ನಮಸ್ಕಾರ ಸ್ನೇಹಿತರೆ ನವರಾತ್ರಿ ಒಂಬತ್ತು ದಿನಗಳ ಪುಣ್ಯ ರಾತ್ರಿ ಅಷ್ಟು ಜನ ಸದಾ ಶುದ್ಧ ಪ್ರತಿಪದದಿಂದ ಆರಂಭಿಸಿ ದಶಮಿಯವರೆಗೆ ನವ ದಿನಗಳಲ್ಲಿ ನವದುರ್ಗೆಯರನ್ನು ಆರಾಧಿಸುವುದೇ ಈ ನವರಾತ್ರಿ ಶ್ರೀ ಮಹಾಲಕ್ಷ್ಮಿ ನವ ದಿನಗಳಲ್ಲಿ ಜಯಂತಿ ಮಂಗಳ ಕಾಳಿ ಸ್ವರ ಸ್ವದ ಸ್ವಾಹ ಕಪಾಲಿನಿ ದುರ್ಗಾ ಕ್ಷಮಾ ಶಿವ ದಾತ್ರಿ ಮುಂತಾದ ರೂಪಗಳಲ್ಲಿ ಜೀವ ತಳೆಯುತ್ತಾಳೆ ದೇವಿಯು ಒಂದೊಂದು ರೂಪದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಧರೆಗಿಳಿದು ಬರುತ್ತಾಳೆ ಹಾಗಾದರೆ ನವರಾತ್ರಿಯ ವೇಳೆ ನವದುರ್ಗಿಯರ ಆರಾಧನೆ ಮಾಡುವುದು ಹೇಗೆ ಘಟಸ್ಥಾಪನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಈ ಒಂದು ಲೇಖನದ ಮೂಲಕ ಅದಕ್ಕೂ ಮೊದಲು ನಮ್ಮ
ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ನವರಾತ್ರಿಯ ಒಂದೊಂದು ದಿನವೂ ಒಂದೊಂದು ವಿಶೇಷವಿದೆ ಒಂದೊಂದು ದಿನವೂ ಬಗೆಬಗೆಯ ಪೂಜೆ-ಪುನಸ್ಕಾರ ನವರಾತ್ರಿಯಲ್ಲಿ ಮುಖ್ಯವಾಗಿ ಸಾಚಾತ್ರ ಪಾರಾಯಣಮಾಡಬೇಕು ಅದರಲ್ಲೂ ಶ್ರೀಮನ್ನಾರಾಯಣನ ಪಟನೆ ಮಾಡುವುದರಿಂದ ಏಳು ಜನ್ಮದಲ್ಲೂ ನಿಮ್ಮನ್ನ ತಲೆ ಕಾಯುತ್ತಾನೆ ನವರಾತ್ರಿ ಎಂದು ಘಟಸ್ಥಾಪನೆ ಮಾಡುವುದು ಮುಂಜಾನೆ ಎದ್ದು ಸ್ನಾನವನ್ನು ಮಾಡಿ ಶುಚಿಯಾದ ಬಟ್ಟೆಯನ್ನು ಧರಿಸಿ ಪೂಜೆಯನ್ನ ಕೈಗೊಳ್ಳಬೇಕು ಮೊದಲು ದುರ್ಗಾಮಾತೆಯ ಫೋಟೋ ಅಥವಾ ಮೂರ್ತಿಯನ್ನು ಕೆಂಪು ಬಟ್ಟೆಯ ಮೇಲಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ ನಂತರ ಹುತ್ತದ ಮಣ್ಣನ್ನು ತಂದು ಅದಕ್ಕೆ ನವಧಾನ್ಯ ವನ್ನು ಹಾಕಿ
ಇದರ ಮೇಲೆ ಮಣ್ಣಿನ ಮಡಕೆಯನ್ನು ಇಟ್ಟು ನೀರನ್ನು ತುಂಬಿಸಿ ವೀಳ್ಯದೆಲೆ ಮಾವಿನ ಎಲೆಯನ್ನು ಇಡಿ ನಂತರ ತೆಂಗಿನಕಾಯಿಯನ್ನು ಇಟ್ಟು ಕಳಸವನ್ನು ಮಾಡಿ ಇದೆಲ್ಲಾ ಆದ ಮೇಲೆ ಕಳಶಕ್ಕೆ ಲಕ್ಷ್ಮೀದೇವಿಯ ಮೂರ್ತಿಯನ್ನು ಕೂರಿಸಿ ಅಲಂಕರಿಸಿ ಮಡಿಕೆಯ ಕುತ್ತಿಗೆಯ ಭಾಗಕ್ಕೆ ಕೆಂಪು ದಾರವನ್ನು ಕಟ್ಟುವುದು ಮಾತ್ರ ಮರೆಯಬೇಡಿ ಯಾವಾಗ ಲಕ್ಷ್ಮೀದೇವಿ ತೆಂಗಿನಕಾಯಿಯಲ್ಲಿ ಅಲಂಕೃತಳಾಗುತ್ತಾಳೋ ತಕ್ಷಣವೇ ನಿಮ್ಮ ಮನೆಯಲ್ಲಿ ದೈವಿ ಕಳೆ ಸೃಷ್ಟಿಯಾಗುತ್ತದೆ ನವರಾತ್ರಿಯ ಘಟಸ್ಥಾಪನೆ ಬಳಿಕ ದೇವಿಗೆ ಹೂವು ಕರ್ಪೂರ ಗಂಧಕಡ್ಡಿ ಹಾಗೂ ದ್ರವ್ಯ ಭಕ್ಷಗಳನ್ನು ಅರ್ಪಿಸಿ ಪಂಚೋಪಚಾರ ಪೂಜೆಯನ್ನು ಮಾಡಬೇಕು ಒಂಬತ್ತು ದಿನಗಳ ಕಾಲ ದೇವಿಯ ಮಂತ್ರವನ್ನ ಪಠಣೆ ಮಾಡುತ್ತಾ ನಿಮ್ಮ ಮನೆಗೆ ದೇವಿಯನ್ನು ಆಹ್ವಾನಿಸಿ ನಂತರ ಆಕೆಯ ಉಪಸ್ಥಿತಿಯಲ್ಲಿ ಮನೆಮಂದಿಗೆಲ್ಲ ಅನುಗ್ರಹ ಮಾಡುವಂತೆ ಬೇಡಿಕೊಳ್ಳಿ
