ನಾವು ಈ ಲೇಖನದಲ್ಲಿ ಲಕ್ಷ್ಮಿ ದೇವಿಯನ್ನು ಮನೆಗೆ ಆಕರ್ಷಿಸುವ ಗೋ ಮತಿ ಚಕ್ರ ಎಂದರೇನು….? ಹೇಗೆ ಕೆಲಸ ಮಾಡುತ್ತದೆ ..? ಎಂಬುದರ ಬಗ್ಗೆ ತಿಳಿಯೋಣ . ಮಹಾಲಕ್ಷ್ಮಿ ದೇವಿಯ ಕೃಪೆ ಜೀವನದಲ್ಲಿ ಎಲ್ಲರಿಗೂ ಬೇಕು. ಧನ ಧಾನ್ಯಗಳ ಅಧಿದೇವತೆ ಮಹಾಲಕ್ಷ್ಮೀ ಆಗಿದ್ದು, ಸಮಸ್ತ ಜಗತ್ತಿಗೂ ಯಶಸ್ಸು , ವೈಭವ ಹಾಗೂ ಕೀರ್ತಿಯನ್ನು ದಯೆ ಪಾಲಿಸುವಂತಹ ದೇವತೆ ಆಗಿದ್ದಾಳೆ. ಮಹಾಲಕ್ಷ್ಮಿ ದೇವಿಯ ಕೃಪೆ ಇದ್ದವರ ಮನೆಯಲ್ಲಿ ಧನ – ಧಾನ್ಯ ಹಾಗೂ ಸಮೃದ್ಧಿ ಅಪಾರವಾಗಿ ಇರುತ್ತದೆ. ನಮ್ಮ ಸನಾತನ ಹಿಂದೂ ಸಂಪ್ರದಾಯದ ಪ್ರಕಾರ , ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ,
ಅಂತಹ ವಸ್ತುಗಳು ಮನೆಗೆ ಮಹಾಲಕ್ಷ್ಮಿಯನ್ನು ಆಕರ್ಷಿಸುತ್ತದೆ . ಹಾಗೂ ಅಂತಹ ಮನೆಗಳಲ್ಲಿ ಹಣದ ಹರಿವು ಹೆಚ್ಚಾಗುತ್ತದೆ . ಮಹಾಲಕ್ಷ್ಮಿಗೆ ಪ್ರಿಯವಾಗಿರುವ ಸಾಂಪ್ರದಾಯಕ ವಸ್ತುಗಳಲ್ಲಿ
ಗೋಮತಿ ಚಕ್ರ ಪ್ರಮುಖವಾದದ್ದು ಆಗಿದೆ . ಗೋಮತಿ ಚಕ್ರ ಎಂದರೇನು ? ಗೋಮತಿ ಚಕ್ರ ಏಕೆ ಅಷ್ಟು ಪವಿತ್ರ ? ಹಾಗೂ ಈ ಗೋಮತಿ ಚಕ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉಂಟಾಗುವ ಲಾಭಗಳ ಕುರಿತಾಗಿ ಹಲವಾರು ಕುತೂಹಲ ಭರಿತ ಮಾಹಿತಿಗಳನ್ನು ತಿಳಿದುಕೊಳ್ಳೋಣ .
ಗೋ ಮತಿ ಚಕ್ರವು ಅತೀ ಇಂದ್ರಿಯಾ ಗುಣಲಕ್ಷಣಗಳನ್ನು ಹೊಂದಿರುವ ಒಂದು ಪವಿತ್ರ ಕಲ್ಲು. ಗುಜರಾತ್ ರಾಜ್ಯದಲ್ಲಿರುವ ಪ್ರಭು ಶ್ರೀಕೃಷ್ಣನ ರಾಜಧಾನಿ ದ್ವಾರಕೆಯಲ್ಲಿ ಪ್ರವಹಿಸುವ ಗೋಮತಿ ನದಿಯಲ್ಲಿ ಈ ಪವಿತ್ರವಾದ ಗೋಮತಿ ಚಕ್ರ ಎಂಬ ಕಲ್ಲು ದೊರೆಯುತ್ತದೆ. ನಮ್ಮ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಗೋಮತಿ ನದಿ ಅತ್ಯಂತ ಪವಿತ್ರವಾದುದದ್ದು ಆಗಿದೆ. ಈ ನದಿ ಋಷಿ ವಶಿಷ್ಠರ ಪುತ್ರಿ . ಈ ನದಿಯಲ್ಲಿ ಏಕಾದಶಿ ದಿನದಂದು ಸ್ನಾನವನ್ನು ಮಾಡಿದರೆ , ಮಾಡಿದ ಪಾಪಗಳು ನಾಶವಾಗುತ್ತದೆ.
