ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಗಂಡ ಎಂದರೆ ಹೇಗಿರಬೇಕು ಎನ್ನುವುದನ್ನು ಈ ಒಂದು ಸಂಚಿಕೆಯನ್ನು ತಿಳಿಸಿ ಕೊಡುತ್ತೇವೆ.ಗಂಡ ಎಂದರೆ ಹೆಂಡತಿಯ ಗುಲಾಮನಲ್ಲ ಹೆಣ್ಣಿನ ಪ್ರೀತಿ-ವಿಶ್ವಾಸ ಘನತೆ ಗೌರವ ಆಗಿರಬೇಕು.
ಒಂದು ಚಿಕ್ಕ ಹಳ್ಳಿಯಲ್ಲಿ ಚಿಕ್ಕದಾದ ಸುಂದರವಾದ ಒಂದು ಸಂಸಾರವಿತ್ತು. ಅದರಲ್ಲಿ ಗಂಡ ಹೆಂಡತಿ ಒಂದು ಗಂಡು ಮಗು ಹಾಗೂ ಅತ್ತೆ ಇವರದು ಸುಕವಾದ ಸಂಸಾರವಾಗಿತ್ತು ಹೆಂಡತಿ ಆದವಳು ಅತ್ತೆಯನ್ನು ತನ್ನ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಳು. ಆದರೆ ಒಂದು ದಿನ ಗಂಡ ಹೆಂಡತಿ ಹಾಗೂ ಮಗು ಇವರು ಮೂರು ಜನ ಹೊರಗಡೆ ಹೋಗಿದ್ದರು ಇದನ್ನು ನೋಡಿ ತಾಯಿಗೆ ಸಹಿಸಲು ಆಗಲಿಲ್ಲ,
ಸಂಜೆ ಆಯಿತು ಇವರು ಮನೆಗೆ ಬಂದರು ಆಗ ತಾಯಿಗೆ ಎಲ್ಲಿಲ್ಲದ ಕೋಪ ಆದರೂ ಮಗನ ಮುಂದೆ ಕೋಪವನ್ನು ತೋರಿಸದೆ ತಾಯಿ ಸುಮ್ಮನೆ ಇದ್ದಳು. ಮರುದಿನ ಮಗ ಆಫೀಸಿಗೆ ಹೋದ ಮೇಲೆ ಅತ್ತೆ ತನ್ನ ಸೊಸೆಯ ಜೊತೆ ಸಣ್ಣ ಪುಟ್ಟ ವಿಷಯಗಳಿಗೆಲ್ಲ ಜಗಳವಾಡುತ್ತಿದ್ದಳು, ಮಾತಿಗೆ ಮಾತು ಬೆಳೆಯುತ್ತಾ ಹೋಯಿತು ಅತ್ತೆ ಹಾಗೂ ಸೊಸೆಯ ಜಗಳ ದೊಡ್ಡದಾಯಿತು ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಸುಮ್ಮನಾದರು ಸಂಜೆ ಗಂಡ ಆಫೀಸಿನಿಂದ ಮನೆಗೆ ಬಂದ ಮೇಲೆ ಹೆಂಡತಿ ತನ್ನ ಗಂಡನಿಗೆ ಎಲ್ಲವನ್ನು ಹೇಳಿದಳು ಆಗ ಗಂಡ ಎಲ್ಲಾ ವಿಷಯವನ್ನು ಕೇಳಿದ ಮೇಲೆ ಸುಮ್ಮನೆ ಕುಳಿತುಕೊಂಡ ಹತ್ತು
ನಿಮಿಷ ಯೋಚನೆ ಮಾಡಿದ ನಂತರ ಹೆಂಡತಿಯ ಮುಖವನ್ನು ನೋಡಿ ನೋಡು ತಪ್ಪು ಯಾರೇ ಆಗಿರಲಿ ಅವರು ನನ್ನ ತಾಯಿ ನೀನು ನನ್ನ ಹೆಂಡತಿ ನಾನು ಒಳ್ಳೆಯ ಗಂಡನಾಗಿ ನಿನ್ನನ್ನು ಹೊರಗಡೆ ಕರೆದುಕೊಂಡು ಹೋದೆ ಆದರೆ ನನ್ನ ತಾಯಿಯನ್ನು ಮನೆಯಲ್ಲೇ ಬಿಟ್ಟು ಹೋದೆ ಜಗಳಕ್ಕೆ ಮೂಲ ಕಾರಣವೇ ಇದು. ಜೊತೆಯಲ್ಲಿ ಇದ್ದಮೇಲೆ ಇಂತಹ ಸಣ್ಣಪುಟ್ಟ ವಿಷಯಗಳು ನಡೆಯುತ್ತಲೇ ಇರುತ್ತವೆ ಅವರ ದೊಡ್ಡವರು ಏನಾದರೂ ಹೇಳಿದರೆ ನೀವೇ ಸುಮ್ಮನಾಗು ಎಂದು ಸಮಾಧಾನ ಮಾಡಿ ಅಲ್ಲಿಂದ ಹೊರಟು ಹೋಗುತ್ತಾನೆ ಹೊರಗಡೆ ಬಂದು ತಾಯಿ ಫೋಟೋದಲ್ಲಿ ಕುಳಿತುಕೊಂಡಿರುವುದನ್ನು ನೋಡಿ
