ಕನ್ಯಾ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಸ್ತ್ರೀಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎಂದು ತಿಳಿಯೋಣ . ಕನ್ಯಾ ರಾಶಿಯ ಗುಣ ಸ್ವಭಾವ , ಆರೋಗ್ಯ ಸ್ಥಿತಿ ಮತ್ತು ಅವರ ವೈವಾಹಿಕ ಜೀವನವನ್ನು ಸರಳವಾಗಿ ಇಲ್ಲಿ ತಿಳಿಸಲಾಗಿದೆ . ಕನ್ಯಾ ರಾಶಿಯವರ ಫಲ ಯಾವ ರೀತಿ ಇರುತ್ತದೆ . ಗುಣ ಸ್ವಭಾವಗಳ ಯಾವ ರೀತಿ ಇರುತ್ತದೆ ಎಂದು ನೋಡಿದಾಗ , ಇವರು ಶಾಂತವಾಗಿರುವ ಸ್ವಭಾವವನ್ನು ಹೊಂದಿರುತ್ತಾರೆ . ಏಕಾಂತ ಪ್ರಿಯರು ಆಗಿರುತ್ತಾರೆ . ಶಬ್ದ ಮಾಲಿನ್ಯ ವಾಹನ ಜಂಜಾಟಕ್ಕೆ ಹೊಗ್ಗಿಕೊಳ್ಳುವ ಗುಣ ಇವರಿಗೆ ಇರುವುದಿಲ್ಲ .

ಯಾವುದೇ ಒಂದು ಕೆಲಸ ಇದ್ದರೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ . ವ್ಯವಹಾರಿಕವಾಗಿ ಇವರಲ್ಲಿ ನಿಪುಣತೆ ಇರುತ್ತದೆ . ಅದನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತಾರೆ . ಇನ್ನು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧಾರ ಮಾಡುವ ಸಾಮರ್ಥ್ಯ ಇವರಲ್ಲಿ ಇರುತ್ತದೆ . ಇದು ಇವರ ಶಕ್ತಿ ಆಗಿರುತ್ತದೆ . ಇವರಲ್ಲಿ ನಾಯಕತ್ವದ ಗುಣ ಇರುತ್ತದೆ . ಅರ್ಥಮಾಡಿಕೊಳ್ಳುವ , ತಿಳಿದುಕೊಳ್ಳುವ, ಸರಿ ತಪ್ಪುಗಳನ್ನು ಲೆಕ್ಕ ಹಾಕುವ ಮನಸ್ಥಿತಿ ಇವರಲ್ಲಿ ಇರುತ್ತದೆ .

ನ್ಯಾಯವನ್ನು ನಿರ್ಣಯ ಮಾಡುವ ಚತುರತೆ ಇವರಲ್ಲಿ ಇರುತ್ತದೆ . ಸಮಸ್ಯೆ ಇದ್ದರೂ ಕೂಡ ಪರಿಸ್ಥಿತಿಗೆ ಕಾರಣವಾದ ಮೂಲವನ್ನು ಹುಡುಕುತ್ತಾರೆ . ಅದರ ಬೇರನ್ನು ಹುಡುಕಿಕೊಂಡು ಬುಡ ತಲುಪುವ ಶಕ್ತಿ ಇವರಲ್ಲಿ ಇರುತ್ತದೆ . ಕನ್ಯಾ ರಾಶಿಯ ಸ್ತ್ರೀಯರು ಬಹಳ ಬುದ್ಧಿವಂತರಾಗಿರುತ್ತಾರೆ . ಇವರಲ್ಲಿ ತೀವ್ರವಾದ ಸ್ಮರಣಾ ಶಕ್ತಿ ಚೆನ್ನಾಗಿರುತ್ತದೆ . ಇವರ ಜ್ಞಾಪಕ ಶಕ್ತಿ ಚೆನ್ನಾಗಿರುತ್ತದೆ . ಇವರ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಶಕ್ತಿ ಇರುತ್ತದೆ . ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗುಣ ಇವರಲ್ಲಿ ಇರುತ್ತದೆ . ಯಾವುದೇ ಒಂದು ಕೆಲಸದಲ್ಲಿ ಉದಾಸೀನತೆ ಕಂಡು ಬರುತ್ತದೆ .

ಪ್ರೇಮದ ವಿಚಾರದಲ್ಲಿ ಅತ್ಯಂತ ನಿಗೂಢವಾಗಿ ಇರುತ್ತಾರೆ . ಈ ವಿಚಾರದಲ್ಲಿ ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ . ಯಾವುದೇ ಒಂದು ಕಾರಣಕ್ಕು ಇವರು ಗುಟ್ಟನ್ನು ಬಿಟ್ಟು ಕೊಡುವುದಿಲ್ಲ .ಮನಸ್ಸಿನಲ್ಲಿ ಇರುವ ವಿಷಯವನ್ನು ಹೊರಗಡೆ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ . ಪ್ರೇಮದ ಭಾವನೆ ಮನದಾಳದಲ್ಲಿ ಅಡಗಿದ್ದರೂ ಸಹ ಬೇರೆಯವರೊಂದಿಗೆ ವ್ಯಕ್ತಪಡಿಸುವುದಿಲ್ಲ . ಬಾವುಕತೆ ಅಥವಾ ನೋವನ್ನು ತೋರಿಕೆಯಿಂದ ದೂರ ಇರುತ್ತಾರೆ .

