ಶಕ್ತಿ ಸಂಚಾರ ಉಂಟಾಗುತ್ತದೆ. ನಿಯಮಗಳನ್ನು ಪಾಲಿಸದೆ ಹೋದರೆ, ನಾವು ಮಾಡಿದ ಪೂಜೆಯ ಫಲ ಸಿಗುವುದಿಲ್ಲ . ಶಾಸ್ತ್ರಗಳ ಪ್ರಕಾರವಾಗಿ ಕೆಲವು ದೇವಾನುದೇವತೆಗಳ ವಿಗ್ರಹಗಳನ್ನು , ದೇವರ ಕೋಣೆಯಲ್ಲಿ ಇಡಬಾರದು. ಯಾಕಂದರೆ ಇವರ ಪೂಜೆಯ ವಿಧಿವಿಧಾನ ತುಂಬಾ ಕಠಿಣವಾಗಿ ಇರುತ್ತದೆ. ಈ ದೇವಾನು ದೇವತೆಗಳ ಪೂಜೆ ಮಾಡುವಾಗ ಕಠಿಣವಾದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ .

ಇದನ್ನು ಸಾಮಾನ್ಯ ಮನುಷ್ಯರು ಪಾಲಿಸಲು ಅಸಾಧ್ಯ ವಾಗುತ್ತದೆ. ಈ ಒಂದು ಕಾರಣದಿಂದಾಗಿ ದೇವರ ಮನೆಯಲ್ಲಿ ಕೆಲವೊಂದು ಮೂರ್ತಿಗಳನ್ನು ಇಡಲು ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಒಪ್ಪುವುದಿಲ್ಲ. ಕೆಲವು ಜನರು ಗೊತ್ತಿದ್ದು ಗೊತ್ತಿಲ್ಲದೇ , ಈ ಮೂರ್ತಿಗಳನ್ನು ತಂದು ದೇವರ ಮನೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಇದರ ಅಶುಭ ಪ್ರಭಾವ ಅವರ ಮೇಲೆ ಉಂಟಾಗುತ್ತದೆ. ಕೆಲವು ದೇವಾನುದೇವತೆಗಳ ಪೂಜೆಯನ್ನು ಕಠಿಣ ಪರಿಶ್ರಮದಿಂದ ಮತ್ತು ಅಘೋರಿ ವಿದ್ಯೆಯಿಂದ ಮಾಡಲಾಗುತ್ತದೆ. ಇಂತಹ ತಾಂತ್ರಿಕ ಪೂಜೆಗಳನ್ನು ನಾವು ನಮ್ಮ ಮನೆಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೆಲವು ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು .

ಜೊತೆಗೆ ವಾಸ್ತು ಶಾಸ್ತ್ರದ ಅನುಸಾರವಾಗಿ, ದೇವಾನುದೇವತೆಗಳ ಮೂರ್ತಿಗಳನ್ನು ಮನೆಯಲ್ಲಿ ಇಡುವ ಮೊದಲು ಅವುಗಳ ಸ್ವರೂಪವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪ್ರತಿಯೊಂದು ದೇವಾನು ದೇವತೆಗಳನ್ನು, ಒಂದು ವಿಶಿಷ್ಟವಾದ ರೂಪದಲ್ಲಿ ಪೂಜೆ ಮಾಡಬೇಕು.ಆಗ ಮಾತ್ರ ಅದರ ಶುಭಫಲ ಸಿಗುತ್ತದೆ. ಹಾಗಾಗಿ ನಾವು ಯಾವ ಮೂರ್ತಿಗಳನ್ನು ದೇವರ ಮನೆಯಲ್ಲಿ ಇಟ್ಟರೆ, ಶುಭ ಮತ್ತು ಅಶುಭ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಮತ್ತು ವಾಸ್ತು ಶಾಸ್ತ್ರದ ಅನುಸಾರವಾಗಿ ದೇವರ ಕೋಣೆ ಹೇಗಿರಬೇಕು? ದೇವರ ಕೋಣೆಯ ದಿಕ್ಕು ಯಾವುದು ಆಗಿರಬೇಕು ?

