ಕೈಕಾಲು ಮರಗಟ್ಟುವಿಕೆ, ಕೈಕಾಲು ಜೋಮುವಿನ ಸಮಸ್ಯೆಗೆ ಪರಿಹಾರ

ಇಂದಿನ ಲೇಖನದಲ್ಲಿ ಕೈಕಾಲು ಮರಗಟ್ಟುವಿಕೆ, ಕೈಕಾಲು ಜೋಮುವಿನ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತೇವೆ. ನರದೌರ್ಬಲ್ಯತೆಯಿಂದ ಈ ಸಮಸ್ಯೆ ಬರುತ್ತದೆ. ನರ ದೌರ್ಬಲ್ಯ ಬರಲು ಕಾರಣ ಅಜೀರ್ಣ ಮತ್ತು ಮಲಬದ್ಧತೆ ಜೊತೆಗೆ ರಾಸಾಯನಿಕ ಔಷಧಿಗಳ ದುಷ್ಪರಿಣಾಮಗಳು. ರಾಸಾಯನಿಕ ಔಷಧಿ ಎಂದರೆ ಶುಗರ್ ಮತ್ತು ಥೈರಾಯ್ಡ್ ಗೆ ಸಂಬಂಧಪಟ್ಟ ಮಾತ್ರೆಗಳ ಸೇವನೆಯಿಂದ ಈ ಸಮಸ್ಯೆ ಬರುತ್ತದೆ ಮತ್ತು ಡಯಾಬಿಟಿಕ್ ನ್ಯೂರೋಪತಿಯಿಂದ ಈ ಸಮಸ್ಯೆ ಬರುತ್ತದೆ. ವಿಟಮಿನ್ ಬಿ12 ಮತ್ತು ಡಿ ಕೊರತೆಯಿಂದ ಕೈಕಾಲುಗಳು ಜೋಮು ಬರುತ್ತವೆ. ವಿಟಮಿನ್ ಡಿ ಸತ್ತ್ವವು ಸೂರ್ಯನ ಕಿರಣಗಳಿಂದ ಸಿಗುತ್ತದೆ. ಇಂದಿನ ಜನರು ಮನೆ ಮತ್ತು ಆಫೀಸ್ ನಲ್ಲಿ ಹೆಚ್ಚು ಎಸಿಯನ್ನು ಬಳಸುವುದರಿಂದ ನಮ್ಮ ಜೀವನದ ಪದ್ದತಿಯು ಹಾಳಾಗುತ್ತಿದೆ.

ಟೈಲ್ಸ್, ಗ್ರಾನೈಟ್ ಗಳ ಮೇಲೆ ಕಾಲು ಇಟ್ಟರೇ ನರಗಳ ದೌರ್ಬಲ್ಯವು ಹೆಚ್ಚಾಗುತ್ತಿದೆ. ಹಿಂದಿನ ಕಾಲದಲ್ಲಿ ಮಣ್ಣು ಕಾಲಿಗೆ ತಾಕುತ್ತಿತ್ತು ಮತ್ತು ಮನೆಯನ್ನು ಸಗಣಿಯಿಂದ ಸಾರಿಸುತ್ತಿದ್ದರು ಅಂತಹ ಮನೆಗಳಲ್ಲಿ ನಡೆದಾಡುತ್ತಿದ್ದರೇ ನರದೌರ್ಬಲ್ಯದ ಸಮಸ್ಯೆಗಳು ಬರುತ್ತಿರಲಿಲ್ಲ ಇಂದಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲೂ ಟೈಲ್ಸ್, ಗ್ರಾನೈಟ್ ಗಳು ಇರುವುದರಿಂದ ನರದೌರ್ಬಲ್ಯದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಯಾದರೂ ಮಣ್ಣಿನಲ್ಲಿ ವಾಕಿಂಗ್ ಮಾಡಿದರೆ ಒಳ್ಳೆಯದು.

ಬಿಸಿಲಿನಲ್ಲಿ ವಾಕಿಂಗ್ ಮಾಡಿ ಮತ್ತು ಯೋಗ ಮಾಡಿ. ತಡವಾಗಿ ಮಲಗುವುದು, ತಡವಾಗಿ ಏಳುವುದು, ಔಷಧಿಗಳ ಸೈಡ್ ಎಫೆಕ್ಟ್ ಗಳಿಂದ ಈ ಸಮಸ್ಯೆ ಬಂದಿರುತ್ತದೆ. ಇಬ್ಬನಿ ಬಿದ್ದಿರುವ ಗರಿಕೆಯ ಮೇಲೆ ವಾಕಿಂಗ್ ಮಾಡುವುದರಿಂದ ನಿಮ್ಮ ಕೈ ಕಾಲುಗಳ ಜೋಮು ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಮತ್ತು ಬಿಸಿಲಿನಲ್ಲಿ ವಾಕಿಂಗ್ ಮಾಡುವುದರಿಂದ ಕೈಕಾಲುಗಳ ಜೋಮು ಕಡಿಮೆಯಾಗುತ್ತದೆ. ನಮ್ಮ ಮೈಯಿಂದ ಬೆವರು ಬಂದಾಗ ನಾವು ಆರೋಗ್ಯವಾಗಿರುತ್ತೀವಿ. ಹೆಚ್ಚುವರಿ ಆಹಾರವನ್ನು ಸೇವನೆ ಮಾಡುವುದರಿಂದಲೂ ಕೈಕಾಲು ಜೋಮು ಬರುತ್ತದೆ.

