ನೀವು ಹಾಸಿಗೆ ಮೇಲೆ ಕುಳಿತು ಊಟ ಮಾಡ್ತೀರಾ

ನಮಸ್ಕಾರ ಸ್ನೇಹಿತರೆ ಸುಖ ಶಾಂತಿ ಸಮೃದ್ಧಿ ನೆಮ್ಮದಿ ನೆಲೆಸಿರಬೇಕು ಎಂದರೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ ಅದೇ ರೀತಿ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ವಾಸ್ತುಶಾಸ್ತ್ರದಲ್ಲಿ ನಿಷಿದ್ಧ ಎಂದು ಹೇಳಲಾಗಿದೆ ಯಾಂತ್ರಿಕ ಜೀವನ ಮತ್ತು ಸಮಯದ ಅಭಾವದ ನೆಪ ಒಡ್ಡಿ ಕೆಲವೊಂದು ತಪ್ಪು ಕೆಲಸಗಳನ್ನು ಮಾಡಿಬಿಡುತ್ತೇವೆ ಇದು ನಮ್ಮ ಏಳಿಗೆಗೆ ಅಡ್ಡಿಯಾಗುತ್ತದೆ ಎಂಬುದು ಅಷ್ಟೇ ಸತ್ಯ ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು ಸರಿನಾ ತಪ್ಪಾ ಎನ್ನುವ ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಅಷ್ಟೇ ಅಲ್ಲ ಊಟ ಮಾಡಬೇಕಾದರೆ ಯಾವ ಯಾವ ನಿಯಮಗಳನ್ನುಪಾಲಿಸಬೇಕು ಎಂಬುದನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಆಧುನಿಕತೆ ಬೆಳಿತಾ ಇದ್ದಂಗೆ ಸುಖ ಸೌಲಭ್ಯಗಳು ಹೆಚ್ಚಾಗುತ್ತಿದೆ ಹಾಗೆ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತಾ ಇರೋದನ್ನ ನಾವು ಗಮನಿಸುತ್ತಿದ್ದೇವೆ ಹಿಂದಿನ ಕಾಲದಲ್ಲಿ ನೆಲದ ಮೇಲೆ ಕೂತು ಊಟ ಮಾಡುತ್ತಿದ್ದರು ಇದರಿಂದ ಭೂಮಿಯಿಂದ ದೇಹಕ್ಕೆ ತರಂಗಗಳು ಹರಿದು ಸ್ವಾಸ್ತ್ಯವೂ ಚೆನ್ನಾಗಿರುತ್ತಿತ್ತು ಊಟ ಮಾಡಬೇಕಾದರೆ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅದರ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಈ ನಿಯಮಗಳು ವೈಜ್ಞಾನಿಕ ದೃಷ್ಟಿಯಿಂದಲೂ ಕೂಡ ಸತ್ಯವಾಗಿವೆ ಪ್ರಾಚೀನ ಕಾಲದಲ್ಲಿ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ಹೇಳಿದ ವಿಷಯವನ್ನು ವಿಜ್ಞಾನ ನಮಗೆ ಈಗ ಹೇಳುತ್ತಿದೆ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ಊಟ ಮಾಡಬೇಕಾದರೆ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ ಎಂದು ನೋಡೋಣ 01 ಅಡುಗೆಮನೆ ಅಡುಗೆ ಮನೆಯು ಗುರು ಗ್ರಹವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ

ಪ್ರಾಚೀನ ಕಾಲದ ಮಹಾರಾಜರ ಅಡುಗೆ ಮನೆಯನ್ನು ವಾಸ್ತುಶಾಸ್ತ್ರದ ರೀತಿ ನಿರ್ಮಾಣ ಮಾಡಲಾಗುತ್ತಿತ್ತು ಅಡುಗೆ ಮನೆಯ ಮೇಲೆ ಮತ್ತು ಕೆಳಗೆ ಶೌಚಾಲಯ ಇರಬಾರದು ಶೌಚಾಲಯದಎದುರಿಗೆ ಅಡುಗೆಮನೆ ಇರಬಾರದು ಅಲ್ಲದೆ ಶೌಚಾಲಯ ಅಥವಾ ಸ್ನಾನದ ಮನೆಯ ಗೋಡೆ ಮತ್ತು ಅಡುಗೆ ಮನೆಯ ಗೋಡೆ ಒಂದೇ ಆಗಿ ಹೊಂದಿಕೊಂಡಿರುವ ಬಾರದು ಪೂರ್ವ ಮತ್ತು ಉತ್ತರ ದಿಕ್ಕಿಗೆ ಕುಳಿತು ಊಟ ಮಾಡುವುದು ಶ್ರೇಷ್ಠ ಅಂತ ಹೇಳಲಾಗಿದೆ ಇದರಿಂದ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ ದೇವರ ಕೃಪೆಯು ಅವರ ಮೇಲೆ ಇರುತ್ತದೆ ಜೊತೆಗೆ ಅವರು ಮಾಡುವ ಕೆಲಸದಲ್ಲಿ ಏಳಿಗೆಯು ಇರುತ್ತದೆ ದಕ್ಷಿಣ ದಿಕ್ಕಿಗೆ ಕುಳಿತು ಊಟ ಮಾಡಿದರೆ ಊಟವು ಪ್ರೇತಕ್ಕೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ ಹಾಗಾಗಿ ದಕ್ಷಿಣ ದಿಕ್ಕಿಗೆ ಕುಳಿತು ಊಟ ಮಾಡಬಾರದು ನೈಋತ್ಯ ದಿಕ್ಕಿಗೆ ಮುಖ ಮಾಡಿ ಊಟ ಮಾಡಿದರೆ ಪಚನ ಶಕ್ತಿ ಕಡಿಮೆಯಾಗುತ್ತದೆ

ಅಲ್ಲದೆ ಉದರ ಸಂಬಂಧಿ ಕಾಯಿಲೆ ಕೂಡ ಹೆಚ್ಚಾಗುತ್ತದೆ ಊಟ ಮಾಡುವ ಮುಂಚೆ ನಾವು ಪಾಲಿಸಬೇಕಾದ ನಿಯಮಗಳು ಊಟ ಮಾಡುವುದಕ್ಕಿಂತ ಮುಂಚೆ ನಾವು ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಇದರಿಂದ ಆಯಸ್ಸು ವೃದ್ಧಿಯಾಗುತ್ತದೆ ಒದ್ದೆ ಕಾಲಿನಿಂದ ಕುಳಿತು ಊಟ ಮಾಡಿದರೆ ಶುಭ ಅಂತ ಹೇಳಲಾಗಿದೆ ನೀರು ಪಂಚ ತತ್ವಗಳಲ್ಲಿ ಒಂದಾಗಿದೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಭೂಮಿ ಮತ್ತು ಜಲ ತತ್ವದ ಮಿಲನವಾಗುತ್ತದೆ ಇದು ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಲಾಗಿದೆ ಇದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ ಸಿಟ್ಟು ಕಡಿಮೆಯಾಗುತ್ತದೆ ಕುರ್ಚಿಯ ಮೇಲೆ ಕುಳಿತು ಕಾಲು ಅಲ್ಲಾಡಿಸುತ್ತಾ ಊಟ ಮಾಡುವುದು ಅಶುಭ ಅಂತ ಹೇಳಲಾಗಿದೆ ಯಾವ ವ್ಯಕ್ತಿ ತನ್ನ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಬಯಸುತ್ತಾನೆ ಹಣದ ಅರಿವು ಹೆಚ್ಚಾಗಬೇಕು ಎಂದು ಬಯಸುತ್ತಾನೂ ಅಂಥವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಊಟಮಾಡುವುದು ಒಳಿತು ಅಂತ ಹೇಳಲಾಗಿದೆ