ಮತ್ತು ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಯಾವ ಮಹತ್ವಪೂರ್ಣ ನಿಯಮಗಳನ್ನು, ಪಾಲಿಸಬೇಕು. ಎಲ್ಲಾ ವಿಷಯಗಳನ್ನು ವಿಸ್ತಾರವಾಗಿ ತಿಳಿಯೋಣ. ಮನೆಯಲ್ಲಿ ದಿನನಿತ್ಯ ಪೂಜೆ ಮಾಡುವುದರಿಂದ, ಮಂತ್ರಗಳನ್ನು ಹೇಳುವುದರಿಂದ, ಮನೆಯಲ್ಲಿ ಸಂತೋಷ ನೆಲೆಸುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಆದರೆ ಇವೆಲ್ಲಾ ವಾಸ್ತು ಪ್ರಕಾರವಾಗಿ ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿ ಇದ್ದಾಗ ಮಾತ್ರ ನಡೆಯುತ್ತದೆ . ಒಂದು ವೇಳೆ ದೇವರ ಕೋಣೆಯ ದಿಕ್ಕು ತಪ್ಪಾಗಿದ್ದರೆ, ನಮ್ಮ ಮನೆಯವರ ಮೇಲೆ ವಿರುದ್ಧವಾದ ಫಲ ಸಿಗುತ್ತದೆ . ವಾಸ್ತುವಿನ ಪ್ರಕಾರ ದೇವರ ಕೋಣೆ ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಇರಬೇಕು.

ಈಶಾನ್ಯ ದಿಕ್ಕು ಎಂದರೆ ಪೂರ್ವ ಮತ್ತು ಉತ್ತರದ ನಡುವೆ ಬರುತ್ತದೆ. ಯಾಕೆಂದರೆ ಈ ದಿಕ್ಕಿನಲ್ಲಿ ಎಲ್ಲಾ ರೀತಿಯ ಸಕಾರಾತ್ಮಕ ಶಕ್ತಿಗಳು, ನೆಲೆಸಿರುತ್ತದೆ.ಈ ದಿಕ್ಕಿನಲ್ಲಿ ದೇವರ ಕೋಣೆಯನ್ನು ಪ್ರತಿ ಸ್ಥಾಪಿಸುವುದರಿಂದ , ಪೂಜೆ ಪಠಣಗಳನ್ನು ಮಾಡುವುದರಿಂದ ಅಧಿಕ ಫಲಗಳು ಸಿಗುತ್ತದೆ. ವಾಸ್ತುವಿನ ಅನುಸಾರವಾಗಿ ಯಾವತ್ತಿಗೂ, ದೇವರ ಕೋಣೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ದೇವರ ಕೋಣೆಯಲ್ಲಿ ಹಳೆಯ ಬಟ್ಟೆಗಳು ಒಡೆದು ಹೋಗಿರುವಂತಹ ಮೂರ್ತಿಗಳು, ಹಳೆಯ ಪಾತ್ರೆಗಳು ,