ಭಕ್ತರು ಕೇಳಿದ್ದಕ್ಕೆ ಆ ತಾಯಿ ಎಂದು ಕೂಡ ಇಲ್ಲ ಅಂದಿಲ್ಲ ದುರ್ಗಾದೇವಿಗೆ ಬಗೆಬಗೆಯ ತಿಂಡಿ ಎಂದರೆ ಬಲು ಪ್ರೀತಿ ಹೀಗಾಗಿ ಕೆಲವು ಕಡೆಗಳಲ್ಲಿ ಮೈದಾಹಿಟ್ಟಿಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಕೈ ಕಾಲು ಉಗುರು ತಾಳಿ ಬಳೆ ಎಲೆ ಅಡಿಕೆ ಬಾಚಣಿಕೆ ಚಿತ್ರವನ್ನು ಮಾಡಿ ಎಣ್ಣೆಯಲ್ಲಿ ಕರಿಯುತ್ತಾರೆ ನಂತರ ತಾಯಿಯನ್ನು ಪ್ರತಿಷ್ಠಾಪಿಸುವ ಜಾಗದಲ್ಲಿ ಇವುಗಳನ್ನೆಲ್ಲಾ ಕಟ್ಟುತ್ತಾರೆ ಇವುಗಳನ್ನೆಲ್ಲಾ ಕಟ್ಟುವುದರಿಂದ ಜಗನ್ಮಾತೆಯನ್ನು ಆಕರ್ಷಣೆ ಮಾಡಬಹುದಂತೆ ನವರಾತ್ರಿಯ ಎಂಟನೇ ದಿನ ಅಥವಾ 10 ನೇ ದಿನದಂದು ಒಂಬತ್ತು ಜನ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಇವರನ್ನೇ ನವದುರ್ಗಿಯರ ಎಂದು ಭಾವಿಸಿ ಅವರ ಕಾಲು ತೊಳೆದು ಕುಳ್ಳಿರಿಸಿ ಆರತಿ ಮಾಡಿ ಹಣೆಗೆ ಕುಂಕುಮ ಹಚ್ಚಿ ಉಡಿ ತುಂಬಿಸಿ ಮನೆಯಲ್ಲಿ ಮಾಡಿದ ಸಿಹಿ ಊಟವನ್ನು ಮುತ್ತೈದೆಯರಿಗೆ ಬಡಿಸಿ ಅವರನ್ನ ಸಂತೃಪ್ತ ಗೊಳಿಸಿ
ದೀಪವನ್ನು ಜಗನ್ಮಾತೆಯ ಸ್ವರೂಪ ಎನ್ನುತ್ತೇವೆ ಹೀಗಾಗಿ ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ಬಳಿ ಉರಿಯುವ ದೀಪವು ಆರದಂತೆ ನೋಡಿಕೊಳ್ಳಬೇಕು ಇವೆಲ್ಲ ಮುಗಿದ ನಂತರ 9ನೇ ದಿನ ರಾತ್ರಿ ಘಟ ಸ್ಥಾಪನೆಯನ್ನು ಸ್ವಲ್ಪ ಸಡ್ಲಿಸಿ ಬಿಡಿ ಇಲ್ಲಿಗೆ ನವರಾತ್ರಿಯ ನವ ಪೂಜೆಗಳು ಅಂತ್ಯಗೊಂಡಂತೆ ಇಷ್ಟೆಲ್ಲಾ ಆದ ಮೇಲೆ ಇನ್ನೂ ಒಂದು ಮುಖ್ಯವಾದ ಕೆಲಸವಿದೆ ಘಟ ಸ್ಥಾಪನೆಯ ವೇಳೆ ಕಳಸದ ಕೆಳಗೆ ಹುತ್ತದ ಮಣ್ಣಿನಲ್ಲಿ ಹಾಕಿದ ನವಧಾನ್ಯಗಳು ಮೊಳಕೆಯೊಡೆದಿವೆಯಾ ಎಂದು ನೋಡಬೇಕು ನಿತ್ಯವೂ ಸ್ವಲ್ಪ ನೀರನ್ನು ಚಿಮ್ಮಿ ಸುವುದರಿಂದ ನವದಾನ್ಯಗಳು ಸ್ವಲ್ಪ ಮೊಳಕೆಯೊಡೆಯುತ್ತವೆ ಇವುಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡಬೇಡಿ ಹೊಳೆಯ ಅಥವಾ ಕೆರೆಯಲ್ಲಿ ಮೊಳಕೆಯೊಡೆದ ನವಧಾನ್ಯಗಳನ್ನು ಹಾಕಿ ವಿಸರ್ಜನೆ ಮಾಡಿ ಅಲ್ಲಿಗೆ ನವರಾತ್ರಿಯ ನವ ಪೂಜೆಗಳು ಸಂಪನ್ನ ಗೊಂಡಂತೆ ನವದುರ್ಗೆಯರು ಸಹ ನಿಮ್ಮ ಪೂಜೆಯಿಂದ ಸಂತೃಪ್ತ ಗೊಂಡಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು