ಓಡುತ್ತಿರುವ ಏಳು ಕುದುರೆಗಳ ಫೋಟೋ ಎಷ್ಟೊಂದು ಅದೃಷ್ಟ ತರುತ್ತೆ ಗೊತ್ತಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಓಡುತ್ತಿರುವ ಕುದುರೆ ಫೋಟೋ ಎಷ್ಟೇಲ್ಲಾ ಲಾಭ ಗೊತ್ತಾ ಸಾಮಾನ್ಯವಾಗಿ ನೀವು ಓಡುತ್ತಾ ಇರುವಂತಹ ಬಿಳಿ ವರ್ಣದ ಕುದುರೆ ಫೋಟೋ ವನ್ನು ನೋಡಿದಿರ. ಇದು ಗೋಡೆ ಅಂದವನ್ನು ಹೆಚ್ಚಿಸೊಕೆ ಹಾಕುವ ಫೋಟೋ ಮಾತ್ರವಲ್ಲ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಓಡುತ್ತಿರುವ ಕುದುರೆಗಳು ಶುಭ ನಿಜ ಈ ಏಳು ಬಿಳಿ ಬಣ್ಣದ ಕುದುರೆಗಳು ಸಕಾರಾತ್ಮಕ ಚಿಂತನೆಗಳನ್ನು ವಿನಿಮಯ ಮಾಡುವಂತಹ ಶಕ್ತಿಯನ್ನು ಹೊಂದಿದೆ.ಆದರೆ ಕುದುರೆ ಓಡುತ್ತಿರುವ ಫೋಟೋ ಇಡುವುದಕ್ಕೂ ಕೆಲವು ನಿಯಮಗಳಿವೆ ಅದು ಏನೆಂದರೆ ಕುದುರೆಯ ಸಂಖ್ಯೆ 7ಕ್ಕಿಂತ ಹೆಚ್ಚಿರಬಾರದು. ಇನ್ನು ಹಿಂದೂ ಧರ್ಮದಲ್ಲಿ ಏಳು ಸಂಖ್ಯೆಗೆ ಬಹಳ ಪ್ರಾಮುಖ್ಯತೆ ಇದೆ. ಇಂದ್ರ ಧನಸ್ಸಿನ ಸಂಖ್ಯೆ 7 ಇರುತ್ತದೆ.

ಸಪ್ತ ಋಷಿ,ಸಪ್ತಪದಿ,ಸಪ್ತ ಜನ್ಮ ಎಲ್ಲವೂ 7ರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಏಳು ಅಶ್ವಗಳು ಇರುವಂತಹ ಫೋಟೋ ಬಹಳ ವಿಶೇಷವಾದದು. ಈ ಫೋಟೋವನ್ನು ವ್ಯವಹಾರ ಮಾಡುವಲ್ಲಿ ಹಾಕಿದರೆ ಯಾವ ವ್ಯಕ್ತಿಯ ಕಣ್ಣು ಈ ಫೋಟೋ ಮೇಲೆ ಬಿದ್ದರೆ ಆ ವ್ಯಕ್ತಿಯಿಂದ ವ್ಯಾಪಾರಕ್ಕೆ ಲಾಭ ಆಗುತ್ತೆ ಅಂತ ಹೇಳಲಾಗುತ್ತದೆ. ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆಯ ಚಿತ್ರವನ್ನು ಹಾಕಬೇಕು.ಜೋಡಿ ಕುದುರೆ ಚಿತ್ರ ಹಾಕುವುದು ಬಹಳ ಶ್ರೇಯಸ್ಕರ. ಇನ್ನು ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ 7 ಕುದುರೆಯ ಚಿತ್ರವನ್ನು ಹಾಕಬೇಕು. ಆಫೀಸ್ ಕಡೆಗೆ ಕುದುರೆಮುಖ ಮಾಡಿಕೊಂಡಿರಬೇಕು.

ಈ ರೀತಿ ಭಾವಚಿತ್ರವನ್ನು ಖರೀದಿ ಮಾಡುವುದಿದರೆ ಈ ಒಂದು ವಿಷಯವನ್ನು ಗಮನದಲ್ಲಿ ಇಡಬೇಕು ಭಾವಚಿತ್ರದಲ್ಲಿ ಕುದುರೆಗೆ ಲಗಾಂ ಅನ್ನು ಹಾಕಿರುಬಾರದು. ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಿದಂತಾಗುತ್ತದೆ. 7 ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ,ಮನೆಯಲ್ಲಿ ತಾಯಿ ಲಕ್ಷ್ಮೀ ವಾಸಿಸುತ್ತಾಳೆ.ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರುತ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು. ಮನೆಯಲ್ಲಿ ನೀವು ಏನಾದರೂ ಈ ಚಿತ್ರವನ್ನು ಹಾಕಬೇಕು ಎಂದರೆ ಒಮ್ಮೆ ವಾಸ್ತುಕಾರನ್ನು ಕೇಳುವುದು ಉತ್ತಮ.ನಿಮ್ಮ ಮನೆಯಲ್ಲೂ ಕುದುರೆ ಚಿತ್ರ ಇರುವ ಫೋಟೋ ಇದ್ದರೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.

Leave a Comment