ಇವರು ಯಾವುದೇ ನೋವು ಇದ್ದರೂ ಯಾರೊಂದಿಗೂ ಹೇಳದೆ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ . ಸುಲಭವಾಗಿ ಪ್ರೇಮದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಲಕ್ಷಣಗಳು ಇರುವುದಿಲ್ಲ . ಯಾರನ್ನೂ ಕೂಡ ಇವರು ಬೇಗ ಒಪ್ಪಿಕೊಳ್ಳುವುದಿಲ್ಲ . ಇವರನ್ನು ಯಾರು ಒಪ್ಪಿಸುತ್ತಾರೋ ಅವರನ್ನು ಮೆಚ್ಚಬಹುದು . ಇವರದು ಗಟ್ಟಿಯಾದ ಮನಸ್ಥಿತಿ ಆಗಿರುತ್ತದೆ . ಒಂದು ವೇಳೆ ಪ್ರೇಮದ ಬಲೆಯಲ್ಲಿ ಬಿದ್ದರೆ ಇವರು ತುಂಬಾ ನಿಷ್ಟೂರವಾಗಿ ಇರುತ್ತಾರೆ. ಇವರ ಬಳಿ ತುಂಬಾ ಶಿಸ್ತು ಬದ್ಧವಾಗಿರಬೇಕು .

ಕನ್ಯಾ ರಾಶಿಯ ಪುರುಷರೊಡನೆ ಇವರ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ . ಇವರಿಗೆ ಕನ್ಯಾ ರಾಶಿಯ ಪುರುಷರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ. ಇವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದರಿಂದ ಇದರ ಪರಿಣಾಮ ಜೀವನಪೂರ್ತಿ ಇವರು ಬಹಳ ಆರೋಗ್ಯವಾಗಿ ಇರುತ್ತಾರೆ . ಇವರು ಆರೋಗ್ಯದ ಬಗ್ಗೆ ಊಟದ ಬಗ್ಗೆ ಔಷಧಿಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ . ಸಮಯವನ್ನು ಪರಿಪಾಲನೆ ಮಾಡುವುದರಿಂದ ಅವರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಾರೆ . ಕೆಲವೊಂದು ಕನ್ಯೆಯರು ದೀರ್ಘಾಯುಷಿಗಳು ಆಗಿರುತ್ತಾರೆ .

ಇವರು ವೃದ್ಯಾಪ್ಯದಲ್ಲೂ ಕೂಡ ತರುಣಿಯರಂತೆ ಕಾಣಿಸುತ್ತಾರೆ . ಇವರ ಮುಖದಲ್ಲಿ ಚೈತನ್ಯ ಹೆಚ್ಚಾಗಿರುತ್ತದೆ . ಇವರು ಬೇಗ ವಯಸ್ಸಾದಂತೆ ಕಾಣುವುದಿಲ್ಲ . ಇವರು ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ . ಇವರು ಕಾಂತಿಯುತವಾಗಿ ಇರುವುದು ಕಂಡುಬರುತ್ತದೆ . ಇವರ ಆರೋಗ್ಯದಲ್ಲಿ ನೋಡುವುದಾದರೆ ಉದರದಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬರುತ್ತವೆ . ಶ್ವಾಸಕೋಶದ ತೊಂದರೆಗಳು ಕಂಡುಬರುತ್ತವೆ . ಭುಜ ಅಥವಾ ತೋಳುಗಳು ನರಗಳಲ್ಲಿ ಬಾಧೆ ಈ ರೀತಿಯಾದ ಸಮಸ್ಯೆಗಳು ಕಂಡುಬರುತ್ತದೆ . ಕೆಲವೊಂದು ಪರಿಶ್ರಮ ಹಾಕಿ ಕೆಲವೊಂದು ಕೆಲಸಗಳು ಮಾಡುವುದು ಕಂಡು ಬರುತ್ತದೆ .

ಈ ಸಮಸ್ಯೆಗಳಿಗೆ ಪರಿಹಾರ ವಿಶ್ರಾಂತಿ ಪಡೆಯುವುದು . ಇದರ ಜೊತೆಗೆ ಔಷಧಿ ಉಪಚಾರಗಳನ್ನು ಮಾಡಿಕೊಳ್ಳಬೇಕು . ಆದರೆ ಇವರಿಗೆ ವಿಶ್ರಾಂತಿ ಉತ್ತಮವಾದ ಔಷಧಿ ಆಗುತ್ತದೆ. ಇನ್ನು ಹಗುರವಾದ ಸರಳವಾದ ಆಹಾರವನ್ನು ತಿನ್ನುತ್ತಾರೆ . ಶುದ್ಧವಾದ ಗಾಳಿ , ಸಾಕಷ್ಟು ನೀರು , ಸೂರ್ಯನ ಬೆಳಕು , ಉತ್ತಮವಾದ ನಿದ್ರೆ ಇವೆಲ್ಲವೂ ಆರೋಗ್ಯಕ್ಕೆ ಚೈತನ್ಯವನ್ನು ತಂದುಕೊಡುತ್ತದೆ . ಕನ್ಯಾ ರಾಶಿಯವರು ಬುಧನ ಅಧಿಪತ್ಯದ ಎರಡನೇ ರಾಶಿ ಆಗಿರುತ್ತದೆ. ಮೊದಲ ರಾಶಿ ಮಿಥುನ ಆಗಿದ್ದರೆ , ಆದರೂ ಎರಡೂ ರಾಶಿಯ ಸ್ತ್ರೀಯರ ಪ್ರವೃತ್ತಿ ಕೂಡ ತುಂಬಾ ವ್ಯತ್ಯಾಸ ಆಗಿರುತ್ತದೆ . ಇವರದು ಒಳ್ಳೆಯ ವ್ಯಕ್ತಿತ್ವ ಆಗಿರುತ್ತದೆ .

Leave a Comment