ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ವೃಶ್ಚಿಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ವಿಚಿತ್ರ ಸಾಹಸಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ . ಅರ್ಧ ಅಷ್ಟಮ ಶನಿ , ಆರರ ಗುರು , ಪಂಚಮದಲ್ಲಿ ರಾಹು ಇವೆಲ್ಲಾ ಧೀರ್ಘ ಕಾಲದ ಸಮಸ್ಯೆಗಳು ನಿಮ್ಮ ಭವಿಷ್ಯಕ್ಕೆ ಸಂಬಂಧಪಟ್ಟ ಹಾಗೆ ಇವೆ. ಈ ಮಾರ್ಚ್ ತಿಂಗಳು ಬಹಳ ಧನಾತ್ಮಕವಾಗಿ ಇದೆ. ಸ್ವಲ್ಪ ಭರವಸೆಯನ್ನು ಇಟ್ಟುಕೊಳ್ಳಬಹುದು. ಕಡಿಮೆ ಸಮಯದಲ್ಲಿ ಖುಷಿ ಮತ್ತು ಯಶಸ್ಸು ದೊರೆಯುತ್ತದೆ.
ನೀವು ಅಂದುಕೊಳ್ಳುವ ವಿಚಾರಗಳು ಆಗುವ ಸಾಧ್ಯತೆ ಇದೆ . ನಿಮ್ಮ ರಾಶಿಯಾಧಿಪತಿ ಕುಜ ಗ್ರಹ ಆಗಿರುತ್ತದೆ . ತೃತೀಯಾ ಭಾವದಲ್ಲಿ ಅಂದರೆ ಮಕರದಲ್ಲಿ ಶಕ್ತಿಯುತವಾಗಿ ಅಂದರೆ ಮೂರನೇ ಸ್ಥಾನವನ್ನು ಪರಾಕ್ರಮ ಎಂದು ಹೇಳುತ್ತೇವೆ. ಪರಾಕ್ರಮಕ್ಕೆ ಕಾರಕ ಗ್ರಹ ಕುಜ ಗ್ರಹ . ಇದೆಲ್ಲಾ ವಿಚಿತ್ರ ಸಾಹಸಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ .ಆ ಸಾಹಸ ಯಶಸ್ಸನ್ನು ತಂದುಕೊಡುತ್ತದೆ . ರಾಶಿ ಫಲದ ಆಧಾರದ ಮೇಲೆ ಸ್ಪಷ್ಟವಾಗಿ ಕಾಣಿಸುವ ಒಂದು ವಿಚಾರ,
ರಾಶಿಯ ಅಧಿಪತಿ ಕೊಡುವ ಪರಾಕ್ರಮ ಧೈರ್ಯ ಇವೆಲ್ಲಾ ಮುಂದುವರಿಯುತ್ತದೆಯೇ ಅಂದರೆ ಆ ಒಂದು ಸ್ಥಿತಿ ಮುಂದುವರಿಯುತ್ತದೆ. ಒಂದು ಮಟ್ಟಕ್ಕೆ ನೀವು ಖುಷಿಯಾಗಿ ಇರಬಹುದು. ವಿಷಯಗಳನ್ನು ಸಮತೋಲನ ಮಾಡಿಕೊಳ್ಳಬಹುದು . ಅರ್ಧ ಅಷ್ಟಮ ಶನಿ . ಅಂದರೆ ಚತುರ್ಥ ಭಾವದಲ್ಲಿ ಶನಿ . ಗಾಬರಿ ಬೀಳುವುದು ಬೇಡ . ಶನಿಗೆ ಸಾತ್ ಕೊಡುವುದಕ್ಕೆ ಇನ್ನೂ ಎರಡು ಗ್ರಹಗಳು ಕುಂಭ ರಾಶಿಯಲ್ಲಿ ಇರುತ್ತವೆ .ಚತುರ್ಥ ಭಾವ ಸುಖ ಸ್ಥಾನ ಆಗುತ್ತದೆ . ವಾಹನ, ಆಸ್ತಿ , ಸ್ವತ್ತು , ಧನ ಸ್ಥಾನ ಹೂಡಿಕೆ ಸ್ಥಾನ ಕಾರಕ ಸ್ಥಾನ ಆಗುತ್ತದೆ. ಈ ವಿಚಾರಗಳಲ್ಲಿ ನಿಮ್ಮ ಗಮನ ಜಾಸ್ತಿ ಆಗುತ್ತದೆ .