ಊಟವನ್ನು ಕಡಿಮೆ ಮಾಡಬೇಕು ಅಂದರೆ ನಮಗೆ ಜೀರ್ಣವಾಗುವಷ್ಟು ಮಾತ್ರ ಆಹಾರವನ್ನು ಸೇವನೆ ಮಾಡಬೇಕು. ಕೈಕಾಲುಗಳ ಜೋಮುವಿಗೆ ಪರಿಹಾರವೇನೆಂದರೆ ರಾತ್ರಿ ಬೇಗ ಮಲಗಿ ಬೇಗ ಎದ್ದೇಳಬೇಕು ಮತ್ತು ಫಾಸ್ಟ್ ಫುಡ್ ಜಂಕ್ ಫುಡ್ ಗಳನ್ನು ತ್ಯಜಿಸಬೇಕು. ಸಾತ್ವಿಕ ಆಹಾರವನ್ನು ಸೇವಿಸಬೇಕು. ಬೇಕರಿ ಪದಾರ್ಥ, ಬೀಡಿ, ಸಿಗರೇಟ್, ಗುಟ್ಕಾ, ಸಾರಾಯಿ ದುಷ್ಚಟಗಳಿಂದ ದೂರವಿರಬೇಕು. ಸೊಪ್ಪು, ತರಕಾರಿಗಳನ್ನು ಸೇವನೆ ಮಾಡಬೇಕು. ಇದರಲ್ಲಿರುವ ಆಂಟಿಆಕ್ಸಿಡೆಂಟ್, ನೈಟ್ರಿಕ್ ಆಸಿಡ್ ಮತ್ತು ಪೋಷಕಾಂಶಗಳು ನಮ್ಮ ನರ ನಾಡಿಗಳಿಗೆ ಚೈತನ್ಯ ತುಂಬುತ್ತವೆ.

ನರದೌರ್ಬಲ್ಯವನ್ನು ಹೋಗಲಾಡಿಸಲು ಏನು ಮಾಡಬೇಕೆಂದರೆ ಪ್ರತಿದಿನ ಅಭ್ಯಂಗ ಸ್ನಾನ ಮಾಡಬೇಕು. ಮೈಗೆಲ್ಲಾ ಹರಳೆಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯನ್ನು ಮೈಗೆ ಮಸಾಜ್ ಮಾಡಿಕೊಳ್ಳಬೇಕು. ಇಲ್ಲವೇ ಅಂಗೈಗೆ ಅಂಗಾಲಿಗೆ ಮತ್ತು ನೆತ್ತಿಗೆ ಚೆನ್ನಾಗಿ ಹಚ್ಚಿಕೊಳ್ಳಬೇಕು. ಅರ್ಧಗಂಟೆಯ ನಂತರ ಸ್ನಾನ ಮಾಡಿಕೊಳ್ಳಬೇಕು.
ಕೈಕಾಲುಗಳ ಜೋಮುವಿನ ಸಮಸ್ಯೆಗೆ ಈ ಮನೆಮದ್ದನ್ನು ಸೇವನೆ ಮಾಡಬೇಕು ಅದೇನೆಂದರೆ ಅಶ್ವಗಂಧದ ಬೇರು ಮತ್ತು ಶತಾವರಿಯ ಬೇರು ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ

ಅದನ್ನು ತೆಗೆದುಕೊಂಡು ತರಿತರಿಯಾಗಿ ಪುಡಿ ಮಾಡಿ. ಎರಡು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ನಷ್ಟು ಈ ಪುಡಿಯನ್ನು ಹಾಕಿ ಕುದಿಸಿ ಒಂದು ಗ್ಲಾಸ್ ಆಗುವವರೆಗೂ ಕುದಿಸಿ ಬೆಳಿಗ್ಗೆ 6 ಗಂಟೆಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇಲ್ಲವೇ ರಾತ್ರಿ ಆಹಾರವನ್ನು ಸೇವನೆ ಮಾಡಿದ ನಂತರ ಮಲಗುವ ಸಮಯದಲ್ಲಿ ಸೇವನೆ ಮಾಡಿರಿ. ದಿನಕ್ಕೆ ಒಂದು ಬಾರಿಯಂತೆ ಮೂರು ತಿಂಗಳು ಮಾಡಿದರೆ ಸಾಕು ಕಾಲು ಜೋಮುವಿನ ಸಮಸ್ಯೆ ಮತ್ತು ನರದೌರ್ಬಲ್ಯದ ಸಮಸ್ಯೆ ಕಡಿಮೆಯಾಗುತ್ತದೆ.

Leave a Comment