ಮಂಗಳವಾರ ಸ್ನಾನದ ನೀರಿಗೆ ಈ 2 ವಸ್ತು ಬೆರೆಸಿದರೆ ಸಾಲ ತೀರುತ್ತದೆ

ಮಂಗಳವಾರದ ದಿನ ಸ್ನಾನದ ನೀರಿಗೆ ಈ ಎರಡು ವಸ್ತುವನ್ನು ಬೆರೆಸಿ ಸ್ನಾನ ಮಾಡಿದರೇ ಸಾಲಗಳು ತೀರುತ್ತವೆ. ಋಣಬಾಧೆಗಳು ಕಳೆದು ಮನೆ ಕಟ್ಟಿಸುವಂತಹ ಕನಸು ನನಸಾಗುತ್ತದೆ. ಭೂಮಿಗೆ ಸಂಬಂಧಪಟ್ಟ ದೋಷಗಳು, ಕೋರ್ಟ್ ಕೇಸ್ ಗಳು ದೂರವಾಗುತ್ತದೆ. ಮಂಗಳವಾರದ ದಿನ ಸ್ನಾನದ ನೀರಿಗೆ ಯಾವ ವಸ್ತುವನ್ನು ಬೆರೆಸಿ ಸ್ನಾನ ಮಾಡಬೇಕು? ಮನೆಯಲ್ಲಿ ಯಾವ ದೀಪವನ್ನು ಬೆಳಗಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಮನುಷ್ಯ ಈ ಅವಶ್ಯಕತೆಗಳಿಗೆ ಹಣವನ್ನು ಖರ್ಚು ಮಾಡಲೇಬೇಕು. ವಿಪರೀತವಾದ ಖರ್ಚು ಹೆಚ್ಚಾದಾಗ ಸಾಲದ ದಾರಿಯನ್ನು ಹುಡುಕುತ್ತಾನೆ.

ಸಾಲಗಳು ಹೆಚ್ಚಾದಾಗ ತೀರಿಸಲು ಆಗದೇ ಚಿಂತೆಗೆ ಒಳಗಾಗುತ್ತಾನೆ. ಈ ರೀತಿಯ ಸಾಲಬಾಧೆಗಳು ಶೀಘ್ರವಾಗಿ ಕಳೆದು ಹೋಗಲು, ಸಾಲ ಬಾಧೆಗಳು ಕಳೆದು ಹೋಗಲು, ಭೂಮಿಯ ದೋಷಗಳು ಹೋಗಲು ಸ್ನಾನದ ನೀರಿಗೆ ಎರಡು ವಸ್ತುಗಳನ್ನು ಬೆರೆಸಿ ಪ್ರತೀ ಮಂಗಳವಾರ ಸ್ನಾನ ಮಾಡಬೇಕು. ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಸಾಲವನ್ನು ಮಾಡಿರುತ್ತಾರೆ. ಭೂಮಿಯ ಮೇಲೆ ಹೂಡಿಕೆ ಮತ್ತು ಸೈಟ್ ಖರೀದಿಸಲು, ಮನೆಯನ್ನು ಕಟ್ಟಿಸಲು ಸಾಲವನ್ನು ಮಾಡಿ ಬಹಳಷ್ಟು ಕಷ್ಟಪಟ್ಟಿರುತ್ತಾರೆ. ಇಂತಹ ಸಮಸ್ಯೆಗೆ ಈ ರೀತಿಯ ಸ್ನಾನ ಮತ್ತು ದೀಪವೇ ಶಕ್ತಿಶಾಲಿಯಾದ ಪರಿಹಾರ.

ಮಂಗಳವಾರದ ದಿನ ಸ್ನಾನದ ನೀರಿಗೆ ಕಪ್ಪು ಎಳ್ಳು, ನೆಲ್ಲಿಕಾಯಿಯ ಪುಡಿಯಂತಹ ವಿಶೇಷವಾದ ವಸ್ತುವನ್ನು ಮಂಗಳವಾರದ ದಿನ ಸ್ನಾನದ ನೀರಿಗೆ ಬೆರೆಸುತ್ತಾ ಭಕ್ತಿಯಿಂದ ಸಂಕಲ್ಪ ಮಾಡಿಕೊಳ್ಳಬೇಕು. ನಿಮಗಿರುವ ಸಾಲದ ಸುಳಿ, ಹಣಕಾಸಿನ ಬಾಧೆ, ಭೂಮಿಯ ಸಮಸ್ಯೆಗಳು ದೈವಬಲದಿಂದ ಪರಿಹಾರವಾಗಲೆಂದು ನಿಮ್ಮ ಇಷ್ಟದೇವರನ್ನು ಸ್ಮರಿಸುತ್ತಾ ಕೇಳಿಕೊಳ್ಳಬೇಕು. ಇದರ ಜೊತೆಗೆ ನವಗ್ರಹಗಳ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ನಂತರ ಸ್ನಾನವನ್ನು ಮಾಡಿದರೇ

ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಾಗುತ್ತೀರಿ ಮತ್ತು ಸಾಲದ ಸುಳಿಯಿಂದ ಹೊರಬರುತ್ತೀರಿ. ಈ ರೀತಿಯ ಪರಿಹಾರವನ್ನು ನಿಮ್ಮ ಕಷ್ಟಗಳು ತೀರುವವರೆಗೆ ಮಾಡುತ್ತಾ ಬಂದರೇ ಒಳ್ಳೆಯ ಫಲಗಳು ಸಿಗುತ್ತವೆ. ಮಂಗಳವಾರದ ದಿನ ಸ್ನಾನವನ್ನು ಮುಗಿಸಿ ಒಂದು ವಿಶೇಷವಾದ ದೀಪವನ್ನು ಬೆಳಗಿಸಬೇಕು. ಈ ದೀಪವನ್ನು ಯಕ್ಷಿಣಿ ದೀಪ ಅಥವಾ ತ್ರಿಭುಜ ದೀಪವೆಂದು ಕರೆಯಲಾಗುತ್ತದೆ. ಈ ದೀಪವನ್ನು ನಿಮ್ಮ ಮನೆಯ ಯಾವುದೇ ಕೋಣೆಯಲ್ಲಾಗಲೀ ಇಡಬಹುದು ದೀಪವನ್ನು ದಕ್ಷಿಣ ಮೂಲೆಯಲ್ಲಿ ಇರಿಸಬೇಕು. ದಕ್ಷಿಣದ ಮೂಲೆಯಲ್ಲಿ ಮೊದಲು ಒಂದು ಪೀಠವನ್ನು ನಿರ್ಮಾಣ ಮಾಡಿಕೊಳ್ಳಬೇಕು.

ಅದರ ಮೇಲೆ ಅರಿಶಿಣವನ್ನು ಹಚ್ಚಿ ಕುಂಕುಮದ ಬಟ್ಟನ್ನು ಇಟ್ಟು ನಂತರ ಅಕ್ಕಿ ಹಿಟ್ಟಿನಲ್ಲಿ ಮಣೆಯ ಮೇಲೆ ತ್ರಿಭುಜದ ಆಕಾರದಲ್ಲಿ ರಂಗೋಲಿಯನ್ನು ಬರೆಯಬೇಕು. ಗಂಧ ಅಥವಾ ಚಂದನವನ್ನು ಬಳಸಿ ಹ್ರುಂ ಎಂಬ ಅಕ್ಷರವನ್ನು ಆ ತ್ರಿಭುಜದ ಮಧ್ಯ ಭಾಗದಲ್ಲಿ ಬರೆಯಬೇಕು. ತ್ರಿಭುಜದ ಮಧ್ಯಭಾಗದಲ್ಲಿ ಅಂದರೆ ಹ್ರುಂ ಎಂಬ ಅಕ್ಷರದ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ಒಂಭತ್ತು ಬತ್ತಿಗಳನ್ನು ಬಿಡಿ ಬಿಡಿಯಾಗಿ ಕೂರಿಸಿ ದೀಪಾರಾಧನೆಯನ್ನು ಮಾಡಬೇಕು.

ದೀಪದ ಬತ್ತಿಗಳು ದಕ್ಷಿಣ ದಿಕ್ಕನ್ನು ನೋಡುವಂತಿರಬೇಕು. ಮಂಗಳವಾರದ ದಿನ ಸ್ನಾನವಾದ ನಂತರ ಈ ತ್ರಿಭುಜ ದೀಪವನ್ನು ಬೆಳಗುವುದರ ಮೂಲಕ ಖಂಡಿತವಾಗಿ ಸಾಲದ ಸಮಸ್ಯೆ ಬಹಳ ಬೇಗ ತೀರುತ್ತದೆ. ಸ್ವಂತ ಮನೆಯನ್ನು ನಿರ್ಮಾಣ ಮಾಡಲು ಇದ್ದ ಅಡೆತಡೆಗಳು ನಿವಾರಣೆಯಾಗಿ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವಿರಿ ಮತ್ತು ಅದೃಷ್ಟವು ಉಂಟಾಗುತ್ತದೆ. ಮಂಗಳವಾರ ಸೂರ್ಯ ಮುಳುಗಿದ ಮೇಲೆ ಸಂಜೆಯ ಸಮಯದಲ್ಲಿ ಒಂಭತ್ತು ಜನ ಚಿಕ್ಕಮಕ್ಕಳಿಗೆ ನಿಮ್ಮ ಕೈಯಿಂದ ಸಿಹಿಯನ್ನು ಹಂಚಬೇಕು. ಕೆಲಸವನ್ನು ಪ್ರತೀ ಮಂಗಳವಾರ ಮಾಡುವುದರಿಂದ ಸಾಲದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

ಮಂಗಳವಾರ 10 ಜನ ಕೂಡಿ ಸಭೆ ಮತ್ತು ಸಮಾರಂಭವನ್ನು ಮಾಡಬಾರದು. ನ್ಯಾಯ ಪಂಚಾಯಿತಿಗೆ ಕೂರಬಾರದು. ಮಂಗಳವಾರ ಕೋಪ ಹೆಚ್ಚಾಗಿ ಬರುತ್ತದೆ. ಮಂಗಳವಾರ ಸಾಲ ಕೊಟ್ಟವರಿಗೆ ನೀಡಿದರೇ ನಿಮ್ಮ ಸಾಲಗಳು ಬೇಗನೇ ತೀರಿ ಹೋಗುತ್ತದೆ. ಕೋರ್ಟ್ ಕೇಸ್ ಏನಾದರೂ ಇದ್ದರೇ ಕೋರ್ಟ್ ವಿಷಯಕ್ಕೆ ಯಾರನ್ನಾದರೂ ಭೇಟಿ ಮಾಡಬೇಕೆಂದುಕೊಂಡಿದ್ದರೇ ಮಂಗಳವಾರ ಭೇಟಿ ಮಾಡಬಹುದು ಮತ್ತು ಚರ್ಚೆ ಮಾಡಿದರೇ ಉತ್ತಮ. ಭೂಮಿ ಮತ್ತು ಮನೆಯನ್ನು ಖರೀದಿ ಮಾಡಲು ಮಂಗಳವಾರದ ದಿನ ಉತ್ತಮ. ಆದರೇ ಮಂಗಳವಾರದ ದಿನ ರಿಜಿಸ್ಟ್ರೇಷನ್ ಗಳನ್ನು ಮಾಡಬಾರದು.

Leave a Comment