ನಿಮ್ಮ ಗುರಿ ಈಡೇರುವ ಸಾಧ್ಯತೆ ಇರುತ್ತದೆ. ಚತುರ್ಥ ಭಾವಕ್ಕೆ ಶುಕ್ರ ಗ್ರಹ ಬರುತ್ತದೆ. 7ನೇ ತಾರೀಖಿನ ವರೆಗೂ ಶುಕ್ರನಿಂದ ಬಹಳಷ್ಟು ಲಾಭವನ್ನು ಪಡೆಯಬಹುದು. ನಂತರ ಪಂಚಮ ಸ್ಥಾನಕ್ಕೆ ಶುಕ್ರ ಹೋದಾಗ ಅದು ಪ್ರಾಪರ್ಟಿ ಎನ್ನುವುದು ಅರಿವಿಗೆ ಬರುತ್ತದೆ. ನಿಮ್ಮ ದಾರಿ ಬೇರೆ ಇದೆ ಎಂದು ಅರ್ಥವಾಗುತ್ತದೆ .ಅಲ್ಲಿಗೆ ಅದನ್ನು ನೀವು ಬಿಟ್ಟು ಬಿಡುತ್ತೀರಾ . ವಿಚಾರದ ಬಗ್ಗೆ ಪ್ರಯತ್ನವನ್ನು ಕಡಿಮೆ ಮಾಡುತ್ತೀರಾ . ಅದರ ಬಗ್ಗೆ ನಿಮ್ಮ ಗಮನ ಹೋದಾಗ ಅದರ ಮೇಲಿನ ಆಸೆ ಕಡಿಮೆಯಾಗುತ್ತದೆ .
ಅರ್ಧ ಅಷ್ಟಮ ಶನಿ ಮತ್ತು ಷಷ್ಟದಲ್ಲಿ ಗುರು ಇರುವಾಗ ಬಹಳ ಜನರ ವಿಚಾರದಲ್ಲಿ ನಡೆಯುತ್ತದೆ. ಬುಧ ಗ್ರಹ ಪಂಚಮ ಭಾವಕ್ಕೆ ಬರುತ್ತದೆ . ಇದೂ ಕೂಡ ಅಷ್ಟೊಂದು ಒಳ್ಳೆಯ ಪರಿವರ್ತನೆ ಅಲ್ಲ, ಚತುರ್ಥ ಭಾವದಲ್ಲಿ ಇದ್ದಾಗ ಖುಷಿಯಾಗಿ ಇರುತ್ತೀರಾ . ಚತುರ್ಥ ಭಾವದಿಂದ ಪಂಚಮಕ್ಕೆ ಹೋದಾಗ ಕುಟುಂಬದ ವಿಚಾರದಲ್ಲಿ ಎಡವಟ್ಟುಗಳು ಆಗುವ ಸಾಧ್ಯತೆ ಇರುತ್ತದೆ . ತಪ್ಪು ಗ್ರಹಿಕೆಗಳು , ಮಕ್ಕಳು ಅಥವಾ ಹೆಂಡತಿ ಮಧ್ಯೆ ವೈಮನಸ್ಸುಗಳು, ಕಿರಿಕಿರಿ ಜಗಳ ಉಂಟಾಗುವ ಸಾಧ್ಯತೆ ಇರುತ್ತದೆ ಹೆಚ್ಚರಿಕೆಯಿಂದ ಇರಬೇಕು.
ರವಿಯಿಂದಲೂ ಹೇಳಿಕೊಳ್ಳುವ ಅನುಕೂಲಗಳು ಇರುವುದಿಲ್ಲ . ಕೋರ್ಟ್ ಕೇಸ್ ಗಳು ಮುಂದೆ ಹೋಗುವ ಸಾಧ್ಯತೆ ಇದೆ . ಈ ರೀತಿಯ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ . ಕುಜಗ್ರಹ ಮಕರ ದಲ್ಲಿ ಇದ್ದು ಉಚ್ಚ ಸ್ಥಾನದಲ್ಲಿ ಇರುತ್ತದೆ . 15 ನೇ ತಾರೀಖಿನ ನಂತರ ಕುಜ ಗ್ರಹ ಮಕರದಿಂದ ಕುಂಭ ರಾಶಿಗೆ ಹೋಗುತ್ತದೆ. ಕುಂಭದಲ್ಲಿ ಶನಿ , ಶನಿಗೂ ಕುಜ ಗ್ರಹಕ್ಕೂ ಅಷ್ಟಕ್ಕೆ ಅಷ್ಟೇ . ಕುಂಭ ರಾಶಿ ಶನಿಯ ಸ್ವಕ್ಷೇತ್ರ . ಶನಿ ಅಲ್ಲಿ ಬಲಿಷ್ಟನಾಗಿರುತ್ತಾನೆ. ಆ ಪರಿಸ್ಥಿತಿಯಲ್ಲಿ ರಾಶಿಯಾಧಿಪತಿ ಅತಂತ್ರ ಎಂದು ಹೇಳಬಹುದು.
