ಈ ರಾಶಿಯವರು ಕೆಲವು ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನದಲ್ಲಿ ಜಗಳವೇ ತುಂಬಿರುತ್ತದೆ. ವ್ಯಕ್ತಿತ್ವ ಮತ್ತು ಸ್ವಭಾವವನ್ನು ರಾಶಿ ನಕ್ಷತ್ರಗಳು ನಿರ್ಧರಿಸುತ್ತವೆ.ವ್ಯಕ್ತಿಗೆ ಯಾವ ನಕ್ಷತ್ರ ಮತ್ತು ರಾಶಿ ಹೊಂದುತ್ತವೆ ಎಂದು ಹೇಳುತ್ತವೆ. ಉದಾಹರಣೆಗೆ ಗಂಡ-ಹೆಂಡತಿಯ ಹಠಮಾರಿಗಳು ಆದರೆ ಅವರ ಜೀವನದಲ್ಲಿ ಚೆನ್ನಾಗಿ ಇರೋದಕ್ಕೆ ಸಾಧ್ಯ ಇಲ್ಲ. ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ.ಮದುವೆ ವಿಷಯದಲ್ಲಿ ಹೊಂದದೇ ಇರುವ ರಾಶಿ ನಕ್ಷತ್ರಗಳು ಯಾವುದೆಂದರೆ,
ಮಕರ ಮತ್ತು ಸಿಂಹ ರಾಶಿ :ಸಿಂಹ ರಾಶಿಯವರು ಬಹಳ ಬುದ್ಧಿವಂತರು ಜೊತೆಗೆ ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ.ಮಕರ ರಾಶಿಯವರು ತಮ್ಮ ಕೆಲಸ ಹೇಗೆ ಮುಗಿಸುವುದು ಎಂಬುದನ್ನು ಬಲ್ಲವರು ಹಾಗೂ ಯಾವುದೇ ಕೆಲಸವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ.ಇದೆ ಕಾರಣಕ್ಕೆ ಈ ಎರಡು ರಾಶಿಯವರಿಗೆ ಹೊಂದಾಣಿಕೆ ಸಾಧ್ಯವಾಗುವುದಿಲ್ಲ.ನಿರಂತರವಾಗಿ ಜಗಳವಾಗುವ ಸಾಧ್ಯತೆ ಇದೆ. ಕಟಕ ಹಾಗೂ ಧನಸ್ಸು ರಾಶಿ :ಕಟಕ ರಾಶಿಯವರು ಭಾವನೆಗಳ ಮೂಟೆಯನ್ನು ಕಟ್ಟಿಕೊಂಡಿರುತ್ತಾರೆ. ಜೊತೆಗೆ ಇವರ ಭಾವನೆಗಳು ಆಗಾಗ ಬದಲಾವಣೆ ಆಗುತ್ತಿರುತ್ತವೇ.ಧನಸ್ಸು ರಾಶಿಯವರು ಸ್ವತಂತ್ರ ಸ್ವಭಾವದವರು. ಈ ಎರಡು ರಾಶಿಯವರ ಸ್ವಭಾವ ಬೇರೆ ಬೇರೆಯಾಗಿರುತ್ತದೆ.ಈ ಎರಡು ರಾಶಿಯವರ ಮದುವೆಯಾಗದಿರುವುದೇ ಒಳ್ಳೆಯದು.
ಮಿಥುನ ಮತ್ತು ಮೀನ ರಾಶಿ : ಈ ಎರಡು ರಾಶಿಯವರು ಭಾವನೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆ ರೀತಿಯದು.ಮೀನ ರಾಶಿಯವರಿಗೆ ಸೂಕ್ಷ್ಮತೆ ಹಾಗೂ ಭಾವನೆಗಳೆ ಎಲ್ಲವೂ ಆಗಿರುತ್ತವೆ.ಆದರೆ ಮಿಥುನದವರಿಗೆ ಸಂಬಂಧದಲ್ಲಿ ಮುಖ್ಯವೆನಿಸುವುದಿಲ್ಲ.ಈ ಎರಡು ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಸುಖವಾಗಿ ಇರುವುದಿಲ್ಲ.ಕನ್ಯಾ ಅಥವಾ ಮಿಥುನ ರಾಶಿ : ಈ ರಾಶಿಯವರು ಜೊತೆಯಾದರೆ ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ ನಿಧಾನವಾಗಿ ದೂರ ಸರಿಯುತ್ತಾರೆ.ಕನ್ಯಾ ಹಾಗೂ ಮಿಥುನ ರಾಶಿಯವರ ನಡುವೆ ಹೊಂದಾಣಿಕೆ ಆಗುವುದಿಲ್ಲ. ಹೀಗೆ ದಾಂಪತ್ಯ ಜೀವನದಲ್ಲಿ ಈ 4 ರಾಶಿಯವರದ್ದು ಮಿಸ್ ಮ್ಯಾಚ್ ಆಗುತ್ತವೆ.ಈ ರಾಶಿಗಳಲ್ಲಿ ಸಂಬಂಧ ಬೆಳಸದೆ ಇರುಹುದು ಉತ್ತಮ.