ಒಡೆದ ಮುರಿದ ತಟ್ಟೆ ಬಿರುಕುಬಿಟ್ಟ ತಟ್ಟೆಯಲ್ಲಿ ಊಟ ಮಾಡಬಾರದು ಅಂತ ಹೇಳಲಾಗಿದೆ ಇದು ಅಶುಭ ಅಂತ ಹೇಳಲಾಗುತ್ತೆ ಇಂತಹ ಮುರಿದ ಮತ್ತು ಬಿರುಕುಬಿಟ್ಟ ತಟ್ಟೆಗಳನ್ನು ತಕ್ಷಣ ಅಡುಗೆಮನೆಯಿಂದ ತೆಗೆದುಬಿಡಬೇಕು ಭಗವಂತನಿಗೆ ಯಾವತ್ತೂ ಕೂಡ ಪ್ಲಾಸ್ಟಿಕ್ ಮತ್ತು ಗಾಜಿನ ತಟ್ಟೆಯಲ್ಲಿ ನೈವೇದ್ಯವನ್ನು ಇಡಬಾರದು ನೈವೇದ್ಯವ ನೀಡಲು ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಬಳಸಬಹುದು ಇನ್ನು ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು ಹಾಸಿಗೆ ಮೇಲೆ ಕುಳಿತು ಊಟ ಮಾಡುವುದರಿಂದ ಅನ್ನಕ್ಕೆ ಅಪಮಾನ ಮಾಡಿದಂತೆ ಇದರಿಂದ ರಾಹು ಕೋಪಗೊಳ್ಳುತ್ತಾನೆ ಊಟಮಾಡುವಾಗ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ ಹಾಸಿಗೆ ಮೇಲೆ ಕುಳಿತು ಊಟ ಮಾಡುವುದರಿಂದ ದೇಹದ ಶಾಖ ಭೂಮಿಗೆ ಹೋಗಲು ಬಿಡುವುದಿಲ್ಲ ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ

ಪಚನಕ್ರಿಯೆ ಯೂ ಕೂಡ ಚೆನ್ನಾಗಿ ಆಗುವುದಿಲ್ಲ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ದೇಹದ ಉಷ್ಣಾಂಶ ಸರಿಯಾಗಿ ಇರುತ್ತದೆ ನಾವು ಭೂಮಿಯ ಜೊತೆ ಸಂಪರ್ಕಕ್ಕೆ ಬರುವುದರಿಂದ ನಮ್ಮ ಪಚನಕ್ರಿಯೆ ಅತ್ಯುತ್ತಮವಾಗಿ ಆಗುತ್ತದೆ ಇನ್ನು ಕೆಲವೊಬ್ಬರು ತಟ್ಟೆಯಲ್ಲಿ ಕೈ ತೊಳೆದು ಬಿಡುತ್ತಾರೆ ಹೀಗೆ ಮಾಡುವುದರಿಂದ ಮಾತೆ ಅನ್ನಪೂರ್ಣೇಶ್ವರಿ ಗೆ ಅಪಮಾನ ಮಾಡಿದಂತೆ ಆಗುತ್ತದೆ ಎಂದು ನಂಬಲಾಗಿದೆ ಅಲ್ಲದೆ ಚಂದ್ರ ಮತ್ತು ಶುಕ್ರ ಗ್ರಹ ಅಪ್ರಸನ್ನರಾಗುತ್ತಾರೆ ಇಂತಹ ಮನೆಯಿಂದ ಸಂಪತ್ತು ಹೊರಟುಹೋಗುತ್ತದೆ ತಟ್ಟೆಯಲ್ಲಿ ಅನ್ನ ಬಿಡುವುದು ಚೆಲ್ಲುವುದು ಇಂತಹ ಕೆಲಸಗಳಿಂದ ಮಾತೆ ಅನ್ನಪೂರ್ಣೇಶ್ವಯು ಕೋಪಗೊಳ್ಳುತ್ತಾಳೆ ಹಾಗಾಗಿ ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಬಡಿಸಿಕೊಂಡು ಊಟ ಮಾಡುವುದು ಒಳ್ಳೆಯದು ಅನ್ನವನ್ನು ವೇಸ್ಟ್ ಮಾಡಬೇಡಿ ಅವಶ್ಯಕತೆ ಇರುವ ಕೈಗೆ ಅನ್ನವನ್ನು ನೀಡಿ ಸ್ನೇಹಿತರೆ ವಿಶೇಷ ಮಾಹಿತಿಯನ್ನು ಕೊಟ್ಟ ಈ ಲೇಖನ ನಿಮಗೆ ಇಷ್ಟ ಆಗಿದೆ ಅಂತ ಭಾವಿಸುತ್ತಾ ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಹೆಚ್ಚೆಚ್ಚು ಜನರಿಗೆ ಶೇರ್ ಮಾಡಿ ಧನ್ಯವಾದಗಳು

Leave a Comment