ಚರ್ಮದಿಂದ ರೆಡಿ ಆದಂತಹ ವಸ್ತುಗಳು ಇತ್ಯಾದಿ ನಕಾರಾತ್ಮಕ ವಸ್ತುಗಳು ಇರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಇದರ ನಕರಾತ್ಮಕ ಪ್ರಭಾವ ನಮ್ಮ ಮನೆಯ ಮೇಲೆ ಬೀಳುತ್ತದೆ. ದೇವರ ಕೋಣೆಯಲ್ಲಿ ಯಾವಾಗಲೂ ದೇವರ ದೀಪ ಹಚ್ಚಿರಬೇಕು .ಪ್ರತಿದಿನ ಸಾಯಂಕಾಲ ಕೋಣೆಯಲ್ಲಿ ಒಂದು ದೇವರ ದೀಪವನ್ನು ಹಚ್ಚಿರಬೇಕು .ಇದರಿಂದ ದೇವರ ಕೋಣೆಯಲ್ಲಿ, ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.ಯಾವ ಸ್ಥಾನದಲ್ಲಿ ದೇವರ ಕೋಣೆ ಇರುತ್ತದೆಯೋ ಅಲ್ಲಿ ಸ್ನಾನ ಮಾಡದೆ ಹೋಗಬಾರದು . ಸ್ನಾನ ಮಾಡದೆ ದೇವರ ಮನೆಯನ್ನು ಸ್ಪರ್ಶ ಮಾಡಬಾರದು. ಚಂದ್ರ ಗ್ರಹಣ ಆಗಲಿ ,ಸೂರ್ಯ ಗ್ರಹಣ ಆಗಲಿ,

ಈ ಸಮಯದಲ್ಲಿ ಒಂದು ಬಟ್ಟೆಯಿಂದ ಮುಚ್ಚಬೇಕು.ಇದರಿಂದ ದೇವರ ಕೋಣೆ ಪವಿತ್ರವಾಗಿ ಇರುತ್ತದೆ. ಗಣಪತಿಯ ಮೂರ್ತಿ ಪುರಾಣಗಳಲ್ಲಿ ಗಣಪತಿಯನ್ನು ಪ್ರಥಮ ಪೂಜೆ ಅಂತ ತಿಳಿಯಲಾಗಿದೆ.ಯಾವುದೇ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲು , ಗಣೇಶನನ್ನು ಪೂಜಿಸಲಾಗುತ್ತದೆ . ಮತ್ತು ದೇವರ ಕೋಣೆಯಲ್ಲಿ ಗಣಪತಿಯ ಒಂದು ಮೂರ್ತಿಯನ್ನು ಮಾತ್ರ ಇಡಬೇಕು. ಒಂದಕ್ಕಿಂತ ಹೆಚ್ಚು ಗಣಪತಿಯ ಮೂರ್ತಿಯನ್ನು ಇಡಬಾರದು . ವಾಸ್ತುವಿನ ಅನುಸಾರವಾಗಿ ಗಣಪತಿಯನ್ನು ತಾಯಿ ಮಹಾಲಕ್ಷ್ಮಿಯನ್ನು ಎಡ ಭಾಗದಲ್ಲಿ ಇಡಬೇಕು.ಮತ್ತು ತಾಯಿ ಸರಸ್ವತಿ

ದೇವಿಯನ್ನು ಲಕ್ಷ್ಮಿಯ ಬಲಭಾಗದಲ್ಲಿ ಇಡಬೇಕು.ಯಾವ ದೇವರ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ,ಸರಸ್ವತಿ ದೇವಿ ಗಣಪತಿಯ ಇಂಥ ಮೂರ್ತಿ ಇರುತ್ತದೆಯೋ ಆಸ್ಥಾನದಲ್ಲಿ ಅಜ್ಞಾನ ಸಂಕಟ ದರಿದ್ರತೆಗಳು ಉಂಟಾಗುವುದಿಲ್ಲ. ಗಣಪತಿಯು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಾಗಿರಬಾರದು. ಗಣಪತಿ ಮೂರ್ತಿಯು ನಿಂತಿರುವಂತಹ, ನೃತ್ಯ ಮಾಡುತ್ತಿರುವಂತಹ, ವಿಗ್ರಹಗಳನ್ನು ಎಂದಿಗೂ ಇಡಬಾರದು.ವಿಘ್ನೇಶ್ವರನು ಕುಳಿತಿರುವಂತಹ, ಆಶೀರ್ವದಿಸುವಂತಹ, ವಿಗ್ರಹಗಳನ್ನು ಇಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಯ ಮೂರ್ತಿ ಮನೆಯಲ್ಲಿ ಇರೋದು, ತುಂಬಾ ಮುಖ್ಯವಾಗಿದೆ.

