ಈ ಚಿತ್ರದಲ್ಲಿ ಮೂರು ಹೂವುಗಳನ್ನು ನೋಡುತ್ತಿದ್ದೀರಿ. ಜುಲೈ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಮತ್ತು ಯಾವೆಲ್ಲಾ ಫಲಗಳು ಸಿಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ನಿಮ್ಮ ಇಷ್ಟದೇವರನ್ನು ನೆನೆಸಿಕೊಂಡು ಈ ಮೂರು ಹೂವುಗಳಲ್ಲಿ ಒಂದು ಹೂವನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮೂರು ಹೂವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡುವುದರ ಮೂಲಕ ಜುಲೈ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
ನಂಬರ್ 1ನಲ್ಲಿ ಇರುವ ಹೂವನ್ನು ಆಯ್ಕೆ ಮಾಡಿದ್ದರೇ ಹಿಂದೆ ನಿಮ್ಮ ಜೀವನದಲ್ಲಿ ಕಷ್ಟ, ಸುಖಗಳನ್ನು ಅನುಭವಿಸಿ ಬಂದಿರುತ್ತೀರೋ ಅದೇ ಈ ತಿಂಗಳು ಮುಂದುವರೆಯುತ್ತದೆ. ತಿಂಗಳ ಕೊನೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳು ಆಗುತ್ತದೆ. ಜೊತೆಗೆ ತಿಂಗಳ ಕೊನೆಯಲ್ಲಿ ಒಳ್ಳೆಯ ಸುದ್ಧಿಯನ್ನು ಕೇಳುತ್ತೀರಿ. ವ್ಯಕ್ತಿಗಳಿಂದಲೂ ಒಳ್ಳೆಯದು ಆಗಬಹುದು ಇಲ್ಲವೇ ನಿಮ್ಮ ಜೀವನದಲ್ಲಿ ಚಿಕ್ಕ ಪುಟ್ಟ ಒಳ್ಳೆಯ ವಿಚಾರಗಳು ಜರುಗಬಹುದು. ಜೀವನ ಚೆನ್ನಾಗಿಯೇ ಇದೆ ಎನ್ನುವುದಾರೇ
ಈ ತಿಂಗಳ ಕೊನೆಯಲ್ಲಿ ಇನ್ನೂ ಚೆನ್ನಾಗಿಯೇ ಇರುತ್ತದೆ. ಆದರೇ ಈಗಾಗಲೇ ಕಷ್ಟಗಳು ಇದೆ ಎನ್ನುವುದಾದರೇ ಅದು ಬಹಳ ದಿನಗಳವರೆಗೆ ಇರುವುದಿಲ್ಲ ಅದರಿಂದ ಬಹಳ ಬೇಗ ಹೊರಬರುತ್ತೀರಿ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ವಿಷಯಗಳು ಜರುಗುತ್ತದೆ. ಕಷ್ಟಗಳು ಬಂದರೂ ಅದನ್ನು ಸ್ವೀಕಾರ ಮಾಡಿಕೊಂಡು ಹೋಗುತ್ತಿರಿ.
ನಂಬರ್ 2 ಹೂವನ್ನು ಆಯ್ಕೆ ಮಾಡಿದರೇ ವಿಶೇಷವಾಗಿ ನಿಮ್ಮ ಜೀವನವು ಸಾಮಾನ್ಯವಾಗಿರುತ್ತದೆ. ತುಂಬಾ ಕಷ್ಟವೂ ಇಲ್ಲ ತುಂಬಾ ಸುಖವೂ ಇಲ್ಲ.
ಮೀಡಿಯಂ ಆದ ಜೀವನವನ್ನು ಅನುಭವಿಸುತ್ತಿರುತ್ತೀರಿ. ಜುಲೈ ತಿಂಗಳಿನಲ್ಲಿ ಒಳ್ಳೆಯ ಅಭಿವೃದ್ಧಿ ಬರುತ್ತದೆ ಆದರೇ ಈ ಹಿಂದೆ ಕಷ್ಟಗಳನ್ನೇ ಅನುಭವಿಸಿದ್ದರೇ ಕಷ್ಟಗಳನ್ನೇ ಅನುಭವಿಸಬೇಕಾಗುತ್ತದೆ. ಈ ಹಿಂದೆ ಒಳ್ಳೆಯದನ್ನೇ ಅನುಭವಿಸಿದ್ದರೇ ಒಳ್ಳೆಯದ್ದನ್ನೇ ಅನುಭವಿಸಬೇಕಾಗುತ್ತದೆ. ಕೆಟ್ಟದ್ದನ್ನು ಅನುಭವಿಸಿದ್ದರೇ ಕೆಟ್ಟದ್ದನ್ನೇ ಅನುಭವಿಸಬೇಕಾಗುತ್ತದೆ. ನೀವು ಯಾವುದೇ ರಂಗದಲ್ಲಿದ್ದರೂ ಅದು ಅನ್ವಯಿಸುತ್ತದೆ. ನೀವು ವ್ಯಾಪಾರ ಮಾಡುವವರಾಗಿದ್ದರೇ,
ಐಟಿ ಕ್ಷೇತ್ರದಲ್ಲಿರುವವರಾಗಿದ್ದರೇ ಸಂಬಳ ಹೆಚ್ಚಳ, ಪ್ರಮೋಷನ್ ಗಳ ಸಾಧ್ಯತೆ ಇರುತ್ತದೆ. ನಿಮಗೆ ಕೆಲಸ ಮಾಡಲು ಉತ್ಸಾಹ ಬರುತ್ತದೆ. ಭವಿಷ್ಯದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತದೆ. ಕುಟುಂಬ ಸದಸ್ಯರ ಜೊತೆ ಸಾಮರಸ್ಯ ಮತ್ತು ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈ ತಿಂಗಳು ಬಹಳ ಮಹತ್ತ್ವಪೂರ್ಣವಾಗಿರುವುದರಿಂದ ಈ ತಿಂಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕೊನೆಯದಾಗಿ ನಂಬರ್ 3ನೇ ಹೂವನ್ನು ಆಯ್ಕೆ ಮಾಡಿದರೇ ಈ ತಿಂಗಳು ಮಿಶ್ರ ಫಲಗಳನ್ನು ಕೊಡುತ್ತಿದೆ. ನೀವು ನಿಮ್ಮ ಜೀವನದಲ್ಲಿ ಇಲ್ಲಿಯವರೆವಿಗೂ ಸುಖವನ್ನು ಅನುಭವಿಸಿಕೊಂಡೇ ಬಂದಿರುತ್ತೀರಿ.
ನಿಮಗೆ ನಾನು ಚೆನ್ನಾಗಿಲ್ಲ ಎನಿಸಿದರೂ ಬೇರೆಯವರಿಗೆ ಹೋಲಿಕೆ ಮಾಡಿದರೇ ನೀವು ಚೆನ್ನಾಗಿಯೇ ಇರುತ್ತೀರಿ. ನಾನು ಒಳ್ಳೆಯ ಪೊಜಿಷನ್ ನಲ್ಲಿ ಇದ್ದೀನಿ ಎಂದು ಅನಿಸುತ್ತಿರುವುದಿಲ್ಲ ಆದರೇ ಈ ತಿಂಗಳು ಅದು ಉಂಟಾಗುತ್ತದೆ. ನಿಮ್ಮ ಜೀವನದಲ್ಲಿ ನಡೆಯುವ ಚಿಕ್ಕಪುಟ್ಟ ಘಟನೆಗಳಿಂದ ನಾನು ಚೆನ್ನಾಗಿದ್ದೇನೆಂಬ ಮನವರಿಕೆಯಾಗಿ ಖುಷಿ ಈ ತಿಂಗಳಿನಲ್ಲಿ ಉಂಟಾಗುತ್ತದೆ. ಮುಂದೆ ನಾನು ದೊಡ್ಡದಾಗಿ ಏನಾದರೂ ಸಾಧಿಸಬೇಕೆಂಬ ಬಯಕೆ ಉಂಟಾಗುತ್ತದೆ. ಕಷ್ಟಪಟ್ಟು ಇಲ್ಲಿಯವರೆಗೆ ಸಾಧಿಸಿರುವುದರಿಂದ ನಿಮಗೆ ಹೆಮ್ಮೆ ಉಂಟಾಗುತ್ತದೆ. ಇದರಿಂದ ಮುಂದೆ ನುಗ್ಗಲು ಇನ್ನಷ್ಟು ಸಾಧಿಸಲು ಉತ್ಸಾಹ ಬರುತ್ತದೆ.