ಮನಸಿಗೆ ತೃಪ್ತಿ ಕೊಡುವ ಮಾತುಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ ಮಾನವೀಯತೆಯನ್ನು ನೀಡಿದ ಸಂಪತ್ತು ಇಲ್ಲ ಮನುಷ್ಯನಿಗೆ ಮರಣ ಇರುತ್ತದೆ ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತದೆ ಒಂದು ಸಣ್ಣ ಸುಳ್ಳು ಸ್ನೇಹ ದೂರ ಮಾಡುತ್ತದೆ ಒಂದು ಸಣ್ಣ ಅನುಮಾನ ಸಂಬಂಧಗಳನ್ನು ಬೇರೆ ಬೇರೆಯಾಗಿಸುತ್ತದೆ. ಕಾರಣ ಸಣ್ಣದೇ ಇರಬಹುದು, ಅದರ ಪ್ರಭಾವ ಮಾತ್ರ ತುಂಬಾ ನಷ್ಟ ಉಂಟು ಮಾಡುತ್ತದೆ

ತನ್ನ ಬಗ್ಗೆ ಬೇರೆಯವರು ಏನು ಬೇಕಾದರೂ ಯೋಚನೆ ಮಾಡಲಿ, ನಾನು ಆ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯಾರು ಅಂದುಕೊಳ್ಳುತ್ತಾರೋ, ಅವರೇ ಈ ಜಗತ್ತಿನಲ್ಲಿ ಅಸಮಾನ್ಯವಾದದ್ದನ್ನು ಸಾಧಿಸುವರು. ನಿಮ್ಮ ಕುರಿತು ಬೇರೆಯವರು ಏನೇ ಯೋಚಿಸಿದರೂ ಅಧೀರರಾಗಬಾರದು.ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ ಅರ್ಥ ಮಾಡಿಕೊಳ್ಳುವ ಮನಸ್ಸು ಅಷ್ಟೇ ಮುಖ್ಯ ನಾವು ಜೀವಿಸುವುದಕ್ಕಾಗಿ ಸಂಪಾದಿಸಬೇಕು ಸಂಪಾದನೆಯ ಜೀವನ ಆಗಬಾರದು. ನೀವು ಮಾಡುವ ಕರ್ಮಗಳ ಮೇಲೆ ನಂಬಿಕೆ ಇಡಿ ನಿಮ್ಮ ರಾಶಿಗಳ ಮೇಲೆ ಅಲ್ಲ. ರಾಶಿ ರಾಮ ರಾವಣರದು ಒಂದೇ ಆಗಿತ್ತು, ಅವರವರ ಕರ್ಮ ಅವರು ಅನುಭವಿಸಿದರು ಸಹನೆ ಇಲ್ಲದ ಹೆಂಡತಿ ಸಂಪಾದನೆ ಇಲ್ಲದ ಗಂಡ.. ಮಾತು ಕೇಳದ ಮಕ್ಕಳು

ಇವು ಸುಖ ಸಂಸಾರದ ಶತ್ರುಗಳು ಜೀವನದ ಮೂರು ಮಂತ್ರ ಸಂತೋಷದಲ್ಲಿ ಮಾತು ಕೊಡಬೇಡಿ, ಕೋಪದಲ್ಲಿ ಉತ್ತರ ಕೊಡಬೇಡಿ, ದುಃಖದಲ್ಲಿ ನಿರ್ಧಾರ ಕೈಗೊಳ್ಳಬೇಡಿ. ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಕಾಗಿರುವುದನ್ನು ಭೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು ಮನುಷ್ಯ ತಾನು ಮಾಡುವ ಕೆಲಸಗಳಿಂದ ಶ್ರೇಷ್ಠನಾಗುತ್ತಾನೆ ಹೊರತು ಹುಟ್ಟಿನಿಂದಲ್ಲ. ನಿಮ್ಮ ಸಮಸ್ಯೆಗಳನ್ನು, ನೋವುಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಜನ ನಿಮ್ಮನ್ನು ನೋಡಿ ಹೇಳಿ ಮಾಡಿಕೊಂಡ ನಗುವುದರ ಜೊತೆಗೆ ನಿಮ್ಮ ದುರ್ಬಲತೆಗಳ ಲಾಭ ಗಳಿಸುತ್ತಾರೆ.

ಅತಿ ದೊಡ್ಡ ಗುರು ಮಂತ್ರವೆಂದರೆ ನಿಮ್ಮ ಹುಟ್ಟುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹಂಚಿಕೊಳ್ಳದೆ ಇರುವುದು, ಇಲ್ಲವಾದರೆ ನಿಮ್ಮ ಸಮಾಧಿಯನ್ನು ನೀವೇ ತೋಡಿಕೊಳ್ಳುತ್ತೀರಿ ಗಿಡ ಯಾವತ್ತು ಉದುರಿ ಹೋದ ಎಲೆ, ಹೂಗಳ ಬಗ್ಗೆ ಯೋಚಿಸುವುದಿಲ್ಲ. ಹೊಸ ಹೂವಿನ ಸೃಷ್ಟಿಯೇ ಅದರ ಧ್ಯಾನ. ಕಳೆದು ಹೋದುದಕ್ಕೆ ಚಿಂತೆ ಬೇಡ. ಉತ್ಸಾಹವಿರಲಿ. ಮಾತನಾಡಿ ಕೆಟ್ಟವರ ಅನ್ನಿಸಿಕೊಳ್ಳುವುದಕ್ಕಿಂತ ಮೌನವಾಗಿದ್ದು ಅರ್ಥವಾಗದೆ ಇರುವುದೇ ಒಳ್ಳೆಯದು.

ನಿನ್ನ ಕಣ್ಣೀರನ್ನು ಯಾರು ಗಮನಿಸುವುದಿಲ್ಲ, ನಿನ್ನ ನೋವನ್ನು ಯಾರು ಗುರುತಿಸುವುದಿಲ್ಲ, ನಿನ್ನ ಕಷ್ಟಗಳನ್ನು ಯಾರು ತೀರಿಸುವುದಿಲ್ಲ , ಆದರೆ ಎಲ್ಲರೂ ನಿನ್ನ ತಪ್ಪುಗಳನ್ನು ಹುಡುಕುವ ಕೆಲಸದಲ್ಲಿ ಮುಂದೆ ಇರುತ್ತಾರೆ. ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆಗಿದೆ ಎಂದು ಭಾವಿಸುತ್ತೇವೆ ಇಷ್ಟ ಆಗದೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಮತ್ತು ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು

Leave a Comment