ನಾವು ಈ ಲೇಖನದಲ್ಲಿ 40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ . ಮೊದಲನೆಯ ಸಲಹೆ : – ನಿಮಗೆ ಬಾಯಾರಿಕೆ ಇಲ್ಲದಿದ್ದರೂ , ಅಥವಾ ಅವಶ್ಯಕತೆ ಇಲ್ಲದಿದ್ದರೂ , ಸಹ ಯಾವಾಗಲೂ ದಿನಕ್ಕೆ ಕನಿಷ್ಠ 2 ಲೀಟರ್ ಅಂದರೆ , ದಿನಕ್ಕೆ ಎಂಟು ಗ್ಲಾಸ್ ನೀರನ್ನು ಕುಡಿಯಿರಿ . ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನ ದೇಹದಲ್ಲಿ ನೀರಿನ ಕೊರತೆಯಿಂದಾಗಿಯೇ ಬರುವುದು
ಎರಡನೇ ಸಲಹೆ : – ಸಾಧ್ಯವಾದಷ್ಟು ಕೆಲಸವನ್ನು ಮಾಡಿ . ನಡಿಗೆ , ಈಜು ಅಥವಾ ಯಾವುದೇ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು . ಮೂರನೇ ಸಲಹೆ : – ಕಡಿಮೆ ತಿನ್ನಿ ಹೆಚ್ಚು ತಿನ್ನುವ ಹಂಬಲವನ್ನು ಬಿಡಿ. ಏಕೆಂದರೆ , ಅದು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ . ನಿಮ್ಮನ್ನು ನೀವು ವಂಚಿತಗೊಳಿಸಬೇಡಿ . ಆದರೆ ಪ್ರಮಾಣವನ್ನು ಕಡಿಮೆ ಮಾಡಿ ಪ್ರೋಟೀನ್ , ಕಾರ್ಬೋಹೈಡ್ರೇಟ್ಸ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ .
ನಾಲ್ಕನೇ ಸಲಹೆ : – ವಾಹನಗಳನ್ನು ಅಗತ್ಯ ಇದ್ದರೆ ಮಾತ್ರ ಬಳಸಿ . ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ . ಐದನೇ ಸಲಹೆ : – ಕೋಪವನ್ನು ಬಿಟ್ಟುಬಿಡಿ . ಚಿಂತಿಸುವುದನ್ನು ನಿಲ್ಲಿಸಿ , ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ , ತೊಂದರೆಗಳಲ್ಲಿ ನಿಮ್ಮನ್ನು ನೀವೇ ಸಮಾಧಾನ ಗೊಳಿಸಬೇಕು . ಇಲ್ಲವೆಂದರೆ , ಅವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ .
ಆರನೇ ಸಲಹೆ : – ಸಕಾರಾತ್ಮಕ ಜನರೊಂದಿಗೆ ಮಾತನಾಡಿ . ಮತ್ತು ಅವರ ಮಾತುಗಳನ್ನು ಆಲಿಸಿ . ಏಳನೇ ಸಲಹೆ :- ಮೊದಲನೆಯದಾಗಿ ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ . ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ ನಗು ಮುಖದಿಂದ ಮಾತನಾಡಿ .
ಎಂಟನೇ ಸಲಹೆ :- ಹಣ , ಸ್ಥಾನ , ಪ್ರತಿಷ್ಠೆ , ಅಧಿಕಾರ , ಸೌಂದರ್ಯ , ಜಾತಿ , ಮತ್ತು ಪ್ರಭಾವ ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತದೆ . ನಮ್ರತೆಯು ಜನರನ್ನು ಹತ್ತಿರ ತರುತ್ತದೆ . ಒಂಬತ್ತನೇ ಸಲಹೆ : – ನಿಮ್ಮ ಕೂದಲು ಬಿಳಿಯಾಗಿ ಇದ್ದರೆ , ಅದು ಜೀವನದ ಅಂತ್ಯ ಎಂದರ್ಥವಲ್ಲ . ಆದರೆ ಜೀವನ ಸಾಗರದ ಅನುಭವ ನಿಮಗಿದೆ ಎಂದರ್ಥ . ಇದು ಉತ್ತಮ ಜೀವನಕ್ಕೆ ನಾಂದಿ ಮತ್ತು ಆಶಾವಾದಿಯಾಗಿರಿ . ನೆನಪಿನೊಂದಿಗೆ ಬದುಕಿ , ಪ್ರಯಾಣಿಸಿ , ಆನಂದಿಸಿ , ನೆನಪುಗಳನ್ನು ರಚಿಸಿ .
ಹತ್ತನೇ ಸಲಹೆ :- ಪುಟ್ಟ ಮಕ್ಕಳೊಂದಿಗೆ ಪ್ರೀತಿ , ಸಹಾನುಭೂತಿಯಿಂದ ಮಾತನಾಡಿ . ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ . ನಿಮ್ಮ ಮುಖದಲ್ಲಿ ಪುಟ್ಟ ನಗುವನ್ನು ಇರಿಸಿ . ಎಷ್ಟೇ ದೊಡ್ಡ ಕಷ್ಟವಿದ್ದರೂ , ತಾಳ್ಮೆಯನ್ನು ಕಳೆದುಕೊಳ್ಳಬೇಡಿ . ಕಷ್ಟ ಬಂದಾಗ ಯಾರ ಹತ್ತಿರವಾದರೂ ಸಹಾಯ ಕೇಳುವ ಮುನ್ನ , ಸಾವಿರ ಬಾರಿ ಯೋಚನೆ ಮಾಡಿ . ಯಾಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯ ಇರುತ್ತದೆ . ಆದರೆ ಸಹಾಯದ ಭಾರ ಜೀವನ ಪರ್ಯಾಂತ ಇರುತ್ತದೆ . ಹೀಗೆ ಹಲವಾರು ಸಲಹೆಗಳನ್ನು ನೀಡಲಾಗಿದೆ .