ಗೋಮತಿ ನದಿ ಗಂಗಾ ನದಿಯ ಉಪ ನದಿಯೂ ಕೂಡ ಆಗಿದೆ. ನಾವು ಗಮನವಿಟ್ಟು ನೋಡಿದರೆ, ಗೋಮತಿ ಚಕ್ರದ ಮೇಲ್ಭಾಗದಲ್ಲಿರುವ ವಿನ್ಯಾಸವು ಶ್ರೀ ಕೃಷ್ಣ ಪರಮಾತ್ಮರ ಸುದರ್ಶನ ಚಕ್ರವನ್ನು ಹೋಲುತ್ತದೆ . ಹಾಗಾಗಿ ಈ ಗೋಮತಿ ಚಕ್ರಕ್ಕೆ ಸುದರ್ಶನ ಚಕ್ರ ಎಂದು ಕರೆಯಲಾಗುತ್ತದೆ . ಗೋಮತಿ ಚಕ್ರದ ಉಗಮದ ಕುರಿತಾಗಿ ಅನೇಕ ಕಥೆಗಳಿವೆ. ಒಂದು ಕಥೆಯ ಪ್ರಕಾರ ಗೋಮತಿ ಚಕ್ರಗಳು ಹಿಂದೆ ಪ್ರಭು ಶ್ರೀ ಕೃಷ್ಣ ಪರಮಾತ್ಮರ ದ್ವಾರಕಾ ಅರಮನೆಯ ಭಾಗವಾಗಿತ್ತು . ಶ್ರೀ ಕೃಷ್ಣ ಪರಮಾತ್ಮರ ಅರಮನೆಯ ಗೋಡೆಗಳು ಹಾಗೂ ನೆಲವನ್ನು ಅಲಂಕರಿಸಲು ಇವುಗಳನ್ನು ಬಳಸಲಾಗುತ್ತಿತ್ತು.
ದ್ವಾರಕೆಯ ಅರಮನೆಯ ಸಮುದ್ರದೊಳಗೆ ಮುಳುಗಿದ ನಂತರ ಅರಮನೆಯ ಕಲ್ಲುಗಳು ಗೋಮತಿ ಚಕ್ರದ ರೂಪವನ್ನು ಪಡೆದುಕೊಂಡವು. ಗೋಮತಿ ನದಿಯಲ್ಲಿ ಮಾತ್ರ ದೊರೆಯುವ ಗೋಮತಿ ಚಕ್ರದ ಮಹತ್ವ ಅಪಾರವಾಗಿದೆ. ಮಹಾವಿಷ್ಣು ದೇವರ ಆಶೀರ್ವಾದವನ್ನು ಪಡೆಯಲು ವಿವಿಧ ವೈದಿಕ ಆಚರಣೆಗಳನ್ನು ಮಾಡುವ ಸಂದರ್ಭದಲ್ಲಿ ಪವಿತ್ರ ಸಾಲಿಗ್ರಾಮ ದೊಂದಿಗೆ ಗೋಮತಿ ಚಕ್ರಗಳನ್ನು ಸಹ ಬಳಸಲಾಗುತ್ತದೆ .ಸಾಲಿಗ್ರಾಮ ದೊಂದಿಗೆ ಗೋಮತಿ ಚಕ್ರಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ , ಭಕ್ತರು ಹಿಂದಿನ ಜನ್ಮದ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು .
ಗೋಮತಿ ಚಕ್ರಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ , ಮಹಾವಿಷ್ಣು ಹಾಗೂ ಮಹಾಲಕ್ಷ್ಮಿಯ ಆಶೀರ್ವಾದ ಲಭಿಸುತ್ತದೆ . ಈ ವೃತ್ತಾಕಾರದ ಸಣ್ಣ ಗೋಮತಿ ಚಕ್ರಗಳನ್ನು ಪೆಂಡೆಂಟ್, ಬ್ರಾಸ್ಲೈಟ್ ಹಾಗೂ ರಿಂಗ್ ಗಳಾಗಿ ಧರಿಸಬಹುದು . ಹೀಗೆ ಧರಿಸಿದರೆ ಉತ್ತಮವಾದ ಆರೋಗ್ಯ ಹಾಗೂ ಅದೃಷ್ಟ ಪ್ರಾಪ್ತಿಯಾಗುತ್ತದೆ . ಈ ಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡರೆ , ಸಂಪತ್ತಿನ ದೇವಿ ಮಹಾಲಕ್ಷ್ಮಿಯನ್ನು ಇದು ಆಕರ್ಷಿಸುತ್ತದೆ. 11 ಗೋಮತಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ದೇವರ ಮನೆಯಲ್ಲಿ ಅಥವಾ ನಗದು ಪೆಟ್ಟಿಗೆಯಲ್ಲಿ ಇಟ್ಟರೆ , ಆರ್ಥಿಕವಾಗಿ ಸಫಲರಾಗುತ್ತಾರೆ .