ತಾಯಿ ಲಕ್ಷ್ಮಿ ದೇವಿಯು ಧನಸಂಪತ್ತು ಮತ್ತು ಸುಖ ಸಮೃದ್ಧಿಯನ್ನು ನೀಡುತ್ತಾರೆ.ಲಕ್ಷ್ಮಿ ದೇವಿಯು ಮನೆಯಲ್ಲಿ ವಾಸವಾಗಿದ್ದರೆ, ದಾರಿದ್ರತೆ ಕಾಡುವುದಿಲ್ಲ. ಹೀಗಾಗಿ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಡುವುದು ತುಂಬಾ ಮುಖ್ಯ. ವಾಸ್ತುವಿನ ಪ್ರಕಾರ ತಾಯಿ ಲಕ್ಷ್ಮಿ ದೇವಿಯು ಕುಳಿತಿರುವ ಭಂಗಿಯಲ್ಲೇ ಇರಬೇಕು . ತಾಯಿಯನ್ನು ನಿಂತಿರುವ ಭ೦ಗಿಯಲ್ಲಿ ಇಡಬಾರದು.ತಾಯಿ ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತಿರುವಂತಹ , ಮತ್ತು ತಾಯಿಯ ಎರಡು ಬದಿಯಲ್ಲೂ ಆನೆಗಳು ಇರುವಂತಹ, ಲಕ್ಷ್ಮಿ ದೇವಿಯನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸಿದರೆ ತುಂಬಾ ಶ್ರೇಯಸ್ಸು.

ಎಲ್ಲಿ ಭಗವಂತನಾದ ವಿಷ್ಣು ಪರಮಾತ್ಮನು ವಾಸ ಮಾಡುತ್ತಾರೆ, ಅಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ. ಹಾಗಾಗಿ ನಾವು ವಿಷ್ಣು ಪರಮಾತ್ಮನ ಮೂರ್ತಿಯ ಜೊತೆಗೆ ಮಹಾಲಕ್ಷ್ಮಿಯ ಮೂರ್ತಿಯನ್ನು ಇಟ್ಟರೆ ತುಂಬಾ ಲಾಭದಾಯಕ ಫಲವನ್ನು ತಂದುಕೊಡುತ್ತದೆ. ಲಕ್ಷ್ಮಿ ದೇವಿಯ ಪೂಜೆಯನ್ನು ಪರಮಾತ್ಮನಾದ ವಿಷ್ಣುವಿನ ಜೊತೆ, ಮಾಡಬೇಕು. ಲಕ್ಷ್ಮೀ ನಾರಾಯಣರ ಪೂಜೆಯಲ್ಲಿ ಅಕ್ಷತೆ ಮತ್ತು ತುಳಸಿಗೆ ವಿಶಿಷ್ಟವಾದ ಸ್ಥಾನಮಾನವಿದೆ. ಲಕ್ಷ್ಮೀನಾರಾಯಣರ ಪೂಜೆಯಲ್ಲಿ ಒಡೆದು ಹೋದಂತಹ ಅಕ್ಷತೆಯನ್ನು ಪ್ರಯೋಗ ಮಾಡಬಾರದು.ಇನ್ನು ಮೂರನೆಯದಾಗಿ ಆಂಜನೇಯ ಸ್ವಾಮಿಯ ಮೂರ್ತಿ.

ಸಾಮಾನ್ಯವಾಗಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಸ್ಥಾಪನೆ ಮಾಡಲು, ಜನರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗುತ್ತವೆ. ಅದು ದೇವರ ಕೋಣೆಯಲ್ಲಿ ಆಂಜನೇಯ ಮೂರ್ತಿಯನ್ನು ಇಡಬೇಕೋ ಬೇಡವೋ ಎಂಬ ಗೊಂದಲ ಇರುತ್ತದೆ. ಆದರೆ ದೇವರ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಇಟ್ಟರೆ, ತುಂಬಾ ಒಳ್ಳೆಯದು ಮೂರ್ತಿಯನ್ನು ಆರಾಧಿಸಿದರೆ, ಜನರ ಸಂಕಟಗಳು ನಿವಾರಣೆಯಾಗುತ್ತದೆ.ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ.ನಮ್ಮಲ್ಲಿನ ಭಯವು ದೂರವಾಗುತ್ತದೆ.

ಇಲ್ಲಿ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತದೆ . ಕಷ್ಟಗಳಿಂದ ಮುಕ್ತಿ ಸಿಗುತ್ತದೆ .ನಾವು ಕುಳಿತಿರುವಂತಹ ,ಆಂಜನೇಯ ಸ್ವಾಮಿಯ ವಿಗ್ರಹವನ್ನು ಆರಾಧಿಸಿದರೆ, ಕುಟುಂಬದಲ್ಲಿನ ದ್ವೇಷ ಜಗಳಗಳು ದೂರವಾಗುತ್ತದೆ. ಅಣ್ಣ ತಮ್ಮಂದಿರಲ್ಲಿ ವಿರಸವಿದ್ದರೆ ರಾಮ ದರ್ಬಾರಿನ ಮೂರ್ತಿಯನ್ನು ಸಹ ಇಡಬಹುದು .ಇದರಲ್ಲಿ ಆಂಜನೇಯನ ವಿಗ್ರಹವು . ಇದನ್ನು ದೇವರ ಮನೆಯಲ್ಲಿ ಸ್ಥಾಪಿಸಿದರೆ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ . ಇದರ ಜೊತೆಗೆ ದೇವರ ಕೋಣೆಯಲ್ಲಿ ಶಿವಲಿಂಗವನ್ನು ಸಹ ಇಡಬಹುದು.

ಆದರೆ ಶಿವಲಿಂಗ ತುಂಬಾ ದೊಡ್ಡದಿರಬಾರದು. ಮತ್ತು ಶಿವಲಿಂಗಕ್ಕೆ ಪ್ರತಿನಿತ್ಯ ಹಾಲು ಮತ್ತು ನೀರಿನ ಅಭಿಷೇಕ ಮಾಡಬೇಕಾಗುತ್ತದೆ. ಒಂದು ವೇಳೆ ಶಿವಲಿಂಗವನ್ನು ಇಡಲು ಸಾಧ್ಯವಾಗದಿದ್ದರೆ ನಾವು ಶಿವ ಪರಿವಾರದ ಚಿತ್ರವನ್ನು ಹಾಕಬಹುದು. ಇದರಿಂದ ಮನೆಯಲ್ಲಿ ಶಾಂತಿ ಸಮೃದ್ಧಿ, ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರವಾಗಿ ದೇವರ ಮನೆಯಲ್ಲಿ ಯಾವ ಮೂರ್ತಿಗಳನ್ನು ಜೋಡಿಯಾಗಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ರಾಧಾಕೃಷ್ಣರ ಮೂರ್ತಿಯನ್ನು ಜೊತೆಯಲ್ಲೇ ಇಡಬೇಕು.

ಇದರಿಂದ ಗಂಡ ಹೆಂಡತಿಯರ ನಡುವೆ, ಬಾಂಧವ್ಯ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳಗಳು ದೂರವಾಗುತ್ತದೆ. ಮತ್ತು ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತೇವೆ. ವಾಸ್ತುವಿನ ಪ್ರಕಾರ ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿಯನ್ನು ಜೊತೆಯಾಗಿ ಇಡಬಾರದು. ಯಾಕೆಂದರೆ ಎರಡು ವಿಗ್ರಹಗಳ ಪೂಜೆಯಲ್ಲಿ ವಿಭಿನ್ನತೆ ಇರುತ್ತದೆ. ಭಗವಂತನಾದ ಶಿವನ ಮೇಲೆ ತುಳಸಿ ಎಲೆಗಳನ್ನು ಅರ್ಪಿಸಲಾಗುವುದಿಲ್ಲ ಆದರೆ ವಿಷ್ಣುವಿನ ಮೇಲೆ ತುಳಸಿ ಎಲೆಗಳನ್ನು ಇಟ್ಟು, ಪೂಜಿಸುತ್ತೇವೆ. ತುಳಸಿ ಇಲ್ಲದೆ ವಿಷ್ಣುವಿನ ಪೂಜೆ ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ದೇವರ ಮನೆ ಬಿಟ್ಟು ಬ್ರಹ್ಮ ವಿಷ್ಣು ಮಹೇಶ್ವರರ ಮೂರ್ತಿಯನ್ನು, ಬೇರೆ ಇಟ್ಟು ಪೂಜಿಸಬಹುದು.

ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಬ್ರಹ್ಮದೇವರ ಫೋಟೋ ಇಡುವುದು ನಿಶಿದ್ಧವಾಗಿದೆ. ಶಾಸ್ತ್ರದ ಪ್ರಕಾರ, ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಆಂಜನೇಯ ಮೂರ್ತಿಯ ಫೋಟೋ ಇಡುವುದು ಒಳ್ಳೆಯದಲ್ಲ. ಒಂದು ವೇಳೆ ಯಾವುದಾದರೂ ವ್ಯಕ್ತಿ ಅವಿವಾಹಿತರಾಗಿದ್ದರೆ ,ಆಂಜನೇಯ ಸ್ವಾಮಿ ಮೂರ್ತಿಯ ಫೋಟೋ ಇಡಬಹುದು . ಆದರೆ ಮದುವೆಯಾದ ನಂತರ ಆಂಜನೇಯ ಸ್ವಾಮಿ ಫೋಟೋವನ್ನು ಇಡಬಾರದು . ಆಂಜನೇಯ ಸ್ವಾಮಿ ಬ್ರಹ್ಮ ಚಾರಿಯಾಗಿದ್ದಾರೆ.

ಯಾವ ಸ್ಥಾನದಲ್ಲಿ ರತಿಕ್ರಿಯೆ ನಡೆಯುತ್ತದೆಯೋ, ಅಲ್ಲಿ ಆಂಜನೇಯ ಸ್ವಾಮಿ ವಿಗ್ರಹವನ್ನು ಇಡಬಾರದು. ಗಂಡ ಹೆಂಡತಿಯರು ತಮ್ಮ ಕೋಣೆಯಲ್ಲಿ ರಾಧಾಕೃಷ್ಣರ ವಿಗ್ರಹವನ್ನುಇಡಬಹುದು. ವಾಸ್ತುವಿನ ಅನುಸಾರವಾಗಿ ದೇವರ ಮನೆಯಲ್ಲಿ ಸತ್ತವರ ಫೋಟೋವನ್ನು ಇಡಬಾರದು. ಮೃತ ಪೂರ್ವಜರು ದೇವರಾಗಿರುವುದಿಲ್ಲ. ಪ್ರತಿ ದಿನ ಪೂಜೆ ಮಾಡುವುದು ಅಶುಭವೆಂದು ತಿಳಿಯಲಾಗಿದೆ. ಮೃತರ ಪೂಜೆಯನ್ನು ಪಿತೃ ಪಕ್ಷದಲ್ಲಿ ಮಾಡಬೇಕು .ದೇವರು ಕೋಣೆಯಲ್ಲಿ ಮೃತರು ಮತ್ತು ಯಾವುದೇ ಸಾಧುಸಂತರ, ಫೋಟೋವನ್ನು ಇಡಬಾರದು. ದೇವರ ಕೋಣೆಯ ಸ್ಥಾನ ಯಾವಾಗಲೂ ನಮ್ಮ ಆರಾಧ್ಯ ದೈವವಾಗಿರುತ್ತದೆ.

ಆರಾಧ್ಯ ದೈವಕ್ಕೆ ಸರ್ವೋಚ್ಚ ಸ್ಥಾನವನ್ನು ನೀಡಬೇಕು . ಅಂದರೆ ಕುಲ ದೇವರಿಗೆ ಸರ್ವೋಚ್ಛ ಸ್ಥಾನವನ್ನು ನೀಡಬೇಕು.ದೇವರ ಕೋಣೆಯಲ್ಲಿ ಯಾವತ್ತಿಗೂ ರಾಹು ಕೇತು ಶನಿ ದೇವರು ಮಹಾಕಾಳಿ ಇತ್ಯಾದಿ ದೇವರುಗಳ ಮೂರ್ತಿಗಳನ್ನು ಇಡಬಾರದು. ಯಾಕೆಂದರೆ ಈ ದೇವತೆಗಳು ಉಗ್ರ ದೇವತೆಗಳ ಸಾಲಿನಲ್ಲಿ ಬರುತ್ತಾರೆ . ಈ ದೇವತೆಗಳ ಪೂಜೆಗಾಗಿ ಕಠಿಣ ತಂತ್ರ ಸಾಧನೆಯ ಮೂಲಕ ಮಾಡಲಾಗುತ್ತದೆ . ಇಲ್ಲಿ ಸಾಧಾರಣ ವ್ಯಕ್ತಿಗಳು ಈ ಪೂಜೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ದೇವತೆಗಳ ಪೂಜೆಯಲ್ಲಿ ಸ್ವಲ್ಪವಾದರೂ ತಪ್ಪಾದರೆ, ಅಶುಭ ಫಲಗಳು ದೊರೆಯುತ್ತದೆ .

ಹಾಗಾಗಿ ದೇವರ ಕೋಣೆಯಲ್ಲಿ ಯಾವಾಗಲೂ ಇಡಬಾರದು. ಆದರೆ ಮನಸ್ಸಿನಲ್ಲಿ ಮಂತ್ರ ಪಠಣೆಯನ್ನು ಮಾಡಿಕೊಳ್ಳಬಹುದು. ಜೊತೆಗೆ ಇವರನ್ನು ಒಲಿಸಿಕೊಳ್ಳಬಹುದು. ನಾವು ಯಾವುದೇ ಸ್ಥಿತಿಯಲ್ಲೂ ದೇವರ ಮನೆಯಲ್ಲಿ ಉಗ್ರ ಸ್ಥಿತಿಯಲ್ಲಿರುವಂತಹ ಮೂರ್ತಿಗಳನ್ನು , ಇಡಬಾರದು. ಪ್ರಸನ್ನ ಮುದ್ರೆಯಲ್ಲಿ ಮತ್ತು ಆಶೀರ್ವಾದ ಮಾಡುವಂತಹ ಮೂರ್ತಿಗಳ ವಿಗ್ರಹಗಳನ್ನು ಇಡಬೇಕು. ಯುದ್ಧ ಮಾಡುವಂತಹ ದೇವರ ಮೂರ್ತಿಗಳನ್ನು ಇಡಬಾರದು.

ದೇವರ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡಬೇಕು . ಈ ಮೂಲಕ ದೇವರ ಕೋಣೆಯ ವಾತಾವರಣ, ಪವಿತ್ರವಾಗಿ ಇರುತ್ತದೆ. ನಮ್ಮ ಬಳಿ ಹೆಚ್ಚಿನ ಸಮಯ ಇಲ್ಲದಿದ್ದರೆ ಒಂದೇ ವಿಗ್ರಹವನ್ನು ಇಟ್ಟುಕೊಂಡು, ಆರಾಧ್ಯ ದೈವ ಅಥವಾ ಕುಲ ದೇವರಾಗಿರಲಿ ,ಪೂಜೆ ಮಾಡಬಹುದು. ಅಥವಾ ತುಂಬಾ ಮೂರ್ತಿಗಳನ್ನು ಇಟ್ಟು, ಪೂಜೆ ಮಾಡದೇ ಹೋದರೆ, ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ.

Leave a Comment