ಚತುರ್ಥ ಭಾವ ಸುಖ ಸ್ಥಾನ ಆಗಿರುತ್ತದೆ . ಕುಜ ಗ್ರಹ ಅಷ್ಟೊಂದು ಉಪಯುಕ್ತ ಅಲ್ಲ . ಒಳ್ಳೆಯದಕ್ಕಿಂತ ಸ್ವಲ್ಪ ತೊಂದರೆಗಳು ಜಾಸ್ತಿಯಾಗಿರುತ್ತದೆ . ಸಂಬಂಧಿಕರ ನಡುವೆ ಗೊಂದಲಗಳು , ಆರೋಗ್ಯದಲ್ಲಿ ಸಮಸ್ಯೆಗಳು , ನಿಮ್ಮ ಘನತೆ, ಗೌರವಕ್ಕೆ ಕುಂದು ಬರುವ ಘಟನೆಗಳು ನಡೆಯುತ್ತವೆ . ಈ ತರಹದ ನಕಾರಾತ್ಮಕ ವಿಚಾರಗಳನ್ನು ನೀವು ಅನುಭವವಿಸಬೇಕಾಗುತ್ತದೆ. 15ನೇ ತಾರೀಖಿನ ವರೆಗೆ ನೀವು ಇರುವ ರೀತಿಯೇ ಬೇರೆ . ನಂತರ ನಿಮ್ಮ ಜೀವನದಲ್ಲಿ ಬರುವ ಸಂದರ್ಭಗಳು ಬೇರೆಯಾಗಿರುತ್ತದೆ .
ಇದೊಂದು ವಿಚಾರವನ್ನು ಬಹಳ ಸ್ಪಷ್ಟವಾಗಿ ಈ ತಿಂಗಳ ಮಟ್ಟಿಗೆ ಹೇಳಬಹುದು . ಬುಧ ಗ್ರಹ 25ನೇ ತಾರೀಕಿನ ವರೆಗೆ ಪಂಚಮ ಭಾವದಲ್ಲಿ ಇರುತ್ತದೆ . 25 ರ ನಂತರ ಷಷ್ಠ ಭಾವಕ್ಕೆ ಪರಿವರ್ತನೆ ಆಗುತ್ತದೆ . ಬುಧನಿಂದ ಯಶಸ್ಸು ದೊರೆಯುತ್ತದೆ. ಕೆಲಸ ಕಾರ್ಯಗಳಿಗೆ ಕೈ ಹಾಕಿದರೆ ಅದು ಪೂರ್ತಿಯಾಗುವ ಸಾಧ್ಯತೆ ಇದೆ. ಖುಷಿ ಕೂಡ ದೊರೆಯುತ್ತದೆ . ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಒಂದು ಮಟ್ಟಿನ ಚಾಕಚಕ್ಯತೆ ದೊರೆಯುತ್ತದೆ . ಕಷ್ಟದ ಪರಿಸ್ಥಿತಿಗಳು ಬಂದರೂ ಅದನ್ನು ನಿಭಾಯಿಸುವ ಶಕ್ತಿ ಬುಧ ಗ್ರಹದಿಂದ ದೊರೆಯುತ್ತದೆ .
ವಿಷಯವನ್ನು ನಿಮ್ಮ ಬುದ್ಧಿ ಕಡೆಗೆ ಉಪಯೋಗಿಸಿ ಧನಾತ್ಮಕದ ಕಡೆಗೆ ತೆಗೆದುಕೊಂಡು ಹೋಗಬೇಕು . ವಿದ್ಯಾರ್ಥಿಗಳ ಮಟ್ಟಿಗೆ 26ನೇ ತಾರೀಕಿನ ನಂತರ ಬಹಳ ಚೆನ್ನಾಗಿದೆ . ಬುಧ ಸ್ವಲ್ಪ ಬಲಿಷ್ಠನಾಗಿರುವುದರಿಂದ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ . ಒಟ್ಟಾರೆಯಾಗಿ ವೃಶ್ಚಿಕ ರಾಶಿಯ ಮಟ್ಟಿಗೆ ಸ್ವಲ್ಪ ನಕಾರಾತ್ಮಕ ಅಂಶಗಳು ಇವೆ . ಷಷ್ಟದಲ್ಲಿ ಗುರು ಇರುವುದರಿಂದ ಪ್ರದರ್ಶನಗಳ ಬಗ್ಗೆ ಸಣ್ಣ ಪುಟ್ಟ ತೊಂದರೆಗಳು ಆಗಬಹುದು . ಸ್ವಲ್ಪ ಹೆಚ್ಚರಿಕೆಯಿಂದ ಇರಿ . ಗುರುಗಳ ಬಗ್ಗೆ ಮನಸ್ಸಿನಲ್ಲಿ ಧ್ಯಾನ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು . ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಬಹುದು . ಕುಜ ಗ್ರಹ ಮತ್ತು ಬುಧ ಗ್ರಹದ ರಕ್ಷಣೆ ಇದೆ. ವೃಶ್ಚಿಕ ರಾಶಿಯ ಮಟ್ಟಿಗೆ ಅಂತಹ ದೊಡ್ಡ ಸಮಸ್ಯೆಗಳು ಇಲ್ಲ .