ಗೋಮತಿ ಚಕ್ರಗಳನ್ನು ಕೈ ಚೀಲದಲ್ಲಿ ಇಟ್ಟುಕೊಂಡರು ಸಹ ಆರ್ಥಿಕ ಸ್ಥಿರತೆ ಉಂಟಾಗುತ್ತದೆ . ಗೋಮತಿ ಚಕ್ರದ ಅತಿ ದೊಡ್ಡ ಪ್ರಯೋಜನವೆಂದರೆ , ಇದು ದುಷ್ಟ ಶಕ್ತಿಗಳಿಂದ ಹಾಗೂ ಮಾಟ ಮಂತ್ರಗಳಿಂದ ದೂರ ಇರಿಸುತ್ತದೆ . ಗೋಮಾತೆ ಚಕ್ರಗಳು ಮನೆಯಲ್ಲಿದ್ದರೆ ಕೆಟ್ಟ ದುಷ್ಟ ಶಕ್ತಿಗಳು ಹಾಗೂ ಮಾಟ ಮಂತ್ರಗಳು ತಾಕುವುದಿಲ್ಲ . ನಕಾರಾತ್ಮಕ ಶಕ್ತಿಗಳು ಅಂತಹ ಮನೆಯ ಬಳಿ ಸುಳಿಯುವುದಿಲ್ಲ . ಅತ್ಯಂತ ಮುಖ್ಯವಾಗಿರುವ ವಿಚಾರ ಎಂದರೆ, ಗೋಮತಿ ಚಕ್ರ ಇರುವ ಮನೆಯಲ್ಲಿ ಎಂದಿಗೂ ವಾಸ್ತುದೋಷ ಇರುವುದಿಲ್ಲ .ಗೋಮತಿ ಚಕ್ರಗಳು ಜೀವನದಲ್ಲಿ ಆರ್ಥಿಕ ಸ್ಥಿರತೆ ಹಾಗೂ
ಯಶಸ್ಸು ತಂದು ಕೊಡುವುದರ ಜೊತೆಗೆ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ . ಕಡಿಮೆ ರಕ್ತದ ಒತ್ತಡ , ಜೀರ್ಣದ ಸಮಸ್ಯೆಗಳು ಅಥವಾ ನಿದ್ರಾ ಹೀನತೆಯಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಗೋಮತಿ ಚಕ್ರಗಳನ್ನು ಧರಿಸಬೇಕು . ಗೋಮತಿ ಚಕ್ರಗಳು ವಿಶೇಷವಾಗಿ ಮಕ್ಕಳಿಗೆ ರಕ್ಷಣಾತ್ಮಕ ತಾಯತವಾಗಿ ಕೆಲಸ ಮಾಡುತ್ತವೆ. ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿ ಹೆದರುತ್ತಿದ್ದರೆ , ಅಳುತ್ತಿದ್ದರೆ, ಅಥವಾ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ , ಆಂಜನೇಯ ಸ್ವಾಮಿಯ ಮಂದಿರಕ್ಕೆ ತೆರಳಿ ಸಿಂಧೂರವನ್ನು ತೆಗೆದುಕೊಂಡು ಗೋಮತಿ ಚಕ್ರಕ್ಕೆ ಲೇಪಿಸಿ ಕೆಂಪು ಬಟ್ಟೆಯಲ್ಲಿ ಸುತ್ತಿ ಕೊರಳಿಗೆ ಕಟ್ಟಿದರೆ,
ಸಾಕು ಭಯ ನಿವಾರಣೆಯಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ ಆಗುತ್ತಿದ್ದರೆ, ಈ ಗೋಮತಿ ಚಕ್ರವನ್ನು ಅವರ ಕುತ್ತಿಗೆಗೆ ಪೆಂಡೆಂಟ್ ಆಗಿ ಧಾರಣೆ ಮಾಡಿದರೆ , ಇದರ ಪ್ರಭಾವದಿಂದ ಅವರ ವಿದ್ಯಾಭ್ಯಾಸದಲ್ಲಿ ಏಳಿಗೆಯ ಜೊತೆಗೆ ಜ್ಞಾಪಕ ಶಕ್ತಿಯು ಸಹ ವೃದ್ಧಿಯಾಗುತ್ತದೆ . ವ್ಯಾಪಾರ ವ್ಯವಹಾರಗಳ ಜಾಗದಲ್ಲಿ ಗೋಮತಿ ಚಕ್ರವನ್ನು ಇಟ್ಟುಕೊಳ್ಳುವುದರಿಂದ ವ್ಯಾಪಾರದಲ್ಲಿ ಶೀಘ್ರವೇ ಏಳಿಗೆ ಆಗುತ್ತದೆ. ಗೋಮತಿ ಚಕ್ರದ ಪರಿಣಾಮ ಮತ್ತು ಪ್ರಭಾವಗಳಿಗೆ ಯಾವುದೇ ವೈಜ್ಞಾನಿಕ ವಿವರಣೆ ಇಲ್ಲ . ಆದರೆ ಈ ಚಕ್ರವನ್ನು ಹೊಂದಿರುವ ಅನೇಕ ಜನರು ಇದರಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ನಂಬಿಕೆ ಮತ್ತು ನಿದರ್ಶನಗಳನ್ನು ಉಲ್ಲೇಖಿಸುತ್ತಾರೆ ಎಂದು ಹೇಳಲಾಗಿದೆ .