ತಾಯಿ ಹತ್ತಿರ ಬಂದು ಅಮ್ಮ ಏನಾಯಿತು ಎಂದು ಕೇಳುತ್ತಾನೆ, ಹಾಗಾದರೆ ತಾಯಿ ಕೋಪದಿಂದ ತನ್ನ ಹೆಂಡತಿ ಮಾಡಿದ ತಪ್ಪುಗಳನ್ನೆಲ್ಲ ತನ್ನ ಮಗನ ಹತ್ತಿರ ಹೇಳುತ್ತಾಳೆ ಆಗ ಎಲ್ಲವನ್ನು ಕೇಳಿದ ಮಗನು ಅಮ್ಮ ತಪ್ಪು ಯಾರದು ನನಗೆ ಗೊತ್ತಿಲ್ಲ ನೀನು ದೊಡ್ಡವಳು ನಿನ್ನ ಮುಂದೆ ನಾವು ಚಿಕ್ಕವರು ಚಿಕ್ಕವರು ತಪ್ಪು ಮಾಡಿದ್ದಲ್ಲಿ ದೊಡ್ಡವರು ಕ್ಷಮಿಸ ಬೇಕೆ ಹೊರತು ವಿಷಯಗಳನ್ನೆಲ್ಲ ದೊಡ್ಡದು ಮಾಡುವುದರಿಂದ ಮನಸ್ಸುಗಳಲ್ಲಿ ಬಿರುಕು ಉಂಟಾಗುತ್ತದೆ ಅವಳು ಹೊರಗಡೆಯಿಂದ ನಮ್ಮ ಮನೆಗೆ ಬಂದ ಇನ್ನು ಪ್ರತಿಯೊಬ್ಬರನ್ನು ಬಿಟ್ಟು ಬಂದಿರುವವಳು ಅವಳ ಇಷ್ಟ ಕಷ್ಟವನ್ನು ನಾವಲ್ಲದೆ ಬೇರೆ
ಯಾರು ನೋಡುವುದು ಅವಳು ನಮ್ಮನ್ನು ನಂಬಿ ನಮ್ಮ ಮನೆಗೆ ಬಂದಿರುವ ಅವಳು ಚಿಕ್ಕಪುಟ್ಟ ತಪ್ಪುಗಳಾದರೆ ನಾವೇ ಅನುಸರಿಸಿಕೊಂಡು ಹೋಗಬೇಕು ಎಂದು ತಾಯಿಯ ಹತ್ತಿರ ಪ್ರೀತಿಯಿಂದ ಹೇಳುತ್ತಾನೆ. ಅಮ್ಮ ನಾನು ಹೇಳಿದ್ದಲ್ಲಿ ತಪ್ಪು ಏನಾದರೂ ಇದ್ದರೆ ನನ್ನನ್ನು ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ ನಂತರ ತಾಯಿ ಯೋಚನೆ ಮಾಡಿ ನನ್ನ ಮಗ ತಪ್ಪು ನನ್ನದಿದ್ದರೂ ನನ್ನ ಹತ್ತಿರ ಪ್ರೀತಿಯಿಂದಲೇ ಮಾತನಾಡುತ್ತಿದ್ದಾರೆ ನನ್ನ ಹಾಗೆ ಅವಳು ಕೂಡ ಒಂದು ಹೆಣ್ಣು ಅಲ್ಲವೇ ಅವಳಿಗೂ ಆಸೆ ಆಕಾಂಕ್ಷಿಗಳು
ಎಲ್ಲವೂ ಇರುತ್ತವೆ ಅಲ್ಲವೇ ಮರುದಿನ ಇಬ್ಬರು ಖುಷಿಯಿಂದ ಮಾತನಾಡಿಕೊಂಡು ಇರುವುದನ್ನು ನೋಡಿ ಆತನಿಗೆ ತುಂಬಾ ಖುಷಿಯಾಗುತ್ತದೆ.ಸ್ನೇಹಿತರೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ತಾಯಿ ಕೂಡ ಹೆಣ್ಣೇ ಹೆಂಡತಿ ಕೂಡ ಹೆಣ್ಣೇ ತಾಯಿ ಜನ್ಮ ಕೊಟ್ಟರೆ ಹೆಂಡತಿ ಜೀವನವನ್ನು ಕೊಡುತ್ತಾಳೆ ಒಬ್ಬರನ್ನು ಒಬ್ಬರು ಕೂಡ ತಾಳ್ಮೆಯಿಂದ ಅರ್ಥಮಾಡಿಕೊಂಡು ಹೋದರೆ ಜೀವನದಲ್ಲಿ ಸುಖವಾಗಿರಬಹುದು.
ಸ್ನೇಹಿತರೆ ಒಂದು ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು